Tuesday, November 5, 2019

ರಾಜ್ಯಮಟ್ಟದಲ್ಲಿ ಗಮನ ಸೆಳೆದ ನಮ್ಮೂರ ಹೆಮ್ಮೆಯ ಚಿನ್ನದ ಕುವರ ನವನೀತ ಕಾಮತ್ 
ಅವನು ಚೋಟುದ್ದವಿರುವ ಬಾಲಕ. ನೋಡಲು ಮಿಂಚುಳ್ಳಿಯಂತೆ ಹೊಳೆಯುವ ಮುಖದ ಅಂದ ಚೆಂದದ ಮುದ್ದಾದ ಬಾಲಕ. ಪತ್ಲವಿದ್ದರೂ ಪಾದರಸದಂತಿರುವ ಕ್ರಿಯಾಶೀಲತೆ. ಅವನ ಬೆಳವಣಿಗೆ ಭವಿಷ್ಯದ ಉಜ್ವಲ ಬದುಕಿಗೆ ಸುಭದ್ರ ಅಡಿಪಾಯವಂತು ಸುಳ್ಳಲ್ಲ. ಶ್ರಮಸಾಧನೆಯ ಬಾಲಕನಿಗೆ ಶ್ರಮಕ್ಕೆ ತಕ್ಕ ಇಂಬು ದೊರೆಯುತ್ತಿರುವುದು ಅವನ ಪ್ರಾಮಾಣಿಕ ಮತ್ತು ಪರಿಶುದ್ದ ಶ್ರಮಕ್ಕೆ ದೊರೆತ ಅರ್ಹ ಜಯವೆಂದರೇ ಅತಿಶಯೋಕ್ತಿ ಎನಿಸದು.

ಉತ್ತಮ ಸಂಸ್ಕಾರ, ಸರಳ ನಡೆ, ಗುರು ಹಿರಿಯರ ಬಗ್ಗೆ ಅಪಾರವಾದ ಗೌರವವನ್ನಿಟ್ಟುಕೊಂಡಿರುವ ಆ ಬಾಲಕ ಬೇರೆ ಯಾರು ಅಲ್ಲ. ದಿನನಿತ್ಯ ಅನ್ನದಾಸೋಹವನ್ನು ಉಣಬಡಿಸುವ ಕಾಮತ್ ರಿಪ್ರೆಶಮೆಂಟ್ ಮಾಲಕ ನವೀನ್ ಕಾಮತ್ ಹಾಗೂ ನಿವೇದಿತಾ ಕಾಮತ್ ದಂಪತಿಗಳ ಮಾನಸಪುತ್ರ ನಮ್ಮ ಹೆಮ್ಮೆಯ ಕೀರ್ತಿವಂತ ನವನೀತ್ ಕಾಮತ್.

ಅಂದ ಹಾಗೆ ಭಾಷಣದಲ್ಲೂ ಪರಾಕ್ರಮವನ್ನು ಹೊಂದಿರುವ ಈತ ಚುಟುಕು ಹೇಳುವುದರಲ್ಲಿ ನಿಪುಣ. ಚರ್ಚೆಯಲ್ಲಿ ಕೇಳುವುದೆ ಬೇಡ. ಚೆಸ್ ಆಟದಲ್ಲಿ ಎದುರಾಳಿಯನ್ನು ಬೆವರಿಳಿಸುವ ಬುದ್ದಿವಂತ. ಇನ್ನೂ ಶಟಲ್ ಬ್ಯಾಡ್ಮಿಂಟನ್ ನಲ್ಲೂ ಅಂತೂ ಹೇಳುವುದೆ ಬೇಡ. ದೊಡ್ಡವರ ಜೊತೆನೂ ಏಕಾಂಗಿಯಾಗಿ ಆಡಿ ತನ್ನತ್ತ ಪಂದ್ಯಾವಳಿಯನ್ನು ತಿರುಗಿಸಿಕೊಂಡು ಎಲ್ಲರಿಂದಲೂ ಬೆನ್ನು ತಟ್ಟಿಸಿ, ಪ್ರೋತ್ಸಾಹವನ್ನು ಗಿಟ್ಟಿಸಿಕೊಂಡ ಈತ ನಿಜವಾಗಿಯೂ ದಾಂಡೇಲಿಗೆ ಹೆಮ್ಮೆ ಅಲ್ಲದೇ ಮತ್ತೇನು.

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಗಮನಾರ್ಹ ಸಾಧನೆಗೈದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ತನ್ನ ಅದ್ಬುತ ಪ್ರದರ್ಶನವನ್ನು ನೀಡಿ ಎಲ್ಲರಿಂದ ಭೇಷ್ ಎನಿಸಿಕೊಂಡಿರುವುದಲ್ಲದೇ ತೃತೀಯ ಸ್ಥಾನವನ್ನು ತನ್ನದಾಗಿಸಿ ನಮ್ಮೂರಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾನೆ.

ಇತ್ತೀಚೆಗೆ
udupi ಯಲ್ಲಿ ನಡೆದ 14 ವರ್ಷದೊಳಗಿನ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ  ನಗರದ ಜನತಾ ವಿದ್ಯಾಲಯ ಇ.ಎಮ್.ಎಸ್. ಶಾಲೆಯ ವಿದ್ಯಾರ್ಥಿಯಾದ ನನ್ನ ಮೆಚ್ಚಿನ ಮತ್ತು ನೆಚ್ಚಿನ ನವನೀತ ನವೀನ ಕಾಮತ ಈತನು ತೃತೀಯ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದು ಜಿಲ್ಲೆಗೆ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾನೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿದೆಡೆಯಿಂದ ಆಟಗಾರರು ಭಾಗವಹಿಸಿದ್ದರು. ನವನೀತ ಕಾಮತ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದನು. ಈತನಿಗೆ  ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರರಾಗಿರುವ ರೋಶನ್ಲಾಲ್ ಜೈನ್ ಅವರು ತರಬೇತಿ ನೀಡಿದ್ದರು. ಈ ಹಿಂದೆ ಅಮರ್ ಗುರವ ಹಾಗೂ ಶರಣಯ್ಯ ಹುಬ್ಬಳ್ಳಿಮಠ ಅವರ ಜೊತೆ ತರಬೇತಿ ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈತನ ಸಾಧನೆಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಹಾಗೂ ನಗರದ ಗಣ್ಯರನೇಕರು ಮತ್ತು ಶಾಲಾ ಮುಖ್ಯೋಪಾದ್ಯಾಯಿನಿ ಯೂಜಿನ್ ಡಿವಾಜ್, ಜೆವಿಡಿ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

ಪುಣ್ಯದೂರಿಗೆ ಪುಣ್ಯವಂತ ಮಗನನ್ನು ನೀಡಿದ ನವೀನ್ ಕಾಮತ್ ದಂಪತಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್. 


ಪರಾಕ್ರಮಿ ನವನೀತ್ ಕಾಮತ್ ಈತನಿಗೆ ಪ್ರೀತಿಯ, ಅಭಿಮಾನದ ಅಭಿವಂದನೆಗಳು.

ನಿಮ್ಮವ

ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...