ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ
ದಾಂಡೇಲಿ-581325
ದಾಂಡೇಲಿ-581325
ಮುಕ್ತ ಸಿಂಗಲ್ಸ್ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿ
ಸ್ಥಳ: ಒಳ ಕ್ರೀಡಾಂಗಣ, ಸುಭಾಸನಗರ, ದಾಂಡೇಲಿ
ದಿನಾಂಕ: 03.12.2018 ರಿಂದ ದಿನಾಂಕ: 05.12.2018 ರವರೆಗೆ
ಸಮಯ: ಪ್ರತಿದಿನ ಸಂಜೆ: 5.30 ಗಂಟೆಗೆ ಸರಿಯಾಗಿ
ಸ್ಥಳ: ಒಳ ಕ್ರೀಡಾಂಗಣ, ಸುಭಾಸನಗರ, ದಾಂಡೇಲಿ
ದಿನಾಂಕ: 03.12.2018 ರಿಂದ ದಿನಾಂಕ: 05.12.2018 ರವರೆಗೆ
ಸಮಯ: ಪ್ರತಿದಿನ ಸಂಜೆ: 5.30 ಗಂಟೆಗೆ ಸರಿಯಾಗಿ
ಆತ್ಮೀಯರೇ, ದಾಂಡೇಲಿಯಲ್ಲಿ ಮೊದಲ ಬಾರಿಗೆ ಬಾಲಕ -ಬಾಲಕಿಯರಿಗಾಗಿ ಮುಕ್ತ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಕ್ರೀಡಾಪ್ರತಿಭೆಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಮತ್ತವರ ಕ್ರೀಡಾ ಬೆಳವಣಿಗಾಗಿ ಹಾಗೂ ಕ್ರೀಡಾ ಪ್ರತಿಭೆಗಳನ್ನು ಸಮಾಜದ ಮುಖ್ಯಭೂಮಿಕೆಗೆ ತರಬೇಕೆಂಬ ಮಹತ್ವದ ಬಯಕೆಯೊಂದಿಗೆ ಹಮ್ಮಿಕೊಂಡಿರುವ ಪಂದ್ಯಾವಳಿ ಇದಾಗಿದೆ.
ಮಕ್ಕಳು ದೇಶದ ಆಸ್ತಿ. ಈ ಆಸ್ತಿಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಭವಿಷ್ಯದ ಸದೃಢ ಭಾರತ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನಕ್ಕೆ ಮುಂದಡಿಯಿಟ್ಟಿದ್ದೇವೆ. ನಮ್ಮ ಪ್ರಯತ್ನವನ್ನು ತಾವೆಲ್ಲರೂ ಬೆಂಬಲಿಸಿ, ಹರಸಿ ಆಶೀರ್ವದಿಸುವಿರೆಂದು ಬಲವಾಗಿ ನಂಬಿದ್ದೇವೆ.
ದಿನಾಂಕ: 03.12.2018 ರಿಂದ 05.12.2018 ರವರೆಗೆ ನಡೆಯುವ ಸಿಂಗಲ್ಸ್ ಲೀಗ್ ಪಂದ್ಯಾವಳಿಯು 4 ವಿಭಾಗಗಳಲ್ಲಿ ನಡೆಯಲಿದೆ. 12, 15, 17 ವರ್ಷ ವಯೋಮಿತಿಯ ಬಾಲಕರಿಗೆ ಮೂರು ವಿಭಾಗಗಳಲ್ಲಿ ಹಾಗೂ 15 ವರ್ಷ ವಯೋಮಿತಿಯ ಬಾಲಕಿಯರಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡಿ ಸದೃಢ ಕ್ರೀಡಾಪಟುಗಳನ್ನಾಗಿಸುವುದೇ ನಮ್ಮ ಸಂಕಲ್ಪ ನಮ್ಮದು-ಬೆಂಬಲ, ಪ್ರೋತ್ಸಾಹ ನಿಮ್ಮದು.
ಈ ಪಂದ್ಯಾವಳಿಯಲ್ಲಿ ಭಾಗವಹಿಸುವರಿಗೆ ಸೂಚನೆ:
ಪಂದ್ಯಾವಳಿಯಲ್ಲಿ ಭಾಗವಹಿಸುವವರು ಪ್ರವೇಶ ಶುಲ್ಕ ರೂ: 200/- ದೊಂದಿಗೆ ಈ ಕೆಳಕಂಡವರಲ್ಲಿ ಹೆಸರನ್ನು ನೊಂದಾಯಿಸತಕ್ಕದ್ದು. -ಶ್ರೀ.ನವೀನ್ ಕಾಮತ್, ಹೋಟೆಲ್ ಕಾಮತ್ ರಿಪ್ರೆಶಮೆಂಟ್, ದಾಂಡೇಲಿ, ಮೊ:9591618850, 9886838950, ಶ್ರೀ. ಅಮರ್ ಗುರವ, ಪಂದ್ಯಾವಳಿಯ ಸಂಘಟಕರು, ದಾಂಡೇಲಿ, ಮೊ: 7349679795, ಶ್ರೀ.ಶರಣಯ್ಯ ಹೆಬ್ಬಳ್ಳಿಮಠ, ಕ್ರೀಡಾ ತರಬೇತುದಾರರು, ದಾಂಡೇಲಿ, ಮೊ: 7975968438 ಇವರನ್ನು ಸಂಪರ್ಕಿಸಬೇಕಾಗಿ ವಿನಂತಿ. ಪ್ರವೇಶಾತಿಗೆ ದಿನಾಂಕ: 02.12.2018 ಕೊನೆಯ ದಿನವಾಗಿರುತ್ತದೆ. ಆನಂತರ ಯಾವುದೇ ಎಂಟ್ರಿ ಸ್ವೀಕರಿಸಲಾಗುವುದಿಲ್ಲ.
ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತಿದೆ. ಸಂಘಟಕರ ತೀರ್ಮಾನವೆ ಅಂತಿಮವಾಗಿರುತ್ತದೆ.
ವಿ.ಸೂ: ಪ್ರವೇಶಾತಿಗೆ ದಿನಾಂಕ: 02.12.2018 ಕೊನೆಯ ದಿನವಾಗಿರುತ್ತದೆ. ಆನಂತರ ಯಾವುದೇ ಎಂಟ್ರಿ ಸ್ವೀಕರಿಸಲಾಗುವುದಿಲ್ಲ.
ಪಂದ್ಯಾವಳಿಯ ಯಶಸ್ಸಿಗೆ ತಮ್ಮೆಲ್ಲರ ಸಹಕಾರವಿರಲಿ.
ಅಭಿಮಾನದಿಂದ ತಮ್ಮೆಲ್ಲರನ್ನು ಸ್ವಾಗತಿಸುವ
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ.
ಅಭಿಮಾನದಿಂದ ತಮ್ಮೆಲ್ಲರನ್ನು ಸ್ವಾಗತಿಸುವ
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ.

No comments:
Post a Comment