Thursday, June 4, 2020

25 ವರ್ಷಗಳ ಸಾರ್ಥಕ ದಾಂಪತ್ಯ ಜೀವನಾನುಭವದ ಸಂತೃಪ್ತಿಯಲ್ಲಿ ನಮ್ಮ ದಿವಾಕರ ನಾಯ್ಕ ದಂಪತಿ
ವೈವಾಹಿಕ ಜೀವನದ 25 ವರ್ಷಗಳ ಸಂಭ್ರಮದಲ್ಲಿರುವ ಮಾನವೀಯ ಗುಣಧರ್ಮದ ಶ್ರೀ. ದಿವಾಕರ ನಾಯ್ಕ ಹಾಗೂ ದೀಪಾ ದಿವಾಕರ ನಾಯ್ಕ ದಂಪತಿಗಳಿಗೆ ಮನಪೂರ್ವಕ ಅಭಿವಂದನೆಗಳು.
 ತಾವು ಬದುಕುವುದರ ಜೊತೆಯಲ್ಲಿ ಇನ್ನೊಬ್ಬರ ಬದುಕಿಗೆ ನೆರಳಾಗುವ ಮೂಲಕ ಮಧುರ ಮನಸ್ಸಿನ ಮಾನವೀಯ ಜೋಡಿ ನಮ್ಮ ದಿವಾಕರ ನಾಯ್ಕರವರದ್ದು. ಅಹಂ ಇಲ್ಲವೆ ಇಲ್ಲ, ಕೋಪ ಅದಕ್ಕಿಂತ ಮೊದಲಿಲ್ಲ. ಇಂತಹ ಅಪರೂಪದ ಅಪೂರ್ವ ವ್ಯಕ್ತಿ ನಮ್ಮಣ್ಣ ದಿವಾಕರ ನಾಯ್ಕ ಅವರು. ದಿವಾಕರ ನಾಯ್ಕ ಅವರ ಕುಟುಂಬಕ್ಕೆ ಮುದ್ದಿನ ಹಾಗೂ ಮಮತಾಮಯಿ ಸೊಸೆಯಾಗಿ ಬಂದವರು ಸೌಭಾಗ್ಯ ಲಕ್ಷ್ಮೀಯ ರೂಪದಲ್ಲಿ ನನ್ನಕ್ಕ ದೀಪಾ ಅವರು. 
 ಮಾತೃ ಹೃದಯದ ದೀಪಾ ಅವರು ಪತಿಗೆ ದಾರಿದೀಪವಾಗಿದ್ದಾರೆ. ಮಕ್ಕಳಿಬ್ಬರಿಗೆ ಅಕ್ಕರೆಯ ಅಮ್ಮನಾಗಿ, ಅತ್ತೆ, ಮಾವನಿಗೆ ಅಭಿಮಾನದ ಮಗಳಂತಿರುವ ಸೊಸೆಯಾಗಿ, ಮೈದುನ ಹಾಗೂ ಮೈದುನನ ಪತ್ನಿಗೆ ಮಾರ್ಗದರ್ಶಕರಾಗಿ ಹಾಗೂ ನೆರೆಹೊರೆಯವರಿಗೆ ಮಮತೆಯ ಪರೋಪಕಾರಿ ಸಂಪನ್ನೆಯಾಗಿರುವ ದೀಪಾ ಅವರು ಮನೆಮಂದಿಯ ಮನಸ್ಸು ಗೆದ್ದು, ಊರಿನ ಜನರ ಪ್ರೀತಿ ವಾತ್ಸಲ್ಯಕ್ಕೂ ಪಾತ್ರರಾಗಿದ್ದಾರೆ.
 ಅನ್ಯೋನ್ಯ ಗುಣಸಂಸ್ಕೃತಿಯ ದಿವಾಕರ & ದೀಪಾ ದಂಪತಿಗಳ 25 ವರ್ಷಗಳ ವೈವಾಹಿಕ ಜೀವನದ ಸಂಭ್ರಮ, ಸಡಗರಕ್ಕೆ ನುಡಿರೂಪದ ಮೂಲಕ ಮನದಾಳದ ವಂದನೆ, ಅಭಿವಂದನೆಗಳು.

ನೂರು ಕಾಲ ಸುಖವಾಗಿ ಬಾಳಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...