ರಾಜ್ಯಮಟ್ಟಕ್ಕೆ ಆಯ್ಕೆಯಾದ ದಾಂಡೇಲಿ ಪ್ರತಿಭೆ- ನಿಧಿ ನಾಯ್ಕ
ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಕಾರವಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಾಶ್ರಿ ಪ್ರಶಸ್ತಿಯ ಆಯ್ಕೆ ಶಿಬಿರದಲ್ಲಿ ದ್ವಿತೀಯ ಸ್ಥಾನವನ್ನು ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ನಿಧಿ ಬಾಲಕೃಷ್ಣ ನಾಯ್ಕ ಈಕೆಯು ತನ್ನದಾಗಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನಗರದ ಕೀರ್ತಿ ಬೆಳಗಿ, ನಮಗೆಲ್ಲ ಹೆಮ್ಮೆ ತಂದಿದ್ದಾಳೆ.
ಸೃಜನಾತ್ಮಕ ಪ್ರದರ್ಶನ ವಿಭಾಗದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಬಹುಮಾನ ವಿತರಿಸಿದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈಕೆ ಬಹುಮಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ನಿಧಿ ನಾಯ್ಕ ಅರಣ್ಯ ಇಲಾಖೆಯ ನೌಕರ ಬಾಲಕೃಷ್ಣ ನಾಯ್ಕ ಹಾಗೂ ಕಾವ್ಯಾ ನಾಯ್ಕರ ಮಗಳಾಗಿದ್ದಾಳೆ. ಈಕೆಯ ಸಾಧನೆಗೆ ಜನತಾ ವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ, ಶಾಲಾ ಮುಖ್ಯೋಪಾಧ್ಯಾಯಿನಿ ಯೂಜಿನ್ ಡಿವಾಜ್, ಶಾಲಾ ಶಿಕ್ಷಕ ವೃಂದ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮೂರಿಗೆ ಹಮ್ಮೆ ಮತ್ತು ಗೌರವ ತಂದುಕೊಟ್ಟ ಸುಸಂಸ್ಕೃತ ಬಾಲಕಿ ನಿಧಿ ನಿನಗಿದೊ ಅಕ್ಕರೆಯ ಅಭಿಮಾನದ ಅಭಿನಂದನೆಗಳು. ಶುಭವಾಗಲಿ, ಭವಿಷ್ಯದಲ್ಲಿ ಉನ್ನತಿ ನಿನ್ನದಾಗಲಿ.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment