
ನದಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದವನನ್ನು ಸಂರಕ್ಷಿಸಿದ ಜೀವ ಸಂರಕ್ಷಕರುಗಳಿಗೆ ಸನ್ಮಾನ
ದಾಂಡೇಲಿ: ನಗರದ ಸಮೀಪವಿರುವ ಕುಳಗಿ ದೇವಸ್ಥಾನದ ಪಕ್ಕದಲ್ಲಿ ಇರುವ ಕಾಳಿ ನದಿಯಲ್ಲಿ ಶುಕ್ರವಾರ ಸ್ನಾನಕ್ಕೆಂದು ಬೆಳ್ಳಂ ಬೆಳಗ್ಗೆ ನದಿಗಿಳಿದು ಜೀವನ್ಮರಣ ಹೋರಾಟದಲ್ಲಿದ್ದ ನಿರ್ಮಲ ನಗರದ ನಿವಾಸಿಯಾಗಿರುವ ನಾಗೇಶ ಈರಪ್ಪ ಬಳ್ಳಾರಿ (ವ: 43) ವ್ಯಕ್ತಿಯ ಜೀವ ಉಳಿಸಿದ ಜೀವ ಸಂರಕ್ಷಕರುಗಳಿಗೆ ಸ್ಥಳೀಯ ಗಾಂಧಿನಗರ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಸ್ನಾನಕ್ಕೆಂದು ನದಿಗಿಳಿದಿದ್ದ ನಾಗೇಶ ಅವರನ್ನು ಜೀವ ಭಯಕ್ಕೆ ಹದರಿ ಮೊಸಳೆಯೊಂದು ಕಚ್ಚಿ ನೀರಿನ ಆಳಕ್ಕೆ ಎಳೆದುಕೊಂಡು ಹೋಗಿತ್ತು. ಆದರೆ ಬದುಕಿನ ಆಸೆ ಬಿಟ್ಟಿದ್ದ ಆ ವ್ಯಕ್ತಿ ಇನ್ನೇನೂ ಅದೃಷ್ಟವಶತ್ ಅದರಿಂದ ಪಾರಾಗಿ ನದಿ ಮಧ್ಯದಲ್ಲಿದ್ದ ಪೊದೆಯೊಂದರಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದರು. ಘಟನೆಯ ಸುದ್ದಿ ತಿಳಿದ ನಗರದ ಪ್ರವಾಸೋದ್ಯಮಿ ಹಾಗೂ ಕಾಳಿ ರಿವರ್ ಎಡ್ವಂಚರ್ಸ್ ಮಾಲಕರು ಹಾಗೂ ರಕ್ಷಣ ತಜ್ಞ ರವಿಕುಮಾರ್.ಜಿ.ನಾಯಕ ಹಾಗೂ ಹಿರಿಯ ಈಜು ತಜ್ಞ ಮತ್ತು ಪ್ರವಾಸೋದ್ಯಮಿಯಾಗಿರುವ ಸ್ಟ್ಯಾನ್ಲಿ ಪೆಡ್ರಿಕ್ ಮೊಬೆನ್, ರಕ್ಷಣಾ ತಂಡದಲ್ಲಿದ್ದ ಮುಳುಗು ತಜ್ಞರುಗಳಾದ ವಿನಾಯಕ, ರಮೇಶ, ಬಿ.ಆರ್.ರವಿಕುಮಾರ್, ಕೃಷ್ಣ, ಸಂತೋಷ್ ಶೆಟ್ಟಿಯವರುಗಳು ಸ್ಥಳಕ್ಕೆ ಭೇಟಿ ನೀಡಿ ರ್ಯಾಪ್ಟ್ ಮೂಲಕ ಸತತ ಒಂದು ಗಂಟೆಗಳವರೆಗೆ ಹುಡುಕಾಟ ನಡೆಸಿ, ಕೊನೆಗೆ ಹುಡುಕಿ ಸುರಕ್ಷಿತವಾಗಿ ಹೊತ್ತು ತಂದು ಜೀವ ಉಳಿಸಿದ ಘನ ಕಾರ್ಯಕ್ಕಾಗಿ ಮತ್ತು ಈ ಸಂದರ್ಭದಲ್ಲಿ ಸರ್ವ ರೀತಿಯಲ್ಲಿ ಸಹಕರಿಸಿದ ನಗರ ಸಭಾ ಸದಸ್ಯ ರೋಶನಜಿತ್ ಅವರುಗಳನ್ನು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಅನೀಶ ಮುಜಾವರು ಸನ್ಮಾನಿಸಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ರವಿಕುಮಾರ್.ಜಿ.ನಾಯಕರವರು ಮೊಸಳೆ ನರಭಕ್ಷಕ ಪ್ರಾಣಿಯಲ್ಲ. ಭಯಗೊಂಡು ಈ ರೀತಿಯ ಘಟನೆ ನಡೆದಿದೆ. ನಮ್ಮ ಮುಳುಗು ತಜ್ಞರ ತಂಡ ಇಂಥಹ ಸಂದರ್ಭದಲ್ಲಿ ಜೀವ ಉಳಿಸುವ ಕಾರ್ಯಕ್ಕೆ ಸದಾ ಮುಂದಿರುತ್ತದೆ. ನಮ್ಮ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಕಾರ್ಯವನ್ನು ಕೊಂಡಾಡಿದರು.
ಸಿಪಿಐ ಅನೀಶ ಮುಜಾವರ ಅವರು ಸ್ಟ್ಯಾನ್ಲಿ ಮತ್ತು ರವಿಕುಮಾರ್ ಅವರನ್ನೊಳಗೊಂಡ ಜೀವಸಂರಕ್ಷಕ ತಂಡ ಸದಾ ಜೀವ ಉಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಇಲಾಖೆಯ ಕೆಲಸಗಳಿಗೂ ಈ ತಂಡ ಸದಾ ನೆರವನ್ನು ನೀಡುತ್ತಿದೆ ಎಂದು ಜೀವ ಉಳಿಸಿದ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಅನೀಶ ಮುಜಾವರ ಹಾಗೂ ಪಿಎಸೈ ಉಲ್ಲಾಸ ಪರವಾರ ಅವರನ್ನು ಯುವಕ ಮಂಡಳದ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವಕ ಮಂಡಳದ ಪದಾಧಿಕಾರಿಗಳಾದ ಚಂದ್ರು ಆರ್ಯ ವಂದಿಸಿದರು. ಪಾಸ್ಕಲ್ ಅಗ್ನೇಲ್ ಪರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
Well done brave hearts hats off to u team, your support in this regard shall be always appreciated from core of the heart. Keep up Good bros.
ReplyDelete