Friday, November 29, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ

ದಿನದ 24 ತಾಸು ಸೇವೆ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ
 
ಎಷ್ಟೊತ್ತಿಗೂ ಬೇಕಾದರೂ ಊಟ ಅಥವಾ ರೈಸ್ ಬಾತ್ ನೀಡುವ ಸೇವೆ -ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ (ಸಸ್ಯಹಾರಿ ಪುಡ್ ಮಾತ್ರ, ಒನ್ಲಿ ವೆಜಿಟೇರಿಯನ್)

ಆತ್ಮೀಯರೇ, ಕೆಲವೊಮ್ಮೆ ನೀವು ಪರಸ್ಥಳಕ್ಕೆ ಹೋಗಿ ಹಿಂದುರುಗಿ ಬರುವಾಗ ರಾತ್ರಿ 11, 12 ಗಂಟೆ ಅಥವಾ ಅದಕ್ಕೂ ತಡವಾಗಿ ದಾಂಡೇಲಿಗೆ ಬಂದು ಮುಟ್ಟುತ್ತೀರಿ. ಆವಾಗ ನಿಮಗೆ ಎಲ್ಲಿಯೂ ಊಟ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂತವರ ಹಸಿವು ನೀಗಿಸುವ ಸಾಮಾಜಿಕ ಪ್ರಜ್ಞೆಯಡಿ ಜೈನ್ ಇಡ್ಲಿ ಕೆಫೆ ನೀವು ಹೇಳಿದ ಸಮಯಕ್ಕೆ ಅಂದರೆ ದಿನದ 24 ಗಂಟೆಯೂ ಊಟವನ್ನು ಒದಗಿಸುವ ಕಾರ್ಯವನ್ನು ಮಾಡಲಿದೆ. ಆದರೆ ಕನಿಷ್ಟ 5 ಗ್ರಾಹಕರು ಇರತಕ್ಕದ್ದು. 

ಉದಾಹರಣೆಗೆ ನೀವು ಧಾರವಾಡ/ಹುಬ್ಬಳ್ಳಿಗೆ ಹೋಗಿದ್ದೀರಿ. ಅಲ್ಲಿ ದಾಂಡೇಲಿಯ ಬಸ್ಸನ್ನೇರಿ ಅಥವಾ ಸ್ವಂತ ವಾಹನದಲ್ಲಿ ರಾತ್ರಿ 10 ಗಂಟೆಗೆ ಅಥವಾ 11 ಗಂಟೆಗೆ ಕುಳಿತಿರುತ್ತೀರಿ. ಆವಾಗ್ಲೆ ನಮ್ಮನ್ನು ಸಂಪರ್ಕಿಸಿ ಊಟಕ್ಕೆ ಆರ್ಡರ್ ಮಾಡಿ. ಕಡಿಮೆ ದರದಲ್ಲಿ ಹೆಚ್ಚು ರುಚಿಕರವಾದ ಊಟ ನೀಡಲಾಗುವುದು. 5 ರಿಂದ 100 ಜನರಿಗೆ ಊಟ ಒದಗಿಸಲಾಗುವುದು. ಆದರೆ ಕನಿಷ್ಟ ಒಂದು ಗಂಟೆ ಮುಂಚಿತವಾಗಿ ಹೇಳತಕ್ಕದ್ದು. 

ಆದರೆ ಒಂದು ಮಾತು, ನಾವು ಹೇಳಿದ ಸ್ಥಳಕ್ಕೆ ನೀವು ಬರುವುದು. ನಿಮಗೆ ತೊಂದರೆಯಾಗದಂತೆ ಸರ್ವಿಸ್ ಚಾರ್ಜ್ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, November 27, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ
ಮನೆ ಪಾಕ ಶೈಲಿಯಲ್ಲಿ ಊಟದ ಡಬ್ಬ ಸೇವೆ

ನಿಮ್ಮ ಮನೆ ಹುಡುಗನ ಮನೆ ಪಾಕದ ಊಟದ ಡಬ್ಬ ಸೇವೆಗೆ ಆಶೀರ್ವದಿಸಿ

ನಮ್ಮ ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮತ್ತೊಂದು ಅಂಬೆಗಾಲಿನ ಹೆಜ್ಜೆ. ಮನೆ ಬಾಗಿಲಿಗೆ ಊಟದ ಡಬ್ಬ ಸೇವೆ. ಸೋಡಾ ಪುಡಿಯನ್ನು ಹಾಕದೇ ಸಿದ್ದ ಪಡಿಸಿದ ಅನ್ನ. ಮನೆ ಪಾಕ. ಇದು ನಮ್ಮ ಕರ್ತವ್ಯ, ನಮ್ಮ ಧ್ಯೇಯ. ಡಿಸೆಂಬರ್: 05 ರಿಂದ ಪ್ರಾರಂಭ.


ನಿಯಮಗಳು.
    ಲಿಮಿಟೆಡ್ ಡಬ್ಬ ಮಾತ್ರ..
    ಮೊದಲು ಬಂದವರಿಗೆ ಆದ್ಯತೆ.
    ನಿಮ್ಮ ಹೆಸರನ್ನು ದಿನಾಂಕ: 02.12.2019 ರೊಳಗೆ ನೊಂದಾಯಿಸಿಕೊಳ್ಳಿ.
    ಹೆಸರು ನೊಂದಾಯಿಸುವಾಗ ರೂ: 1800/- ಮೊತ್ತದ ಚೆಕ್ಕನ್ನು ನೀಡಿ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
    ಡಬ್ಬ ನಿಮ್ಮದು- ಊಟ ನಮ್ಮದು
    ನಿಮ್ಮ ಮನೆ ಬಾಗಿಲಿಗೆ ಪ್ರತಿ ನಿತ್ಯ ಊಟದ ಡಬ್ಬ ಸೇವೆ. ಕೇವಲ 50 ಜನರಿಗೆ ಮಾತ್ರ. ಮೊದಲು ಬಂದವರಿಗೆ ಆಧ್ಯತೆ.
    ಪ್ರಕೃತಿದತ್ತ ಆಹಾರಕ್ಕೆ ನಮ್ಮ ಮೊದಲ ಆಧ್ಯತೆ.
    ನಿಮ್ಮ ಆರೋಗ್ಯವೆ ನಮ್ಮ ಭಾಗ್ಯ. ಆರೋಗ್ಯಯುತ ಆಹಾರ ಇದು ನಮ್ಮ ಗುರಿ. 


ಅಸಿಡಿಟಿ, ಹೊಟ್ಟೆ ಉಬ್ಬರ, ಗ್ಯಾಸ್ ಟ್ರಬಲ್ ಮುಕ್ತ ಆಹಾರಕ್ಕಾಗಿ ನಿಮ್ಮ ಮನೆ ಹುಡುಗನ ಊಟದ ಡಬ್ಬವನ್ನೆ ಪಡೆದುಕೊಳ್ಳಿರಿ. ಹಣ ಯಾವತ್ತು ಗಳಿಸಬಹುದು. ಜನರನ್ನು ಕಷ್ಟಪಟ್ಟು ಗಳಿಸಬೇಕು. ಆದ್ರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ನಮ್ಮ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿ ನಮ್ಮದಲ್ವೆ.

 
ನಮ್ಮಿಂದೇನು?
ನಾವು ಪ್ರತಿನಿತ್ಯ ನೀವಿರುವ ಅಂದರೆ ನೀವು ಹೇಳಿದ ಸ್ಥಳಕ್ಕೆ ಊಟದ ಡಬ್ಬವನ್ನು ಪೊರೈಸುತ್ತೇವೆ. ಆದ್ರೆ ಊಟದ ಡಬ್ಬ ನಿಮ್ಮದಿರಬೇಕು.


ನಮ್ಮ ಊಟದ ವಿಶೇಷತೆಗಳು:
    ನಾವೆ ಮನೆಯಲ್ಲಿ ಸಿದ್ದ ಪಡಿಸಿದ ಉಪ್ಪಿನ ಕಾಯಿ ಅಥವಾ ಚಟ್ನಿ
    ಪಲ್ಯ
    ಕೂರ್ಮ
    ಚಪಾತಿ (2)
    ಅನ್ನ
    ಕುಚಲಕ್ಕಿ ಅನ್ನ ಬೇಕಾದವರಿಗೆ ಕುಚಲಕ್ಕಿ ಅನ್ನ
    ಸಾಂಬರ್ ಅಥವಾ ರಸಂ
    ಮಜ್ಜಿಗೆ ಅಥವಾ ಮೊಸರು
    ಮಿರ್ಚಿ ಪ್ರೈ ಅಥವಾ ಹಪ್ಪಳ ಅಥವಾ ಸಂಡಿಗೆ ಇನ್ನಿತರೇ
    ಸಮಯ ಸಂದರ್ಬ ನೋಡಿ ಇನ್ನೂ ಸ್ಪೇಷಲ್ ಐಟಂ
    ವಿಪರೀತ ಬೇಸಿಗೆಗಾಲದಲ್ಲಿ ನಿಮ್ಮ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಕುಚಲಕ್ಕಿ ಗಂಜಿ ನೀರಿನ ಸೂಪ್. ಇದು ನಮ್ಮ ಸೇವೆ.


ಒಂದು ಊಟದ ಡಬ್ಬದ ದರ (ರೇಟ್): ಕೇವಲ ರೂ:60/- ಮಾತ್ರ


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043


ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.


ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.


ನಿಮ್ಮವ
ಸಂದೇಶ್.ಎಸ್.ಜೈನ್



 

Wednesday, November 20, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಕುಚಲಕ್ಕಿ ಗಂಜಿ ನೀರಿನ ಸೂಪ್ ರೂ:5/- ಕ್ಕೆ

ಹೀಗೊಂದು ಸಂಭಾಷಣೆ
ನಮ್ಮ ಬಸ್ಯಾ ಮತ್ತು ಮುತ್ಯಾ ಎಂಬ ಗೆಳೆಯರಿಬ್ಬರು ಬಿಸಿಲ ಧಗೆ ನಡೆದುಕೊಂಡು ಹೋಗುತ್ತಿದ್ದ ಸನ್ನಿವೇಶವಿದು.

ಬಸ್ಯಾ: ಏನ್ಲೇ ಮುತ್ಯಾ, ಈ ಬಾರಿ ಮಳೆನೂ ಜಬರ್ದಸ್ತು ಬಂತು, ಇತ್ಲಾಗೆ ಬಿಸಿಲಿನ ಧಗೆನೂ ಭಯಂಕರ ಆಯ್ತಿಯಾಪ್ಪ. ಈ ಬಿಸಿಲನ ಧಗೆಗೆ ಬಹಳ ತೊಂದರೆಯಾಯಿತೊಲ್ಲೊ.

ಮುತ್ಯಾ: ಅದು ನಿಜ ಕಣ್ಲ. ಬಿಸಿಲಿಗೆ ಸ್ವಲ್ಪ ತಂಪು ಮಾಡೋಣ. 

ಬಸ್ಯಾ: ಏನು ಮಾಡೋದು?

ಮುತ್ಯಾ: ಒಂದು ಎಳ್ನೀರು ಕುಡಿಯೋಣ, ಬಾ

ಬಸ್ಯಾ: ಛೇ. ಛೇ ಬೇಡಪ್ಪೊ, ಎಳ್ನೀರು ರೇಟ್ ಕೇಳಿದ್ರೆ ಸುಸ್ತಾಗಿ ಬಿಡ್ತೀಯಾ. ಏನು ಮಾರಾಯ 30 ರೂಪಾಯಿ ಕೊಟ್ಟು ಯಾವಾಗ್ಲೋ ತಂದು ಸ್ಟಾಕ್ ಇಟ್ಟಿರೊ ಎಳ್ನೀರು ಕುಡಿದ್ರೆ ಏನು ಲಾಭಾ ಆಗ್ತಾತೈತಿ. ಅದಕ್ಕೆ ನಮ್ಮ ಜೈನ್ ಇಡ್ಲಿ ಕೆಫೆ ಇದೆಯಲ್ಲಾ. ಅದು ಪಾಟೀಲ್ ಆಸ್ಪತ್ರೆ ಬಳಿ ಇರೋ ಜೈನ್ ಇಡ್ಲಿ ಕೆಫೆಯಲ್ಲಿ ತಂಪು ಮಾಡುವುದಕ್ಕಾಗಿ ಮತ್ತು ಪಕ್ಕಾ ಆರೋಗ್ಯವರ್ಧಕವಾಗಿರುವ ಕುಚಲಕ್ಕಿ ಗಂಜಿ ನೀರಿನ ಸೂಪ್ ಆಯ್ತಿ ಮಾರಾಯ. ಅದು ಬರೀ ರೂ: 5/- ಗೆ ಮಾತ್ರ. ರೊಕ್ಕನೂ ಉಳಿತೈತಿ. ಆರೋಗ್ಯನೂ ಚಲೋ ಇರುತೈತಿ.

ಮುತ್ಯಾ: ಬಹಳ ಬೆಸ್ಟ್ ಕೆಲಸ ಮಾಡ್ಯಾರೆ ನೋಡು. ಹಾಗಾದ್ರೆ 30 ರೂಪಾಯಿ ಖರ್ಚು ಮಾಡುವ ಬದಲು, ಜೈನ್ ಇಡ್ಲಿ ಕೆಫೆಗೆ ಹೋಗಿ ಕುಚಲಕ್ಕಿ ಗಂಜಿ ನೀರಿನ ಸೂಪ್ ಕುಡಿಯೋಣ.

ಬಸ್ಯಾ: ಬೇಗ ಹೋಗೋಣ ಮಾರಾಯ. ಅವರು ಬೆಳಿಗ್ಗೆ  7 ಗಂಟೆಯಿಂದ 10.30 ಗಂಟೆಯವರೆಗೆ ಮಾತ್ರ ಇರ್ತಾರೆ. ಮತ್ತೆ ಸಂಜೆ 6.30 ರಿಂದ ರಾತ್ರಿ 10.30 ರವರೆಗೆ ಮಾತ್ರ ಇರ್ತಾರೆ. ಅದು ಲಿಮಿಟೆಡ್ ಸೇಲ್ ಮಾರಾಯ. ಬಾ  ಹೋಗೋಣ.
ಮುತ್ಯಾ: ಅಯ್ತು ಕಣ್ಲೇ. ಬಾ ಹೋಗೋಣ.

ಕೇವಲ ರೂ:5 ಕ್ಕೆ ಆರೋಗ್ಯವರ್ದಕ ಮತ್ತು ಗುಣಮಟ್ಟದ ಕುಚಲಕ್ಕಿ ಗಂಜಿ ನೀರಿನ ಸೂಪ್. ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ. ಕುಚಲಕ್ಕಿ ಗಂಜಿನೂ ಸಿಗುತ್ತದೆ. ರಾತ್ರಿ ಮಿನಿ ಊಟ ಇದೆ ಕಣ್ರೀ. ರೂ 30 ಮಾತ್ರ.

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್

Sunday, November 10, 2019

ಜೈನ್ ಇಡ್ಲಿ ಕೆಫೆ ದಾಂಡೇಲಿ
ಜೈನ್ ಕ್ಯಾಟರಿಂಗ್ ಸರ್ವಿಸ್
ನೀವು ಆಶೀರ್ವದಿಸಿ, ಬೆಳೆಸಿದ ನಿಮ್ಮ ಮನೆಹುಡುಗನ ಜೈನ್ ಇಡ್ಲಿ ಕೆಫೆ ಮತ್ತೊಂದು ಪುಟ್ಟ ಕಾರ್ಯದತ್ತ ಮುಂದಡಿಯಿಟ್ಟಿದೆ. ಜೈನ್ ಇಡ್ಲಿ ಕೆಫೆಯ ಮತ್ತೊಂದು ಪುಟ್ಟ ಪ್ರಯತ್ನವೆ

ಜೈನ್ ಕ್ಯಾಟರಿಂಗ್ ಸರ್ವಿಸ್ 

ಉಪಹಾರ, ದಕ್ಷಿಣ ಭಾರತೀಯ ಹಾಗೂ ಕರಾವಳಿ ಶೈಲಿಯ ಮತ್ತು ನಿಸರ್ಗದತ್ತ ಉತ್ಪನ್ನಗಳಿಂದ ತಯಾರಿಸುವ ಮನೆಪಾಕಕ್ಕಾಗಿ ಸಂಪರ್ಕಿಸಿ: ಮೊ: 9620595555, 7349443043.

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್



 

Thursday, November 7, 2019

ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ (ಬಾಯ್ಡ್ ರೈಸ್)
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ದಿನಾಂಕ: 07.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ನಮ್ಮ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಕುಚಲಕ್ಕಿ ಗಂಜಿ, ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)

1.    ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ
2.    ಅನ್ನಸಾಂಬರ್: (ಅಮ್ಟೆ ದಾಲ್ ಗಸಿ, ಖಾರ ಚಟ್ನಿ, ಸಾಂಬರ್).
3.    ಬಿಸಿ ಬಿಸಿ ಇಡ್ಲಿ ಸಾಂಬರ್.

ಆತ್ಮೀಯರೇ, ನಾಳೆಯಿಂದ ಅಂದರೆ ದಿನಾಂಕ:08.11.2019 ರಿಂದ ಪಾಟೀಲ್ ಆಸ್ಪತ್ರೆ ಬಳಿಯಿರುವ ಜೈನ್ ಇಡ್ಲಿ ಕೆಫೆಯಲ್ಲಿ ಬೆಳಿಗ್ಗೆ ಕುಚಲಕ್ಕಿ ಗಂಜಿ ಊಟ ಸಿಗಲಿದೆ. ಆರೋಗ್ಯವರ್ಧಕ ಗಂಜಿ ಊಟ ನಮ್ಮಲ್ಲಿ ಮಾತ್ರ. ನಮ್ಮ ಹೋಟೆಲ್ ಸಣ್ಣದಿರಬಹುದು, ಆದ್ರೆ ಸ್ವಚ್ಚ, ಸ್ವಾದಿಷ್ಟ ಮತ್ತು ಆರೋಗ್ಯಪೂರ್ಣ ಮನೆ ಪಾಕಕ್ಕೆ ಒಮ್ಮೆ ಭೇಟಿ ಕೊಡಿ.

ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.

ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.

ನಿಮ್ಮವ
ಸಂದೇಶ್.ಎಸ್.ಜೈನ್


 

Wednesday, November 6, 2019

ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ (ಬಾಯ್ಡ್ ರೈಸ್)
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ

ದಿನಾಂಕ: 06.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ಇಂದಿನ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಕುಚಲಕ್ಕಿ ಗಂಜಿ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)

1.    ವೆರಿ ವೆರಿ ಸ್ಪೇಷಲ್ ಕುಚಲಕ್ಕಿ ಗಂಜಿ
2.    ಅನ್ನಸಾಂಬರ್: (ಹೀರೆ ಕಾಯಿ ಪಲ್ಯ, ಸೂಪರ್ ಚಟ್ನಿ, ಸಾಂಬರ್).
3.    ಗಮ ಗಮ ಉಪ್ಪಿಟ್ಟು

ನಿಮ್ಮವ

ಸಂದೇಶ್.ಎಸ್.ಜೈನ್


 

Tuesday, November 5, 2019

ವೆರಿ ವೆರಿ ಸ್ಪೇಷಲ್ ಹಲಸಿನ ಕಾಯಿ ಪಲ್ಯ
ಜೈನ್ ಇಡ್ಲಿ ಕೆಫೆ ದಾಂಡೇಲಿ

ಸ್ಥಳ: ನಿಯರ್: ಡಾ: ಪಾಟೀಲ್ ಆಸ್ಪತ್ರೆ, ಜೆ.ಎನ್.ರಸ್ತೆ, ದಾಂಡೇಲಿ
ದಿನಾಂಕ: 05.11.2019, ಸಂಜೆ: 6.30 ರಿಂದ ರಾತ್ರಿ 10.30 ರವರೆಗೆ 

ಇಂದಿನ ವಿಶೇಷ : (ನೀವೆಲ್ಲರೂ ಆಶ್ಚರ್ಯಪಡುವಂತೆ ಎಲ್ಲಿಯೂ ಸಿಗದಿರುವ ಹಲಸಿನ ಕಾಯಿ ಪಲ್ಯ ಇದು ನಿಮ್ಮ ಜೈನ್ ಇಡ್ಲಿ ಕೆಫೆಯಲ್ಲಿ ಮಾತ್ರ)
 
1.    ವೆರಿ ವೆರಿ ಸ್ಪೇಷಲ್ ಅನ್ನಸಾಂಬರ್: (ಹಲಸಿನ ಕಾಯಿ ಪಲ್ಯ, ಸೂಪರ್ ಚಟ್ನಿ, ಸಾಂಬರ್).
2.    ಗಮ ಗಮ ಉಪ್ಪಿಟ್ಟು

ನಿಮ್ಮವ

ಸಂದೇಶ್.ಎಸ್.ಜೈನ್


 
ರಾಜ್ಯಮಟ್ಟಕ್ಕೆ ಆಯ್ಕೆಯಾದ ದಾಂಡೇಲಿ ಪ್ರತಿಭೆ- ನಿಧಿ ನಾಯ್ಕ

ಕರ್ನಾಟಕ ರಾಜ್ಯ ಮಹಿಳಾ ಮತ್ತು  ಮಕ್ಕಳ ಕಲ್ಯಾಣ ಇಲಾಖೆಯವರು ಕಾರವಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಾಶ್ರಿ ಪ್ರಶಸ್ತಿಯ ಆಯ್ಕೆ ಶಿಬಿರದಲ್ಲಿ ದ್ವಿತೀಯ ಸ್ಥಾನವನ್ನು ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ನಿಧಿ ಬಾಲಕೃಷ್ಣ ನಾಯ್ಕ ಈಕೆಯು ತನ್ನದಾಗಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನಗರದ ಕೀರ್ತಿ ಬೆಳಗಿ, ನಮಗೆಲ್ಲ ಹೆಮ್ಮೆ ತಂದಿದ್ದಾಳೆ.

ಸೃಜನಾತ್ಮಕ ಪ್ರದರ್ಶನ ವಿಭಾಗದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಬಹುಮಾನ ವಿತರಿಸಿದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈಕೆ ಬಹುಮಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.  ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ನಿಧಿ ನಾಯ್ಕ ಅರಣ್ಯ ಇಲಾಖೆಯ ನೌಕರ ಬಾಲಕೃಷ್ಣ ನಾಯ್ಕ ಹಾಗೂ ಕಾವ್ಯಾ ನಾಯ್ಕರ ಮಗಳಾಗಿದ್ದಾಳೆ.  ಈಕೆಯ ಸಾಧನೆಗೆ ಜನತಾ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ, ಶಾಲಾ ಮುಖ್ಯೋಪಾಧ್ಯಾಯಿನಿ ಯೂಜಿನ್ ಡಿವಾಜ್, ಶಾಲಾ ಶಿಕ್ಷಕ ವೃಂದ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮೂರಿಗೆ ಹಮ್ಮೆ ಮತ್ತು ಗೌರವ ತಂದುಕೊಟ್ಟ ಸುಸಂಸ್ಕೃತ ಬಾಲಕಿ ನಿಧಿ ನಿನಗಿದೊ ಅಕ್ಕರೆಯ ಅಭಿಮಾನದ ಅಭಿನಂದನೆಗಳು. ಶುಭವಾಗಲಿ, ಭವಿಷ್ಯದಲ್ಲಿ ಉನ್ನತಿ ನಿನ್ನದಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್


 
ರಾಜ್ಯಮಟ್ಟದಲ್ಲಿ ಗಮನ ಸೆಳೆದ ನಮ್ಮೂರ ಹೆಮ್ಮೆಯ ಚಿನ್ನದ ಕುವರ ನವನೀತ ಕಾಮತ್ 
ಅವನು ಚೋಟುದ್ದವಿರುವ ಬಾಲಕ. ನೋಡಲು ಮಿಂಚುಳ್ಳಿಯಂತೆ ಹೊಳೆಯುವ ಮುಖದ ಅಂದ ಚೆಂದದ ಮುದ್ದಾದ ಬಾಲಕ. ಪತ್ಲವಿದ್ದರೂ ಪಾದರಸದಂತಿರುವ ಕ್ರಿಯಾಶೀಲತೆ. ಅವನ ಬೆಳವಣಿಗೆ ಭವಿಷ್ಯದ ಉಜ್ವಲ ಬದುಕಿಗೆ ಸುಭದ್ರ ಅಡಿಪಾಯವಂತು ಸುಳ್ಳಲ್ಲ. ಶ್ರಮಸಾಧನೆಯ ಬಾಲಕನಿಗೆ ಶ್ರಮಕ್ಕೆ ತಕ್ಕ ಇಂಬು ದೊರೆಯುತ್ತಿರುವುದು ಅವನ ಪ್ರಾಮಾಣಿಕ ಮತ್ತು ಪರಿಶುದ್ದ ಶ್ರಮಕ್ಕೆ ದೊರೆತ ಅರ್ಹ ಜಯವೆಂದರೇ ಅತಿಶಯೋಕ್ತಿ ಎನಿಸದು.

ಉತ್ತಮ ಸಂಸ್ಕಾರ, ಸರಳ ನಡೆ, ಗುರು ಹಿರಿಯರ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿರುವ ಆ ಬಾಲಕ ಬೇರೆ ಯಾರು ಅಲ್ಲ. ದಿನನಿತ್ಯ ಅನ್ನದಾಸೋಹವನ್ನು ಉಣಬಡಿಸುವ ಕಾಮತ್ ರಿಪ್ರೆಶಮೆಂಟ್ ಮಾಲಕ ನವೀನ್ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಮಾನಸಪುತ್ರ ನಮ್ಮ ಹೆಮ್ಮೆಯ ಕೀರ್ತಿವಂತ ನವನೀತ್ ಕಾಮತ್.

ಅಂದ ಹಾಗೆ ಭಾಷಣದಲ್ಲೂ ಪರಾಕ್ರಮವನ್ನು ಹೊಂದಿರುವ ಈತ ಚುಟುಕು ಹೇಳುವುದರಲ್ಲಿ ನಿಪುಣ. ಚರ್ಚೆಯಲ್ಲಿ ಕೇಳುವುದೆ ಬೇಡ. ಚೆಸ್ ಆಟದಲ್ಲಿ ಎದುರಾಳಿಯನ್ನು ಬೆವರಿಳಿಸುವ ಬುದ್ದಿವಂತ. ಇನ್ನೂ ಶಟಲ್ ಬ್ಯಾಡ್ಮಿಂಟನ್ ನಲ್ಲೂ ಅಂತೂ ಹೇಳುವುದೆ ಬೇಡ. ದೊಡ್ಡವರ ಜೊತೆನೂ ಏಕಾಂಗಿಯಾಗಿ ಆಡಿ ತನ್ನತ್ತ ಪಂದ್ಯಾವಳಿಯನ್ನು ತಿರುಗಿಸಿಕೊಂಡು ಎಲ್ಲರಿಂದಲೂ ಬೆನ್ನು ತಟ್ಟಿಸಿ, ಪ್ರೋತ್ಸಾಹವನ್ನು ಗಿಟ್ಟಿಸಿಕೊಂಡ ಈತ ನಿಜವಾಗಿಯೂ ದಾಂಡೇಲಿಗೆ ಹೆಮ್ಮೆ ಅಲ್ಲದೇ ಮತ್ತೇನು.

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಗಮನಾರ್ಹ ಸಾಧನೆಗೈದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ತನ್ನ ಅದ್ಬುತ ಪ್ರದರ್ಶನವನ್ನು ನೀಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿರುವುದಲ್ಲದೇ ತೃತೀಯ ಸ್ಥಾನವನ್ನು ತನ್ನದಾಗಿಸಿ ನಮ್ಮೂರಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾನೆ.

ಇತ್ತೀಚೆಗೆ
udupi ಯಲ್ಲಿ ನಡೆದ 14 ವರ್ಷದೊಳಗಿನ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ  ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್. ಶಾಲೆಯ ವಿದ್ಯಾರ್ಥಿಯಾದ ನನ್ನ ಮೆಚ್ಚಿನ ಮತ್ತು ನೆಚ್ಚಿನ ನವನೀತ ನವೀನ ಕಾಮತ ಈತನು ತೃತೀಯ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದು ಜಿಲ್ಲೆಗೆ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾನೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿದೆಡೆಯಿಂದ ಆಟಗಾರರು ಭಾಗವಹಿಸಿದ್ದರು. ನವನೀತ ಕಾಮತ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದನು. ಈತನಿಗೆ  ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರರಾಗಿರುವ ರೋಶನ್ಲಾಲ್ ಜೈನ್ ಅವರು ತರಬೇತಿ ನೀಡಿದ್ದರು. ಈ ಹಿಂದೆ ಅಮರ್ ಗುರವ ಹಾಗೂ ಶರಣಯ್ಯ ಹುಬ್ಬಳ್ಳಿಮಠ ಅವರ ಜೊತೆ ತರಬೇತಿ ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈತನ ಸಾಧನೆಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಹಾಗೂ ನಗರದ ಗಣ್ಯರನೇಕರು ಮತ್ತು ಶಾಲಾ ಮುಖ್ಯೋಪಾದ್ಯಾಯಿನಿ ಯೂಜಿನ್ ಡಿವಾಜ್, ಜೆವಿಡಿ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

ಪುಣ್ಯದೂರಿಗೆ ಪುಣ್ಯವಂತ ಮಗನನ್ನು ನೀಡಿದ ನವೀನ್ ಕಾಮತ್ ದಂಪತಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್. 


ಪರಾಕ್ರಮಿ ನವನೀತ್ ಕಾಮತ್ ಈತನಿಗೆ ಪ್ರೀತಿಯ, ಅಭಿಮಾನದ ಅಭಿವಂದನೆಗಳು.

ನಿಮ್ಮವ

ಸಂದೇಶ್.ಎಸ್.ಜೈನ್


 

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...