ಅಪ್ಪುಗೆಯ ಅಮ್ಮ ನಮ್ಮ ಶಾಲಿನಿಯಮ್ಮ
ಸ್ವಚ್ಚ ಹೃದಯವಂತೆಗೆ ಜನ್ಮದಿನದ ಸಂಭ್ರಮ
ಸ್ವಚ್ಚ ಹೃದಯವಂತೆಗೆ ಜನ್ಮದಿನದ ಸಂಭ್ರಮ
ಬಹಳ ಹೆಮ್ಮೆ ಮತ್ತು ಗೌರವಾಭಿಮಾನದಿಂದ ನನ್ನನ್ನು ಅಕ್ಕರೆಯಿಂದ ಪ್ರೀತಿಸುವ, ಅಪ್ಪುಗೆಯಿಂದ ಆಶೀರ್ವದಿಸುವ ಅಮ್ಮ ಶಾಲಿನಿ ಬೆಂಡೆಯವರ ಬಗ್ಗೆ ನಾಲ್ಕಕ್ಷರ ಬರೆಯಲು ಉಲ್ಲಾಸೀತನಾಗಿದ್ದೇನೆ.
ಇಂದವರಿಗೆ ಜನ್ಮದಿನದ ಸಂಭ್ರಮ. ಅವರ ಪಾದಕ್ಕೆ ಶಿರಬಾಗುವುದರ ಜೊತೆಗೆ ಹುಟ್ಟು ಹಬ್ಬಕ್ಕೆ ಅಕ್ಷರ ರೂಪದಲ್ಲಿ ಶುಭ ಕೋರಲು ಅಣಿಯಾಗಿದ್ದೇನೆ. ಅಮ್ಮ ನಿಮಗೆ ಶುಭಾಷಯಗಳು. ಆಯುರಾರೋಗ್ಯ ಹಾಗೂ ಸದಾ ಸಂತೃಪ್ತಿ, ನೆಮ್ಮದಿ ನಿಮ್ಮ ಆಸ್ತಿಯಾಗಲೆನ್ನುವ ಹರಕೆ ಹಾರೈಕೆ ನನ್ನದು.
ಶಾಲಿನಿಯಮ್ಮ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನವರು. ನಾರಾಯಣ ಗಂಗೋಡ್ಕರ್ ಮತ್ತು ದೈವಭಕ್ತೆ, ಧರ್ಮಕಾರ್ಯಗಳ ಮೂಲಕ ಜನಪ್ರೀತಿಗಳಿಸಿದ ಸುಶೀಲಾ ದಂಪತಿಗಳ ಮುದ್ದಿನ ರಾಜಕುಮಾರಿಯೆ ಈ ನಮ್ಮ ಶಾಲಿನಿಯಮ್ಮ. ಸುಸಂಸ್ಕೃತ ಕುಟುಂಬದಲ್ಲಿ ಜನ್ಮವೆತ್ತ ಶಾಲಿನಿಯವರದ್ದು ಕೃಷಿಕ ಮನೆತನ. ಹಾಲು ಮೊಸರಿಗೇನೂ ಕೊರತೆಯಿರಲಿಲ್ಲ. ಅಕ್ಕಿಯಿಂದ ಹಿಡಿದು ತರಕಾರಿಯವರೆಗೂ ಅವರ ಜಮೀನಿನಲ್ಲೆ ಬೆಳೆಸಲಾಗುತ್ತಿತ್ತು.
ಅಂಬೆಗಾಲಿಡಲು ಆರಂಭಿಸುತ್ತಿದ್ದ ಪುಟ್ಟ ಮಗು ಶಾಲಿನಿಯವರು ಎದ್ದು ಬಿದ್ದು ನಡೆಯಲು ಪ್ರಾರಂಭಿಸುವ ಹೊತ್ತಿನಲ್ಲೆ ಪ್ರತಿದಿನ ಅಮ್ಮನ ಜೊತೆ ಬೆಳ್ಳಂ ಬೆಳಗ್ಗೆ ರಂಗೋಲಿಯನ್ನು ಹಾಕುತ್ತಿದ್ದರಂತೆ, ಇದಾದ ಬಳಿಕ ಅಮ್ಮನ ಸಂಗಡ ಹಾಲು ಕರೆಯಲು ಹೆಲ್ಪರ್ ಆಗಿಯೂ ಪ್ರಾಣಿ ಪ್ರೀತಿಗೆ ಸಾಕ್ಷಿಯಾದವರು ನಮ್ಮ ಶಾಲಿನಿಯಮ್ಮ. ಒಟ್ಟಿನಲ್ಲಿ ಅತ್ಯಂತ ಚರುಕಿನ, ಚಂದನವನದ ಗೊಂಬೆಯಂತಿದ್ದ ಪುಟ್ಟ ಶಾಲಿನಿಯಮ್ಮ ಎಲ್ಲರ ನಲುಮೆ ಒಲುಮೆಗೆ ಪಾತ್ರರಾಗಿದ್ದು ಸುಳ್ಳಲ್ಲ.
ಇಂಥಹ ರೀತಿಯಲ್ಲಿ ಬೆಳೆದ ನಮ್ಮ ಶಾಲಿನಿಯಮ್ಮ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟೂರು ಖಾನಾಪುರದಲ್ಲೆ ಪಡೆದರು. ಹೈಸ್ಕೂಲೆ ಸಾಕೆಂದ ಶಾಲಿನಿಯಮ್ಮ ಅವರಮ್ಮನ ಒತ್ತಾಸೆಗೆ ಟೈಲರಿಂಗ್ ಕಲಿತರು. ಮನೆ ಕೆಲಸ ಮಾಡಿದ ಮೇಲೆ ಬಟ್ಟೆ ಹೊಲಿಯುವ ಕೆಲಸವನ್ನು ಶುರುವಚ್ಚಿಕೊಂಡವರು ನಮ್ಮ ಶಾಲಿನಿಯಮ್ಮ. ಹೀಗೆ ಬೆಳೆದ ಸುಂದರಿ ಶಾಲಿನಿಯಮ್ಮ ಹಳಿಯಾಳದ ಆದರ್ಶ ಮನೆತನದ ಕುಡಿ ಮೋಹನ ವಿಠ್ಠಲ ಬೆಂಡೆಯವರನ್ನು ವರಿಸಿಕೊಂಡರು.
ಅಂದ ಹಾಗೆ ಬ್ಯೂಟಿ ಶಾಲಿನಿಯಮ್ಮ ಬೆಂಡೆ ಕುಟುಂಬದ ಸುಸಂಸ್ಕೃತ ಸೊಸೆಯಾಗಿ ಎಲ್ಲರ ಅಕ್ಕರೆಗೆ ಪಾತ್ರರಾದರು. ಪತಿ ಮೋಹನ ಬೆಂಡೆಯವರದ್ದು ಮಾತು ಕಡಿಮೆ. ಆದರೆ ನಮ್ಮ ಶಾಲಿನಿಯಮ್ಮನವರದ್ದು ಮಾತು ಹೆಚ್ಚು. ಎಳೆಯ ಮಗುವಿನಿಂದ ಹಿಡಿದು ಎಲ್ಲರಲ್ಲಿಯೂ ಅತ್ಯಂತ ಗೌರವಯುತವಾಗಿ ಮಾತನಾಡುವವರು ಶಾಲಿನಿಯಮ್ಮ. ಬೆಂಡೆ ಮನೆತನದ ಹಿರಿಮೆ ಗರಿಮೆಯನ್ನು ಸುಭದ್ರವಾಗಿಸಿಕೊಂಡು ಮನೆತನವನ್ನು ಮುನ್ನಡೆಸಿದ ಧನ್ಯತೆ ಶಾಲಿನಿಯಮ್ಮವನರಿಗಿದೆ.
ಪತಿ ಮೋಹನ ಅವರು ಕಾಗದ ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದ ಕಾರಣ, ದಾಂಡೇಲಿಯಲ್ಲೆ ಕಾರ್ಖಾನೆಯ ಕ್ವಾಟ್ರಸಿನಲ್ಲಿ ಮನೆ ಮಾಡಿಕೊಂಡು ಭವಿಷ್ಯದ ಉನ್ನತಿಯೆಡೆಗೆ ಹಜ್ಜೆಯನ್ನೂರಿದರು. ನಮ್ಮ ಶಾಲಿನಿಯಮ್ಮನವರಿಗೆ ದಾಂಡೇಲಿಯ ಜಂಟ್ಲಮ್ಯಾನ್ ಸತೀಶ ಬೆಂಡೆಯವರು ಏಕೈಕ ಮಾನಸ ಪುತ್ರ ಹಾಗೂ ಸಂದ್ಯಾ, ಸುನೀತಾ ಮತ್ತು ಸಂಗೀತಾ ಎಂಬ ಮೂವರು ಮುದ್ದಿನ ಹೆಣ್ಮಕ್ಕಳು ಇದ್ದಾರೆ.
ಕರೆದು ಹೊಟ್ಟೆ ತುಂಬ ಊಟ ಹಾಕುವ ಅನ್ನಪೂರ್ಣೇಶ್ವರಿ ನಮ್ಮ ಶಾಲಿನಿಯಮ್ಮ. ಅವರ ಮನೆಗೆ ಯಾರೇ ಹೋಗಲಿ, ಬರಿಗೈಯಲ್ಲಿ ಕಳುಹಿಸುವ ಮನಸ್ಸು ಶಾಲಿನಿಯವರಿಗಿಲ್ಲ. ಹೊಟ್ಟೆ ತುಂಬ ತಿನ್ನಿಸಿ ಕಳುಹಿಸುವ ಉದಾತ್ತ ಗುಣಧರ್ಮವನ್ನು ಮೈಗೂಡಿಸಿಕೊಂಡವರು ನಮ್ಮ ಶಾಲಿನಿಯಮ್ಮನವರು.
ಅವರ ನಳಪಾಕಕ್ಕೆ ಎಂಥವರೂ ಕೂಡ ಶರಣಾಗಲೆಬೇಕು. ವೆರೈಟಿ ವೆರೈಟಿ ರುಚಿಕರವಾದ ಆಹಾರ ತಯಾರಿಸುವ ಅವರ ಕೈರುಚಿ ಮಾತ್ರ ಅದ್ಬುತ. ನಿಜಕ್ಕೂ ಅವರ ಸೊಸೆ ಸಂಜನಾ ಅವರು ಪುಣ್ಯವಂತರೆಂದು ಹೇಳಲೂ ಅಂಜಿಕೆಯಿಲ್ಲ.
ತನ್ನ ನಾಲ್ವರು ಮಕ್ಕಳಿಗೂ ಉನ್ನತ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿ, ಆದರ್ಶ ಪ್ರಜೆಗಳನ್ನಾಗಿಸಿದ ಶಾಲಿನಿಯವರ ವ್ಯಕ್ತಿತ್ವಕ್ಕೆ ಮತ್ತು ಅವರ ಮಾತೃ ಹೃದಯದ ಮನಸ್ಸಿಗೆ ಶಿರಬಾಗಲೆಬೇಕು. ಮದುವೆಯಾದಾಗಿನಿಂದ ಒಂದು ದಿನವೂ ಜಗಳವಾಡದೇ ಪತಿಗೆ ತಕ್ಕ ಮಡದಿಯಾಗಿ, ಮಕ್ಕಳಿಗೆ ಹೆಮ್ಮೆಯ ಅಮ್ಮನಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಶಾಲಿನಿಯವರ ಪರೋಪಕಾರಿ ನಡವಳಿಕೆ, ಅಹಂ ಇಲ್ಲವ ಶಾಂತ ಮನಸ್ಸಿನ ಮುಗ್ದತೆ ಮತ್ತು ಅವರ ಜೀವನ ನಡವಳಿಕೆ ಅನುಕರಣೀಯ ಹಾಗೂ ಅಭಿನಂದನೀಯ.
ಇತ್ತೀಚೆಗೆ ಅವರ ಪತಿಯವರು ಇಹಲೋಕವನ್ನು ತ್ಯಜಿಸಿದ್ದು, ಪತಿಯ ಅಗಲುವಿಕೆಯ ನೋವು ಇನ್ನೂ ಅವರ ಮನದಲ್ಲಿದೆ. ಆದರ್ಶ ದಂಪತಿಗಳಾಗಿ ಎಲ್ಲರಿಗೂ ಮಾದರಿಯಾಗಿ ಗಮನ ಸೆಳೆದವರು ಇದೇ ನಮ್ಮ ಶಾಲಿನಿಯಮ್ಮನವರು.
ಬಹುವರ್ಷಗಳ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿದ ಮುದ್ದಿನ ಮಗ ಸತೀಶ ಬೆಂಡೆಯವರನ್ನು ಇನ್ನೂ ಎಳೆಯ ಮಗುವಿನಂತೆ ಕಾಣುವ ಶಾಲಿನಿಯಮ್ಮನವರ ಮುಗ್ದ ಮನಸ್ಸೆ ನಮಗೆ ಅತೀ ಖುಷಿ ನೀಡುವುದು.
ಸದಾ ಒಳಿತನ್ನೆ ಬಯಸುವ ಮಾತೃಶ್ರೀ ಶಾಲಿನಿಯಮ್ಮನವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನೆರಳನ್ನೆ ಅನುಸರಿಸಿ, ಜೀವನದಲ್ಲಿ ಸಫಲತೆಯನ್ನು ಕಾಣುತ್ತಿರುವ ನಿಮ್ಮ ಕುಟುಂಬಸ್ಥರ ಪ್ರೀತಿ, ಪ್ರೋತ್ಸಾಹವೆ ನಿಮಗೆ ಬಹುದೊಡ್ಡ ಶಕ್ತಿ.
ತಮ್ಮ ಸೇವಾ ಗುಣಗಳು ನಮಗೆಲ್ಲಾ ಸ್ಪೂರ್ತಿದಾಯಕವಾಗಿದೆ, ಪ್ರೇರಣಾದಾಯಿಯಾಗಿದೆ. ನಿಮ್ಮ ಆಶೀರ್ವಾದ ಎನಗಿರಲೆಂದು ಪ್ರಾರ್ಥಿಸುವೆ,
ನಿಮ್ಮವ
ಸಂದೇಶ್.ಎಸ್.ಜೈನ್





No comments:
Post a Comment