ಜೈನ್ ಇಡ್ಲಿ ಕೆಫೆ ದಾಂಡೇಲಿ
ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ
ಮನೆ ಪಾಕ ಶೈಲಿಯಲ್ಲಿ ಊಟದ ಡಬ್ಬ ಸೇವೆ
ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮೊದಲ ಬಾರಿಗೆ
ಮನೆ ಪಾಕ ಶೈಲಿಯಲ್ಲಿ ಊಟದ ಡಬ್ಬ ಸೇವೆ
ನಿಮ್ಮ ಮನೆ ಹುಡುಗನ ಮನೆ ಪಾಕದ ಊಟದ ಡಬ್ಬ ಸೇವೆಗೆ ಆಶೀರ್ವದಿಸಿ
ನಮ್ಮ ಜೈನ್ ಇಡ್ಲಿ ಕೆಫೆ ಪ್ರಸ್ತುತ ಪಡಿಸುತ್ತಿರುವ ಮತ್ತೊಂದು ಅಂಬೆಗಾಲಿನ ಹೆಜ್ಜೆ. ಮನೆ ಬಾಗಿಲಿಗೆ ಊಟದ ಡಬ್ಬ ಸೇವೆ. ಸೋಡಾ ಪುಡಿಯನ್ನು ಹಾಕದೇ ಸಿದ್ದ ಪಡಿಸಿದ ಅನ್ನ. ಮನೆ ಪಾಕ. ಇದು ನಮ್ಮ ಕರ್ತವ್ಯ, ನಮ್ಮ ಧ್ಯೇಯ. ಡಿಸೆಂಬರ್: 05 ರಿಂದ ಪ್ರಾರಂಭ.
ನಿಯಮಗಳು.
ಲಿಮಿಟೆಡ್ ಡಬ್ಬ ಮಾತ್ರ..
ಮೊದಲು ಬಂದವರಿಗೆ ಆದ್ಯತೆ.
ನಿಮ್ಮ ಹೆಸರನ್ನು ದಿನಾಂಕ: 02.12.2019 ರೊಳಗೆ ನೊಂದಾಯಿಸಿಕೊಳ್ಳಿ.
ಹೆಸರು ನೊಂದಾಯಿಸುವಾಗ ರೂ: 1800/- ಮೊತ್ತದ ಚೆಕ್ಕನ್ನು ನೀಡಿ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
ಡಬ್ಬ ನಿಮ್ಮದು- ಊಟ ನಮ್ಮದು
ನಿಮ್ಮ ಮನೆ ಬಾಗಿಲಿಗೆ ಪ್ರತಿ ನಿತ್ಯ ಊಟದ ಡಬ್ಬ ಸೇವೆ. ಕೇವಲ 50 ಜನರಿಗೆ ಮಾತ್ರ. ಮೊದಲು ಬಂದವರಿಗೆ ಆಧ್ಯತೆ.
ಪ್ರಕೃತಿದತ್ತ ಆಹಾರಕ್ಕೆ ನಮ್ಮ ಮೊದಲ ಆಧ್ಯತೆ.
ನಿಮ್ಮ ಆರೋಗ್ಯವೆ ನಮ್ಮ ಭಾಗ್ಯ. ಆರೋಗ್ಯಯುತ ಆಹಾರ ಇದು ನಮ್ಮ ಗುರಿ.
ಅಸಿಡಿಟಿ, ಹೊಟ್ಟೆ ಉಬ್ಬರ, ಗ್ಯಾಸ್ ಟ್ರಬಲ್ ಮುಕ್ತ ಆಹಾರಕ್ಕಾಗಿ ನಿಮ್ಮ ಮನೆ ಹುಡುಗನ ಊಟದ ಡಬ್ಬವನ್ನೆ ಪಡೆದುಕೊಳ್ಳಿರಿ. ಹಣ ಯಾವತ್ತು ಗಳಿಸಬಹುದು. ಜನರನ್ನು ಕಷ್ಟಪಟ್ಟು ಗಳಿಸಬೇಕು. ಆದ್ರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ನಮ್ಮ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿ ನಮ್ಮದಲ್ವೆ.
ನಮ್ಮಿಂದೇನು?
ನಾವು ಪ್ರತಿನಿತ್ಯ ನೀವಿರುವ ಅಂದರೆ ನೀವು ಹೇಳಿದ ಸ್ಥಳಕ್ಕೆ ಊಟದ ಡಬ್ಬವನ್ನು ಪೊರೈಸುತ್ತೇವೆ. ಆದ್ರೆ ಊಟದ ಡಬ್ಬ ನಿಮ್ಮದಿರಬೇಕು.
ನಮ್ಮ ಊಟದ ವಿಶೇಷತೆಗಳು:
ನಾವೆ ಮನೆಯಲ್ಲಿ ಸಿದ್ದ ಪಡಿಸಿದ ಉಪ್ಪಿನ ಕಾಯಿ ಅಥವಾ ಚಟ್ನಿ
ಪಲ್ಯ
ಕೂರ್ಮ
ಚಪಾತಿ (2)
ಅನ್ನ
ಕುಚಲಕ್ಕಿ ಅನ್ನ ಬೇಕಾದವರಿಗೆ ಕುಚಲಕ್ಕಿ ಅನ್ನ
ಸಾಂಬರ್ ಅಥವಾ ರಸಂ
ಮಜ್ಜಿಗೆ ಅಥವಾ ಮೊಸರು
ಮಿರ್ಚಿ ಪ್ರೈ ಅಥವಾ ಹಪ್ಪಳ ಅಥವಾ ಸಂಡಿಗೆ ಇನ್ನಿತರೇ
ಸಮಯ ಸಂದರ್ಬ ನೋಡಿ ಇನ್ನೂ ಸ್ಪೇಷಲ್ ಐಟಂ
ವಿಪರೀತ ಬೇಸಿಗೆಗಾಲದಲ್ಲಿ ನಿಮ್ಮ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಕುಚಲಕ್ಕಿ ಗಂಜಿ ನೀರಿನ ಸೂಪ್. ಇದು ನಮ್ಮ ಸೇವೆ.
ಒಂದು ಊಟದ ಡಬ್ಬದ ದರ (ರೇಟ್): ಕೇವಲ ರೂ:60/- ಮಾತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂದೇಶ್.ಎಸ್.ಜೈನ್, ಪತ್ರಕರ್ತ, ಮೊ:9620595555,7349443043
ನೀವೆ ನಮ್ಮ ಜೈನ್ ಇಡ್ಲಿ ಕೆಫೆಯ ಪೋಷಕರು, ನೀವಿದ್ದರೆ ನಾವು, ನಿಮ್ಮಿಂದಲೆ ನಾವು, ನಿಮ್ಮ ಪ್ರೀತಿ ಪ್ರೋತ್ಸಾಹ ಶ್ರಮ ದುಡಿಮೆಗೆ ಸದಾ ಇರಲೆನ್ನುವುದೆ ನನ್ನಯ ಪ್ರಾರ್ಥನೆ.
ದುಡಿಮೆಯೆ ದೇವರೆಂದು ನಂಬಿದವರು ನಾವು- ಅದಕ್ಕೆ ಆಶೀರ್ವಾದ ನೀಡುತ್ತಿರುವವರು ನೀವು.
ನಿಮ್ಮವ
ಸಂದೇಶ್.ಎಸ್.ಜೈನ್
No comments:
Post a Comment