ಶ್ರಮಜೀವಿ ಸನ್ಮಿತ್ರ ಜಮೀಲ್ ಇನ್ನಿಲ್ಲ
ಮಗದೊಮ್ಮೆ ಹುಟ್ಟಿ ಬನ್ನಿ ಜಮೀಲ್
ಅವರು ಎಂದೂ ಯಾರಲ್ಲಿಯೂ ಕೈ ಚಾಚಿದವರಲ್ಲ. ಶ್ರಮವಹಿಸಿ, ಬೆವರು ಸುರಿಸಿ ಬದುಕು ಕಟ್ಟಿಕೊಂಡ ಕಾಯಕಯೋಗಿ. ಎಳೆಯ ಪ್ರಾಯದಲ್ಲೆ ಸಂಸಾರದ ನೊಗವನ್ನು ಹೊತ್ತಿ, ಅಪ್ಪ, ಅಮ್ಮನಿಗೆ ಆದರ್ಶ ಮಗನಾಗಿ ಸಂಸಾರವನ್ನು ಆರ್ಥಿಕವಾಗಿ ಬೆಳಗಿಸಿ ಮನೆ ಮಂದಿಗೆ ಸಂತೃಪ್ತಿಯನ್ನು ಕರುಣಿಸಿದವರು. ಅವರು ಬೇರೆ ಯಾರು ಅಲ್ಲ. ವರುಣನ ಅರ್ಭಟಕ್ಕೆ ಇಹಲೋಕವನ್ನು ತ್ಯಜಿಸಿದ ಮನದ ಸನ್ಮಿತ್ರ ಮಹಮ್ಮದ್ ಜಮೀಲ್.ಎಂ.ನದಾಫ್.
ಅಂದ ಹಾಗೆ ಹಳಿಯಾಳದ ನಿವಾಸಿಯಾಗಿರುವ ಇವರು ಬಿಗ್ ಬ್ರೆಡ್ ವಿತರಣೆಯ ಕಾರ್ಯವನ್ನು ನಡೆಸುತ್ತಿದ್ದರು. ಹಳಿಯಾಳದವರಾದರೂ ನಮ್ಮ ದಾಂಡೇಲಿಯ ನವೀನ್ ಕಾಮತ್ ಅವರಿಂದ ಪರಿಚಯವಾದವರು. ಎರಡು ವರ್ಷಗಳ ಹಿಂದೆ ಪರಿಚಯಸ್ಥರಾದ ಜಮೀಲ್ ಅಲ್ಪದಿನದಲ್ಲೆ ಬೆಸ್ಟ್ ಪ್ರೆಂಟ್ ಆದವರು.
ಬಿಗ್ ಬ್ರೆಡ್ ಮಾರುಕಟ್ಟೆಯ ಮೂಲಕ ಬದುಕು ಕಟ್ಟಿಕೊಂಡಿದ್ದ ಜಮೀಲ್ ಸಾಕಷ್ಟು ಬಡವರಿಗೆ, ಕ್ರೀಡಾ ಕಾರ್ಯಕ್ರಮಗಳಿಗೆ ನೆರವನ್ನು ನೀಡುತ್ತಿದ್ದ ಸಹೃದಯಿ. ಇಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪಯಾಣ ಬೆಳೆಸಿದ್ದಾರೆ.
ವಾರದಲ್ಲಿ ಎರಡು ಮೂರು ಸಾರಿ ದಾಂಡೇಲಿಗೆ ಭೇಟಿ ಕೊಡುತ್ತಿದ್ದ ಹೃದಯದ ಮಿತ್ರ ಜಮೀಲ್ ನಾನು ಅದೇಷ್ಟೋ ಬಾರಿ ಹಸ್ಯಚಟಾಕಿಯನ್ನು ಹಾರಿಸುತ್ತಾ ಕಾಮತ್ ರಿಪ್ರೆಶಮೆಂಟಿನಲ್ಲಿ ನಾಷ್ಟ ಮಾಡುತ್ತಿದ್ದ ಆ ದಿನಗಳ ಸನ್ನಿವೇಶಗಳು ಇನ್ನೂ ನೆನಪು ಮಾತ್ರ. ಇನ್ನೂ ಬಹುವರ್ಷಗಳ ಕಾಲ ಬದುಕಿ ಬಾಳಬೇಕಿದ್ದ ಜಮೀಲ್ ಇಷ್ಟು ಬೇಗ ನಮ್ಮನ್ನೆಲ್ಲಾ ಯಾಕೆ ಬಿಟ್ಟು ಹೋದಿರಿ. ನಿಮ್ಮ ಅಗಲುವಿಕೆಯ ಸುದ್ದಿ ಕೇಳಿ ದುಖ:ತೃಪ್ತರಾಗಿದ್ದೇವೆ.
ನೋವಿನಲ್ಲೂ ಸಂತಸ ತರುತ್ತಿದ್ದ ಆ ನಿಮ್ಮ ವ್ಯಕ್ತಿತ್ವ, ಪರೋಪಕಾರಿ ಮನುಷ್ಯತ್ವ, ಹೃದಯವಂತಿಕೆ ನಾವು ಹೇಗೆ ಮರೆಯಲು ಸಾಧ್ಯ. ಆಕಸ್ಮಿಕವಾಗಿ ಅಗಲಿದ ಶ್ರಮಚೇತನ ನೀವು. ಮಗದೊಮ್ಮೆ ಜನ್ಮವೆತ್ತಿ ಬನ್ನಿ. ನಿಮ್ಮ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನಿಮ್ಮ ಕುಟುಂಬಸ್ಥರಿಗೆ ಭಗವಂತ ಕರುಣಿಸಲಿ. ನಿಮ್ಮ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುವ,
ದುಖ:ತೃಪ್ತ ಗೆಳೆಯ
ಸಂದೇಶ್.ಎಸ್.ಜೈನ್