Sunday, December 9, 2018

ರೋಗಿಗಳ ಪಾಲಿಗೆ ಅಭಯ ನೀಡುವ ನಮ್ಮ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಹೆಮ್ಮೆ ಪಡಲೆಬೇಕು



 ರೋಗಿಗಳ ಪಾಲಿಗೆ ಅಭಯ ನೀಡುವ ನಮ್ಮ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಹೆಮ್ಮೆ ಪಡಲೆಬೇಕು
ನಾನು ಸದಾ ಅವರಿವರ ಬಗ್ಗೆ ನನ್ನ ಪೇಸ್ ಬುಕ್ ಪುಟದಲ್ಲಿ ಬರೆಯುತ್ತಿದ್ದೇನೆ. ಅದು ನನ್ನ ಕರ್ತವ್ಯವೆಂದು ಭಾವಿಸಿದವ ನಾನು. ವ್ಯಕ್ತಿಗತ ಸಾಧನೆಯ ಜೊತೆ ಜೊತೆಗೆ ಮನಸ್ಸಿಗೆ ಖುಷಿ ಕೊಟ್ಟ ಘಟನೆಯನ್ನು ಇವತ್ತು ನಿಮ್ಮೆದುರಿಗೆ ತೆರದಿರುವ ಸಣ್ಣ ಪ್ರಯತ್ನ ನನ್ನದು.

ಸ್ನೇಹಿತರೇ, ನಾವು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಅಂತೆ ಕಂತೆಗಳ ಬಗ್ಗೆ ಬಹಳ ಮಾತಾಡುತ್ತಿವಿ. ಆದ್ರೆ ಅಲ್ಲಿ ನಡೆಯುತ್ತಿರುವ ದಿನನಿತ್ಯದ ಮಾನವೀಯ ಕಾಳಜಿಯ ಬಗ್ಗೆಯೂ ಮಾತಾಡಬೇಕೆಂಬ ಉತ್ಕಟ ಬಯಕೆಯನ್ನು ಹೊತ್ತಿ ಬರೆಯಲು ಆರಂಭಿಸಿದ್ದೇನೆ. 

ನಿನ್ನೆ ದಿನ ಅಂದರೆ ದಿನಾಂಕ: 08.12.2018 ರಂದು ನನ್ನ ಪಕ್ಕದ ಮನೆಯ ನನ್ನೊಲವಿನ ಅಂಕಲ್ ಪ್ರಭು ಅವರು ತೀವ್ರ ಅನಾರೋಗ್ಯಗೊಂಡು ಚಿಕಿತ್ಸೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ನನಗೆ ಅಲ್ಲಿಗೆ ಹೋಗಲಾಗಲಿಲ್ಲ. ಆದ್ರೆ ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದೌಡಾಯಿಸಿದೆ. ಅದೇ ಸಮಯದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ: ರಾಜೇಶ ಪ್ರಸಾದ ಅವರಿಗೆ ಪೋನಾಯಿಸಿದೆ. ಒಂದೆ ರಿಂಗಲ್ಲಿ ಪೋನ್ ರಿಸಿವ್ ಮಾಡಿ ನನ್ನಲ್ಲಿ ಬಹಳ ಆತ್ಮೀಯತೆಯಿಂದ ಮಾತನಾಡಿ ಪ್ರಭ್ರು ಅಂಕಲ್ ಆರೋಗ್ಯದ ಬಗ್ಗೆ ಸ್ವತ: ಅವರೇ ನನಗೆ ಧೈರ್ಯ ತುಂಬಿ ನನ್ನನ್ನು ಒಬ್ಬ ಹಿರಿಯಣ್ಣನಾಗಿ ಸಮಾಧಾನ ಪಡಿಸಿದ ರೀತಿಗೆ ಬಿಗ್ ಸೆಲ್ಯೂಟ್ ಹೇಳಲೆಬೇಕು. ಇಡೀ ದಿನ ಕರ್ತವ್ಯದಲ್ಲಿ ಬ್ಯುಜಿಯಾಗಿದ್ದರೂ ತಡರಾತ್ರಿಯಲ್ಲೂ ಪೋನು ರಿಸಿವ್ ಮಾಡಿ ಸಮಾಧಾನದಿಂದ ಮಾತನಾಡಿದ ಡಾ: ರಾಜೇಶ ಪ್ರಸಾದ ಅವರ ಗುಣವಂತಿಕೆಗೆ ಹ್ಯಾಟ್ಸ್ ಆಪ್.

ಇಂದು ಮತ್ತೇ ಬೆಳ್ಳಂ ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸಿದೆ, ಅಲ್ಲಿ ರೋಗಿಗಳು ಬಿಟ್ಟರೇ ಒಂದಿಬ್ಬರು ಅವರ ಮನೆಯವರು ಅಲ್ಲಿದ್ದರು. ಆದ್ರೆ ಅವರೆಲ್ಲರಿಗೂ ತಾಯಿಯಾಗಿ, ವೈದ್ಯೆಯಾಗಿ ಆರೋಗ್ಯ ಸೇವೆ ನೀಡುತ್ತಿದ್ದ ಸಹೋದರಿ ನರ್ಸ್   ರೋಜಮ್ಮ ಥಾಮಸ್ ಪರ್ನಾಂಡೀಸ್ ಅವರು  ಅವರ ಕಾರ್ಯದಕ್ಷತೆಗೆ ಶಿರಬಾಗಿ ನಮಿಸಲೇಕೆ ನಾನು ಹಿಂಜರಿಯಲಿ. ಸಂಬಂಧವಿಲ್ಲ, ಗೋತ್ರವಿಲ್ಲ. ಆದರೂ ಕರ್ತವ್ಯವನ್ನು ಕರ್ತವ್ಯದ ರೀತಿಯಲ್ಲಿ ನಿರ್ವಹಿಸುವುದರ ಜೊತೆಗೆ ಮನೆ ಮಗಳಾಗಿ ಪ್ರೀತಿಯಿಂದ ಆರೋಗ್ಯ ಸೇವೆ ನೀಡಿದ ಸಹೋದರಿ ನರ್ಸ್ ಅವರ ಸೇವಾ ದಕ್ಷತೆ, ಶೃದ್ದೆ ಮತ್ತು ವಾತ್ಸಲ್ಯಮಯಿ ಗುಣ ನನ್ನ ಮನಸ್ಸಿನ ಮೇಲೆ ತುಂಬ ಪರಿಣಾಮ ಬೀರಿತು. ಅಲ್ಲಿದ್ದ ಒಬ್ಬ ರೋಗಿ ಇನ್ನೂ ತೀವ್ರ ಅಸ್ವಸ್ಥಗೊಂಡಿದ್ದ, ಆ ಸಮಯದಲ್ಲಿ ಆತನ ತಾಯಿ ಬಿಕ್ಕಳಿಸಿ ಅಳುತ್ತಿರುವಾಗ ಆಕೆಯನ್ನು ಮಗಳ ರೂಪದಲ್ಲಿ ಸಾಂತ್ವನ ಪಡಿಸಿದ ನರ್ಸ್ ರೋಜಮ್ಮ ಥಾಮಸ್ ಪರ್ನಾಂಡೀಸ್ ಅವರ ಮಾನವೀಯ ಸ್ಪಂದನೆಯನ್ನು ನನ್ನಲ್ಲಿ ವಿವರಿಸಲಸಾಧ್ಯ. ಆ ಸಂದರ್ಭದಲ್ಲಿ ನನಗನಿಸಿದ್ದು ಒಂದೆ, ಹುಟ್ಟಿದರೇ ಈ ರೋಜಮ್ಮ ಥಾಮಸ್ ಪರ್ನಾಂಡೀಸ್ ಸಹೋದರಿಯ ತಮ್ಮನಾಗಿ ನಾನು ಹುಟ್ಟಬೇಕೆಂಬುವುದೆ ಆಗಿತ್ತು ನೋಡಿ.

ಸಂಬಳಕ್ಕಾಗಿ ದುಡಿಯುವುದು ಸಹಜ. ಆದರೆ ಅದನ್ನೂ ಮೀರಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುವುದಿದೆಯಲ್ಲಾ ಅದು ಗ್ರೇಟ್ ಪರ್ಸನಾಲಿಟಿಯ ಹೃದಯವಂತರಿಗೆ ಮಾತ್ರ ಸಾಧ್ಯ. ಅಂತಹ ಗ್ರೇಟ್ ಪರ್ಸನಾಲಿಟಿಯ  ಸಹೋದರಿ ರೋಜಮ್ಮ ಥಾಮಸ್ ಪರ್ನಾಂಡೀಸ್ ನರ್ಸಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ, ಅಕ್ಕ, ತಂಗಿಯ ಹಾಗೂ ಮನೆ ಮಗಳ ಪ್ರೀತಿ ಇರಲಿ.

ಸಹೋದರಿ ರೋಜಮ್ಮ ಥಾಮಸ್ ಪರ್ನಾಂಡೀಸ್ ನರ್ಸ್  ಅವರ ಜೀವನ ಸುಖಕರವಾಗಲಿ, ಎಲ್ಲ ರೋಗಿಗಳ ಮನಗೆದ್ದ ನಿಮ್ಮ ಹೃದಯ ಶ್ರೀಮಂತಿಕೆಗೆ ಶಿರಬಾಗುವೆ.

ನಿಮ್ಮ ಸಹೋದರ,

ಸಂದೇಶ್.ಎಸ್.ಜೈನ್


No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...