Thursday, July 18, 2019

ಜೆವಿಡಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರೋಶನ್ ನೇತ್ರಾವಳಿ
ದಾಂಡೇಲಿ: ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೆವಿಡಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಗರದ ಸಮಾಜ ಸೇವಕ, ಬಿಜೆಪಿಯ ಜಿಲ್ಲಾ ಕಾರ್ಮಿಕ ಪ್ರಕೋಷ್ಟದ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರೋಶನ್ ನೇತ್ರಾವಳಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀತಾ ಅಗರವಾಲ್ ಅವರು ಆಯ್ಕೆಯಾಗಿದ್ದಾರೆ.
 
ಇತ್ತೀಚೆಗೆ ನಡೆದ ಆಯ್ಕೆ ಸಭೆಯು ಜೆವಿಡಿ ಸಂಯುಕ್ತಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಪ್ರೌಢಶಾಲೆಯ ಮುಖ್ಯೋಪಾದ್ಯಯಿನಿ ಹಲೀಮಾ ಮಾಲ್ದಾರ್ ಅವರ ನೇತೃತ್ವದಲ್ಲಿ ಜರುಗಿತು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
 
ರೋಶನ್ ನೇತ್ರಾವಳಿಯವರ ಅಧ್ಯಕ್ಷತೆಯಲ್ಲಿ ಶಾಲೆಯು ಸಮಗ್ರ ಅಭಿವೃದ್ಧಿಯ ಕಡೆಗೆ ಶರವೇಗದ ಹೆಜ್ಜೆಯನ್ನು ಇಡುವಂತಾಗಲಿ. ದಾಂಡೇಲಿ ನಗರದ ಮುಕುಟಕ್ಕೆ ಕೀರ್ತಿಯ ಕಿರೀಟವನ್ನು ತರುವಂತಾಗಲೆನ್ನುವ ಶುಭ ಹಾರೈಕೆಯೊಂದಿಗೆ,

ನಿಮ್ಮವ
ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...