Tuesday, March 24, 2020

ಹೀಗೆ ಮಾಡಿದ್ರೆ ಚೆನ್ನ
ಪೊಲೀಸ್, ಆರೋಗ್ಯ ಸಿಬ್ಬಂದಿ/ಅಧಿಕಾರಿಗಳಿಗೆ ಇಂದಿರಾ ಕ್ಯಾಂಟೀನ್ನಿಂದ ಉಚಿತ ಊಟೋಪಚಾರ ದೊರೆಯಲಿ

ದಾಂಡೇಲಿ: ಕರ್ನಾಟಕ ಲಾಕ್ ಡೌನ್ ನಿಮಿತ್ತ ಸುಡು ಬಿಸಿಲಲ್ಲಿ ಪೊಲೀಸರು ಹಾಗೂ ಕೊರೊನಾ ಸೋಂಕಿನ ವಿರುದ್ದ ಜೀವದ ಹಂಗುತೊರೆದು ಹೋರಾಡುತ್ತಿರುವ ಆರೋಗ್ಯ ಸೈನಿಕರ ಆರೋಗ್ಯ ಕಾಯುವುದು ಸರಕಾರದ ಹಾಗೂ ಸಾರ್ವಜನಿಕರ ಪ್ರಮುಖ ಜವಾಬ್ದಾರಿಯಾಗಿದೆ.

ಇಡೀ ಸಮಾಜದ ಆರೋಗ್ಯಕ್ಕಾಗಿ ರಾತ್ರಿ ಹಗಲೆನ್ನದೇ ಕಾಲಿಗೆ ಚಕ್ರ ಕಟ್ಟಿದಂತೆ ತನ್ನನ್ನು ತಾನು ಸಮರ್ಪಣಾಭಾವದಿಂದ ಸಮರ್ಪಿಸಿಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಹಾಗೂ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರುಗಳಿಗೆ, ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ಸರಿಯಾಗಿ ಸ್ಥಳೀಯಾಡಳಿತದ ವಾಹನಗಳ ಮೂಲಕ ಇಂದಿರಾ ಕ್ಯಾಂಟಿನ್ಗಳಿಂದ ಉಚಿತ ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಅತ್ಯಂತ ಜವಾಬ್ದಾರಿಯುತ ಕಾರ್ಯವನ್ನು ರಾಜ್ಯ ಸರಕಾರ ಈಗಿಂದಿಗಲೆ ಮಾಡಬೇಕಾಗಿದೆ.

ನಮ್ಮ ಬಗ್ಗೆ, ಸಮಾಜದ ಬಗ್ಗೆ ಜೀವಭಯವಿಲ್ಲದೇ ಸೇವೆ ಸಲ್ಲಿಸುವ ಇಂಥವರ ಬಗ್ಗೆ ಸರಕಾರದ ಜೊತೆ ಸಮಾಜವು ಕಾಳಜಿಯನ್ನು ವಹಿಸಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸರಕಾರದ ಗಮನ ಸೆಳೆಯುವ ಕಾರ್ಯ ಮಾಡಬೇಕಾಗಿದೆ ಎಂಬ ಅಂಭೋಣ ಈ ಬರಹದ್ದಾಗಿದೆ. 
 
ಏನಾಂತೀರಿ,
 
ನಿಮ್ಮವ
ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...