ಅಭಿಮಾನದ ಅಭಿನಂದನೆಗಳು
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ಬ್ರದರ್ ರಾಹುಲ್ ಬಾವಾಜಿ ನೇಮಕ
ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾಗಿ ಬ್ರದರ್ ರಾಹುಲ್ ಬಾವಾಜಿ ನೇಮಕ
ಉತ್ತರಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರಾಗಿ ನಗರದ ಯುವ ನ್ಯಾಯವಾದಿ, Green ಅಂಬ್ರೆಲ್ಲಾ ಇಕೋ ಕ್ಲಬ್ ಅಧ್ಯಕ್ಷ ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ಹಾಗೂ ಪ್ರವಾಸೋದ್ಯಮಿ ರಾಹುಲ್ ಬಾವಾಜಿಯವರನ್ನು ನೇಮಕಗೊಳಿಸಲಾಗಿದೆ. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ರ ಸೆಕ್ಷನ್ 4(1) (ಬಿಬಿ) ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಅಪಜೀ 28 ಎಫ್ ಡಬ್ಲೂ ಎಲ್ 2019, ದಿನಾಂಕ: 18.07.2019 ಆಯಾ ಜಿಲ್ಲೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನಾಗಿ ರಾಹುಲ್ ಬಾವಾಜಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ನಗರದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರಾಹುಲ್ ಬಾವಾಜಿಯವರು ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ನಗರದ ಕಲಾಶ್ರೀ ಸಂಸ್ಥೆ, ರೋಟರಿ ಕ್ಲಬಿನ ಪದಾಧಿಕಾರಿಯಾಗಿ ಹಾಗೂ ಸಂಡೇ ಮಾರ್ಕೆಟ್ ವಾಣಿಜ್ಯ ಕಟ್ಟಡದ ಮಳಿಗೆದಾರರ ಸಂಘದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ರಾಹುಲ್ ಬಾವಾಜಿಯವರು ಗೌರವ ವನ್ಯಜೀವಿ ಪರಿಪಾಲಕರಾಗಿರುವುದಕ್ಕೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಚುರುಕಿನ ವ್ಯಕ್ತಿತ್ವದ ಜನಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ವನ್ಯಜೀವಿಗಳು ಹಾಗೂ ಪರಿಸರದ ಬಗ್ಗೆ ಅಪಾರ ಗೌರವ ಮತ್ತು ಕಾಳಜಿಯನ್ನಿಟ್ಟುಕೊಂಡಿರುವ ನಿಮಗೆ ದೊರೆತ ಅವಕಾಶವು ಜಿಲ್ಲೆಯ ವನ್ಯಜೀವಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ,
ನಿಮ್ಮವ
ಸಂದೇಶ್.ಎಸ್.ಜೈನ್




No comments:
Post a Comment