Wednesday, March 18, 2020

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.
ಭಯಬೇಡ-ಆಲಸ್ಯ ಸಲ್ಲದು
ಆತ್ಮೀಯರೇ,
ಜಗತ್ತನ್ನೆ ತಲ್ಲಣಗೊಳಿಸಿದ ಕೊರೊನಾ ಕರುನಾಡ ನೆಲಕ್ಕೂ ವಕ್ಕರಿಸಿರುವುದು ಬೇಸರದ ಸಂಗತಿ. ಹಾಗಾಂತ ಹೇಳಿ ಭಯಪಡುವ ಅಗತ್ಯವಂತು ಇಲ್ಲವೆ ಇಲ್ಲ. ಆದರೆ ಆಲಸ್ಯ ಸಲ್ಲದು ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ. ನಮ್ಮ ದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಬಹುತೇಕ ಜನರು ಗುಣಮುಖರಾಗುತ್ತಿರುವುದು ಸಂತಸದ ಸಂಗತಿ.


ಬಂಧುಗಳೆ, ಭಯ ಪಡುವ ಅಗತ್ಯವಿಲ್ಲವೆಂದು ತಿಳಿದು ಈ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮಾತ್ರ ಬೇಡವೆ ಬೇಡ. ಆರೋಗ್ಯ ಇಲಾಖೆ ತಿಳಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು.


ನಾವೇನು ಮಾಡಬೇಕು?
  •     ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು.

  •     ಪರಿಚಯಸ್ಥರು, ನಮ್ಮವರು ಸಿಕ್ಕಾಗ ಹಸ್ತಲಾಘವ ಮಾಡುವ ಬದಲು ನಮಸ್ಕರಿಸುವುದೆ ಉತ್ತಮ.

  •     ಮಾಸ್ಕ್ ಧರಿಸಿಕೊಳ್ಳುವುದು ಉತ್ತಮ.

  •     ಘಂಟೆಗೊಮ್ಮೆ ಕೈ, ಮುಖ ಸೋಪ್/ಡೆಟಲ್ ಮುಂತಾದವುಗಳಲ್ಲಿ ತೊಳೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು.

  •     ನಮ್ಮೂರಿಗೆ ಅಥವಾ ನಮ್ಮ ಅಕ್ಕದ ಮನೆಗೆ ಹೊರ ರಾಜ್ಯದಿಂದ, ವಿದೇಶದಿಂದ ಯಾರಾದರೂ ಬಂದಲ್ಲಿ ಅವರ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಹಾಗಾಂತ ಹೇಳಿ ಇದು ಅವರ ಬಗ್ಗೆ ಮಾಡುವ ದೂರು ದಾಖಲು ಅಲ್ವೆ ಅಲ್ಲ. ಜೆಸ್ಟ್ ನಮ್ಮೂರ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ.

  •     ಯಾರಾದರೂ ಕೆಮ್ಮು, ನೆಗಡಿಯಿಂದ ಬಳಲುತ್ತಿರುವುದು ಗೊತ್ತಾದ್ದಲ್ಲಿ ತಕ್ಷಣವೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.

  •     ಅಕ್ಕ ಪಕ್ಕದ ಮನೆಯವರತ್ರ, ನಾವು ನಮ್ಮ ಗೆಳೆಯರತ್ರ ಊರ ಉಸಾಬರಿ ಮಾತನಾಡುವಾಗ ಸ್ವಲ್ಪ ಕೊರೊನಾ ಮುನ್ನೆಚ್ಚರಿಕೆಯ ಬಗ್ಗೆ ಮಾತನಾಡಿಕೊಂಡು ಜನಜಾಗೃತಿ ಮೂಡಿಸುವುದು ಉತ್ತಮವಾದ ಬೆಳವಣಿಗೆ.

  •     ನಮ್ಮೂರಿನಿಂದ ಅಥವಾ ನಮ್ಮ ಅಕ್ಕಪಕ್ಕದ ಮನೆಯಿಂದ ಯಾರಾದರೂ ಹೊರ ದೇಶ, ಹೊರ ರಾಜ್ಯಗಳಿಗೆ ಹೋದ ಸಮಯದಲ್ಲೂ ಮತ್ತು ಅವರು ಅಲ್ಲಿಂದ ಬಂದ ನಂತರವು ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.

  •     ಮನೆ ಸುತ್ತಮುತ್ತ ತ್ಯಾಜ್ಯ ಎಸೆಯುವುದನ್ನು ಮಾಡಲೆಬೇಡಿ. ತ್ಯಾಜ್ಯ ನೀರು ಎಲ್ಲಿಯೂ ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಿ.

  •     ಪ್ರತಿಯೊಬ್ಬರು ಹೆಚ್ಚಾನು ಹೆಚ್ಚು ಅಡಿಗೆಗೆ ತೆಂಗಿನ ಕಾಯಿ ಬಳಸುತ್ತಾರೆ. ಹಾಗಾಗಿ ಸಂಜೆಯಾಗುತ್ತಲೆ ಮನೆ ಮುಂದೆ ತೆಂಗಿನ ಕಾಯಿಯ ಚಿಪ್ಪಿ ಹಾಗೂ ಅದರ ಹೆಪ್ಪನ್ನು ಒಂದು ಡಬ್ಬದಲ್ಲಿ ಹಾಕಿ ಬೆಂಕಿ ಕೊಟ್ಟಾಗ ಹೊಗೆ ಬರುತ್ತದೆ. ಆ ಹೊಗೆಯಿಂದ ಸೊಳ್ಳೆ
    ಯಿ0ರಕ್ಷಿಸಬಹುದಾಗಿದೆ.

  •     ಇನ್ನು ಬಹುತೇಕ ಟ್ರಕ್ ಚಾಲಕರು ದಾಂಡೇಲಿಯಿಂದ ಹೊರ ರಾಜ್ಯಗಳಿಗೆ ಹೋಗುತ್ತಾರೆ. ಅವರೆಲ್ಲರೂ ನಮ್ಮ ಅಣ್ಣ ತಮ್ಮಂದಿರರು ಎನ್ನುವುದನ್ನು ಯಾರು ಮರೆಯುವಂತಿಲ್ಲ. ಅವರಿಗೆ ವಿಶೇಷವಾದ ಮುನ್ನೆಚ್ಚರಿಕೆಯ ಅರಿವನ್ನು ಮೂಡಿಸಿ.
        ಇನ್ನೂ ಕೊರೊನಾ ಸೋಂಕಿನ ಬಗ್ಗೆ ಊಹಾಪೋಹದ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಊರಿನಲ್ಲಿ, ಜನರಲ್ಲಿ ಭಯದ ವಾತವರಣ ಸೃಷ್ಟಿ ಮಾಡದಿರಿ.

  •     ಈಗಿನ ಪರಿಸ್ಥಿತಿ ನೋಡಿದಾಗ ಮತ್ತು ಈ ಸೊಂಕನ್ನು ಸಂಪೂರ್ಣ ತಡೆಗಟ್ಟಲು ಸರಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಹಾಗಾಗಿ ಒಂದು ತಿಂಗಳಿಗೆ ಬೇಕಾಗುವಷ್ಟರ ಮಟ್ಟಿಗೆ ಪಡಿತರ, ಆಹಾರ ಸಾಮಾಗ್ರಿಗಳನ್ನು ಖರೀದಿಸಿಟ್ಟುಕೊಳ್ಳುವುದು ಉತ್ತಮ. ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹೇರಿದ್ದಲ್ಲಿ ಇದು ನಮಗೆ ಆರ್ಥಿಕವಾಗಿಯೂ ಮತ್ತು ಆರೋಗ್ಯದಾಯಕವಗಿಯೂ ಅನುಕೂಲವಾಗಲಿದೆ.

  •     ಹಾಲನ್ನು ನಂಬಿಕೊಳ್ಳಬೇಕು. ಆದರೆ ಇಂತಹ ಸ್ಥಿತಿಯಲ್ಲಿ ಮನೆಯಲ್ಲಿ ಎಟ್ ಲಿಸ್ಟ್ ಅರ್ಧ ಕೆಜಿಯಾದರೂ ಹಾಲಿನ ಪುಡಿಯನ್ನು ಶೇಖರಿಸಿಟ್ಟುಕೊಳ್ಳುವುದು ಉತ್ತಮ.

  •     ಇನ್ನೂ ತರಕಾರಿ, ಮಾಂಸ ಸಿಗದೇ ಹೋದಲ್ಲಿ ಅಥವಾ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೂ ತೊಂದರೆಯಾಗದಂತೆ ನಾವು ನಮ್ಮ ಮನೆಗಳಲ್ಲಿ ಕನಿಷ್ಟ 15 ದಿನಕ್ಕಾಗುವಷ್ಟು ವಿವಿಧ ಬೆಳೆ-ಕಾಳುಗಳನ್ನು ಸಂಗ್ರಹಿಸಟ್ಟಲ್ಲಿ ಅದನ್ನು ಆಹಾರವನ್ನಾಗಿ ಉಪಯೋಗಿಸಬಹುದಾಗಿದೆ. 15-20 ದಿನ ಇಡಬಲ್ಲ ತರಕಾರಿ, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಸಂಗ್ರಹಿಸಿಡುವುದು ಉತ್ತಮ.

  •     ಸರದಿ, ಜ್ವರ, ತಲೆನೋವು, ಗ್ಯಾಸ್ಟಿಕ್, ಬಿ.ಪಿ/ಶುಗರ್ ಗುಳಿಗೆಗಳನ್ನು 15-20 ದಿನಗಳಿಗೆ ಬೇಕಾಗುವಷ್ಟು ತಂದಿಟ್ಟುಕೊಳ್ಳುವುದು ಉತ್ತಮ.

  •     ಏನೇ ಆಗಲಿ ನಮ್ಮ ನಮ್ಮ ಬೀಟ್ ಪೊಲೀಸ್ ಸಿಬ್ಬಂದಿಯ ಮೊಬೈಲ್ ಸಂಖ್ಯೆ, ಪೊಲೀಸ್ ಠಾಣೆಯ ದೂರವಾಣಿ, ನಗರ ಸಭೆ ಹಾಗೂ ತಹಶೀಲ್ದಾರ್ ಕಾರ್ಯಾಲಯದ ದೂರವಾಣಿ, ನಮ್ಮ ನಮ್ಮ ಏರಿಯದ ಆಶಾ ಕಾರ್ಯಕರ್ತೆಯ ಮೊಬೈಲ್ ಸಂಖ್ಯೆಗಳು ಪ್ರತಿಯೊಂದು ಮನೆಯಲ್ಲಿ ಆ ಮನೆಯ ಎಲ್ಲರಿಗೂ ಕಾಣುವಂತೆ ಬರೆದಿಟ್ಟುಕೊಳ್ಳಿ.

  •     ನಮ್ಮ ಅಕ್ಕಪಕ್ಕದಲ್ಲಿ ಸಾಮಾಜಿಕ ಜ್ಞಾನವೆ ಇಲ್ಲದ ಹಾಗೂ ಅನಕ್ಷರಸ್ಥರಾಗಿದ್ದಲ್ಲಿ ದಯವಿಟ್ಟು ಅವರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿ, ಜಾಗೃತಿಯನ್ನು ಮೂಡಿಸಿ. ಇಲ್ಲವಾದಲ್ಲಿ ನಾವೆಷ್ಟು ಮುಂಜಾಗೃತೆ ತೆಗೆದುಕೊಂಡರೂ ನಮ್ಮ ಅಕ್ಕಪಕ್ಕದವರಿಗೆ ಸೋಂಕು ತಗಲಿದರೇ ನಮಗೆ ತಗಲದಿರಬಾರದೇಕೆ ಅಲ್ವೆ.

ಕೊರೊನಾ ಸೋಂಕಿತರ ಬಗ್ಗೆ ಅಥವಾ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನ ಮೂಡಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯಾಡಳಿತ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದನ್ನು ಯಾರು ಮರೆಯಬೇಡಿ. ಇದು ನಾವು ನೀಡುತ್ತಿರುವ ದೂರು ಅಲ್ಲ. ಇದು ನಾವು ನೀಡುತ್ತಿರುವುದು ಜೆಸ್ಟ್ ಮಾಹಿತಿಯಷ್ಟೆ. ಮಾಹಿತಿ ನೀಡಿದವರ ಹೆಸರನ್ನು ಎಲ್ಲಿಯೂ ಸಂಬಂಧಿಸಿದ ಇಲಾಖೆ ಬಹಿರಂಗ ಪಡಿಸುವುದಿಲ್ಲ. ಈ ವಿಚಾರದಲ್ಲಿ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎನ್ನುವುದನ್ನು ಎಲ್ಲರು ಅರಿತುಕೊಳ್ಳಿ.

ಆರೋಗ್ಯವೆ ಭಾಗ್ಯ.

ನಿಮ್ಮವ
ಸಂದೇಶ್.ಎಸ್.ಜೈನ್




No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...