ದಾಂಡೇಲಿಯ ವೈಭವಕ್ಕೆ ಮತ್ತೊಂದು ಕಿರೀಟ-ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಸಿದ್ದಗೊಂಡ ನಮ್ಮ ಸಂತೋಷ್ ಹೋಟೆಲ್
ದಾಂಡೇಲಿಯ ವೈಭವಕ್ಕೆ ಮತ್ತೊಂದು ಕಿರೀಟ-ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಸಿದ್ದಗೊಂಡ ನಮ್ಮ ಸಂತೋಷ್ ಹೋಟೆಲ್
ದಾಂಡೇಲಿ ಅಂದರೆ ನೆನಪಿಗೆ ಬರುವುದು ವೆಸ್ಟ್ ಕೊಸ್ಟ್ ಪೇಪರ್ ಮಿಲ್, ಕಾಳಿ ನದಿ, ಹಚ್ಚ ಹಸಿರಿನ ಸಮೃದ್ದ ಕಾಡು ಇವುಗಳ ಜೊತೆಗೆ ವಿಶಾಲವಾದ ಹಾಗೂ ಸಸ್ಯಹಾರಿ ಹೋಟೆಲ್ ಸಂತೋಷ್ ಹೋಟೆಲ್ ಎನ್ನುವುದನ್ನು ಯಾರು ಮರೆಯುವಂತಿಲ್ಲ.
ಏಕಕಾಲದಲ್ಲಿ ನೂರಾರು ಜನರು ಕುಳಿತು ಊಟೋಪಚಾರಗಳನ್ನು ಸ್ವೀಕರಿಸುವ ವಿಶಾಲವಾದ ಹೋಟೆಲ್ ಸಂತೋಷ್ ಹೋಟೆಲ್ ಎಂಬುವುದರಲ್ಲಿ ಎರಡು ಮಾತಿಲ್ಲ. ಅದು ನನ್ನ ಹೃದಯದ ಅಣ್ಣ, ನನ್ನ ಕಣ್ಣೀರನ್ನು ಒರೆಸುವ ಮಮತಾಮಯಿ, ಮತ್ಸರವೆ ಇಲ್ಲದ ಗುಣವಂತರು ಹಾಗೂ ಪ್ರಬುದ್ದ ಕಲಾವಿದರು ಆಗಿರುವ ವಿಷ್ಣುಮೂರ್ತಿ ರಾವ್ ಅವರ ಮಾಲಕತ್ವದ ಸಂತೋಷ್ ಹೋಟೆಲ್ ಇದೀಗ ಹಲವಾರು ಬದಲಾವಣೆ ಹಾಗೂ ಹೊಸತನಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.
ಬಗೆ ಬಗೆಯ ತಿಂಡಿ-ತಿನಿಸುಗಳು, ದಕ್ಷಿಣ ಭಾರತ ಮತ್ತು ಉತ್ತರ ಭಾರತ ಶೈಲಿಯ ನವನವೀನ ಖಾಧ್ಯಗಳು ಒಂದೆಡೆಯಾದರೇ, ಹೋಟೆಲಿನ ಮೇಲ್ಬಾಗದಲ್ಲಿ ಸರಿ ಸುಮಾರು 25 ರಿಂದ 40 ಜನರಿಗೆ ಕುಳಿತು ಉಟೋಪಚಾರ ಸೇವಿಸಲು ಹವಾನಿಯಂತ್ರಿತ ವ್ಯವಸ್ಥೆಯನ್ನು ಮೊದಲ ಬಾರಿಗೆ ಅಳವಡಿಸಲಾಗಿದೆ. ಇದರ ಪಕ್ಕದಲ್ಲೆ ಹವಾ ನಿಯಂತ್ರಿತ ಸಂತೋಷ್ ಸಭಾಭವನ ವಿವಿಧ ಕಾರ್ಯಕ್ರಮಗಳಿಗಾಗಿ ಅಣಿಯಾಗಿ ನಿಂತಿದೆ. ಈ ಸಭಾಭವನದಲ್ಲಿ ಹುಟ್ಟುಹಬ್ಬದ ಪಾರ್ಟಿ, ವಿವಾಹ ವಾರ್ಷಿಕೋತ್ಸವದ ಪಾರ್ಟಿ, ಇನ್ನಿತರ ಸಭೆ, ಸಮಾರಂಭಗಳನ್ನು, ಕಾನ್ಪೆರೆನ್ಸ್ ಕಾರ್ಯಕ್ರಮಗಳನ್ನು ಮಾಡಬಹುದಾಗಿದೆ. ಸಂಗೀತ ಸಂಜೆಗಳಂತಹ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದೆ. ನಿಗದಿತ ಶುಲ್ಕದೊಂದಿಗೆ ಈ ಸಭಾಭವನವನ್ನು ಬಳಕೆ ಮಾಡುವ ಅವಕಾಶ ದಾಂಡೇಲಿಗರಿದ್ದು, ಇದರ ಲಾಭವನ್ನು ಪಡೆದುಕೊಳ್ಳಬಹುದು.
ಬೆಳೆಯುತ್ತಿರುವ ದಾಂಡೇಲಿಗೆ ಬೆಳೆದು ನಿಂತ ಹೋಟೆಲ್ ಸಂತೋಷ್:
ಪ್ರವಾಸೋದ್ಯಮ, ಕೈಗಾರಿಕೋದ್ಯಮದ ಮೂಲಕ ಅಗ್ರಣೀಯವಾಗಿ ಬೆಳೆಯುತ್ತಿರುವ ದಾಂಡೇಲಿಗೆ ಸಂತೋಷ್ ಹೋಟೆಲ್ ಬೆಳೆದು ನಿಂತಿದ್ದು, ಗ್ರಾಹಕರಿಗೆ ಸಂತೃಪ್ತಿಯ ಮತ್ತು ಗುಣಮಟ್ಟದ ಸೇವೆಯನ್ನು ನೀಡುವ ಮೊದಲ ಗುರಿಯೊಂದಿಗೆ ಎಲ್ಲರ ಪ್ರೀತಿ-ವಾತ್ಸಲ್ಯಕ್ಕೆ ಪಾತ್ರವಾಗಿದೆ.
ನಾವು ನಮ್ಮ ಮಕ್ಕಳ ಬರ್ತುಡೆ ಪಾರ್ಟಿ, ವಿವಾಹ ವಾರ್ಷಿಕೋತ್ಸವ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲೇಕೆ ಹೊರಗಡೆ ಹೋಗಬೇಕಾಲ್ವೆ. ಬನ್ನಿ ನಮ್ಮೆಲ್ಲರ ಅಚ್ಚು ಮೆಚ್ಚಿನ ಸಂತೋಷ್ ಹೋಟೆಲಿನ ಸಬಾಭನದಲ್ಲೆ ಕಾರ್ಯಕ್ರಮವನ್ನು ಮಾಡಿ ಸಂಭ್ರಮಿಸೋಣ.
ಸಂತೋಷಕ್ಕೆ ನಮಗೆಲ್ಲಾ ಬೇಕು ಹೋಟೆಲ್ ಸಂತೋಷ್ -Contact-cell: 9845848498, Ph: 08284-231613
ನಿಮ್ಮವ
ಸಂದೇಶ್.ಎಸ್.ಜೈನ್





No comments:
Post a Comment