Wednesday, April 8, 2020

ಭಾರತವೆ ಮೇಲು, ಭಾರತವೆ ಮೇಲು
ರಚನೆ: ಸಂದೇಶ್.ಎಸ್.ಜೈನ್, ದಾಂಡೇಲಿ
mo:9620595555
ವಿಶ್ವದೆಲ್ಲೆಡೆ ರಣಕೇಕೆ ಬಾರಿಸುತ್ತಿದೆ ಕೊರೊನಾ
ಅಲ್ಲಿ ಮೀತಿಮೀರಿ ನಡೆಯುತ್ತಿದೆ ಸಾವಿನ ಪಯಾಣ
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಭಾರತಕ್ಕೂ ವಕ್ಕರಿಸಿತು ಈ ಮಹಾಮಾರಿ
ಜನಗಳ ಆರೋಗ್ಯ ನೆಮ್ಮದಿಗಾಯ್ತು ವಿಷಕಾರಿ
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಕೊರೊನಾವನ್ನು ಒದ್ದೊಡಿಸಲು ಭಾರತ ಲಾಕ್ ಡೌನ್
ಇದರಿಂದಾಯ್ತು ಜನಗಳ ಸಂಚಾರಕ್ಕೆ ಬ್ರೆಕ್ ಡೌನ್
ಆದರೆ ಭಾರತವೆ ಮೇಲು, ಭಾರತವೆ ಮೇಲು.

ವೈದ್ಯರು, ದಾದಿಯರು, ಪೊಲೀಸರು ರಕ್ಷಣೆಗಾಗಿ
ನಿರಂತರ ಶ್ರಮವಹಿಸಿದರು ನಮಗಾಗಿ ನಿಮಗಾಗಿ
ಆದರೆ ಭಾರತವೆ ಮೇಲು, ಭಾರತವೆ ಮೇಲು

ಒದ್ದಾಡಿದರು ನಾಡಿನ ಜನ ಒದ್ದಾಡಿದರು
ಆದರೂ ಎಲ್ಲ ಮರೆತು ಮೋ
ದಿ  ಮಾತು ಕೇಳಿದರು
ಆದರೆ ಭಾರತವೆ ಮೇಲು, ಭಾರತವೆ ಮೇಲು.

ಸಂಕಷ್ಟದ ಸಮಯದಲ್ಲಿ ನಾವೆಲ್ಲ ಭಾರತಿಯರೆಂದು
ಸಂಕಷ್ಟ ಹರಣಕ್ಕಾಗಿ ಸಾರಿದೆವು ಭಾತೃತ್ವ ಒಂದೆ ಎಂದು
ಆದರೆ ಭಾರತವೆ ಮೇಲು, ಭಾರತವೆ ಮೇಲು.

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...