ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಸತೀಶ ಬೆಂಡೆ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ
ಸಂಕಷ್ಟಕ್ಕೆ ಸ್ಪಂದಿಸುವ ಹೃದಯವಂತ ಸತೀಶ ಬೆಂಡೆ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ
ಗುಣವಂತ ಸತೀಶ ಬೆಂಡೆಯವರಿಗೆ ಜನ್ಮದಿನದ ಸಂಭ್ರಮ
ಅವರು ಎಲ್ಲರಂತಲ್ಲ. ತಾನಷ್ಟೆ ಬದಕಬೇಕೆಂದು ಬಯಸಿ ಬದುಕುವ ಪರಿಪಾಠ ಅವರದ್ದಲ್ಲ. ತನ್ನ ಜೊತೆ ತಮ್ಮವರು ಬದುಕು ಕಟ್ಟಿಕೊಳ್ಳಬೇಕು. ಸರ್ವರು ಸುಖದ ಬಾಳು ಕಟ್ಟಿಕೊಳ್ಳಬೇಕೆಂಬ ಹೆಬ್ಬಯಕೆಯನ್ನು ಹೊಂದಿದ ವಿಶಾಲ ಹೃದಯದ ಹೃದಯವಂತ. ಇನ್ನೊಬ್ಬರ ಸಂತಸದಲ್ಲೆ ತನ್ನ ಸಂತಸವನ್ನು ಕಂಡ ಅಪರೂಪದ ಅಪೂರ್ವ ವ್ಯಕ್ತಿಯವರು. ರಾಜಕೀಯವಾಗಿ 38 ವರ್ಷಗಳಿಂದ ಗುರುತಿಸಿಕೊಂಡರೂ, ಎಲ್ಲಿಯೂ ಪದವಿ, ಕುರ್ಚಿ ಆಸೆಗೆ ಬಲಿ ಬೀಳದೆ ನಿಸ್ವಾರ್ಥವಾಗಿ ರಾಜಕೀಯ ಸೇವೆಗೈದ ಪರಿಣತ ರಾಜಕಾರಣಿ. ಅವರು ಮನಸ್ಸು ಮಾಡಿದರೇ ಯಾವತ್ತೋ ನಿಗಮ-ಮಂಡಳಿಯಲ್ಲಿ ಬಹುದೊಡ್ಡ ಹುದ್ದೆಯನ್ನು ಪಡೆಯಬಹುದಿತ್ತು. ಅದು ಮಾಡಲಿಲ್ಲ. ಆದರೆ ಅವರು ಬಹಳಷ್ಟು ಜನರನ್ನು ರಾಜಕೀಯಕ್ಕೆ ಕರೆತಂದು ಸಕ್ರೀಯ ಚುನಾವಣಾ ಅಖಾಡಕ್ಕಿಳಿಸಿ ಅಧಿಕಾರದ ಗದ್ದುಗೆಗೆ ಏರಿಸಿದರಾದರೂ ಅವರೆಂದೂ ಸಕ್ರೀಯ ಚುನಾವಣಾ ಹಣಹಣಿಗೆ ಇಳಿದವರಲ್ಲ. ತಾನಾಯಿತು, ತನ್ನ ಕೆಲಸವಾಯ್ತೆಂದು, ಸ್ವಚ್ಚ ಹೃದಯದಿ ಕೆಲಸ ಮಾಡಿದ ನನ್ನ ನೆಚ್ಚಿನ ಮತ್ತು ಮೆಚ್ಚಿನ ಹಿರಿಯಣ್ಣ. ಇಷ್ಟಾದ ಮೇಲೆ ಅವರ ಹೆಸರು ಹೇಳಲೆಬೇಕು. ಅವರ್ಯಾರು ಬೇರೆಯವರಲ್ಲ, ಸ್ಟೈಲಿಸ್ ಹಾಗೂ ಸೈಂಟಿಷ್ಟ್ ಗಡ್ಡದಾರಿ, ಕಟುಮಸ್ತಾದ ಪರ್ಸನಾಲಿಟಿಯನ್ನು ಹೊಂದಿದ ಮಧುರ ಮನಸ್ಸಿನ ನಮ್ಮ ಹೆಮ್ಮೆಯ ಸತೀಶ ಬೆಂಡೆಯವರು.
ನಮ್ಮ ಹಿರಿಯಣ್ಣ ಸತೀಶ ಬೆಂಡೆಯವರಿಗೆ ಇಂದು ಜನ್ಮದಿನದ ಸಂಭ್ರಮ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಿಸ್ವಾರ್ಥ ಮನಸ್ಸಿನ ವೀರಸಾಮ್ರಾಟ್ ಸತೀಶ ಬೆಂಡೆಯವರಿಗೆ ಹಾರ್ದಿಕ ಶುಭಾಶಯಗಳು.
ನನ್ನ ಅವರ ಪರಿಚಯವಾಗಿ ಬಹಳಷ್ಟು ವರ್ಷಗಳು ಸಂದವು. ಆಗ 2007 ನೇ ವರ್ಷ ನಾನು ದೇಶಪಾಂಡೆ ರುಡ್ಸೆಟಿನ ದಾಂಡೇಲಿ ಶಾಖೆಯ ಯೋಜನಾಧಿಕಾರಿಯಾಗಿದ್ದೆ. ಅವರು ಸದಾ ಇರುತ್ತಿದ್ದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಹೋಗುತ್ತಿದ್ದರೂ ಅವರ ಪರ್ಸನಾಲಿಟಿ ನೋಡಿ, ಈ ಮನುಷ್ಯ ಸ್ವಲ್ಪ ಸೊಕ್ಕಿನ ಮನುಷ್ಯ, ಕೋಪಿಷ್ಟ ಅಂದುಕೊಂಡು ಅವರಿಂದ ಸ್ವಲ್ಪ ದೂರವಿದ್ದೆ. ಅದು ಅವರ ತಪ್ಪಲ್ಲ. ಒಂದು ವ್ಯಕ್ತಿಯ ಪರ್ಸನಾಲಿಟಿ ನೋಡಿ ಅವರ ವ್ಯಕ್ತಿತ್ವವನ್ನು ಅಳೆಯುವ ಮನಸ್ಸು ನಮ್ಮದಾಗಬಾರದು. ಆಗ ನಾನು ಹಾಗೆ ಮಾಡಿದ್ದೆ. ಆದರೆ ದಿನ ಉರುಳಿದಂತೆ ಅವರ ಬಳಿ ಮಾತಾಡಲು ಪ್ರಾರಂಭಿಸಿದೆ, ಅವರ ಜೊತೆ ಉತ್ತಮ ಸಂಬಂಧವನ್ನಿಟ್ಟುಕೊಳ್ಳಲು ಆರಂಭಿಸಿದೆ. ಆವಾಗ್ಲೆ ತಿಳಿಯಿತು ನೋಡಿ, ಸತೀಶ ಬೆಂಡೆಯವರು ಒಬ್ಬ ಗ್ರೇಟ್ ಹೃದಯವಂತ ಎನ್ನುವುದು. ಅಲ್ಲಿಂದ ನನ್ನ ಅವರ ನಡುವಿನ ಸಹೋದರತ್ವದ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿತು.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಮ್ಮ ಬೆಂಡೆಯವರ ಬಗ್ಗೆ ನನಗಿನಿಸಿದ್ದನ್ನು ಬರೆಯಲು ಅಣಿಯಾಗಿದ್ದೇನೆ. ನಮ್ಮ ಸತೀಶ ಬೆಂಡೆಯವರು ಹೊರಗಿನವರಲ್ಲ. ಅವರು ಮೂಲತ: ಹಳಿಯಾಳದವರು. ಅವರಪ್ಪ ಉದ್ಯೋಗವನ್ನರಸಿ ದಾಂಡೇಲಿಯ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿಗೆ ಬಂದು ಇಲ್ಲೆ ಸಟ್ಲಾದವರು. ಶಿಸ್ತಿನ ಸಿಪಾಯಿ, ನಿಜ ಹೇಳಬೇಕಾಂದ್ರೆ ಮಿಲಿಟ್ರಿ ಸಿಸ್ಟಂನ್ನು ಜೀವನದಲ್ಲಿ ಆಳವಡಿಸಿಕೊಂಡ ಸರಳ ಹಾಗೂ ನೇರ ನಡೆ ನುಡಿಯ ಮನೋಹರ ವಿಠ್ಠಲ ಬೆಂಡೆ ಹಾಗೂ ಸರ್ವರಿಗೂ ಅಮ್ಮನೆ ಆಗಿರುವ ಶುಭ್ರ ಬಿಳಿ ಬಣ್ಣದ ಅಮ್ಮ ಶಾಲಿನಿ.ಎಂ.ಬೆಂಡೆ ದಂಪತಿಗಳ ಜೇಷ್ಟ ಪುತ್ರ ನಮ್ಮ ಸತೀಶ ಬೆಂಡೆಯವರು. ಅಂದ ಹಾಗೆ ಸತೀಶ ಬೆಂಡೆಯವರಿಗೆ ಸಂದ್ಯಾ, ಸ್ಮಿತಾ ಮತ್ತು ಸಂಗೀತಾ ಎಂಬ ಮೂವರು ಸಹೋದರಿಯರಿದ್ದಾರೆ.
ಈ ಕುಟುಂಬಕ್ಕೆ ಒಬ್ಬನೆ ಒಬ್ಬ ಮಗ ಅಪ್ಪನಂತೆ ದಷ್ಟ ಪುಷ್ಟ ಪರ್ಸನಾಲಿಟಿಯ ಸತೀಶ ಅವರು. ಬಾಲಕನಿರುವಾಗ್ಲೇ ಎತ್ತಿಕೊಳ್ಳಲು ಆಗದೆ ಸತೀಶ ಅವರ ತಾಯಿ ಹೆಣಗಾಡುತ್ತಿದ್ದಾರಂತೆ. ಅದರ ಅರ್ಥ ವೈಟ್ ಜಾಸ್ತಿ ಇದ್ದರೂ ಎನ್ನುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ ಬಿಡಿ. ಮೊದಲೆ ಬೆಂಡೆ ಪ್ಯಾಮಿಲಿ ಅಂದ್ರೆ ಕರಿದ ತಿಂಡಿ, ತುಪ್ಪ, ಬೆಣ್ಣೆ ಅವರ ಅಡುಗೆ ಮನೆಯ ಪ್ರಮುಖ ಆಸ್ತಿಯಾಗಿದ್ದವು. ಇವೆಲ್ಲವೂ ಇದ್ದ ಮೇಲೆ ಸತೀಶ ಅವರು ಎಲ್ಲರಿಗಿಂತ ದುಪ್ಪಟ್ಟು ವೈಟ್ ಜಾಸ್ತಿ ಇರ್ಲೆಬೇಕಾಲ್ವೆ.

ಅದೀರಲಿ, ನಮ್ಮ ಸತೀಶ ಬೆಂಡೆಯವರು ಎಳೆಯ ಪ್ರಾಯದಲ್ಲೆ ಚುರುಕಿನ ಬಾಲಕರಾಗಿದ್ದವರು. ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಗೂರನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಮುಂದೆ ಜೆವಿಡಿಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದರು. ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮಾಡಿ, ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದರು. ಆನಂತರ ಮೂಲತ: ಹಳಿಯಾಳದವರಾದ ಕಾರಣ, ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸಿ, ಕೃಷಿ ವಿಷಯದಲ್ಲಿ ಡಿಪ್ಲೋಂ ಕೋರ್ಸನ್ನು ಮಾಡಿದರು.
ಅತ್ಯುತ್ತಮ ಕ್ರೀಡಾಪಟು ನಮ್ಮ ಬೆಂಡೆಯವರು:
ಶಾಲಾ/ಕಾಲೇಜು ಅವಧಿಯಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಗಮನ ಸೆಳೆದವರು ನಮ್ಮ ಸತೀಶ ಬೆಂಡೆಯವರು. ಅತ್ಯುತ್ತಮ ವಾಲಿಬಾಲ್ ಆಟಗಾರರಾಗಿ ಶಾಲಾ/ಕಾಲೇಜಿನ ತಂಡವನ್ನು ಅನೇಕ ಪಂದ್ಯಾವಳಿಗಳಲ್ಲಿ ಜಯಭೇರಿ ಬಾರಿಸಿದ ಹೆಮ್ಮೆ ನಮ್ಮ ಸತೀಶ ಅವರಿಗಿದೆ. ಕ್ರಿಕೆಟ್, ಖೋಖೊ, ರನ್ನಿಂಗ್ ರೇಸ್, ಲಾಂಗ್ ಜಂಪ್ ಇವೆಲ್ಲವೂ ಅವರ ಇಷ್ಟದ ಕ್ರೀಡೆಗಳಾಗಿದ್ದವು. ಆಳೆತ್ತರದ ಪರ್ಸನಾಲಿಟಿಯಾದರೂ ಅತ್ಯುತ್ತಮ ಹಾಡುಗಾರರಾಗಿ, ಭಾಷಣಕಾರರಾಗಿ ವಿದ್ಯಾರ್ಥಿ ದೆಸೆಯಲ್ಲೆ ಎಲ್ಲರ ಗಮನ ಸೆಳೆದವರು ಇದೇ ನಮ್ಮ ನಗುಮೊಗದ ಸತೀಶ ಬೆಂಡೆಯವರು.
ಕಿಂಗ್ ಆಗಬೇಕಾದವರು ಕಿಂಗ್ ಮೇಕರ್ ಆಗಿ, ಅದೇ ರೀತಿ ಮುಂದುವರಿಯುತ್ತಿರುವವರು ನಮ್ಮ ಸತೀಶ ಬೆಂಡೆಯವರು:
ಸತೀಶ ಬೆಂಡೆಯವರು ಅವರ ನಡೆ ನುಡಿಯ ಪ್ರಕಾರ ಯಾವತ್ತೋ ಅವರು ಕಿಂಗ್ ಆಗಬೇಕಿತ್ತು. ಆದರೆ ಅವರಿಗೆ ಅದು ಇಷ್ಟವಿರಲಿಲ್ಲ. ಬಂಗೂರನಗರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗುವ ಎಲ್ಲ ಅವಕಾಶ ಸತೀಶ ಅವರಿಗೆ ಬಂದಿತ್ತಾದರೂ ಅದನ್ನು ಅವರು ಸ್ವೀಕರಿಸದೇ ಅವರ ಜೀವದ ಗೆಳೆಯನನ್ನು ವಿದ್ಯಾರ್ಥಿ ನಾಯಕನನ್ನಾಗಿಸಿ ಕಿಂಗ್ ಮೇಕರ್ ಆಗಿ ಶ್ರಮಿಸಿದ ರೀತಿ ಅತ್ಯಂತ ಶ್ಲಾಘನೀಯ. ಹಾಗಾಗಿ ಅವರು ಈವರೇಗೂ ಕಿಂಗ್ ಆಗದೇ ಕಿಂಗ್ ಮೇಕರ್ ಆಗಿ ಎಲೆಮರೆ ಕಾಯಿಯಂತೆ ಕೆಲಸ ಮಾಡುವುದರ ಮೂಲಕ ಸರ್ವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರ ಕೆಲಸ, ಶೃದ್ದೆಯನ್ನು ಜನ ಸ್ಮರಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದ್ರೆ ದೇವರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವುದು ಮಾತ್ರ ಸತ್ಯ ಕಣ್ರೀ.
ಅಮ್ಮನ ಮಡಿಲಲ್ಲಿದ್ದುಕೊಂಡೆ ಬದುಕು ಕಟ್ಟಿಕೊಂಡ ಸಹೃದಯಿ ನಮ್ಮ ಬೆಂಡೆಯವರು:
ಸತೀಶ ಬೆಂಡೆಯವರಿಗೆ ಅವರ ಪರ್ಸನಾಲಿಟಿ ಮತ್ತು ಕ್ರಿಯಾಶೀಲತೆಗೆ ಅನುಗುಣವಾಗಿ ಅವರಿಗೆ ಬೆಂಗಳೂರು ಮತ್ತು ಮಹರಾಷ್ಟ್ರದಲ್ಲಿ ಉದ್ಯೋಗದ ಬಹುದೊಡ್ಡ ಆಫರ್ ಬಂದಿತ್ತು. ಆದರೆ ಆ ಎಲ್ಲ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿ, ಬದುಕಿದರೇ ಗಂಜಿ ನೀರು ಕುಡಿದಾದರೂ ಅಮ್ಮನ ಮಡಿಲಲ್ಲೆ ಇದ್ದುಕೊಂಡು ಬದುಕು ಕಟ್ಟಿಕೊಳ್ಳುತ್ತೇನೆಂದು ಅಚಲ ಗುರಿಯಿಟ್ಟುಕೊಂಡು ಜೀವನವನ್ನು ಕಟ್ಟಿದವರು ನಮ್ಮ ಸತೀಶ ಅವರು. ಇದರ ಫಲಶೃತಿ ಎಂಬಂತೆ, ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಉನ್ನತ ಉದ್ಯೋಗ ಅವರಿಗೆ ಲಭಿಸಿತು. ಕಾಗದ ಕಾರ್ಖಾನೆಯ ಇನ್ಸ್ಟ್ರುಮೆಂಟ್ ವಿಭಾಗದಲ್ಲಿ ಅಧಿಕಾರಿಯಾಗಿ ಸೇರಿ ಇದೀಗ ಮುಂಭಡ್ತಿಗೊಂಡು ಉನ್ನತ ಹುದ್ದೆಯಲ್ಲಿ ಇರುವ ಸತೀಶ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಹಿರಿಯ ಅಧಿಕಾರಿಗಳ ಪ್ರೀತಿ, ವಾತ್ಸಲ್ಯಕ್ಕೆ ಪಾತ್ರರಾಗಿದ್ದಾರೆ.
38 ವರ್ಷಗಳಿಂದ ಸಾರ್ಥಕ ರಾಜಕೀಯ ಸೇವೆಯಲ್ಲಿ ನಮ್ಮ ಸತೀಶಣ್ಣ:
ನಮ್ಮ ಸತೀಶ ಬೆಂಡೆಯವರಿಗೆ ಅವರ ಮುತ್ತಾತನ ಕಾಲದಿಂದಲೂ ಸಚಿವ ದೇಶಪಾಂಡೆಯವರ ಕುಟುಂಬದ ಜೊತೆ ಉತ್ತಮ ಒಡನಾಟ. ಹಾಗಾಗಿ ಸಹಜವಾಗಿಯೆ ಸತೀಶ ಬೆಂಡೆಯವರು ಸಚಿವ ಆರ್.ವಿ.ದೇಶಪಾಂಡೆಯವರ ಅತ್ಯಂತ ಹತ್ತಿರದ ನಿಕಟವರ್ತಿಯಾಗತೊಡಗಿದರು. 1980 ರಲ್ಲೆ ವೃತ್ತಿಯ ಜೊತೆಗೆ ದೇಶಪಾಂಡೆಯರ ಅಭಿಮಾನಿಯಾಗಿ ಸಕ್ರೀಯ ರಾಜಕಾರಣಕ್ಕೆ ದುಮುಕಿದ ಸತೀಶ ಬೆಂಡೆಯವರು ಈವರೇಗೂ ಚುನಾವಣಾ ರಾಜಕೀಯಕ್ಕಿಳಿಯಲಿಲ್ಲ. ಸಚಿವ ದೇಶಪಾಂಡೆಯವರ ಚುನಾವಣಾ ಸಮಯದಲ್ಲಿ ಶಕ್ತಿಮೀರಿ ದುಡಿಯುವುದರ ಮೂಲಕ ಸಚಿವ ದೇಶಪಾಂಡೆಯವರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರ ಅಪ್ಪುಗೆ ಮತ್ತು ಒಪ್ಪುಗೆಗೆ ಪಾತ್ರರಾದವರು ನಮ್ಮ ಸತೀಶ ಬೆಂಡೆಯವರು.
ರಾಜಕೀಯವಾಗಿ ಎಲ್ಲಿಯೂ ಹುದ್ದೆಯ ವ್ಯಾಮೋಹಕ್ಕೆ ಬಲಿಯಾಗದೇ, ನಿಸ್ವಾರ್ಥ ರಾಜಕಾರಣ ಮಾಡುತ್ತಾ ಬಂದಿರುವ ಸತೀಶ ಅವರು ನಗರ ಸಭಾ ಚುನಾವಣೆಯಲ್ಲಿ ಬಹಳಷ್ಟು ಜನರನ್ನು ಸಕ್ರೀಯ ಚುನಾವಣಾ ರಾಜಕಾರಣಕ್ಕೀಳಿಯುವಂತೆ ಮಾಡಿ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿದ ಮೇರು ವ್ಯಕ್ತಿತ್ವದ ಕ್ಲೀನ್ ಇಮೇಜಿನ ಅಪೂರ್ವ ರಾಜಕಾರಣಿ ಎನ್ನುವುದು ಸತ್ಯ.
ಸಾಮಾಜಿಕ ರಂಗದಲ್ಲಿ ಬೆಂಡೆ:
ರಾಜಕೀಯದ ಜೊತೆ ಜೊತೆಗೆ ಸಾಮಾಜಿಕ ರಂಗದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಮೂಲಕ ಸ್ನೇಹಜೀವಿಯಾಗಿರುವ ಸತೀಶ ಬೆಂಡೆಯವರು ಸಂಕಷ್ಟಕ್ಕೊಳಗಾದವರಿಗೆ ತಕ್ಷಣ ಸ್ಪಂದಿಸುವುದರ ಮೂಲಕ ಬಹಳಷ್ಟು ಜನರ ಕಣ್ಣೀರನ್ನು ಒರೆಸಿದ ಧನ್ಯತೆಗೆ ಪಾತ್ರರಾಗಿದ್ದಾರೆ.
ಅಮ್ಮನೊಟ್ಟಿಗೆ ಇನ್ನು ಪುಟ್ಟ ಮಗು ನಮ್ಮ ಸತೀಶ ಬೆಂಡೆ:
ಅವರಮ್ಮ ಶಾಲಿನಿಯವರಿಗೆ ನಮ್ಮ ಸತೀಶ ಅವರು ಇನ್ನು ಪುಟ್ಟು ಮಗುವಿದ್ದಂತೆ. ನಮ್ಮ ಸತೀಶ ಬೆಂಡೆಯವರು ಈಗಲೂ ಅಮ್ಮನಿಗೆ ಪುಟ್ಟ ಮಗುವಿನಂತೆ ಇರುವುದನ್ನು ನೋಡುವುದೆ ಒಂದು ಸೊಬಗು. ಅಮ್ಮ-ಮಗನ ಆತ್ಮೀಯತೆ, ಅವರ ನಡುವಿನ ಸೊಗಸಾದ ನಗುವಿನಾಟವನ್ನು ಕಣ್ತುಂಬಿಕೊಳ್ಳುವುದೆ ಒಂದು ಸಂಭ್ರಮ.
ವೃತ್ತಿ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನ ವರ್ಚಸ್ಸಿನ ಮೂಲಕ ದಾಂಡೇಲಿಗರ ಮನಗೆದ್ದ ಸತೀಶ ಬೆಂಡೆಯವರು ಜೀವನದ ಮಹತ್ವದ ಗುರಿಯನ್ನು ಈಡೇರಿಸಿಕೊಂಡು ಶ್ರಮದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಜೀವನದಲ್ಲಿ ಇನ್ನೊಬ್ಬರ ಒಳಿತಿಗಾಗಿ ಹಲವಾರು ನೋವುಗಳನ್ನು ಉಂಡರೂ, ಶ್ರಮದ ಹಾದಿಯಲ್ಲಿ ಮುನ್ನಡೆದು ಯಶಸ್ಸಿನ ರಾಜದಾರಿಯಲ್ಲಿ ಪಯಾಣಿಸುತ್ತಿರುವ ಸತೀಶ ಬೆಂಡೆಯವರ ಜೀವನ ಯಶಸ್ಸಿಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಸದಾ ನಗುವಿನ ಮೂಲಕವೆ ಸತೀಶ ಅವರಿಗೆ ಆಸರೆಯಾಗುತ್ತಿರುವ ಅವರ ಪ್ರೀತಿಯ ಧರ್ಮಪತ್ನಿ ಸಂಜನಾ ಬೆಂಡೆಯವರ ಪ್ರೋತ್ಸಾಹ, ಮಕ್ಕಳಾದ ಅಶೀಶ್ ಮತ್ತು ಪ್ರೇಮ್ ಅವರುಗಳ ಅಕ್ಕರೆಯ ಪ್ರೀತಿ, ಸಹೋದರಿಯರ, ಕುಟುಂಬಸ್ಥರ, ಗೆಳೆಯರ ಸಹಕಾರ, ಪ್ರೋತ್ಸಾಹವು ಕಾರಣ.
ಎಲ್ಲರ ಮನಗೆದ್ದ ಹೃದಯಸಾಮ್ರಾಟ್ ಸತೀಶಣ್ಣ ಮಗದೊಮ್ಮೆ ತಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮವ
ಸಂದೇಶ್.ಎಸ್.ಜೈನ್

Many many happy returns of the day brother.
ReplyDelete