
ಸಮಾಜಮುಖಿ ವ್ಯಕ್ತಿತ್ವದ ಚರುಕಿನ ಯುವಕ ನಮ್ಮ ಪ್ರಶಾಂತ ಬಸೂರ್ತೆಕರ
ಬೆಕ್ಕಿನ ಕಣ್ಣಿನ ಪ್ರಶಾಂತ ಬಸೂರ್ತೆಕರರಿಗೆ ಜನ್ಮದಿನದ ಸಂಭ್ರಮ
ಬೆಕ್ಕಿನ ಕಣ್ಣಿನ ಪ್ರಶಾಂತ ಬಸೂರ್ತೆಕರರಿಗೆ ಜನ್ಮದಿನದ ಸಂಭ್ರಮ
ಈ ಯುವಕ ಅಂತಿಥವನಲ್ಲ. ಹಟವಾದಿ ಯುವಕ. ಅನ್ಯಾಯವನ್ನು ಎದುರಿಸುವ ಗಂಡೆದೆಯ ಬಿಸಿರಕ್ತದ ನವತರುಣ ಎನ್ನಲು ಅಡ್ಡಿಯಿಲ್ಲ. ಮಾತು ಕಡಿಮೆ, ಕೆಲಸ ಜಾಸ್ತಿ. ಆದರೆ ಸಂವಹನ ಕಲೆಯನ್ನು ಈ ಯುವಕನಿಂದ ನೋಡಿ ಕಲಿಯಬೇಕು. ವ್ಯವಹಾರ ಪ್ರೌಢಿಮೆಗೆ ಭೇಷ್ ಅನ್ನಲೆಬೇಕು. ಕಟ್ಟ ಹಿಂದುತ್ವವಾದಿ. ಹಾಗಾಂತ ಹೇಳಿ ಉಳಿದ ಧರ್ಮದ ವಿರೋಧಿಯಲ್ಲ. ಹಿಂದು ಧರ್ಮದ ಬಗ್ಗೆ ಅನ್ಯಾಯವಾದಾಗ ಸಿಡಿದೇಳುವ ಸಾಹಸಿ ಯುವಕ ಎನ್ನುವುದಂತು ಸತ್ಯದ ಮಾತು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ತನ್ನ ಪಾಡಿಗೆ ಇದ್ದುಕೊಂಡೆ ಸಮಾಜಮುಖಿಯಾಗಿ ಚಿಂತಿಸುವ ಪಾದರಸದಂತೆ ನಿಂತಲ್ಲಿ ನಿಲ್ಲದೆ ಸರ ಸರನೆ ಓಡಾಡುತ್ತಿರುವ ಈ ಯುವಕ ಬೇರಾರು ಅಲ್ಲ. ನಮ್ಮೂರಿನ ಯುವಕ, ಮನದ ಗೆಳೆಯ ಪ್ರಶಾಂತ ಬಸೂರ್ತೆಕರ.
ಹಲವಾರು ನೋವುಗಳನ್ನುಂಡು, ಕಣ್ಣೀರನ್ನು ಬರಿಸಿ, ಕೆಚ್ಚೆದೆಯ ಬದುಕು ಕಟ್ಟಿಕೊಂಡ ಸಾಹಸಿಮಿತ್ರ ಪ್ರಶಾಂತ ಬಸೂರ್ತೆಕರ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ಬೆಕ್ಕಿನ ಕಣ್ಣಿನ ಹಾಗೂ ಎಲ್ಲರೂ ಮುದ್ದಿನಿಂದ ಕರೆಯುವ ನಮ್ಮೂರಿನ ಪಿಂಟ್ಯಾ ಅರ್ಥಾಥ್ ಪ್ರಶಾಂತ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.
ದೇಶವ್ಯಾಪಿ ಮೊಬೈಲ್ ನೆಟ್ವರ್ಕಿನಲ್ಲಿ ಜನಪ್ರಿಯತೆಯನ್ನು ಗಳಿಸಿದ್ದ ಏರ್ ಟೆಲಿಗೆ ದಾಂಡೇಲಿಯಲ್ಲಿ ಸರಿಯಾದ ಮತ್ತು ಅತ್ಯಂತ ಹೆಚ್ಚು ಲಾಭದಾಯಕವಾದ ಮಾರುಕಟ್ಟೆಯನ್ನು ರೂಪಿಸಿಕೊಟ್ಟ ಪ್ರಶಾಂತ ಬಸೂರ್ತೆಕರ ಅವರು ಬೆಳೆದು ಬಂದ ಹಾದಿಯ ಬಗ್ಗೆ ಕಿರಿದಾಗಿ ವಿವರಿಸಲು ಅಣಿಯಾಗಿದ್ದೇನೆ.
ನಮ್ಮ ಪ್ರಶಾಂತ ಅವರು ಸ್ಥಳೀಯ ಸುಭಾಸನಗರದ ನಿವಾಸಿ. ಶ್ರಮಜೀವಿಯಾಗಿದ್ದ ದಿ: ಪ್ರಕಾಶ ಬಸೂರ್ತೆಕರ ಹಾಗೂ ಇನ್ನೊಬ್ಬರ ನೋವಿಗೆ ಮಮ್ಮಲ ಮರುಗುವ ಪಾರ್ವತಿ ದಂಪತಿಗಳ ಕಿರಿ ಮಗ ಈ ನಮ್ಮ ಚೋಟುದ್ದ ಗೇಣಿನ ಪ್ರಶಾಂತ ಅವರು. ಪ್ರಶಾಂತ ಅವರಿಗೆ ಆನಂದ ಎಂಬ ಅಣ್ಣನಿದ್ದರು. ಆದರೇನೂ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿ ದುರಂತ ಸಾವನ್ನು ಕಂಡವರು.
ಪ್ರಶಾಂತ ಅವರು ತನ್ನ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದು, ಮುಂದೆ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಹಾಗೂ ಬಂಗೂರನಗರ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದರು. ಆದಾದ ಬಳಿಕ ತಮಿಳುನಾಡಿನ ವಿಶ್ವವಿದ್ಯಾಲಯವೊಂದರಲ್ಲಿ ದೂರಶಿಕ್ಷಣದ ಮೂಲಕ ಎಂ.ಬಿ.ಎ ಪದವಿಯನ್ನು ಪಡೆದರು.
ತುಂಟಾಟದ ಹುಡುಗ ನಮ್ಮ ಪ್ರಶಾಂತ:
ಕಿರಿಮಗ ಎಂಬ ಸಲುಗೆಯ ಪ್ರೀತಿ ಮನೆಮಂದಿಯದ್ದಾಗಿದ್ದರಿಂದ ಪ್ರಶಾಂತ ಅವರಿಗೆ ಯಾರ ಹೆದರಿಕೆಯಿರಲಿಲ್ಲ. ಎಳೆಯ ಪೋರನಾಗಿದ್ದಾಗಲೆ ಅವರು ಜನ್ಮವೆತ್ತ ಸುಭಾಸನಗರದ ಗಲ್ಲಿಯಲ್ಲಿ ಆಗಲೆ ಹೀರೋ ಆಗಿ ಮಿಂಚಿದ್ದರು. ಪರ್ಸನಾಲಿಟಿಯಲ್ಲಿ ಕುಳ್ಳಗೆಯಿದ್ದರೂ ಎಲ್ಲರನ್ನು ಎದುರಿಸುವ ಶಕ್ತಿಯನ್ನು ಬಾಲಕನಿರುವಾಗ್ಲೆ ಮೈಗೂಡಿಸಿಕೊಂಡಿದ್ದರು. ಅದು ಶಾಲಾ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಇವರ ತುಂಟಾಟಕ್ಕೇನು ಬರಗಾಲವಿರಲಿಲ್ಲ. ಅಷ್ಟು ತುಂಟಾಟವಿದ್ದರೂ ಅಂಕಗಳಿಕೆಯಲ್ಲಿ ಎಲ್ಲರಿಗಿಂತ ಮುಂದೆ. ಹಾಗಾಗಿ ಮಾಸ್ತರ ಮಂದಿ ತುಂಟಾದ ಬಗ್ಗೆ ಯಾವತ್ತೂ ಮನೆಯವರಿಗೆ ಕಂಪ್ಲೈಂಡ್ ಮಾಡಿದವರಲ್ಲ.
ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಯಾಗಿದ್ದಾಗ ಬಡ ಸಹಪಾಠಿಗಳಿಗೆ ತನ್ನ ಊಟದ ಡಬ್ಬಿಯಿಂದಲೆ ಊಟವನ್ನು ನೀಡುತ್ತಿದ್ದ ಪ್ರಶಾಂತ ಅವರ ಸಹೃದಯ ವೈಶಾಲ್ಯತೆಗೆ ಮೆಚ್ಚಲೆಬೇಕು. ಆ ಗುಣ ಈಗಲೂ ಮುಂದುವರಿದಿರುವುದು ಪ್ರಶಾಂತ ಅವರ ಯಶಸ್ಸಿಗೆ ಬಹುಮೂಲ್ಯ ಪ್ರೇರಣೆ ಎಂದೆ ಹೇಳಬಹುದು.
ಎ.ಬಿ.ವಿ.ಪಿ ಮೂಲಕ ಸಂಘಟನೆಗಿಳಿದ ಪ್ರಶಾಂತ:
ಕಾಲೇಜು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಎ.ಬಿ.ವಿ.ಪಿಯಲ್ಲಿ ಗುರುತಿಸಿಕೊಂಡು, ಎಬಿವಿಪಿಯ ಸಕ್ರೀಯ ಪದಾಧಿಕಾರಿಯಾಗಿ, ಎಬಿವಿಪಿಯ ನಾಯಕರಾಗಿ, ಶಹರ ಪ್ರಮುಖರಾಗಿ ಎಬಿವಿಪಿಯನ್ನು ಸದೃಢಗೊಳಿಸಿದ ಹೆಮ್ಮೆ ಪ್ರಶಾಂತ ಅವರಿಗಿದೆ.
ಓದಿನ ಬಳಿಕ ಬೆಂಗಳೂರು, ಮಹರಾಷ್ಟ್ರ ಮೊದಲಾದ ಕಡೆ ಉದ್ಯೋದ ಅರಸಿ ಬಂದರೂ ಅಮ್ಮನನ್ನು ಬಿಟ್ಟಿರಲಾರೆ ಎಂದು ತನಗೆ ತಾನೆ ಶಪಥ ಮಾಡಿಕೊಂಡು ದಾಂಡೇಲಿಯಲ್ಲೆ ಬದುಕು ಕಟ್ಟಿಕೊಂಡವರು ಈ ನಮ್ಮ ಪ್ರಶಾಂತ ಅವರು.
ಒಂದು ಕಡೆ ಬದುಕಿಗಾಗಿ ಪ್ರತಿಕ್ಷಾ ಏಜೆನ್ಸಿಸ್ ಇಲ್ಲಿ ಸರಿ ಸುಮಾರು 15 ವರ್ಷಗಳ ವರೆಗೆ ಮಾರುಕಟ್ಟೆ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಅಭಿಮಾನ ಪ್ರಶಾಂತ ಅವರಿಗಿದೆ. ಈ ಏಜೆನ್ಸಿಯವರ ವಿತರಣೆಯಲ್ಲಿದ್ದ ಏರ್ ಟೆಲ್ ನೆಟ್ವರ್ಕಿಗೆ ದಾಂಡೇಲಿಯಲ್ಲಿ ಅತ್ಯುತ್ತಮವಾದ ಮಾರುಕಟ್ಟೆಯನ್ನು ಒದಗಿಸಿದ ಕೀರ್ತಿ ಪ್ರಶಾಂತ ಅವರಿಗೆ ಸಲ್ಲಲೆಬೇಕು.
ಇದೀಗ ಕಳೆದೆರಡು ವರ್ಷಗಳಿಂದ ಸ್ವತಂತ್ರವಾಗಿ ವ್ಯವಹಾರವನ್ನು ಮುನ್ನಡೆಸುತ್ತಿರುವ ಪ್ರಶಾಂತ ಅವರು ಯಶಸ್ಸಿನ ಹೆಜ್ಜೆಯೊಂದಿಗೆ ಅಭಿವೃದ್ಧಿಯ ಶರವೇಗದಲ್ಲಿ ಮುಂದುವರಿದಿದ್ದಾರೆ. ಪ್ರವಾಸೋದ್ಯಮ, ಟೂರ್ಸ್ & ಟ್ರಾವೆಲ್ಸ್ ಎಂಬ ಹೊಸ ವ್ಯವಹಾರವನ್ನು ಪ್ರಾರಂಭಿಸಿ, ಗಳಿಕೆಯಲ್ಲಿ ಹೆಚ್ಚಿನ ಲಾಭದಾಯಕ ಮಟ್ಟವನ್ನು ತಲುಪಿರುವುದರ ಹಿಂದೆ ಅವರ ಬೆವರ ಹನಿಯ ಶ್ರಮವಿದೆ. ಆ ಶ್ರಮವೆ ಅವರಿಗಿಂದು ಫಲದ ರೂಪದಲ್ಲಿ ಪ್ರಸಾದವಾಗಿ ದೊರೆತಿದೆ. ಇದರ ಜೊತೆ ಜೊತೆಯಲ್ಲಿ ಗುತ್ತಿಗೆದಾರರಾಗಿಯೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.
ಬಿಜೆಪಿಯಲ್ಲಿರುವ ಬೆಂಕಿಯ ಉಂಡೆ:
ಅನ್ಯಾಯವಾದಾಗ ಅದನ್ನು ತಡವರಿಯದೆ ಪ್ರತಿರೋಧಿಸುವ ಪ್ರಶಾಂತ ಅವರು ಕಾಲೇಜು ಮುಗಿದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು ಆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದರು. ಪಕ್ಷ ನಿಷ್ಟೆಯನ್ನು ಗುರುತಿಸಿದ ಪಕ್ಷದ ವರಿಷ್ಟರು ಪ್ರಶಾಂತ ಅವರಿಗೆ ಹಂತ ಹಂತವಾಗಿ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಯನ್ನು ಕೊಡಲಾರಂಭಿಸಿದರು. ಆರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಸದಸ್ಯನಾಗಿ, ಪದಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಆನಂತರದಲ್ಲಿ ಬಿಜೆಪಿ ನಗರ ಘಟಕದ ಸದಸ್ಯರಾಗಿ, ಪದಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಪ್ರಶಾಂತ ಅವರು ಪ್ರಸಕ್ತ ಬಿಜೆಪಿ ನಗರ ಘಟಕದ ಉಪಾಧ್ಯಕ್ಷರಾಗಿ ತನ್ನ ಸೇವೆಯನ್ನು ನೀಡುತ್ತಿದ್ದಾರೆ.
ಪಕ್ಷ ಸಂಘಟನೆ, ಪಕ್ಷ ನಿಷ್ಟೆ ಹಾಗೂ ಸಮಾಜಮುಖಿ ವ್ಯಕ್ತಿತ್ವವನ್ನು ಗಮನಿಸಿ ಅವರ ಪಕ್ಷದ ಕೇಂದ್ರ ಸರಕಾರವಿದ್ದ ಸಮಯದಲ್ಲಿ ಬಿ.ಎಸ್.ಎನ್.ಎಲ್ ಅಡ್ವೆಸೈರಿ ಕಮೀಟಿಯ ಸದಸ್ಯರನ್ನಾಗಿ ನೇಮಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಬಜರಂಗ ದಳ, ಗೋ ಸಂರಕ್ಷಣಾ ತಂಡದ ಪ್ರಮುಖ ಪದಾಧಿಕಾರಿಯಾಗಿ ಹಿಂದು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಪ್ರಶಾಂತ ಅವರೊಬ್ಬ ಸನೇಹಪರತೆಯನ್ನು ಹೊಂದಿದ ಯಶಸ್ವಿ ಯುವಕ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕು.
ಜೀವನದಲ್ಲಿ ಹಲವಾರು ಅಡೆ ತಡೆಗಳನ್ನು ಮೆಟ್ಟಿ, ಸ್ವಾವಲಂಬಿಯಾಗಿ ಮತ್ತು ಅಷ್ಟೇ ಸಮಾಜಮುಖಿಯಾಗಿರುವ ಪ್ರಶಾಂತ ಅವರು ಜೀವನದಲ್ಲಿ ಕಣ್ಣೀರ ಘಟನೆಗಳ ಮೂಲಕವೆ ಆತ್ಮವಿಶ್ವಾಸವನ್ನು ಮೈಗೂಡಿಸಿ, ಕೆಚ್ಚೆದೆಯ ಬದುಕು ಕಟ್ಟಿಕೊಂಡವರು. ದಾಂಡೇಲಿಯಲ್ಲಿ ನಡೆಯುವ ಸಾಮಾಜಿಕ ಹೋರಾಟಗಳಲ್ಲಿ ತನ್ನನ್ನು ತಾನು ಪೂರ್ಣ ಮನಸ್ಸಿನಿಂದ ತೊಡಗಿಸಿಕೊಂಡು ಬಂದಿರುವ ಪ್ರಶಾಂತ ಅವರು ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ, ಅನ್ಯಾಯಕ್ಕೊಳಗಾದವರಿಗೆ, ಬಡವರಿಗೆ ನೆರವಿನ ಹಸ್ತವನ್ನು ನೀಡಿದ್ದಾರೆ. ಬಲಗೈಯಲ್ಲಿ ಕೊಟ್ಟದ್ದು ಎಡಕೈಗೆ ತಿಳಿಯಬಾರದೆಂದು ನಂಬಿ ಜೀವನರಥದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಪಿಂಟ್ಯಾ ಅವರು ನಿಜಕ್ಕೂ ದಾಂಡೇಲಿಯ ಯುವಕರಿಗೆ ಪ್ರೇರಣಾದಾಯಿಯಾಗಿದ್ದಾರೆ.
ಕಷ್ಟವನ್ನು ಇಷ್ಟವಾಗಿಸಿಕೊಂಡು ಬದುಕು ಕಟ್ಟಿಕೊಂಡು ಜೀವನಸಾರ್ಥಕತೆಯತ್ತ ಮುನ್ನುಗ್ಗುತ್ತಿರುವ ಪ್ರಶಾಂತ ಅವರ ಜೀವನ ಸಾಧನೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಸ್ವರ್ಗಸ್ಥರಾದ ಅಣ್ಣನ ಪ್ರೇರಣೆ, ಮುದ್ದಿನ ಯುವರಾಣಿ, ಮಡದಿ ಪ್ರಿಯ ರವರ ಪ್ರೀತಿ-ವಾತ್ಸಲ್ಯ, ಮಗಳು ಸಂಯುಕ್ತಾಳ ಅಕ್ಕರೆಯ ನಗುಮೊಗದ ಪ್ರೀತಿ, ಗೆಳೆಯರ, ಬಂಧುಗಳ ಸಹಕಾರವೆ ಪ್ರಮುಖ ಕಾರಣ.
ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಲವ್ಲಿ ಬ್ರದರ್.
ನಿಮ್ಮವ
ಸಂದೇಶ್.ಎಸ್.ಜೈನ್

Wish you many more happy returns of the day Bro
ReplyDelete