ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆಗೆ ಹಾದಿಯಾದಿತೆ?
ಕಾರ್ಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕೆಂಬ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ಅಂದಿನ ಯುಪಿಎ ಸರಕಾರವು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯನ್ನು ಜಾರಿಗೊಳಿಸಿದೆ.
ಇದರ ಉದ್ದೇಶವಿಷ್ಟೇ. ಸರಕಾರದ ಕಾರ್ಯಕ್ರಮಗಳು, ಯೋಜನೆಗಳು, ಕಾರ್ಯ ಚಟುವಟಿಕೆಗಳಲ್ಲಿ ಆಗುತ್ತಿರುವ ಭೃಷ್ಟಚಾರವನ್ನು ನಿಯಂತ್ರಿಸಿ ಸುಭದ್ರ ಮತ್ತು ಸ್ವಚ್ಚ ವ್ಯವಸ್ಥೆಯ ನಿರ್ಮಾಣವಾಗಬೇಕೆಂಬ ಸಂಕಲ್ಪ ಈ ಕಾಯ್ದೆಯದ್ದು ಎಂದರೆ ತಪ್ಪಿಲ್ಲ. ಸರಕಾರದ ಕಾರ್ಯಾಂಗ ವ್ಯವಸ್ಥೆಯಲ್ಲಿನ ಕಾರ್ಯಚಟುವಟಿಕೆಗಳ ಖರ್ಚು ವೆಚ್ಚಗಳ ಮಾಹಿತಿ ಪ್ರತಿಯೊಬ್ಬರಿಗೂ ತಿಳಿಯಬೇಕು. ಈ ರೀತಿಯಾದಾಗ ಭೃಷ್ಟಚಾರವನ್ನು ನಿಯಂತ್ರಿಸಲು ಸಾಧ್ಯ ಎಂಬುವುದನ್ನರಿತ ಅಂದಿನ ಸರಕಾರ ಈ ಕಾಯ್ದೆಯನ್ನು ಜಾರಿಗೊಳಿಸಿತು.
ಅಂದಿನ ಸರಕಾರದ ಈ ಕಾಯ್ದೆ ಪರಿಣಾಮಕಾರಿಯಾಗಿ ನಡೆಯುತ್ತಿದೆಯೇ ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ. ಸಮಾಜದಲ್ಲಿ ಪಾರದರ್ಶಕವಾಗಿ ನಿಸ್ವಾರ್ಥ ಮನಸ್ಸಿನಿಂದ ಸಮಾಜೋದ್ದಾರಕ ಚಟುವಟಿಕೆಯಲ್ಲಿ ಆಸಕ್ತರಾದವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದೇಯಾದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಿ ಬೆಳೆಯುತ್ತಿತ್ತು ಎಂಬುವುದನ್ನು ಒತ್ತಿ ಹೇಳಬಹುದಾಗಿದೆ. ಯಾರು ಪಾರದರ್ಶಕ ವ್ಯವಸ್ಥೆಯನ್ನು ಬಯಸುತ್ತಾರೋ ಅಂಥವರು ಮಾಹಿತಿ ಹಕ್ಕು ಕಾಯ್ದೆಯನ್ನು ಉಪಯೋಗಿಸದಿರುವುದು ವಿಷಾಧನೀಯ. ಒಂದು ವೇಳೆ ಅಂಥವರು ಇದನ್ನು ಉಪಯೋಗಿಸುತ್ತಿದ್ದರೇ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ, ತಪ್ಪಿ ತಸ್ಥರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸುತ್ತಿದ್ದರು ಮತ್ತು ಈ ಕಾಯ್ದೆಗೆ ನೈಜ ಗೌರವವನ್ನು ತಂದುಕೊಡುತ್ತಿದ್ದರು. ಆದರೆ ಇಲ್ಲಿ ಹಾಗಾಗುತ್ತಿಲ್ಲವಲ್ಲ.
ಆದರೆ ಈ ಕಾಯ್ದೆಯನ್ನು ಮೋಸದಾಟದಲ್ಲಿ ಹಣ ಮಾಡುವ ಲೂಟಿಕೋರ ಜನ ಸ್ವ ಉದ್ಯೊಗವಾಗಿ ಉಪಯೋಗಿಸುತ್ತಿದ್ದಾರೆಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿವೆ. ಅಪ್ರಾಮಾಣಿಕ ಜನ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಅಧಿಕಾರಿಗಳಲ್ಲಿ ನಡುಕವುಟ್ಟಿಸಿ ಅವರಿಂದ ಹಣ ಕೀಳುವ ಕೀಳು ಮಟ್ಟಕ್ಕೆ ಹೋಗುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ತಪ್ಪು ಮಾಡಿದ್ದರೇ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ತಕ್ಕ ಶಿಕ್ಷೆಯನ್ನು ಒದಗಿಸಲು ಮುಂದಾಗಬೇಕಾದ ಜನ ಅದೇ ಅಧಿಕಾರಿಗಳಿಂದ ಹಣ ಸುಲಿಗೆ ಮಾಡಿ ಮತ್ತಷ್ಟು ಭೃಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಾಂತಾಗಿದೆ. ಭೃಷ್ಟ ಅಧಿಕಾರಿ ಮಾಹಿತಿ ಹಕ್ಕು ಕಾಯ್ದೆ ಪ್ರಾರಂಭವಾದ ನಂತರ ಕೊಡುವವನ ಕೈಯಿಂದ ತನಗೆ ಮಾತ್ರವಲ್ಲದೇ ಮಾಹಿತಿ ಕೇಳುವವನಿಗೆ ಕೊಡಲು ಬೇಕಾದಷ್ಟು ಹಣ ಸುಲಿಗೆ ಮಾಡಲು ಪ್ರಾರಂಭಿಸಿದ್ದಾನೆ. ಈ ರೀತಿಯಾದರೆ ಸರಕಾರದ ಕಾರ್ಯಕ್ರಮ, ಯೋಜನೆ, ಕಾಮಗಾರಿ ಚಟುವಟಿಕೆಗಳ ಗುಣಮಟ್ಟ ಶಿವನೇ ಬಲ್ಲ ಎಂಬಂತಾಗಿದೆ.
ಹಾಗಾಗಿ ಸರಕಾರ ಇತ್ತ ಕಡೆ ಗಮನ ನೀಡಬೇಕಾಗಿದೆ: ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳುವ ವ್ಯಕ್ತಿ ಮಾಹಿತಿ ಪಡೆದ ನಂತರ ಅದರ ಬಗ್ಗೆ ಏನು ಮಾಡುತ್ತಾನೆ ಎಂಬುವುದನ್ನು ಗಮನಿಸುವ ಮತ್ತು ಅದನ್ನು ದುರ್ಬಳಕೆ ಮಾಡಿದ ಪಕ್ಷದಲ್ಲಿ ಅದಕ್ಕೆ ತಕ್ಕ ಶಾಸ್ತಿ ಮಾಡಬೇಕಾದ ವ್ಯವಸ್ಥೆಯನ್ನು ನಿರ್ಮರ್ಾಣ ಮಾಡಬೇಕಾಗಿದೆ. ಹಾಗಾದಲ್ಲಿ ಮಾತ್ರ ಮಾಹಿತಿ ಹಕ್ಕು ಕಾಯ್ದೆ ಸದ್ಬಳಕೆಯಾಗಬಹುದು.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment