Monday, December 23, 2019

ಸಹೇಲಿಯಿಂದ ಸಾಧಕರಿಗೆ ಸನ್ಮಾನ

ಇವರು ನಮ್ಮ ದಾಂಡೇಲಿಗೆ ಹೆಮ್ಮೆ- ಇವರುಗಳ ಸಾಧನೆಗೆ ಅಭಿಮಾನದ ಅಭಿವಂದನೆ-ಸಾಧನೆಯನ್ನು ಗುರುತಿಸಿದ ಸಹೇಲಿಗೆ ಬಿಗ್ ಸೆಲ್ಯೂಟ್

ದಾಂಡೇಲಿ : ನಗರದ ಸಹೇಲಿ ಟ್ರಸ್ಟ್ ಅರ್ಪಿಸಿದ ಬಂಗೂರನಗರ ರಂಗನಾಥ ಸಭಾಭವನದಲ್ಲಿ ನಡೆದ ಸೂಪರ್ ಸೊಲೊ ಡ್ಯಾನ್ಸ್ ಮತ್ತು ಸಿಂಗಿಂಗ್ ಹಾಗೂ ಗ್ರೂಪ್ ಡ್ಯಾನ್ಸ್  ಎಂಬೆರಡು ಮುಕ್ತ ಸ್ಪರ್ಧಾ ಕಾರ್ಯಕ್ರಮಗಳ ಅದ್ದೂರಿ ಪೈನಲ್ ಕಾರ್ಯಕ್ರಮದ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಾದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ನನ್ನ ಹೃದಯದ ಅಣ್ಣ ಉದ್ಯಮಿ ವಿಷ್ಣುಮೂರ್ತಿ ರಾವ್, ಕವಯತ್ರಿ ಹಾಗೂ ಉಪನ್ಯಾಸಕಿ ಸಹೋದರಿ ನಾಗರೇಖಾ ಗಾಂವಕರ, ವನವಾಸಿ ಕಲ್ಯಾಣ ಸಂಸ್ಥೆಯ ಪ್ರಾಂಜಲ ಮನಸ್ಸಿನ ರವಿ ಲಕ್ಷ್ಮೇಶ್ವರ, ಸಾಧನೆಗೈದ ಛಲಗಾರ್ತಿ ಖ್ಯಾತ ಭರತ ನಾಟ್ಯ ಕಲಾವಿದೆ ವಿಧೂಷಿ ಅಮೃತಾ ನಾಯ್ಕ ಅವರುಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಸಾಧಕರಿಗೆ ಸನ್ಮಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ, ಪದಾಧಿಕಾರಿಗಳಾದ ನೀಲಾಂಬಿಕಾ ಕಣಿಮೆಹಳ್ಳಿ, ರಮ್ಯ ಪಾಠಾನಕರ, ಜಯ ನಾಯ್ಕ, ಜ್ಯೋತಿ ಪೈ, ಸುಜಾತ ಜನ್ನು, ಗಾಯತ್ರಿ ಬಾನಾವಳಿಕರ, ಶಶಿಕಲಾ ನಾಯ್ಕ, ರೇಷ್ಮಾ ಗುಡೆಅಂಗಡಿ, ಚಂದ್ರಕಲಾ ಶೆಟ್ಟಯಾರ, ಅಕ್ಷತಾ.ಎಂ, ಸುನೀತಾ ಮೆಹರವಾಡೆ ಮತ್ತು ಮಾರ್ಗದರ್ಶಕ ರಾಧಾಕೃಷ್ಣ ಕನ್ಯಾಡಿ ಉಪಸ್ಥಿತರಿದ್ದರು.

ನಮ್ಮೂರು ಬೆಳಗಿಸಿದ ಹೆಮ್ಮೆಯ ಸಾಧಕರುಗಳಿಗೆ ಭವಿಷ್ಯದಲ್ಲಿ ಮತ್ತಷ್ಟು, ಇನ್ನಷ್ಟು ಗೌರವಗಳು, ಸಮ್ಮಾನಗಳು ಅರಸಿ ಬರಲಿ. ಈ ಪುಣ್ಯದ ನಾಡಿಗೆ ಅವರ ಸೇವೆ ಹಾಗೂ ಸಾಧನೆಗಳು ಶಾಶ್ವತವಾಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...