Sunday, June 7, 2020

ಸಂತಸದ ಬದುಕಿನ ಜೀವಸ್ನೇಹಿತ ಸಂತೋಷರಿಗೆ ಜನ್ಮದಿನದ ಸಂಭ್ರಮ
ಶ್ರಮಸಾಧನೆಯ ಮೂಲಕ ಜೀವನ ಯಶಸ್ಸು ಕಂಡ ಶ್ರಮಜೀವಿ
ಅವರು ಬೇರೆ ಯಾರು ಅಲ್ಲ. ನನ್ನ ಸಂಬಂಧಿಯು ಹೌದು, ಅತ್ಯಂತ ಪ್ರೀತಿಯ ಜೀವಸ್ನೇಹಿತರು ಹೌದು. ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ಜೈನ್ ರೆಸ್ಟೊರೆಂಟಿನ ಮಾಲಕರು ಆಗಿರುವ ನೆಚ್ಚಿನ, ಮೆಚ್ಚಿನ ಸಂತೋಷ್ ಜೈನ್ ಅವರು. ಅಂದ ಹಾಗೆ ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮದ ನಡುವೆ ನುಡಿ ರೂಪದಲ್ಲಿ ನನ್ನದೊಂದು ಶುಭ ಹಾರೈಕೆ.

ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಈಗಿನ ಉಜಿರೆ ಗ್ರಾಮದ ಕೈಯಾಂಗ್ ನಿವಾಸಿಯಾದ ಇವರು ದಿ: ಫಣಿರಾಜ್ ಅಜ್ರಿ ಹಾಗೂ ಪ್ರೇಮ ದಂಪತಿಗಳ ಮುದ್ದಿನ ಮಗ ಈ ನಮ್ಮ ಸಂತೋಷ್. ಸಂತೋಷ್ ಅವರು ಅಣ್ಣ ಪ್ರಶಾಂತ, ಅಕ್ಕ ಪ್ರಮೀಳಾ ಮತ್ತು ತಂಗಿ ಸುರೇಖಾ ಹಾಗೂ ಅವರ ಚಿಕ್ಕಪ್ಪ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಗಟ್ಟಿ ಧ್ವನಿಯಾಗಿರುವ ಅಪ್ರತಿಮ ರಾಜಕಾರಣಿ ಮುನಿರಾಜ ಅಜ್ರಿ ಕುಟುಂಬಸ್ಥರ ಜೊತೆ ಬೆಳೆದವರು. 

ಹುಟ್ಟೂರಲ್ಲೆ ಶಿಕ್ಷಣ ಪಡೆದ ನಂತರ ಕಾಯಕಯೋಗಿ ತಂದೆ ದಿ:ಪಣಿರಾಜ ಅಜ್ರಿಯವರ ಜೊತೆ ಮದುವೆ, ದೊಡ್ಡ ದೊಡ್ಡ ಸಮಾರಂಭಗಳ ಅಡುಗೆ ಗುತ್ತಿಗೆಯನ್ನು ವಹಿಸಿ ಅವರ ಜೊತೆ ತಾನು ದುಡಿಯಲಾರಂಭಿಸಿದರು. ಹೀಗೆ ಬೆಳೆದ ಸಂತೋಷ್ ಜೈನ್ ಅವರು ಇಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ಅಡುಗೆ ಗುತ್ತಿಗೆದಾರರಾಗಿ, ನಳಪಾಕ ತಜ್ಞರಾಗಿ ಗಮನ ಸೆಳೆದಿದ್ದಾರೆ.
 ಇದರ ಜೊತೆ ಜೊತೆಯಲ್ಲೆ ಅಣ್ಣ ಪ್ರಶಾಂತ ಅವರ ಜೊತೆ ಬೆಳ್ತಂಗಡಿ ನಗರದ ಮುಖ್ಯ ರಸ್ತೆಯಲ್ಲೆ ಜೈನ್ ರೆಸ್ಟೋರೆಂಟ್ ಎಂಬ ಹೊಟೆಲ್ ಉದ್ಯಮವನ್ನು ಪ್ರಾರಂಭಿಸಿ ಅಲ್ಪವರ್ಷದಲ್ಲೆ ಮಹತ್ವದ ಯಶಸ್ಸನ್ನು ಸಾಧಿಸಿದ್ದಾರೆ. 

ಈ ಹೊಟೆಲ್ ಆರಂಭವಾಗಿ ಹತ್ತಿರ ಹತ್ತಿರ 20 ವರ್ಷಗಳು ಸಂದರೂ ಅಂದಿನ ಕೆಲಸಗಾರರೆ ಈವರೇಗೂ ಅಲ್ಲಿ ಕೆಲಸ ಮಾಡುವುದು ನೋಡಿದರೇ ಸಂತೋಷ್ ಮತ್ತು ಪ್ರಶಾಂತ ಅವರುಗಳ ಪ್ರಾಂಜಲ ಮನಸ್ಸು ಮತ್ತು ಪ್ರೀತಿ ವಾತ್ಸಲ್ಯವೆ ಅದಕ್ಕೆ ಪ್ರಮುಖ ಕಾರಣ ಎನ್ನಲೇನು ಅಡ್ಡಿಯಿಲ್ಲ.

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮೂಲಕ ಮಾನವೀಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಂತೋಷ್ ಅವರ ಜೊತೆ ಸ್ವಲ್ಪ ಹೊತ್ತು ಕಳೆದರೇ ಸಾಕು, ಮನಸ್ಸಿನ ದುಖ: ದುಗುಡಗಳು ಮಾಯವಾಗುತ್ತದೆ. ಇನ್ನೊಬ್ಬರಿಗೆ ಅವರು ನೀಡುವ ಆತ್ಮಸ್ಥೈರ್ಯ ಮತ್ತು ಮಾರ್ಗದರ್ಶನ ಬಹಳಷ್ಟು ಜನರ ಬದುಕನ್ನು ಬದಲಾಯಿಸಿದೆ.

ಸದಾ ಹಸನ್ಮುಖಿಯಾಗಿರುವ ಶ್ರಮಜೀವಿ, ಪರೋಪಕಾರಿ ಗುಣಸಂಪನ್ನ ನನ್ನ ಜೀವ ಸ್ನೇಹಿತ ಸಂತೋಷ್ ಅವರಿಗೆ ಜನ್ಮದಿನದ ನಿಮಿತ್ತ ಮನದುಂಬಿದ ಶುಭಾಶಯಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಶುಭ ಪ್ರಾರ್ಥನೆಯೊಂದಿಗೆ,
 
ನಿಮ್ಮವ
ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...