Thursday, August 8, 2019

ದಯವಿಟ್ಟು ಗಮನಿಸಿ
ಎಚ್ಚರ ಎಚ್ಚರ
ಬಂಧುಗಳೇ, ವರುಣನ ಅರ್ಭಟ ಕ್ಷಣ ಕ್ಷಣಕ್ಕೂ ಎಲ್ಲೆ ಮೀರಿ ನಡೆಯುತ್ತಿದೆ. ಊಹಿಸಲಾಸಾಧ್ಯವಾದ ಸಂಕಷ್ಟದಲ್ಲಿ ಕರುನಾಡ ಜನತೆ ಇರುವುದು ನೋವಿನ ವಿಚಾರ.

ಈ ನಡುವೆ ಕೆಲವೊಂದು ವಿಚಾರಗಳನ್ನು ತಮ್ಮುಂದೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.


1.    ಬಂಧುಗಳೇ ಮಳೆಯ ನೀರು ನಿಂತಲ್ಲಿ ನಡೆದಾಡುವಾಗ ಎಚ್ಚರಿಕೆ ವಹಿಸಿ, ಮಳೆಯ ನೀರಿನಲ್ಲಿ ಹಾವುಗಳು, ಇನ್ನಿತರೇ ವಿಷ ಜಂತುಗಳು ಬರಬಹುದು. ನಮ್ಮ ಮೋಜಿನಾಟ ಅಥವಾ ಮನೆಗೆ ಸೇರುವ ಆತುರದಲ್ಲಿ, ಗಡಿಬಿಡಿಯಲ್ಲಿ ನೋಡಿ ಮುಂದೆ ಸಾಗಿ. ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವ ಮುಂಚೆ ಕೈಯಲ್ಲೊಂದು ಕೋಲನ್ನು ಇಟ್ಟುಕೊಳ್ಳಿ. ಕೋಲಿನಲ್ಲಿ ನೀರಿಗೆ ಕುಟ್ಟುತ್ತಾ ಕುಟ್ಟುತ್ತಾ ಕಾಲ್ನಡಿಗೆಯಲ್ಲಿ ಮುಂದೆ ಸಾಗಿರಿ.


2.    ಕರೆಂಟ್ (ವಿದ್ಯುತ್ ) ಕಂಬವನ್ನು ಮುಟ್ಟದಿರಿ.


3.    ಮನೆಯಲ್ಲಿ ವಿಗಾರ್ಡ್ ಅಥವಾ ವಿದ್ಯುತ್ ಅಪತ್ತನ್ನು ತಡೆಗಟ್ಟುವ ಸಾಮಾಗ್ರಿಗಳು ಇಲ್ಲದೇ ಇದ್ದಲ್ಲಿ ಪ್ರಿಡ್ಜ್, ಟಿ.ವಿ ಇನ್ನಿತರ ಎಲೆಕ್ರ್ಟಾನಿಕ್ಸ್ ಸಾಮಾಗಿಗ್ರಳ ಸ್ವಿಚ್ ಆಫ್ ಮಾಡಿ ಮಲಗಿ.


4.    ರಾತ್ರಿ ಘನಘೋರ (ಕುಂಭಕರ್ಣ) ನಿದ್ರೆಗೆ ಜಾರಾದಿರಿ.


5.    ದಯವಿಟ್ಟು ಕುದಿಸಿ, ಆರಿಸಿದ ನೀರನ್ನೆ ಕುಡಿಯಲು ಉಪಯೋಗಿಸಿ,


6.    ದಯವಿಟ್ಟು ನೀವು ಮಾಡುವ ಅಡುಗೆ ವಸ್ತುಗಳಲ್ಲಿ ಯಾವುದಾದರೂ ಒಂದಕ್ಕಾದರೂ ಶುಂಠಿ, ಅಜ್ವಾನ್, ಕರಿ ಮೆಣಸು ಬಳಸಿರಿ.


7.    ರಾತ್ರಿ ಸಮಯದಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡದಿರಿ. ಸ್ವಿಚ್ ಆಫ್ ಆಗುವ ತನಕ ಬಳಸದಿರಿ. ನಿಮ್ಮ ಮೊಬೈಲನ್ನು ಜಾರ್ಜ್ ಮಾಡಿ ಆದ ಬಳಿಕವೆ ಮಲಗಿರಿ.


8.    ಮನೆಯ ಕಿಟಕಿ, ಬಾಗಿಲು ಮುಚ್ಚಿ ಮಲಗಿದರೂ, ಯಾವುದಾದರೂ ಒಂದು ಕಿಟಕಿಯನ್ನು ಶೇ:10 ರಷ್ಟು ತೆರೆದಿಡಿ.


9.    ರಾತ್ರಿ ಮಲಗುವ ಮುಂಚೆ ಬಿಸಿ ಬಿಸಿ ಕಷಾಯ ಇಲ್ಲವೇ ಬಿಸಿ ನೀರು ಕುಡಿದು ಮಲಗಿರಿ.


10.    ವಾರಕ್ಕೆ ಬೇಕಾದ ಪಡಿತರ ವಸ್ತುಗಳನ್ನು ಈಗಲೇ ಖರೀಧಿಸಿಟ್ಟುಕೊಳ್ಳಿ.


11.    ಅಡುಗೆ ಅನಿಲ ಮಿತವಾಗಿ ಬಳಸಿರಿ, ಅಡುಗೆ ಅನಿಲ ಪೊರೈಕೆಯಲ್ಲಿ ಹಲವಾರು ಅನಾನುಕೂಲತೆಗಳಾಗುತ್ತಿವೆ. ಪ್ರಾಕೃತಿಕ ವಿಕೋಪಕ್ಕೆ ಆಗುವ ತೊಂದರೆಗಾಗಿ ಗ್ಯಾಸ್ ವಿತರಕರಲ್ಲಿ ಜಗಳ ಮಾಡದಿರಿ.


12.    ಪೊಲೀಸ್ ಇಲಾಖೆ, ಕೆಇಬಿ ಯ ದೂರವಾಣಿ ಸಂಖ್ಯೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಮನೆಯಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಬರೆದಿಟ್ಟುಕೊಳ್ಳಿ.


13.    ನಿಮ್ಮ ನಿಮ್ಮ ವಾಹನಗಳಿಗೆ ಇಂಧನವನ್ನು ಈಗಲೇ ಹಾಕಿಸಿಕೊಳ್ಳಿ.  ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿರುವುದರಿಂದ ಇಂಧನ ತುಂಬಿದ ಟ್ಯಾಂಕರ್ ಗಳು ಬರುತ್ತಿಲ್ಲ.


14.    ನಮ್ಮೂರಿಗೆ ಕೆಲಸದ ನಿಮಿತ್ತ ಬಂದಿರುವ ಟ್ರಕ್ ಡ್ರೈವರ್ಸ್ ಗಳಿಗೆಸಿತರೇ ವಾಹನ ಚಾಲಕರಿಗೆ, ಕ್ಲೀನರ್ಸ್ ಗಳಿಗೆ, ಪರವೂರಿನವರಿನವರಿನ ಜನರಿದ್ದಲ್ಲಿ ಯೋಗಕ್ಷೇಮ ಕೇಳಿ, ಅವರಿಗೆ ಅನ್ನ, ಉಪಹಾರ ಸಿಗದಿದ್ದ ಪಕ್ಷದಲ್ಲಿ ನಾವು ತಿನ್ನುವುದರಲ್ಲೆ ಸ್ವಲ್ಪ ಕೊಟ್ಟು ಸಹಕರಿಸೋಣ.


15.    ಪೊಲೀಸ್ ಸಿಬ್ಬಂದಿಗಳು ಹಾಗೂ ಕೆಇಬಿ ಸಿಬ್ಬಂದಿಗಳ ಜೊತೆ ಗೌರವದಿಂದ ವರ್ತಿಸಿ. ಅವರೆ ನಮ್ಮನ್ನು ಕಾಯುವ ಸೇನಾನಿಗಳು ಎನ್ನುವುದನ್ನು ಮರೆಯಬೇಡಿ.


16.    ಯಾವುದೋ ಕುಂಟು ನೆಪಕ್ಕಾಗಿ ಪಕ್ಕದ ಮನೆಯವರ ಜೊತೆ ಜಗಳವಾಗಿ ಮಾತು ನಿಲ್ಲಿಸಿದ್ದರೇ, ದಯವಿಟ್ಟು ರಾಜಿಯಾಗಿ ಅವರ ಜೊತೆ ಅನ್ಯೋನ್ಯ ಸಂಬಂಧ ಬೆಳೆಸಿ. ರಾತ್ರಿ ಮಲಗಿ ಬೆಳಿಗ್ಗೆ ಏಳುತ್ತೇವೆಯೋ ಎನ್ನುವ ಅನುಮಾನದಲ್ಲಿರುವ ಸಂದಿಗ್ದತೆಯಲ್ಲಿ ಕೋಪ, ಜಗಳದಿಂದ ಏನು ಸಾಧಿಸಲಾಗದು.


17.    ಪ್ರತಿಯೊಂದು ಮನೆಯಲ್ಲಿ ವಿದ್ಯುತ್ ಟೆಸ್ಟ್ ಮಾಡುವ ಟೆಸ್ಟರನ್ನು ಇಟ್ಟುಕೊಳ್ಳಿ.


18.    ರಾತ್ರಿ ಸಂಚಾರಿಸುವಾಗ ಟಾರ್ಚ್ ಇಲ್ಲವೇ ಮೊಬೈಲ್ ಲೈಟನ್ನು ಆನ್ ಮಾಡಿಯೆ ಮುಂದೆ ಸಾಗಿ.


19.    ತೆಂಗಿನ ಮರ ಹಾಗೂ ಇನ್ನಿತರೇ ಮರಗಳ ಕೆಳಗಡೆ ನಿಮ್ಮ, ನಿಮ್ಮ ವಾಹನಗಳನ್ನು ನಿಲ್ಲಿಸದಿರಿ.


20.    ಜ್ವರ, ಕೆಮ್ಮು, ತಲೆ ನೋವು, ನೆಗಡಿಗೆ ಸಂಬಂಧಿಸಿದ ಮಾತ್ರೆಗಳನ್ನು ಹಾಗೂ ವಿಕ್ಸ್, ಅಮೃತಾಂಜನ್, ತೈಲಾವನ್ನು ಮನೆಯಲ್ಲಿ ಸದಾ ಇಟ್ಟುಕೊಂಡಿರಿ.


21.    ದಯವಿಟ್ಟು ಹೆಚ್ಚು ಹೆಚ್ಚು ಒಳ ಉಡುಪನ್ನು ಖರೀಧಿಸಿಟ್ಟುಕೊಳ್ಳಿ. ಹಸಿದಿರುವ ಬಟ್ಟೆಯನ್ನು ಧರಿಸದಿರಿ.


22.    ಮದ್ಯಾಹ್ನಕ್ಕೆ ಬೇಕಾಗುವಷ್ಟೆ ಅನ್ನವನ್ನು ಮಾಡಿಟ್ಟುಕೊಳ್ಳಿ, ರಾತ್ರಿಗೆ ಸಪರೇಟ್ ಮಾಡಿ ಬಿಸಿ ಬಿಸಿ ಊಟ ಮಾಡಿ.


23.    ಬೆಳಿಗ್ಗೆ ಎದ್ದ ತಕ್ಷಣ ಮನೆಯ ಸುತ್ತ ಮುತ್ತ ಕಣ್ಣಾಡಿಸಿ, ಮಳೆಯ ರುದ್ರ ನರ್ತನಕ್ಕೆ ಹಾವುಗಳು, ವಿಷ ಜಂತುಗಳು ಮನೆಯ ಸುತ್ತಲಿನ ಯಾವುದಾದರೂ ಬಿಸಿ ಜಾಗವನ್ನು ಹುಡುಕಿ ವಾಸ ಮಾಡುವ ಸಾಧ್ಯತೆಯಿದೆ. ಇದರಿಂದ ನಮ್ಮ ಸಣ್ಣ ಮಕ್ಕಳು ಅಚಾತುರ್ಯಕ್ಕೆ ಬಲಿಯಾಗಬಹುದು.


24.    ಮಳೆಗಾಲದ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ಶಾಲೆಗೆ ಹೋಗುವಾಗ ಬಿಸಿ ಮಾಡಿ ಕುದಿಸಿ, ಆರಿಸಿದ ನೀರನ್ನೆ ಕೊಡಿ.


25.    ಎಲ್ಲ ಶಾಲೆಗಳಲ್ಲಿ ಬಿಸಿಯೂಟ ಚೆನ್ನಾಗಿರುತ್ತದೆ. ಬಿಸಿಯೂಟ ಮಾಡದಿರು ಎಂದು ಹೇಳಿ, ನೀವು ನಿಮ್ಮ ಮಗುವಿನ ಊಟದ ಡಬ್ಬಕ್ಕೆ ಬಿಸ್ಕೆಟ್ ಅಥವಾ ಬೆಳಿಗ್ಗೆ ಮಾಡಿಟ್ಟಿರುವ ತಿಂಡಿ ತಿನಸುಗಳನ್ನು ದಯವಿಟ್ಟು ಕೊಡಬೇಡಿ. 


ನಿಮ್ಮವ
ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...