ಸಂಘಟಕ, ಮಾತಿನ ಅಧಿಪತಿ ಈ ನಮ್ಮ ಗುರು ಮಠಪತಿ
ಸಮಾಜಮುಖಿ ಗೆಳೆಯನಿಗೆ ಜನ್ಮದಿನದ ಸಡಗರ
ಸಮಾಜಮುಖಿ ಗೆಳೆಯನಿಗೆ ಜನ್ಮದಿನದ ಸಡಗರ
ಸಂಘಟಕ, ಮಾತಿನ ಅಧಿಪತಿ ಈ ನಮ್ಮ ಗುರು ಮಠಪತಿ
ಸಮಾಜಮುಖಿ ಗೆಳೆಯನಿಗೆ ಜನ್ಮದಿನದ ಸಡಗರ
ಸಮಾಜಮುಖಿ ಗೆಳೆಯನಿಗೆ ಜನ್ಮದಿನದ ಸಡಗರ
ಮದುವೆಯಾಗಿ ಹದಿನೆಂಟು ವರ್ಷ ಗತಿಸಿದೆ. ಆದರೂ ಇನ್ನೂ ಚಿರ ಯವ್ವನದ ಯುವಕ. ಪ್ರಬುದ್ದ ಮಾತುಗಾರ ಅಷ್ಟೆ ಯಶಸ್ವಿ ಸಂಘಟಕರು ಹೌದು. ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವಿರಲಿ, ಅಲ್ಲಿ ಅವರು ಇರಲೆಬೇಕು. ಒಟ್ಟಿನಲ್ಲಿ ಎಲ್ಲರಿಗೂ ಬೇಕಾದ ಸರಳ ಸಹೃದಯಿ. ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ದಾಟಿ ಯಶಸ್ಸಿನೆಡೆಗೆ ಪ್ರಯಾಣಿಸುತ್ತಿರುವ ಶ್ರಮಿಕ ವ್ಯಕ್ತಿತ್ವದ ಈ ವ್ಯಕ್ತಿ ಯಾರು ಗೊತ್ತೆ?.
ಆ ವ್ಯಕ್ತಿ ಬೇರೆ ಯಾರು ಅಲ್ಲ. ದಾಂಡೇಲಿಯ ಸುಭಾಸನಗರದ ನಿವಾಸಿ ಗುರು ಮಠಪತಿಯವರು ಕಣ್ರೀ. ವಟ ವಟ ಮಾತನಾಡಿದರೂ ಮೃದು ಮನಸ್ಸಿನ ಹೆಮ್ಮೆಯ ಹೈದ ಈ ನಮ್ಮ ಗುರು ಮಠಪತಿಯವರೆನ್ನಿ. ಇಂದವರಿಗೆ ಜನ್ಮದಿನದ ಸಂಭ್ರಮ, ಸಡಗರ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಮನದ ಗೆಳೆಯ ಗುರು ಮಠಪತಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಗುರು ಮಠಪತಿಯವರೇನೂ ಬಹಳ ಶ್ರೀಮಂತ ಕುಟುಂಬದವರಲ್ಲ. ಮದ್ಯಮನೂ ಅಲ್ಲ ಅತ್ತ ಬಡವರು ಅಲ್ಲದ, ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬವೆಂದು ಹೇಳಬಹುದಾದ ಕುಟುಂಬ. ಆದರೆ ಈ ಸಂಸಾರದಲ್ಲಿ ಸಾಮರಸ್ಯ, ಸಂಸ್ಕೃತಿ ಮತ್ತು ಸಂಸ್ಕಾರಕ್ಕೇನೂ ಕೊರತೆಯಿರಲಿಲ್ಲ. ಒಟ್ಟಿನಲ್ಲಿ ಹೃದಯ ಶ್ರೀಮಂತಿಕೆಯನ್ನು ಸಾರಿದ ಶ್ರಮಜೀವಿಗಳ ಕುಟುಂಬ ಎಂದು ಎದೆ ತಟ್ಟಿ ಹೇಳಬಹುದು.
ಉದ್ಯೋಗವನ್ನರಸಿ ದಾಂಡೇಲಿಗೆ ಬಂದಿದ್ದ ಪ್ರಾಮಾಣಿಕ ಶ್ರಮಿಕರಾಗಿದ್ದ ಶಿವಮೂರ್ತಿ ಹಾಗೂ ಎಲ್ಲರಿಂದಲೂ ಅಕ್ಕ ಎಂದೆ ಕರೆಸಿಕೊಳ್ಳುತ್ತಿದ್ದ ಅಕ್ಕವ್ವಾ ದಂಪತಿಗಳ ಕಿರಿಯ ಮಗ ಈ ನಮ್ಮ ಗುರು ಮಠಪತಿ. ಗುರು ಮಠಪತಿಯವರಿಗೆ ಸರಸ್ವತಿ, ಶಶಿಕಲಾ ಎಂಬಿಬ್ಬರು ಅಕ್ಕಂದಿರರು, ಸಿದ್ದಯ್ಯ, ಮೃತ್ಯುಂಜಯ, ಶಿವಾನಂದ, ರಾಜಕುಮಾರ್ ಹಾಗೂ ದಿ: ವೀರಭದ್ರಯ್ಯ ಎಂಬ ಐವರು ಸಹೋದರರು. ತುಂಬಿದ ಸಂಸಾರದಲ್ಲಿ ಕಿರಿಯವರಾದ ಗುರು ಮಠಪತಿಯವರಿಗೆ ಎಲ್ಲರಿಂದಲೂ ಅಪ್ಪುಗೆಯ, ಅಕ್ಕರೆಯ ಪ್ರೀತಿ. ಮನೆಗೊಂದು ಸ್ವೀಟ್ ಬಾಕ್ಸ್ ತಂದರೂ ಅದರಲ್ಲಿ ಬಹುಪಾಲು ಸ್ವೀಟ್ಸ್ ಈ ಗುರು ಮಠಪತಿಯರಿಗೆ ದಕ್ಕುತ್ತಿದ್ದು. ನನಗೆ ಹಳ್ಳಿ ಜನರ ಒಂದು ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತೆ, ಅದೇನೆಂದ್ರೆ, ಬಿಸಿ ನೀರು ಸ್ನಾನ ಮಾಡಲು ಕೊನೆಗೆ ಹೋಗ್ಬೇಕು, ಮದುವೆ ಊಟ ಮಾಡಲು ಮೊದಲು ಕುತ್ಕೊಬೇಕು, ಒಟ್ಟಿನಲ್ಲಿ ಕಿರಿಯ ಮಗ ಅಥವಾ ಕಿರಿಯ ಮಗಳಾಗಿ ಹುಟ್ಟಬೇಕೆಂದು ನಮ್ಮ ಗುರು ಮಠಪತಿಯವರ ವಿಷಯದಲ್ಲಿ ಇದು ಸರಿ ಹೊಂದುತ್ತದೆ ಕಣ್ರೀ.
ಎಲ್ಲರ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾದ ಚುರುಕಿನ ಬಾಲಕರಾಗಿದ್ದ ಗುರು ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರ ನಗರ ಸರಕಾರಿ ಶಾಲೆಯಲ್ಲಿ ಪಡೆದು, ಜೆವಿಡಿಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದರು. ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಮಾಡಿದ ಬಳಿಕ ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆಯಲು ಸೇರಿದರಾದರೂ ದ್ವಿತೀಯ ಬಿ.ಕಾಂನಲ್ಲೆ ಶಿಕ್ಷಣಕ್ಕೆ ಕೊನೆ ಹಾಡಿದರು. ಒಂದು ಕಡೆ ಆರ್ಥಿಕ ಸಮಸ್ಯೆ, ತುಂಬಿದ ಸಂಸಾರ ಬೇರೆ. ಹೀಗೆ ಆರ್ಥಿಕ ಸಮಸ್ಯೆಗಳು ಸದಾ ಮಠಪತಿ ಮನೆಯನ್ನೆ ಸುತ್ತಿಕೊಳ್ಳಲಾರಂಭಿಸಿತು. ಹಾಗಾಗಿ ಕಲಿಕೆಗೆ ಗುಡ್ ಬೈ ಹಾಡಲೆಬೇಕಾಯ್ತು.
ಶಾಲಾ/ಕಾಲೇಜು ವಿದ್ಯಾರ್ಥಿಯಾಗಿರುವಾಗಲೆ ನಾಯಕತ್ವದ ಗುಣವನ್ನು ಬೆಳೆಸಿಕೊಂಡಿದ್ದ ಗುರು ಮಠಪತಿಯವರು ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದಿದ್ದರು. ವಾಲಿಬಾಲ್, ಕ್ರಿಕೆಟ್ ಅವರ ನೆಚ್ಚಿನ ಆಟಗಳಾಗಿದ್ದವು. ಲಾಂಗ್ ಜಂಪ್, ಹೈ ಜಂಪ್ ಹಾಗೂ ಅಥ್ಲೇಟಿಕ್ಸ್ ಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೆಬೇಕು.
ಕಾಲೇಜು ಬಿಟ್ಟು ಬದುಕಿಗೆ ಆಟೋ ಚಾಲಕರಾದ ಗುರು ಮಠಪತಿ:
ಕಾಲೇಜು ಬಿಟ್ಟು ಮುಂದೇನೂ ಎಂಬ ಚಿಂತೆಯಲ್ಲಿದ್ದ ಗುರು ಅವರು ಕೊನೆಗೆ ಅದು ಇದೆಂದೂ ತಲೆಕೆಡಿಸಿಕೊಳ್ಳದೇ ಅಣ್ಣನ ಆಟೋ ರಿಕ್ಷಾವನ್ನು ಸ್ವತ: ತಾವೆ ಚಲಾಯಿಸುವುದರ ಮೂಲಕ ಸ್ವಾವಲಂಬಿ ಜೀವನದ ಕಡೆಗೆ ಹೆಜ್ಜೆಯನ್ನೂರಿದರು. ಒಂದೆರಡು ವರ್ಷಗಳವರೆಗೆ ಆಟೋದ ಮೂಲಕ ಸಂಸಾರದ ರಥ ಮುನ್ನಡೆಸಲು ತನ್ನ ಕಾಣಿಕೆಯನ್ನು ನೀಡುತ್ತಿದ್ದ ಗುರು ಮಠಪತಿಯವರು, ಆನಂತರ ನಮ್ಮ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಲು ಆರಂಭಿಸಿದರು. ಇನ್ನೂ ಅದನ್ನೆ ಮುಂದುವರೆಸಿಕೊಂಡು ಯಶಸ್ಸಿನೆಡೆಗೆ ದೃಢವಾದ ಹೆಜ್ಜೆಯನ್ನಿಟ್ಟಿದ್ದಾರೆ.
ಇವುಗಳ ಜೊತೆ ಜೊತೆಯಲ್ಲೆ ಲೋಕಧ್ವನಿ ಮತ್ತು ಉಷಾಕಿರಣ ದಿನಪತ್ರಿಕೆಯ ವರದಿಗಾರರಾಗಿ ಒಂದೆರಡು ವರ್ಷ ಸೇವೆಯನ್ನು ಸಲ್ಲಿಸಿ, ದಾಂಡೇಲಿಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿದ ಹೆಗ್ಗಳಿಕೆ ಗುರು ಮಠಪತಿಯವರಿಗಿದೆ.
ಹೀಗೆ ಮುಂದುವರೆದ ಗುರು ಮಠಪತಿಯವರು ಇವೆಲ್ಲವುಗಳ ಜೊತೆ ಜೊತೆಗೆ ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ದಾಂಡೇಲಿ ಜನ ಜಾಗೃತಿ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಆನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಗಾಗಿ ಶ್ರಮಿಸಿದ್ದಾರೆ. ದಲಿತ ಸಂಘರ್ಷ ಸಮಿತಿ (ಸಂಯೋಜಕ)ಯ ದಾಂಡೇಲಿ ಘಟಕದ ಅಧ್ಯಕ್ಷರಾಗಿ 5 ವರ್ಷಗಳವರೆಗೆ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಹಿರಿಮೆಯನ್ನು ಹೊಂದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ (ನಾ) ದಾಂಡೇಲಿ ಘಟಕದ ಅಧ್ಯಕ್ಷರಾಗಿಯೂ ಕನ್ನಡ ನಾಡು, ನುಡಿ ಕಟ್ಟುವ ಕಾರ್ಯದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡ ಸಂಭ್ರಮ ಅವರಿಗಿದೆ. ಸುಭಾಸನಗರದಲ್ಲಿ ನಡೆಯುವ ದಾಂಡಿಯಾ ಮತ್ತು ಗಣೇಶೋತ್ಸವ ಕಾಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಆತ್ಮೀಯತೆಗೆ ಗುರು ಮಠಪತಿಯವರು ಪಾತ್ರರಾಗಿದ್ದಾರೆ.
ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಇದರ ಪ್ರಮುಖ ಪದಾಧಿಕಾರಿಯಾಗಿರುವ ಗುರು ಮಠಪತಿಯವರು ಒಬ್ಬ ಸಮರ್ಥ ಬ್ಯಾಡ್ಮಿಂಟನ್ ಆಟಗಾರರಾಗಿ ಗಮನ ಸೆಳೆದಿದ್ದಾರೆ. ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನು ಬ್ಯಾಡ್ಮಿಂಟನ್ ಪ್ರತಿಭೆಗಳನ್ನಾಗಿಸಿದ್ದಾರೆ. ಮಕ್ಕಳಷ್ಟೆ ಅಲ್ಲ ಅವರ ಮಡದಿ ದೀಪಾ ಅವರನ್ನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ರೂಪಿಸಿಕೊಂಡು ಮನೆ ಮಂದಿಯೆಲ್ಲಾ ಬ್ಯಾಡ್ಮಿಂಟನ್ ಆಟಗಾರರಾಗಿರುವುದು ಅವರ ಮನೆಯ ಮತ್ತೊಂದು ವಿಶೇಷ.
ರಾಜಕೀಯಕ್ಕೆ ಎಂಟ್ರಿ:
ಸಾಮಾಜಿಕವಾಗಿ ನಾಯಕತ್ವವನ್ನು ಬೆಳೆಸಿಕೊಂಡ ಗುರು ಮಠಪತಿಯವರು ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡು, ಆ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಸೇವೆ ನೀಡುವುದರ ಜೊತೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮಾಜಿ ಸಾಸಕ ಸುನೀಲ ಹೆಗಡೆಯವರ ಕಟ್ಟಾ ಬೆಂಬಲಿಗರಾಗಿ, ಸುನೀಲ ಹೆಗಡೆಯವರಿಗೆ ಒಬ್ಬ ತಮ್ಮನಾಗಿ ಅವರ ಚುನಾವಣಾ ಸಂದರ್ಭದಲ್ಲಿ ಪ್ರಮುಖ ಜಾವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಸುನೀಲ ಹೆಗಡೆಯವರು ಬಿಜೆಪಿಗೆ ಸೇರಿದ ಮೇಲೆ ಅವರನ್ನೆ ಹಿಂಬಾಲಿಸಿದ ಗುರು ಮಠಪತಿಯವರು ಬಿಜೆಪಿಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸುನೀಲ ಹೆಗಡೆಯವರ ನಂಬಿಕಸ್ಥ ಬಂಟನಾಗಿ ಕೆಲಸ ಮಾಡಿದ ಹೆಮ್ಮೆ ಗುರು ಮಠಪತಿಯವರಿಗಿದೆ. ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಮುಂಚೂಣಿಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ.
ಸಂಘಟಕ, ಮಾತುಗಾರ-ಗುರು ಮಠಪತಿ
ಅತ್ಯುತ್ತಮ ಸಂಘಟಕರಾಗಿ ಜನಪ್ರೀತಿಗಳಿಸಿದ ಗುರು ಮಠಪತಿಯವರು ಅತ್ಯುತ್ತಮ ಮಾತುಗಾರರಾಗಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಅವರಿರುವ ಪಕ್ಷದ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿಯನ್ನು ಯಾವಾಗ್ಲೂ ಗುರು ಮಠಪತಿಯವರೆ ನಿರ್ವಹಿಸುತ್ತಿರುವುದು ರೂಢಿಯಾಗಿದೆ.
ಜೀವನದಲ್ಲಿ ಹಲವಾರು ಅಡೆ ತಡೆಗಳನ್ನು ಹಿಮ್ಮೆಟ್ಟಿಸಿ, ಪ್ರಗತಿಯ ಶಿಖರದತ್ತ ಶರವೇಗದ ನಡಿಗೆಯನ್ನು ಇಟ್ಟ ಗುರು ಮಠಪತಿಯವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಸಹೋದರರ ಹಾಗೂ ಸಹೋದರಿಯರ ಮಾರ್ಗದರ್ಶನ, ಕನಸಿನ ರಾಣಿ, ಮುದ್ದಿನ ಮಡದಿ ದೀಪಾ ಅವರ ನಗುಮೊಗದ ವಾತ್ಸಲ್ಯ, ಮಕ್ಕಳಾದ ರೋಹಿತ್ ಮತ್ತು ಅಮಿತ್ ಅವರುಗಳ ಅಕ್ಕರೆಯ ಪ್ರೀತಿ, ಕುಟುಂಬಸ್ಥರ, ಗೆಳೆಯರ ಸಹಕಾರ, ಪ್ರೋತ್ಸಾಹವು ಪ್ರಮುಖ ಕಾರಣವಾಗಿದೆ.
ಮಗದೊಮ್ಮೆ ಹುಟು ಹಬ್ಬದ ಹಾರ್ದಿಕ ಶುಭಾಷಯಗಳು ಲವ್ಲಿ ಪ್ರೆಂಡ್
ನಿಮ್ಮವ
ಸಂದೇಶ್.ಎಸ್.ಜೈನ್


Happy birthday Bro
ReplyDeleteWish happy birthday guru
ReplyDeleteWish u happy birthday guru
ReplyDelete