Wednesday, December 12, 2018

ನಮ್ಮೂರ ಹೆಮ್ಮೆಯ ಶ್ರಮವೀರ ಬರ್ನಾಡ್ ಬೈಲಾ
ಜನ್ಮದಿನದ ಸಂಭ್ರಮದಲ್ಲಿ ಬರ್ನಾ ಬ್ರದರ್

ನಮ್ಮೂರ ಹೆಮ್ಮೆಯ ಶ್ರಮವೀರ ಬರ್ನಾಡ್ ಬೈಲಾ
ಜನ್ಮದಿನದ ಸಂಭ್ರಮದಲ್ಲಿ ಬರ್ನಾ ಬ್ರದರ್

ಸತತ ಪರಿಶ್ರಮ, ನಂಬಿಕೆ ಹಾಗೂ ಅಚಲವಾದ ಶೃದ್ದೆಯಿದ್ದರೆ ಹಿಡಿದ ಕೆಲಸದಲ್ಲಿ ಸಾಧಿಸಿ ಯಶಸ್ವಿಯಾಗಬಹುದೆನ್ನುವುದನ್ನು ತೋರಿಸಿಕೊಟ್ಟ ಶ್ರಮವೀರ ಅವರು. ಕೋಪ ಸ್ವಲ್ಪ ಜಾಸ್ತಿ ಇದ್ದರೂ ಅದು ಮನಸ್ಸಿನಲ್ಲಿ ಇಟ್ಟುಕೊಳ್ಳದ ಕೋಪ ಕಣ್ರೀ. ಆದರೂ ನೇರ ಮಾತಿನ ಹೃದಯವಂತ ಮತ್ತು ಅಷ್ಟೆ ಮೃದು ಮನಸ್ಸಿನ ಪರೋಪಕಾರಿ ಗುಣವಂತ. ದೂರದೂರಲ್ಲೂ ಉದ್ಯೋಗ ಮಾಡುವ ಅವಕಾಶ ಬಂದಿತ್ತಾದರೂ ಅಮ್ಮನ ಮುದ್ದು ಪ್ರೀತಿಯ ನಡುವೆ ಅವೆಲ್ಲವುಗಳನ್ನು ಗೌಣವಾಗಿಸಿ, ಅಮ್ಮನ ಆಶೀರ್ವಾದದಿಂದ ದಾಂಡೇಲಿಯಲ್ಲೆ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡ ಸಾಹಸಿ ಶ್ರಮವೀರ, ನನ್ನೊಲವಿನ ಬ್ರದರ್ ಬರ್ನಾಡ್ ಬೈಲಾ ಅವರು.

ನಿನ್ನೆ ನಮ್ಮಣ್ಣ ಬರ್ನಾಡ್ ಬೈಲಾ ಅವರಿಗೆ ಜನ್ಮದಿನದ ಸಂಭ್ರಮ, ಸಡಗರ. ಜನ್ಮದಿನದ ಹಾರ್ದಿಕ ಶುಭಾಶಯಗಳು ಮೈ ಲವ್ಲಿ ಬರ್ನಾ ಬ್ರದರ್. ಈ ಬರಹ ಬರ್ನಾ ಅವರ ಪ್ರೀತಿಯ, ಮಮತೆಯ ಸಹೋದರರತ್ವದ ಬಾಂದವ್ಯಕ್ಕೆ  ಅರ್ಪಣೆ.

ದಾಂಡೇಲಿ ನಗರವೇಕೆ ಬಹುತೇಕವಾಗಿ ಹೇಳುವುದಾದರೇ ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಯಲ್ಲೆ ಅತ್ಯಂತ ಹೆಚ್ಚು ಚಿರಪರಿಚಿತ ನಮ್ಮ ದಾಂಡೇಲಿಯ ಸುಶೀಲಮ್ಮ ಸೌಂಡ್ಸ್ ಸಿಸ್ಟಂ ಎಂಬುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೆಬೇಕು. ಅಂದ ಹಾಗೆ ಸುಶೀಲಮ್ಮ ಸೌಂಡ್ಸ್ ಸಿಸ್ಟಂನ ಮಾಲಿಕ ಬೇರಾರು ಅಲ್ಲ. ಅವರೇ ನಮ್ಮ ಹಿರೋ ಬರ್ನಾಡ್ ಬೈಲಾ ಅವರು.

ದಾಂಡೇಲಿಯ ವನಶ್ರೀನಗರದ ನಿವಾಸಿ, ಅರಣ್ಯ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವಾಗಲೇ ಸ್ವರ್ಗಸ್ಥರಾದ ಸ್ಯಾಮುವೆಲ್ ಹಾಗೂ ನಗರ ಸಭೆಗೆ ಆಯ್ಕೆಯಾಗಿದ್ದ ನಾರಿಮಣಿ ಸುಶೀಲಮ್ಮ ದಂಪತಿಗಳ ಮುದ್ದಿನ ಕುವರ ಈ ನಮ್ಮ ಬರ್ನಾಡ್ ಅವರು. ಬರ್ನಾಡ್ ಅವರಿಗೆ ಐವರು ಸಹೋದರಿಯರು, ಇಬ್ಬರು ಅಣ್ಣಂದಿರರು, ಇವರಲ್ಲಿ ಕೊನೆಯವರು ಬರ್ನಾಡ್ ಬೈಲಾ ಅವರು.



ಕೊನೆಯ ಮಗ ಎಂಬ ಅಪ್ಪ, ಅಮ್ಮನ ಸಲುಗೆಯ ಪ್ರೀತಿ, ಸಣ್ಣ ತಮ್ಮ ಎಂಬ ಅಕ್ಕಂದಿರರ ಹಾಗೂ ಅಣ್ಣಂದಿರರ ಪ್ರೀತಿಯ ಸೊಂಪಿನಲ್ಲಿ ಬೆಳೆದ ಬರ್ನಾಡ್ ಬೈಲಾ ಅವರು ಹೈಟ್ ವಿಷ್ಯದಲ್ಲಿ ನನ್ನಷ್ಟೆ. ಹಾಗಾಗಿ ನಮ್ಮಿಬ್ಬರ ದೋಸ್ತಿತನ ಮತ್ತು ಸಹೋದರತ್ವದ ಬಾಂದವ್ಯ ಸೃಷ್ಟಿಯಾಗಿ ಹನ್ನೆರಡು ವರ್ಷಗಳು ಸಂದಿವೆ.

ಬರ್ನಾಡ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಹಳೆ ದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ಮುಂದೆ ಅಲ್ಲೆ ಇದ್ದ ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿದರು. ಅದಾದ ಬಳಿಕ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದರು. ಮುಂದೆ ಓದು ಇಷ್ಟೆ ಸಾಕೆಂದು ಬಯಸಿ, ಓದಿಗೆ ಗುಡ್ ಬೈ ಹಾಡಿ, ಮೊದಲೆ ಹುಚ್ಚತ್ತಿದ್ದ ಸೌಂಡ್ಸ್ ಸಿಸ್ಟಂ ಉದ್ಯಮವನ್ನು ಪ್ರಾರಂಭಿಸಬೇಕೆಂದು ಬಯಸಿ ಹಟಬಿಡದೆ ಅದನ್ನೆ ಪ್ರಾರಂಭಿಸಿದರು.

ಅಮ್ಮನ ಅಣತಿ, ಆಶೀರ್ವಾದದಿಂದ ಪ್ರಾರಂಭಿಸಿದ ಸೌಂಡ್ಸ್ ಸಿಸ್ಟಂ ಬ್ಯುಜಿನೆಸ್:
ಅಮ್ಮ ಸುಶೀಲಮ್ಮನವರ ಅಣತಿ ಮತ್ತು ಆಶೀರ್ವಾದವನ್ನು ಪಡೆದೆ ಯಾವುದೇ ಕೆಲಸದಲ್ಲಿ ಮುಂದುವರಿಯುವ ನಮ್ಮ ಬರ್ನಾಡ್ ಬೈಲಾ ಅವರು ತನ್ನ ಜೀವನದ ಮೊದಲ ಕನಸನ್ನು ನನಸು ಮಾಡಿಕೊಂಡರು. ಅವರ ಜೀವನದ ಬಹುದೊಡ್ಡ ಕನಸು ಸೌಂಡ್ಸ್ ಸಿಸ್ಟಂ, ಶಾಮಿಯಾನ ಬ್ಯುಜಿನೆಸ್ ಮಾಡಬೇಕೆಂಬುವುದೆ ಆಗಿತ್ತು. ಅಮ್ಮನ ಆಶೀರ್ವಾದದಿಂದ ಅವರು ಅಮ್ಮನ ಹೆಸರಲ್ಲೆ ಸುಶೀಲಮ್ಮ ಸೌಂಡ್ಸ್ ಸಿಸ್ಟಂ ಉದ್ಯಮವನ್ನು 2000 ನೇ ವರ್ಷದಲ್ಲಿ ಪ್ರಾರಂಭಿಸಿದರು.

ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟ ಬರ್ನಾಡ್ ಬೈಲಾ ಅವರು ಈ ವೃತ್ತಿಯಲ್ಲಿ ಕಾಲಕ್ರಮೇಣ ಯಶಸ್ಸನ್ನು ಸಾಧಿಸತೊಡಗಿದರು. ಬರ್ನಾಡ್ ಅವರ ಈ ಉದ್ಯಮದಲ್ಲಿ ಸೌಂಡ್ಸ್ ಸಿಸ್ಟಂ, ಬಗೆ ಬಗೆಯ ಶಾಮಿಯಾನ, ಪೆಂಡಲ್ಸ್ ಗಳು, ಲೈಟಿಂಗ್ಸ್, ಕುರ್ಚಿಗಳು, ಟೇಬಲ್ಸ್ ಗಳು, ಆಲಂಕಾರಿಕ ವಸ್ತುಗಳು, ಅಡುಗೆ ಪಾತ್ರೆಗಳು ಹೀಗೆ ಇನ್ನೂ ಅನೇಕ ವಸ್ತುಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ. ತನ್ನ ಅತ್ಯುತ್ತಮವಾದ ಸೇವೆಯಿಂದ ಉತ್ತರಕನ್ನಡ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆಯಲ್ಲಿಯೂ ಗಮನ ಸೆಳೆದಿರುವ ಬರ್ನಾಡ್ ಅವರಿಗೆ ಈಗ ಕೈ ತುಂಬ ಕೆಲಸವಿದೆ. ಅದರ ಫಲಶೃತಿ ಎಂಬಂತೆ ಆರ್ಥಿಕವಾಗಿ ಸಶಕ್ತರಾಗಿದ್ದಾರೆ. ಎರಡು ಮೂರು ವಾಹನಗಳ ಮಾಲೀಕರಾಗಿರುವ ಬರ್ನಾಡ್ ಬೈಲಾ ಅವರು ಕಳೆದೆರಡು ವರ್ಷಗಳ ಹಿಂದೆ ತನ್ನ ಕನಸಿನ ವಾಹನವಾದ ಎರ್ಟಿಕಾ ವಾಹನವನ್ನು ಕೊಂಡುಕೊಂಡಿದ್ದಾರೆ.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಡೆದ ದೊಡ್ಡ ದೊಡ್ಡ ಕಾರ್ಯಕ್ರಮಗಳು, ಮದುವೆ ಇನ್ನಿತರ ಬಹುದೊಡ್ಡ ಸಮಾರಂಭಗಳ ವೇದಿಕೆಯಿಂದ ಹಿಡಿದು ಲೈಟಿಂಗ್ಸ್, ಶಾಮಿಯಾನ ಮೊದಲಾದ ಡೆಕೊರೇಶನ್ ವ್ಯವಸ್ಥೆಯನ್ನು ಬರ್ನಾಡ್ ಅವರ ಸುಶೀಲಮ್ಮ ಸೌಂಡ್ಸ್ ಸಿಸ್ಟಂ ಮೂಲಕವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಹೆಮ್ಮೆ ಬರ್ನಾಡ್ ಅವರಿಗಿದೆ.

ನಿರುದ್ಯೋಗಿಗಳಿಗೆ ಉದ್ಯೋಗದ ಆಸರೆ ನೀಡಿದ ಬೈಲಾ:
ತನ್ನ ಸುಶೀಲಮ್ಮ ಸೌಂಡ್ಸ್ ಸಿಸ್ಟಂ ಇದರ ಕಾರ್ಯ ನಿರ್ವಹಣೆಗಾಗಿ ಐದಾರು ನಿರುದ್ಯೋಗಿ ಯುವಕರನ್ನು ನೇಮಿಸಿಕೊಂಡು ಅವರಿಗೆ ಉದ್ಯೋಗದ ಆಸರೆ ನೀಡಿದ ಧನ್ಯತೆ ನಮ್ಮ ಬರ್ನಾಡ್ ಬೈಲಾ ಅವರಿಗಿದೆ. ತಾನು ಬದುಕುವುದರ ಜೊತೆಗೆ ಇನ್ನೊಬ್ಬರ ಬದುಕಿನ ಬಗ್ಗೆಯೂ ವಿಚಾರ ಮಾಡುವ ಬರ್ನಾಡ್ ಅವರ ಹೃದಯವಂತಿಕೆಯನ್ನು ಕೊಂಡಾಡಲೆಬೇಕು.

ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಬರ್ನಾಡ್ ಬೈಲಾ ಅವರು ಕಳೆದ ಕೆಲ ವರ್ಷಗಳ ಹಿಂದೆ ದಾಂಡೇಲಿಯಲ್ಲಿ ಪ್ರಪ್ರಥಮವಾಗಿ ರಚನೆಯಾದ ದಾಂಡೇಲಿ ಶಾಮಿಯಾನ ಅಸೋಶಿಯೇಶನ್ ಸಂಘದ ಸ್ಥಾಪಕಾಧ್ಯಕ್ಷರಾಗಿ ಸಂಘದ ಅಗ್ರ ಬೆಳವಣಿಗೆಗೆ ವಿಶೇಷ ಕೊಡುಗೆಯನ್ನು ನೀಡುತ್ತಿದ್ದಾರೆ.

ಶ್ರಮಜೀವಿಯಾಗಿ ಶ್ರಮವೀರನಾದ ಬರ್ನಾಡ್ ಬೈಲಾ ಅವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಅಣ್ಣಂದಿರರ ಹಾಗೂ ಅಕ್ಕಂದಿರರ ಮಾರ್ಗದರ್ಶನ, ಪ್ರೀತಿಯ ಜೀವನ ಸಂಗಾತಿಯಾಗಿರುವ ಮಡದಿ ಬಿಯೂಲಾ ಅವರ ಮನದುಂಬಿದ ಸಹಕಾರ, ಮಕ್ಕಳಾದ ಜೀವನ್, ಪ್ರಾಚಿ, ಪ್ರಾರ್ಥನಾ ಅವರುಗಳ ಅಕ್ಕರೆಯ ಪ್ರೀತಿ, ಜೀವದ ಗೆಳೆಯ ಹಾಗೂ ನಗರ ಸಭಾ ಸದಸ್ಯ ಮೋಹನ ಹಲವಾಯಿ ಅವರ ಸಂಪೂರ್ಣ ಸಹಕಾರ, ಕುಟುಂಬಸ್ಥರ, ಬಂಧುಗಳ, ಗೆಳೆಯರ ಸಹಕಾರವೆ ಪ್ರಮುಖ ಕಾರಣ ಎಂದು ಹೇಳಬಹುದು.

ಶ್ರಮದಿಂದ ಸಾಧನೆ ಸಾಧ್ಯ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಬರ್ನಾಡ್ ಬೈಲಾ ಅವರಿಗೆ ಮಗದೊಮ್ಮೆ ಹಾರ್ದಿಕ ಶುಭಾಶಯಗಳು.

ನಿಮ್ಮವ

ಸಂದೇಶ್.ಎಸ್.ಜೈನ್
 

1 comment:

  1. He is only the one antique piece no one compet him... BARNA is Barn only... HAPPY BIRTHDAY ANNA....

    ReplyDelete

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...