Thursday, November 29, 2018

                              ಜನ್ಮದಿನದ ಸಂಭ್ರಮದಲ್ಲಿ ಸ್ಟೈಲಿಶ್ ಪರ್ಸನಾಲಿಟಿಯ ಹಿರೋ ಶೈಲೇಶ್
 
 



                                         ಜನ್ಮದಿನದ ಸಂಭ್ರಮದಲ್ಲಿ ಸ್ಟೈಲಿಶ್ ಪರ್ಸನಾಲಿಟಿಯ ಹಿರೋ ಶೈಲೇಶ್

                                                       ರಿಯಲಿ ಜಂಟ್ಲ್ ಮ್ಯಾನ್ ನಮ್ಮ ಶೈಲೇಶ ಬೆಂಡೆ

ಅವರು ಅವರಿಗಾಗಿ ಅವರಿಷ್ಟದಂತೆ ಬದುಕು ನಡೆಸುವವರು. ಹಾಗಾಂತ ಹೇಳಿ ಇನ್ನೊಬ್ಬರ ಕಷ್ಟಸುಖಗಳಿಗೆ ತಡವರಿಯದೇ ಸ್ಪಂದಿಸುವ ಹೃದಯವಂತ. ಆಳೆತ್ತರದ ಮನುಷ್ಯನಾದರೂ ಬಡತನದಲ್ಲಿ ತೀರ ಕೆಳಗಿದ್ದವರನ್ನು ಕೈ ನೀಡಿ ಹರಸಿ ಮೇಲೆಬ್ಬಿಸುವ ಗುಣವಂತ. ಎಚ್ಚುವಲ್ ನೋಡ್ಲಿಕ್ಕೆ ನಮ್ಮ ಹಿಂದಿ ಚಿತ್ರರಂಗದ ದ್ರುವತಾರೆ ಸಲ್ಮಾನ್ ಖಾನ್ ನಂತೆ ಸುರಸುಂದರ ವ್ಯಕ್ತಿತ್ವದ ಪರ್ಸನಾಲಿಟಿಯನ್ನು ಹೊಂದಿದ ನನ್ನ ಹೆಮ್ಮೆಯ ಅಣ್ಣನವರು. ಜೀವನದ ಮಹತ್ವದ ಕನಸನ್ನು ಇಟ್ಟುಕೊಂಡು ಇದೇ ವರ್ಷ ಕನಸನ್ನು ನನಸು ಮಾಡಿದ ಸ್ವಾಭಿಮಾನಿಯಾಗಿರುವ ನನ್ನ ಮನದಣ್ಣ ಶೈಲೇಶ ಬೆಂಡೆಯವರು.
ಇಂದವರಿಗೆ ಜನ್ಮದಿನದ ಸಂಭ್ರಮ. ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಮತ್ಸರವಿಲ್ಲದ ಮಾನವೀಯ ಸ್ಪಂದಕ ಶೈಲೇಶ ಬೆಂಡೆಯವರೆ ತಮಗೆ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನ ಇನ್ನಷ್ಟು ಉತ್ತುಂಗಕ್ಕೇರಲೆಂದು ಶುಭ ಹಾರೈಸಿ ನನಗನಿಸಿದ್ದನ್ನು ಬರೆಯಲು ಅಣಿಯಾಗಿದ್ದೇನೆ.

ಅಂದ ಹಾಗೆ ನಮ್ಮ ಶೈಲೇಶ ಬೆಂಡೆಯವರು ನನಗೆ ಪರಿಚಯವಾಗಿರುವುದು ನನ್ನನ್ನು ಅತೀಯಾಗಿ ಮುದ್ದಿಸುವ ಅವರ ಹತ್ತಿರದ ಸಂಬಂಧಿ ಸತೀಶ ಬೆಂಡೆಯವರ ಮೂಲಕ ಎಂಬುವುದನ್ನು ಹೇಳದೆ ಹೋದರೇ ಈ ಬರಹಕ್ಕೆ ಅರ್ಥವಿಲ್ಲ ಎಂಬ ಅಂಬೋಣ ನನ್ನದು. ನಮ್ಮ ಶೈಲೇಶ ಅವರು ದೂರದೂರಿನವರಲ್ಲ. ಇಲ್ಲೆ ಪಕ್ಕದ ಹಳಿಯಾಳ ತಾಲೂಕಿನವರು. ಅವರಪ್ಪ ಉದ್ಯೋಗವನ್ನರಸಿ ದಾಂಡೇಲಿಗೆ ಬಂದವರೇ ದಾಂಡೇಲಿಯ ಪರ್ಮನೆಂಟ್ ರಹವಾಸಿಯಾದರು.
ಪ್ರತಿಷ್ಟಿತ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯಾಗಿ ಕಳೆದ ಕೆಲ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಸರಳ ಸಜ್ಜನ ವ್ಯಕ್ತಿತ್ವದ ತ್ರಯಾಂಬಕ್ ಹಾಗೂ ಎಲ್ಲರಿಗೂ ದಿವ್ಯಪ್ರಭೆಯಂತಿರುವ ಪ್ರಭಾ ದಂತಿಗಳ ಮುದ್ದಿನ ಕುವರ ಈ ನಮ್ಮ ಶೈಲೇಶ ಅವರು. 

ಬೆಣ್ಣೆ ಬಣ್ಣ ಹೊಂದಿರುವ ನಮ್ಮ ಶೈಲೇಶ ಅವರಿಗೆ ರೂಪಾ, ವಿದ್ಯಾ, ಸೀಮಾ ಎಂಬ ಮೂವರು ಅಕ್ಕಂದಿರರು. ನಾನು ಯಾವಾಗ್ಲೂ ಹೇಳಿದ ಹಾಗೆ ಕಿರಿ ಮಗನಿಗೆ ಪ್ರೀತಿ ಜಾಸ್ತಿ ಎಂಬಂತೆ, ನಮ್ಮ ಶೈಲೇಶ ಅವರಿಗೆ ಅವರಪ್ಪ, ಅವರಮ್ಮ ಹೆಚ್ಚಿನ ಪ್ರೀತಿ ಕಾಳಜಿಯಾದರೇ, ಅಕ್ಕಂದಿರರ ವಿಶೇಷ ಪ್ರೀತಿ ಇನ್ನೂ ಅವರಿಗೆ ದೊರೆತ ಪ್ಲಸ್ ಪ್ರೀತಿ ಎನ್ನಲು ಯಾಕೆ ಹಿಂಜರಿಯಲಿ.
ಎಳೆಯ ಬಾಲಕನಿರುವಾಗ್ಲೆ ಗುಂಡು ಗುಂಡಾಗಿ, ದಪ್ಪನೆಯ ಹಾಗೂ ಬೆಳ್ಳಗೆಯ ಬೆಣ್ಣೆಯಂತಿದ್ದ ನಮ್ಮ ಶೈಲೇಶ ಅವರನ್ನು ಎತ್ತಿ ಮುದ್ದಾಡುವವರೇ ಜಾಸ್ತಿ. ಶೈಲೇಶ ಅವರು ಪುಟಾಣಿಯಾಗಿದ್ದ ಸಂದರ್ಭದಲ್ಲಿ ಶೈಲೇಶ ಅವರನ್ನು ನೋಡಲು ಪ್ರತಿ ಬಾನುವಾರ ಅವರ ಮನೆಗೆ ಅವರ ಸಂಬಂಧಿಕರು ಹಾಜರಾಗುತ್ತಿದ್ದರು. ಅಷ್ಟು ಚಂದ ಇದ್ದವರು ಈ ನಮ್ಮ ಶೈಲೇಶ ಅವರು.
ಶೈಲೇಶ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ದಾಂಡೇಲಿಯ ಜೆವಿಡಿಯಲ್ಲಿ ಪಡೆದರು. ಆನಂತರ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು, ಮುಂದೆ ಹಳಿಯಾಳದ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಉನ್ನತ ಅಂಕಗಳೊಂದಿಗೆ ಪಡೆದರು.

ವಿದ್ಯಾರ್ಥಿ ದೆಸೆಯಲ್ಲಿರುವಾಗ್ಲೆ ನಮ್ಮ ಶೈಲೇಶ ಅವರು ಆಟ-ಪಾಠ ಇವರೆಡರಲ್ಲೂ ಸದಾ ಮುಂದಿದ್ದರು. ಅತ್ಯುತ್ತಮ ವಾಲಿಬಾಲ್ ಆಟಗಾರರಾಗಿ ಸ್ಥಳೀಯವಾಗಿ ತನ್ನ ಆಟದ ವೈಖರಿಯಿಂದ ಗಮನ ಸೆಳೆದವರು ಇದೇ ನಮ್ಮ ಶೈಲೇಶ ಅವರು. ಹಲವಾರು ಪಂದ್ಯಾವಳಿಗಳಲ್ಲಿ ಬಾಗವಹಿಸಿ, ಪದಕವನ್ನು ಬಾಚಿಕೊಂಡು ಬಂದ ಹೆಮ್ಮೆ ಶೈಲೇಶ ಅವರಿಗಿದೆ.
ಓದಿನ ನಂತರ ಮುಂದೇನೂ ಎಂಬ ಚಿಂತೆ ನಮ್ಮ ಶೈಲೇಶ ಅವರಿಗೆ. ಶೈಲೇಶ ಅವರ ವ್ಯಕ್ತಿತ್ವ ಹಾಗೂ ಕ್ರಿಯಾಶೀಲತೆಯನ್ನು ಪರಿಗಣಿಸಿ ಅವರಿಗೆ ದೂರದ ಬೆಂಗಳೂರು, ಚೆನೈ, ಪುಣೆಯಲ್ಲಿ ಉದ್ಯೋಗದ ಅವಕಾಶ ಮನೆ ಬಾಗಿಲಿಗೆ ಬಂದಿತ್ತು. ಆದರೇನೂ ಇದ್ದೊಬ್ಬ ಮಗ ದೂರದೂರಿಗೆ ಹೋಗಿ ಯಾಕೆ ಕೆಲಸ ಮಾಡಲಿ, ಏನೇ ಆಗ್ಲಿ ನಮ್ಮ ಜೊತೆನೆ ಇದ್ದು ಬದುಕು ಕಟ್ಟಿಕೊ ಎಂಬ ಅಪ್ಪ, ಅಮ್ಮನ ಮನದಾಳದ ಬಯಕೆಗೆ ತಣ್ಣೀರೆರಚದೇ ದಾಂಡೇಲಿಯಲ್ಲೆ ಬದುಕು ಕಟ್ಟಲಾರಂಭಿಸಿದವರು ಈ ನಮ್ಮ ಶೈಲೇಶ ಅವರು. 

ಕಲಿಕೆಯ ನಂತರ ಪಾರ್ಮಸ್ಯುಟಿಕಲ್ ಇಂಡಸ್ಟ್ರೀಸ್ ಕಂಪೆನಯಲ್ಲಿ ಮಾರುಕಟ್ಟೆ ವಿಸ್ತರಣಾಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡು ಆರೇ ಆರು ತಿಂಗಳಲ್ಲಿ ತನ್ನ ಸಮರ್ಥ ಸಾಧನೆಯಿಂದಾಗಿ ಕಂಪೆನಿಯ ಎಂ.ಡಿಯ ಪ್ರೀತಿಗೆ ಪಾತ್ರರಾದವರು ನಮ್ಮ ಶೈಲೇಶ ಅವರು. ಹೀಗೆ ಬಹಳಷ್ಟು ವರ್ಷಗಳವರೆಗೆ ಕೆಲಸ ನಿರ್ವಹಿಸಿದ ಶೈಲೇಶ ಅವರು ಸಂಸಾರದ ಹಿತ ದೃಷ್ಟಿಯಿಂದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿ 9 ವರ್ಷಗಳವರೆಗೆ ಅನುಪಮ ಸೇವೆ ಸಲ್ಲಿಸಿ, ಕೊನೆಗೆ ಅಲ್ಲಿಯ ಕೆಲಸಕ್ಕೆ ರಾಜಿನಾಮೆ ನೀಡಿ, ತನಗಿಷ್ಟದ ಕೆಲಸವಾದ ಮತ್ತೇ ಫಾರ್ಮಾಸಿ ಕಂಪೆನಿಗೆ ಮಾರುಕಟ್ಟೆ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಲಾರಂಭಿಸಿದರು. ಇದರ ಜೊತೆ ಜೊತೆಯಲ್ಲೆ ಮಡದಿಯ ಸಹಕಾರದೊಂದಿಗೆ ಗಣೇಶ ನಗರದಲ್ಲಿರುವ ಡಾ: ಆರ್.ಕೆ.ಕುಲಕರ್ಣಿಯವರ ಆಸ್ಪತ್ರೆಗೆ ಹೊಂದಿಕೊಂಡ ಮೆಡಿಕಲದ ಅಂಗಡಿಯನ್ನು ನಡೆಸುತ್ತಾ ಬಂದಿದ್ದಾರೆ.

ಸಂವಹನ ಕಲೆಯನ್ನು ಕರಗತ ಮಾಡಿಕೊಂಡ ರೋಲ್ ಮಾಡೆಲ್ ನಮ್ಮ ಶೈಲೇಶ :
ಶೈಲೇಶ ಅವರು ಅತ್ಯುತ್ತಮ ಸಂವಹನ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಇದನ್ನು ಯಾರು ಕಲಿಸಿಲ್ಲ. ಅವರಾಗಿಯೆ ರೂಢಿಸಿಕೊಂಡವರು. ತಮ್ಮ ಅತ್ಯುತ್ತಮ ಸಂವಹನ ಕಲೆಯಿಂದಾಗಿಯೆ ಮಾರುಕಟ್ಟೆ ವ್ಯವಹಾರದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ, ಅವರು ದುಡಿಯುವ ಕಂಪೆನಿಯ ಪ್ರಗತಿಗೆ ಪ್ರಾಮಾಣಿಕ ಶ್ರಮಿಸುವುದರ ಮೂಲಕ ಎಲ್ಲರ ಒಲುಮೆ-ನಲುಮೆಗೆ ಪಾತ್ರರಾಗಿದ್ದಾರೆ.

ಸಮಾಜದಲ್ಲಿ ನಡೆಯುವ ಅನ್ಯಾಯ, ಅನಾಚಾರವನ್ನು ನಿರ್ದಯವಾಗಿ ವಿರೋಧಿಸುವ ಶೈಲೇಶ ಅವರು ಸ್ವಸ್ಥ ಸಮಾಜ ನಿರ್ಮಾಣದ ಕನಸನ್ನು ಕಂಡವರು. ಅನ್ಯಾಯಕ್ಕೊಳಗಾದವರಿಗೆ, ಸಂಕಷ್ಟದಲ್ಲಿದ್ದವರಿಗೆ ತಕ್ಷಣ ಸಹಾಯ ಮಾಡುವ ಗುಣಸ್ವಭಾವನ್ನು ಮೈಗೂಡಿಸಿಕೊಂಡ ನಮ್ಮ ಶೈಲೇಶ ಅವರು ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಸದಾ ಸ್ಪಂದಿಸುವುದರ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಜೀವನದಲ್ಲಿ ಹಲವಾರು ಕನಸುಗಳನ್ನು ಇಟ್ಟು ಮುಂದುವರಿದು ಕನಸುಗಳೆಲ್ಲವುಗಳನ್ನು ನನಸಾಗಿಸಿ, ನೆಮ್ಮದಿ, ಸಂತೃಪ್ತಿಯ ಜೀವನ ನಡೆಸುತ್ತಿರುವ ಶೈಲೇಶ ಅವರ ಜೀವನ ಸಾಧನೆಗೆ ಅವರಪ್ಪ, ಅವರಮ್ಮನ ಆಶೀರ್ವಾದ, ಅಕ್ಕಂದಿರರ ಮಾರ್ಗದರ್ಶನ, ಮುದ್ದಿನ ಹೆಂಡತಿ ಶಾಂಭಾವಿ ಯವರ ಮನದಾಳದ ಪ್ರೀತಿ, ಮಕ್ಕಳಾದ ವೈಷ್ಣವಿ ಹಾಗೂ ವರದನ ಅಕ್ಕರೆಯ ಅಭಿಮಾನದ ಪ್ರೀತಿ, ಕುಟುಂಬಸ್ಥರ, ಗೆಳೆಯರ ಸಹಕಾರವೂ ಪ್ರಮುಖ ಕಾರಣವಾಗಿದೆ.

ಮಗದೊಮ್ಮೆ ಜನ್ಮದಿನದ ಶುಭಾಶಯಗಳು ಲವ್ಲಿ ಬ್ರದರ್

ನಿಮ್ಮವ

ಸಂದೇಶ್.ಎಸ್.ಜೈನ್

 

1 comment:

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...