ಮರಳಿ ಜನ್ಮವೆತ್ತಿ ಬನ್ನಿ ಜೀವದ ಗೆಳೆಯ
ಬಾರದ ಲೋಕಕ್ಕೆ ಪಯಾಣ ಬೆಳೆಸಿದ ನಮ್ಮ ನಲ್ಲಪ್ಪಾ
ಬಾರದ ಲೋಕಕ್ಕೆ ಪಯಾಣ ಬೆಳೆಸಿದ ನಮ್ಮ ನಲ್ಲಪ್ಪಾ

ವಿಧಿಯ ಆಟವೆ ಹೀಗೆ. ನಾವು ಅಂದ್ಕೊಳ್ಳುವುದೇ ಒಂದು, ವಿಧಿಯ ಲೀಲೆಯೆ ಇನ್ನೊಂದು. ನನ್ನ ಜೀವದ ಗೆಳೆಯ, ಶ್ರಮಜೀವಿ, ಅಹಂವಿಲ್ಲದ ಶಾಂತಮೂರ್ತಿಯಾಗಿರುವುದರ ಜೊತೆಗೆ ನಗರದ ಖ್ಯಾತ ಗಾಯಕ ಹಾಗೂ ಉದ್ಯಮಿಯಾಗಿದ್ದ ನಲ್ಲಪ್ಪಾ ಭಂಡಾರಿ (ವ:49) ಬುಧವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಬಿ.ಇ ಪದವಿದರರಾಗಿದ್ದ ನಲ್ಲಪ್ಪ ಭಂಡಾರಿಯವರು ತಮಿಳುನಾಡಿನಲ್ಲಿ ಪ್ರಸಿದ್ದ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಹುಟ್ಟೂರಾದ ದಾಂಡೇಲಿಯಲ್ಲೆ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿ ಯಶ್ ಎಲೆಕ್ಟ್ರೀಕಲ್ಸ್ ಎಂಬ ವ್ಯವಹಾರೋದ್ಯಮವನ್ನು ಪ್ರಾರಂಭಿಸಿ ಗಮನ ಸೆಳೆದಿದ್ದರು. ಪ್ರವೃತ್ತಿಯಲ್ಲಿ ಉತ್ತಮ ಗಾಯಕರಾಗಿ ಅಪಾರ ಜನಮನ್ನಣೆಗಳಿಸಿದ್ದ ನಲ್ಲಪ್ಪಾ ಭಂಡಾರಿಯವರು ಮಡದಿ, ಇಬ್ಬರು ಪುತ್ರರು ಮತ್ತು ಒಬ್ಬಳು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.
ಸರಳತೆಯನ್ನು ಮೈಗೂಡಿಸಿ ಬದುಕು ಕಟ್ಟಿಕೊಂಡಿದ್ದ ನಲ್ಲಪ್ಪಾ ಭಂಡಾರಿಯವರ ಹೃದಯವಂತಿಕೆ ಮತ್ತು ಗುಣಧಮರ್ಮಕ್ಕೆ ಶರಣು ಎನ್ನಲೆಬೇಕು. ಸುಯೋಗ್ಯ ಜೀವದ ಗೆಳೆಯನನ್ನು ಕಳೆದುಕೊಂಡ ನೋವು ನಮ್ಮದಾಗಿದೆ. ನಿಮ್ಮ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ. ಮರಳಿ ಜನ್ಮವೆತ್ತಿ ಬನ್ನಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ದುಖ:ತೃಪ್ತ ಗೆಳೆಯ,
ಸಂದೇಶ್.ಎಸ್.ಜೈನ್
No comments:
Post a Comment