Sunday, June 7, 2020

ಸಂತಸದ ಬದುಕಿನ ಜೀವಸ್ನೇಹಿತ ಸಂತೋಷರಿಗೆ ಜನ್ಮದಿನದ ಸಂಭ್ರಮ
ಶ್ರಮಸಾಧನೆಯ ಮೂಲಕ ಜೀವನ ಯಶಸ್ಸು ಕಂಡ ಶ್ರಮಜೀವಿ
ಅವರು ಬೇರೆ ಯಾರು ಅಲ್ಲ. ನನ್ನ ಸಂಬಂಧಿಯು ಹೌದು, ಅತ್ಯಂತ ಪ್ರೀತಿಯ ಜೀವಸ್ನೇಹಿತರು ಹೌದು. ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ಜೈನ್ ರೆಸ್ಟೊರೆಂಟಿನ ಮಾಲಕರು ಆಗಿರುವ ನೆಚ್ಚಿನ, ಮೆಚ್ಚಿನ ಸಂತೋಷ್ ಜೈನ್ ಅವರು. ಅಂದ ಹಾಗೆ ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮದ ನಡುವೆ ನುಡಿ ರೂಪದಲ್ಲಿ ನನ್ನದೊಂದು ಶುಭ ಹಾರೈಕೆ.

ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಈಗಿನ ಉಜಿರೆ ಗ್ರಾಮದ ಕೈಯಾಂಗ್ ನಿವಾಸಿಯಾದ ಇವರು ದಿ: ಫಣಿರಾಜ್ ಅಜ್ರಿ ಹಾಗೂ ಪ್ರೇಮ ದಂಪತಿಗಳ ಮುದ್ದಿನ ಮಗ ಈ ನಮ್ಮ ಸಂತೋಷ್. ಸಂತೋಷ್ ಅವರು ಅಣ್ಣ ಪ್ರಶಾಂತ, ಅಕ್ಕ ಪ್ರಮೀಳಾ ಮತ್ತು ತಂಗಿ ಸುರೇಖಾ ಹಾಗೂ ಅವರ ಚಿಕ್ಕಪ್ಪ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಗಟ್ಟಿ ಧ್ವನಿಯಾಗಿರುವ ಅಪ್ರತಿಮ ರಾಜಕಾರಣಿ ಮುನಿರಾಜ ಅಜ್ರಿ ಕುಟುಂಬಸ್ಥರ ಜೊತೆ ಬೆಳೆದವರು. 

ಹುಟ್ಟೂರಲ್ಲೆ ಶಿಕ್ಷಣ ಪಡೆದ ನಂತರ ಕಾಯಕಯೋಗಿ ತಂದೆ ದಿ:ಪಣಿರಾಜ ಅಜ್ರಿಯವರ ಜೊತೆ ಮದುವೆ, ದೊಡ್ಡ ದೊಡ್ಡ ಸಮಾರಂಭಗಳ ಅಡುಗೆ ಗುತ್ತಿಗೆಯನ್ನು ವಹಿಸಿ ಅವರ ಜೊತೆ ತಾನು ದುಡಿಯಲಾರಂಭಿಸಿದರು. ಹೀಗೆ ಬೆಳೆದ ಸಂತೋಷ್ ಜೈನ್ ಅವರು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ಅಡುಗೆ ಗುತ್ತಿಗೆದಾರರಾಗಿ, ನಳಪಾಕ ತಜ್ಞರಾಗಿ ಗಮನ ಸೆಳೆದಿದ್ದಾರೆ.
 ಇದರ ಜೊತೆ ಜೊತೆಯಲ್ಲೆ ಅಣ್ಣ ಪ್ರಶಾಂತ ಅವರ ಜೊತೆ ಬೆಳ್ತಂಗಡಿ ನಗರದ ಮುಖ್ಯ ರಸ್ತೆಯಲ್ಲೆ ಜೈನ್ ರೆಸ್ಟೋರೆಂಟ್ ಎಂಬ ಹೊಟೆಲ್ ಉದ್ಯಮವನ್ನು ಪ್ರಾರಂಭಿಸಿ ಅಲ್ಪವರ್ಷದಲ್ಲೆ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ. 

ಈ ಹೊಟೆಲ್ ಆರಂಭವಾಗಿ ಹತ್ತಿರ ಹತ್ತಿರ 20 ವರ್ಷಗಳು ಸಂದರೂ ಅಂದಿನ ಕೆಲಸಗಾರರೆ ಈವರೇಗೂ ಅಲ್ಲಿ ಕೆಲಸ ಮಾಡುವುದು ನೋಡಿದರೇ ಸಂತೋಷ್ ಮತ್ತು ಪ್ರಶಾಂತ ಅವರುಗಳ ಪ್ರಾಂಜಲ ಮನಸ್ಸು ಮತ್ತು ಪ್ರೀತಿ ವಾತ್ಸಲ್ಯವೆ ಅದಕ್ಕೆ ಪ್ರಮುಖ ಕಾರಣ ಎನ್ನಲೇನು ಅಡ್ಡಿಯಿಲ್ಲ.

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂತೋಷ್ ಅವರ ಜೊತೆ ಸ್ವಲ್ಪ ಹೊತ್ತು ಕಳೆದರೇ ಸಾಕು, ಮನಸ್ಸಿನ ದುಖ: ದುಗುಡಗಳು ಮಾಯವಾಗುತ್ತದೆ. ಇನ್ನೊಬ್ಬರಿಗೆ ಅವರು ನೀಡುವ ಆತ್ಮಸ್ಥೈರ್ಯ ಮತ್ತು ಮಾರ್ಗದರ್ಶನ ಬಹಳಷ್ಟು ಜನರ ಬದುಕನ್ನು ಬದಲಾಯಿಸಿದೆ.

ಸದಾ ಹಸನ್ಮುಖಿಯಾಗಿರುವ ಶ್ರಮಜೀವಿ, ಪರೋಪಕಾರಿ ಗುಣಸಂಪನ್ನ ನನ್ನ ಜೀವ ಸ್ನೇಹಿತ ಸಂತೋಷ್ ಅವರಿಗೆ ಜನ್ಮದಿನದ ನಿಮಿತ್ತ ಮನದುಂಬಿದ ಶುಭಾಶಯಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಶುಭ ಪ್ರಾರ್ಥನೆಯೊಂದಿಗೆ,
 
ನಿಮ್ಮವ
ಸಂದೇಶ್.ಎಸ್.ಜೈನ್

 

Friday, June 5, 2020

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನ ವ್ಯವಸ್ಥೆ
ದಿನಾಂಕ 8-6-2020 ರಿಂದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ
 
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ದಿನಾಂಕ 8-6-2020 ರಿಂದ ಮಾಡಿಕೊಡಲಾಗುವುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳಶ್ರೀ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿರುತ್ತಾರೆ.
 
ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದಲ್ಲಿ, ಅನ್ನಪೂರ್ಣ ಭೋಜನ ಮಂದಿರದಲ್ಲಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. 

ದೇವಸ್ಥಾನದ ಒಳ ಪ್ರವೇಶ ಮಾಡುವವರು ತೆಗೆದುಕೊಳ್ಳಬೇಕಾದ ಕ್ರಮಗಳು ಇಂತಿವೆ. 

1. ಮುಖಕ್ಕೆ ಮಾಸ್ಕ್ ಧರಿಸಿರಬೇಕು
2. ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು
3. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು
4. ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು. 

ಅರ್ಚಕ ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು, ಸ್ವಯಂ ಸೇವಕರು ಕೈಗೊಳ್ಳಬೇಕಾದ ಕ್ರಮಗಳನ್ನು ವಿಮರ್ಶಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. 

ಅದೇ ರೀತಿ ಅನ್ನಪೂರ್ಣ ಭೋಜನಾಲಯದಲ್ಲಿ ಭೋಜನಕ್ಕೆ ಬರುವವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ತಮ್ಮ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವರೇ ಕೋರಿದೆ. 
 
ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ. 
ಭಕ್ತಾದಿಗಳು ದೇವಸ್ಥಾನದ ಆಡಳಿತದ ಜೊತೆಯಲ್ಲಿ ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Thursday, June 4, 2020

25 ವರ್ಷಗಳ ಸಾರ್ಥಕ ದಾಂಪತ್ಯ ಜೀವನಾನುಭವದ ಸಂತೃಪ್ತಿಯಲ್ಲಿ ನಮ್ಮ ದಿವಾಕರ ನಾಯ್ಕ ದಂಪತಿ
ವೈವಾಹಿಕ ಜೀವನದ 25 ವರ್ಷಗಳ ಸಂಭ್ರಮದಲ್ಲಿರುವ ಮಾನವೀಯ ಗುಣಧರ್ಮದ ಶ್ರೀ. ದಿವಾಕರ ನಾಯ್ಕ ಹಾಗೂ ದೀಪಾ ದಿವಾಕರ ನಾಯ್ಕ ದಂಪತಿಗಳಿಗೆ ಮನಪೂರ್ವಕ ಅಭಿವಂದನೆಗಳು.
 ತಾವು ಬದುಕುವುದರ ಜೊತೆಯಲ್ಲಿ ಇನ್ನೊಬ್ಬರ ಬದುಕಿಗೆ ನೆರಳಾಗುವ ಮೂಲಕ ಮಧುರ ಮನಸ್ಸಿನ ಮಾನವೀಯ ಜೋಡಿ ನಮ್ಮ ದಿವಾಕರ ನಾಯ್ಕರವರದ್ದು. ಅಹಂ ಇಲ್ಲವೆ ಇಲ್ಲ, ಕೋಪ ಅದಕ್ಕಿಂತ ಮೊದಲಿಲ್ಲ. ಇಂತಹ ಅಪರೂಪದ ಅಪೂರ್ವ ವ್ಯಕ್ತಿ ನಮ್ಮಣ್ಣ ದಿವಾಕರ ನಾಯ್ಕ ಅವರು. ದಿವಾಕರ ನಾಯ್ಕ ಅವರ ಕುಟುಂಬಕ್ಕೆ ಮುದ್ದಿನ ಹಾಗೂ ಮಮತಾಮಯಿ ಸೊಸೆಯಾಗಿ ಬಂದವರು ಸೌಭಾಗ್ಯ ಲಕ್ಷ್ಮೀಯ ರೂಪದಲ್ಲಿ ನನ್ನಕ್ಕ ದೀಪಾ ಅವರು. 
 ಮಾತೃ ಹೃದಯದ ದೀಪಾ ಅವರು ಪತಿಗೆ ದಾರಿದೀಪವಾಗಿದ್ದಾರೆ. ಮಕ್ಕಳಿಬ್ಬರಿಗೆ ಅಕ್ಕರೆಯ ಅಮ್ಮನಾಗಿ, ಅತ್ತೆ, ಮಾವನಿಗೆ ಅಭಿಮಾನದ ಮಗಳಂತಿರುವ ಸೊಸೆಯಾಗಿ, ಮೈದುನ ಹಾಗೂ ಮೈದುನನ ಪತ್ನಿಗೆ ಮಾರ್ಗದರ್ಶಕರಾಗಿ ಹಾಗೂ ನೆರೆಹೊರೆಯವರಿಗೆ ಮಮತೆಯ ಪರೋಪಕಾರಿ ಸಂಪನ್ನೆಯಾಗಿರುವ ದೀಪಾ ಅವರು ಮನೆಮಂದಿಯ ಮನಸ್ಸು ಗೆದ್ದು, ಊರಿನ ಜನರ ಪ್ರೀತಿ ವಾತ್ಸಲ್ಯಕ್ಕೂ ಪಾತ್ರರಾಗಿದ್ದಾರೆ.
 ಅನ್ಯೋನ್ಯ ಗುಣಸಂಸ್ಕೃತಿಯ ದಿವಾಕರ & ದೀಪಾ ದಂಪತಿಗಳ 25 ವರ್ಷಗಳ ವೈವಾಹಿಕ ಜೀವನದ ಸಂಭ್ರಮ, ಸಡಗರಕ್ಕೆ ನುಡಿರೂಪದ ಮೂಲಕ ಮನದಾಳದ ವಂದನೆ, ಅಭಿವಂದನೆಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

Tuesday, June 2, 2020

ಮಾನವೀಯ ಮೌಲ್ಯದ ಅನನ್ಯ ರತ್ನ - ನಮ್ಮ ಅಶುತೋಷ್ ರಾಯ್
ಪರೋಪಕಾರಿ ಗುಣಸಂಪನ್ನನಿಗೆ ಹುಟ್ಟು ಹಬ್ಬದ ಸಂಭ್ರಮ
ದಾಂಡೇಲಿ: ಎಲ್ಲಾದರೂ ಇರು, ಹೇಗಾದರೂ ಇರು, ಮೊದಲು ಭಾರತೀಯನಾಗಿರು. ಈ ದೇಶದ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿ ಉತ್ತರಪ್ರದೇಶದಿಂದ ದಾಂಡೇಲಿಗೆ ಬಂದ ಚಿಗುರು ಮೀಸೆಯ ತರುಣನೊಬ್ಬ ಅಪ್ಪಟ ದಾಂಡೇಲಿಗನಾಗಿ, ದಾಂಡೇಲಿ ಜನತೆಯ ಪ್ರೀತಿಗೆ ಪಾತ್ರರಾಗಿ, ಬೆವರು ಸುರಿಸಿ ಮೇಲೇರಿ ಬಂದ ಕಣ್ಮಣಿಯ ಜೀವನಗಾಥೆಯಿದು.
ಅಂದ ಹಾಗೆ ನಾನು ಬರೆಯಲು ಹೊರಟಿರುವುದು ಒಂದೆರಡು ಕನ್ನಡ ಶಬ್ದವನ್ನು ಮಾತನಾಡಿದರೂ, ಕನ್ನಡದ ನಾಡಿ ಮಿಡಿತವನ್ನು ಬಲ್ಲವರು ಹಾಗೂ ಕನ್ನಡದ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿರುವ ಯಶಸ್ವಿ ಉದ್ಯಮಿ, ಶ್ರೀ.ಗಜಾನನ ಟ್ರಾನ್ಸಪೋರ್ಟ್ ಇದರ ವ್ಯವಸ್ಥಾಪಕ ಪಾಲುದಾರ ಹಾಗೂ ಅದಕ್ಕಿಂತಲೂ ಮುಂದುವರಿದು ಹೇಳಬೇಕೆಂದರೇ ಸದಾ ನನ್ನ ಒಳಿತನ್ನು ಬಯಸುವ ಒಡಹುಟ್ಟಿದ ಅಣ್ಣನಿಗಿಂತಲೂ ಹೆಚ್ಚು ನನ್ನನ್ನು ಮುದ್ದಿಸುವ ನನ್ನ ಅಣ್ಣನಂತಿರುವ ಶ್ರೀ ಅಶುತೋಷ್ ರಾಯ್ ಅವರು ಇವತ್ತಿನ ನನ್ನ ಮುಖಪುಟದ ಕೇಂದ್ರ ಬಿಂದು.
 ಅವರ ಬಗ್ಗೆ ನನಗನಿಸಿದ್ದನ್ನು ಬರೆಯುವ ಮುಂಚೆ ಈ ದಿನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅವರಿಗೆ ಗೌರವಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಾ ಬರವಣಿಗೆಗೆ ಶುರುವಚ್ಚಿಕೊಳ್ಳುತ್ತೇನೆ.
ಭಾರತದ ಮಹತ್ವದ ಭೌಗೋಳಿಕ ಪ್ರದೇಶವಾದ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಶ್ರೀಮಂತ ಕುಟುಂಬದಲ್ಲೆ ಹುಟ್ಟಿದವರು ನಮ್ಮ ಅಶುತೋಷ್ ರಾಯ್ ಅವರು. ತಂದೆ ಫಲಕಧರಿ, ತಾಯಿ ಕಮಲಾ ರೈ. ಅಂದ ಹಾಗೆ ಇವರಬ್ಬರು ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ತಂದೆ ತಾಯಿ ಇಬ್ಬರು ಶಿಕ್ಷಕ ವೃತ್ತಿಯವರಂದ್ರೆ ಅವರ ಕುಟುಂಬದ ಜೀವನ ಸಂಸ್ಕಾರದ ಬಗ್ಗೆ ಹೆಚ್ಚೇನು ವಿವರಿಸಬೇಕಿಲ್ಲ. ಒಟ್ಟಿನಲ್ಲಿ ಸಂಪ್ರದಾಯಬದ್ದ ಹಾಗೂ ಶಿಸ್ತು ಬದ್ದ ಜೀವನ ಕ್ರಮ ಈ ಕುಟುಂಬದ್ದಾಗಿತ್ತು. ನಮ್ಮ ಅಶುತೋಷ್ ರಾಯ್ ಸಾಬಿಗೆ ನಾಲ್ವರು ಸಹೋದರಿಯರು, ಇಬ್ಬರು ಸಹೋದರರು. ತಂದೆ ತಾಯಿಯ ನೀತಿ ಪಾಠದಲ್ಲೆ ಬೆಳೆದ ಅಶುತೋಷ್ ರಾಯ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲೆ ಪಡೆದುಕೊಂಡರು. ಪ್ರೌಢಶಿಕ್ಷಣವನ್ನು ಜಗನ್ನಾರಾಯಣ ಇಂಟರ್ ಸ್ಕೂಲಿನಲ್ಲಿ ಉನ್ನತ ಅಂಕಗಳೊಂದಿಗೆ ಪಡೆದ ಅವರು ಮಹಮ್ಮದಾಬಾದ್ ಇಂಟರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಮುಂದೆ ತಂದೆ, ತಾಯಿಯಂತೆ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದವರಿಗೆ ಯಾಕೋ ಏನೋ, ಇದೆಲ್ಲಾ ಬೇಡ, ಏನಾದರೂ ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಯಾರ ಹಂಗಿಲ್ಲದೇ ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಸಂಕಲ್ಪವನ್ನು ತೊಟ್ಟು, ಅವರಿವರ ಪರಿಚಯದ ಮೂಲಕ ಉತ್ತರ ಪ್ರದೇಶದಿಂದ ಮುಖ ತಿರುಗಿಸಿದ್ದು, ಮಿನಿ ಇಂಡಿಯಾ ಎಂದೆ ಜನಜನಿತವಾದ ನಮ್ಮ ಹೆಮ್ಮೆಯ ದಾಂಡೇಲಿಗೆ ಎಂಬುವುದನ್ನು ನಾನಂತು ಖುಷಿಯಿಂದಲೆ ಹೇಳ ಬಯಸುತ್ತೇನೆ.
 1999 ರಂದು ದಾಂಡೇಲಿಗೆ ಬಂದವರು ಸ್ವಲ್ಪ ದಿನ ಅಲ್ಲಿ ಇಲ್ಲಿ ಕೆಲಸ ಮಾಡಿ, ಊರಿನ ಹಾಗೂ ವ್ಯವಹಾರದ ಸಮಗ್ರ ಮಾಹಿತಿಯನ್ನು ಅರೆದು ಕುಡಿದ ಅಶುತೋಷ್ ರಾಯ್ ಅವರು ಆನಂತರದ ದಿನಗಳಲ್ಲಿ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಎಂಬ ಸಾರಿಗೆ ಉದ್ಯಮವನ್ನು ಪ್ರಾರಂಭಿಸಿದರು. ಇದಕ್ಕೆ ಅವರ ಗೆಳೆಯ ಪ್ರಕಾಶ ವಾಜ್ವೆ ಅವರು ಸಂಗಾತಿಯಾದರು. ಇಲ್ಲಿಂದ ಆರಂಭಗೊಂಡ ಅವರ ನೈಜಜೀವನ ಯಾತ್ರೆ ಶುಭಫಲದೊಂದಿಗೆ ಯಶಸ್ಸಿನೆಡೆಗೆ ಹೆಜ್ಜೆಯಿಟ್ಟಿದೆ. ಇವತ್ತು ದಾಂಡೇಲಿಯಲ್ಲಿ ಖ್ಯಾತ ಸಾರಿಗೆ ಉದ್ಯಮವಾಗಿ ಅಶುತೋಷ್ ರಾಯ್ ಅವರ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಗಮನ ಸೆಳೆಯುತ್ತಿದೆ.
ಪರೋಪಕಾರಿ ಸಂಪನ್ನ:
ನಾನವರನ್ನು ಯಾಕೆ ಮೆಚ್ಚಿಕೊಂಡೆ, ಅವರನ್ನಾಕೆ ನಂಬಿಕೊಂಡೆ ಎನ್ನುವುದೆ ಆಶ್ವರ್ಯ. ಅವರ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಕಚೇರಿ ಪಕ್ಕದಲ್ಲೆ ನನ್ನ ಸಪ್ತಸಾರ ಪತ್ರಿಕೆಯ ಕಾರ್ಯಾಲಯವನ್ನು ಪ್ರಾರಂಭಿಸಿದ್ದೆ. ಇದು 2011 ರಲ್ಲಿ ಎಂದು ವಿವರಿಸಬೇಕಿಲ್ಲ. ಅಂದು ಆದ ಪರಿಚಯ ಅದು ವರ್ಣಿಸಲು ಅಸಾಧ್ಯವಾದ ಸಂಬಂಧವನ್ನು ಗಟ್ಟಿಗೊಳಿಸಿತು. ನನಗೆ ಸರಿಯಾಗಿ ಹಿಂದಿ ಮಾತನಾಡಲು ಆಗದು, ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಆಗದು. ಆದರೂ ದೇಹಭಾಷೆಯ ಮೂಲಕ ನನ್ನ ಅವರ ಮಾತುಗಳು ನನಗೆ ಹಾಗೂ ಅವರಿಗೆ ಅರ್ಥವಾಗುತ್ತಿತ್ತು. ಕೊನೆ ಕೊನೆಗೆ ನನ್ನದು ಕನ್ನಡ ಮಿಶ್ರಿತ ಹಿಂದಿ ಭಾಷೆ, ಅವರದ್ದು ಹಿಂದಿ ಮಿಶ್ರಿತ ಕನ್ನಡ ಭಾಷೆ. ಒಟ್ಟಿನಲ್ಲಿ ಇಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಸಂಭಾಷಣೆ. ನನಗೆ ಪರಿಚಯವಾಗಿ ಕೇವಲ ಆರೇ ತಿಂಗಳಲ್ಲಿ ನನ್ನ ಸಪ್ತಸಾರ ಪತ್ರಿಕೆಗೆ ಬಹುದೊಡ್ಡ ಆರ್ಥಿಕ ಸಹಾಯ ಮಾಡಿರುವುದನ್ನು ನಾನ್ಯಾವತ್ತು ಮರೆಯಲಾರೆ. ಆದರೆ ನನ್ನ ದುರದೃಷ್ಟವಾಶತ್ ಪತ್ರಿಕೆ ಸ್ಥಗಿತಗೊಂಡಿತು. ನನ್ನ ಪತ್ರಿಕಾ ಕಾರ್ಯಾಲಯ ಬಂದ್ ಮಾಡಿ ಬಾಗಿಲು ಹಾಕಿ, ಚಾವಿಯನ್ನು ಕಟ್ಟಡ ಮಾಲೀಕರಿಗೆ ಕೊಡುವ ಮುಂಚೆ ನನ್ನ ಪರಿಶ್ರಮ ವ್ಯರ್ಥವಾಗಿರುವುದನ್ನು ಗಮನಿಸಿ ಆಶುತೋಷ್ ರಾಯ್ ಅವರು ಕಣ್ಣಲ್ಲಿ ನೀರು ಹರಿಸಿ, ನನಗೆ ಧೈರ್ಯ ನೀಡಿದ್ದನ್ನು ನಾನೆಂದು ಮರೆಯಲಾರೆ. ನಾನು ಎಲ್ಲಿಯವನೋ, ಅವರು ಎಲ್ಲಿಯವರೋ, ಆದ್ರೆ ನನ್ನನ್ನು ಅವರು ಪ್ರೀತಿಸಿದ, ಮುದ್ದಿಸಿದ, ಪ್ರೋತ್ಸಾಹಿಸಿದ ಮತ್ತು ಪ್ರೋತ್ಸಾಹಿಸುತ್ತಿರುವ ರೀತಿ ಒಡಹುಟ್ಟಿದ ಅಣ್ಣನು ಮಾಡಲು ಅಸಾಧ್ಯ ಎಂಬುವುದನ್ನು ಎದೆ ಮುಟ್ಟಿ ಹೇಳಬಯಸುತ್ತೇನೆ.
ಅವರ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ನನ್ನ ಬಗ್ಗೆನೆ ಬಹಳ ಬರೆದೆ ಎಂದು ಯಾರು ಅಂದ್ಕೋಬೇಡಿ. ಯಾಕೆಂದ್ರೆ ನಾನವರನ್ನು ಅತ್ಯಂತ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಆ ಕಾರಣಕ್ಕಾಗಿಯೆ ಅವರ ಬಳಿ ದಿನಕ್ಕೆ ಒಂದು ಐದು ನಿಮಿಷವಾದರೂ ಹರಟೆ ಹೊಡೆಯುತ್ತೇನೆ. ಚರ್ಚೆ ಮಾಡುತ್ತೇನೆ. ನನಗೆ ಯಾವುದೇ ಕಷ್ಟವಿದ್ದರೂ ಅವರ ಬಳಿ ಹೇಳಿದರೇ ತಕ್ಷಣ ನನ್ನ ಸಮಸ್ಯೆ ಬಗೆಹರಿಸುವ ಅವರ ಮಮಕಾರದ ಮನಸ್ಸಿಗೆ ಬೆಲೆ ಕಟ್ಟಲು ಅಸಾಧ್ಯ.
ಹೌದು ಅವರು ಪರೋಪಕಾರಿ ಸಂಪನ್ನ ಎಂದೆ ಹೇಳುತ್ತೇನೆ. ಯಾರೇ ಅವರ ಬಳಿ ಕಣ್ಣೀರು ಹಾಕಿ ಬಂದರೇ ಅವರ ಕಣ್ಣೀರನ್ನು ಒರೆಸುವ ಕರುಣಾಮಯಿ. ಸಂಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ ಮಾಡುವ ಅವರ ಸೇವಾಗುಣವೆ ಅವರ ವ್ಯಕ್ತಿತ್ವದ ಪ್ರಮುಖ ಹೈಲೈಟ್. ನನಗೊತ್ತು, ನನ್ನ ಗೆಳೆಯನೊಬ್ಬನ ಸಂಬಂಧಿ ಕಾರವಾರದ ನಿವಾಸಿ, ಜೀವನ್ಮರಣ ಹೋರಾಟದಲ್ಲಿದ್ದ ವಿಚಾರ ತಿಳಿದ ಅಶುತೋಷ್ ರಾಯ್ ಅವರು ಕೂಡಲೆ ಆರ್ಥಿಕ ಸಹಾಯ ಮಾಡಿ ಗಮನ ಸೆಳೆದಿದ್ದರು.
ನಗರ ಹಾಗೂ ನಗರದ ಸುತ್ತಮುತ್ತಲು ನಡೆಯುವ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ, ಪೂಜೆ, ಜಾತ್ರೋತ್ಸವಗಳಿಗೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನು ಮನ ಧನದ ಸಹಾಯ ಮಾಡುವ ಅಶುತೋಷ್ ರಾಯ್ ಅವರು ನಮ್ಮ ಗಾಂಧಿನಗರದ ಶ್ರೀ ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಮಾರ್ಗದರ್ಶಕರಾಗಿಯೂ ನಮ್ಮ ಕಾರ್ಯಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುವ ಅಶುತೋಷ್ ರಾಯ್ ಅವರು ತನ್ನ ಸಾಮಾಜಿಕ ಸೇವಾ ಕೈಂಕರ್ಯಗಳಿಂದ ದಾಂಡೇಲಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದ್ದಾರೆ. ತನ್ನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ತಮ್ಮಂದಿರರಂತೆ ಪ್ರೀತಿಸುವ ಅವರ ಹೃದಯವೈಶ್ಯಾಲ್ಯತೆ ಶ್ಲಾಘನೀಯ.
 ಹ್ಯಾಟ್ರಿಕ್ ಖಜಾಂಚಿಯಾದ ನಮ್ಮ ರಾಯ್:
ದಾಂಡೇಲಿಯ ರೋಟರಿ ಕ್ಲಬಿನ ಸದಸ್ಯರಾಗಿ, ರೋಟರಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಅಶುತೋಷ್ ರಾಯ್ ಅವರು ರೋಟರಿ ಕ್ಲಬಿನಲ್ಲಿ ಹ್ಯಾಟ್ರಕ್ ಖಜಾಂಚಿಯಾಗಿ ಗಮನಾರ್ಹ ಸಾಧನೆಗೈದಿದ್ದಾರೆ. ಮತ್ತೇ ನಾಲ್ಕನೇ ಬಾರಿಯೂ ಅನಾಯಸವಾಗಿ ಇದೇ ಹುದ್ದೆ ಅವರಿಗೆ ಒಲಿದುಬರಲಿದೆ. ರೋಟರಿ ಕ್ಲಬಿನ ರಾಜೇಶ ವೇರ್ಣೇಕರ, ಗಣೇಶ ಕಾಮತ್ ಅವರ ಜೊತೆಗೂಡಿ ತನ್ನ ಶ್ರೀ.ಗಜಾನನ ಟ್ರಾನ್ಸಪೋರ್ಟ್ ಸಹಭಾಗಿತ್ವದಲ್ಲಿ ನಗರದ ಸಂಡೆ ಮಾರ್ಕೆಟ್ ಬಳಿ ಬಸ್ ಶೆಲ್ಟರನ್ನು ನಿರ್ಮಿಸಿಕೊಟ್ಟಿರುವುದನ್ನು ಇಲ್ಲಿ ಉಲ್ಲೇಖಿಸಲೆಬೇಕು. ರೋಟರಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೂ ತನು,ಮನ,ಧನದ ಸಹಾಯವನ್ನು ನೀಡಿದ ಹೆಗ್ಗಳಿಕೆ ರಾಯ್ ಅವರಿಗಿದೆ. ರೋಟರಿ ಕ್ಲಬಿನ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ರೋಟರಿ ಕ್ಲಬಿನ ಕುಬೇರ ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ.
ನಗರದ ಟ್ರಕ್ ಟ್ರಾನ್ಸಪೋರ್ಟ್ ಅಸೋಶಿಯೇಶನ್ ಇದರ ಪ್ರಮುಖ ಪದಾಧಿಕಾರಿಯಾಗಿರುವ ಅಶುತೋಷ್ ರಾಯ್ ಅವರು ನಗರದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆವರು ಸುರಿಸಿ, ರಾತ್ರಿ ಹಗಲೆನ್ನದೇ ದುಡಿದು, ಎಲ್ಲರ ಪ್ರೀತ್ಯಾದಾರಗಳ ಜೊತೆಗೆ ಸ್ವಂತ ಮನೆ, ಸ್ವಂತ ಕಟ್ಟಡದಲ್ಲೆ ಕಚೇರಿ ಪ್ರಾರಂಭಿಸುವ ತನ್ನ ಬಹುಕಾಲದ ಕನಸು ನನಸು ಮಾಡಿಕೊಂಡ ಧನ್ಯತೆ ಅವರಿಗಿದೆ.

ಎಲ್ಲರೊಂದಿಗೆ ಎಲ್ಲರಂತಿರುವ ಸ್ನೇಹಮಯಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ನಗುಮೊಗದ ಸಹೋದರ ಅಶುತೋಷ್ ರಾಯ್ ಅವರ ಜೀವನಸಾಧನೆಗೆ ತಂದೆ ತಾಯಿಯವರ ಆಶೀರ್ವಾದ, ಸಹೋದರರ ಹಾಗೂ ಸಹೋದರಿಯರುಗಳ ಪ್ರೋತ್ಸಾಹ, ಮಡದಿ ಗ್ಯಾಂತಿ ಯವರ ಮನದುಂಬಿದ ಪ್ರೀತಿ ಸಹಕಾರ, ಅವರರೆಡು ಕಣ್ಣುಗಳಾದ ಅನಿಕೇತ್ ಮತ್ತು ಆದಿತ್ಯಾ ಅವರುಗಳ ಆತ್ಮೀಯ ಪ್ರೀತಿ, ವಾತ್ಸಲ್ಯವೆ ಪ್ರಮುಖ ಕಾರಣ.
ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನನ್ನ ಅಣ್ಣಯ್ಯ ಅಶುತೋಷ್ ರಾಯ್ ಅವರಿಗೆ ಭಗವಂತ ಆಯುರಾರೋಗ್ಯ, ಸುಖ-ಸಂಪತ್ತನ್ನು ಕರುಣಿಸಲಿ, ಮನೆ ಮತ್ತು ಮನದಲ್ಲಿ ಸದಾ ನಗು ತುಂಬಿರಲಿ ಎಂಬ ಪ್ರಾರ್ಥನೆಯೊಂದಿಗೆ, ಹೃದಯಪೂರ್ವಕ ಶುಭಾಶಯಗಳು ರಾಯ್ ಸಾಬ್.
ನಿಮ್ಮವ
ಸಂದೇಶ್.ಎಸ್.ಜೈನ್

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...