Sunday, July 14, 2019

ತುಂಬು ಹೃದಯದ ಕೃತಜ್ಞತೆಗಳು.

ದಾಂಡೇಲಿ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಶನಿವಾರ ಸಂಜೆ ಅಂದರೆ ದಿನಾಂಕ: 13.07.2019 ರಂದು ಹಮ್ಮಿಕೊಂಡಿದ್ದ 'ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ' ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿರುವ ಸರ್ವರಿಗೂ ಅಭಿಮಾನಪೂರ್ವಕ ಕೃತಜ್ಞತೆಗಳು.

ನಮ್ಮ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವುದರ ಜೊತೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರಿಗೂ ನಮಿಸುವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಸಹಕಾರ ನಮ್ಮ ಈ ಪ್ರೆಸ್ ಕ್ಲಬಿಗೆ ಹಾಗೂ ದಾಂಡೇಲಿಯ ಸರ್ವ ಪತ್ರಕರ್ತ ಸಹೋದದರರಿಗೆ ಸದಾ ಇರಲೆನ್ನುವುದೇ ನನ್ನಯ ಪ್ರಾರ್ಥನೆ.

ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳಾವಕಾಶ ನೀಡಿ ಸಹಕರಿಸಿದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನವರಿಗೆ ಹೃದಯಪೂರ್ವಕ ಕೃತಜ್ಞತೆಗಳು. ನಮ್ಮ ಸಣ್ಣ ಸನ್ಮಾನವನ್ನು ಸ್ವೀಕರಿಸಿದ ಸನ್ಮಾನಿತರಿಗೆ ನನ್ನ ಕಡೆಯಿಂದ ಮಗದೊಮ್ಮೆ ಅಭಿನಂದನೆಗಳು. ನಮ್ಮನ್ನು ಯಾವತ್ತು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿರುವ ದಾಂಡೇಲಿಯ ಸಮಸ್ತ ಜನತೆಗೆ ಪ್ರೀತಿಯ ವಂದನೆಗಳು.

ನಮ್ಮ ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಂತೆ ನಮ್ಮ ಜೊತೆಗೂಡಿ ಕೆಲಸ ಮಾಡಿದ ನಮ್ಮ ಅಣ್ಣ-ತಮ್ಮಂದಿರರಿಗೆ ವಂದಿಸುವೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ನಮ್ಮ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ.ಬಿ.ಎನ್.ವಾಸರೆಯವರಿಗೆ ಹಾಗೂ ಸಂಘದ ಪದಾಧಿಕಾರಿಗಳಾದ ಶ್ರೀ.ಯು.ಎಸ್.ಪಾಟೀಲ್, ಶ್ರೀ. ಕೃಷ್ಣಾ ಪಾಟೀಲ, ಡಾ: ಬಿ.ಪಿ.ಮಹೇಂದ್ರಕುಮಾರ್, ಶ್ರೀ.ಗುರುಶಾಂತ ಜಡೆ ಹಿರೇಮಠ ಅವರುಗಳಿಗೆ ಹಾಗೂ ಸಹಕರಿಸಿದ ಪತ್ರಿಕಾ ವಿತರಕರುಗಳಾದ ಶ್ರೀ.ರಿಯಾಜ್ ಮತ್ತು ಶ್ರೀ.ಅಕ್ಷಯ್ ಅವರುಗಳಿಗೆ ದೊಡ್ಡ ನಮಸ್ಕಾರಗಳೊಂದಿಗೆ ಹಾರ್ದಿಕ ಕೃತಜ್ಞತೆಗಳು.

ಸರ್ವರ ಪ್ರೀತಿ, ಪ್ರೋತ್ಸಾಹ ನಮಗಿರಲಿ ಎಂಬ ಪ್ರಾರ್ಥನೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...