Friday, May 10, 2019

ಸಜ್ಜನ ಹಾಗೂ ವೆರಿ ಬ್ರಿಲಿಯಂಟ್ ಮ್ಯಾನ್ ಸಚ್ಚಿನ್ ಕಾಮತ್
ಜನ್ಮದಿನದ ಸಂಭ್ರಮದಲ್ಲಿ ನಮ್ಮೂರ ಸಾಧಕ
 
ಅವರದ್ದು ಶ್ರೀಮಂತ ಕುಟುಂಬ. ಸೊಕ್ಕಿಲ್ಲದ ಶಾಂತ ಸ್ವಭಾವದ ಜನರನ್ನೊಳಗೊಂಡ ಸಂಸಾರ. ಆ ಸಂಸಾರದ ನಡವಳಿಕೆ, ರೀತಿ ರಿವಾಜುಗಳೆ ಆ ಸಂಸಾರಕ್ಕೆ ಆನಂದಸಾಗರವಾಗಿದೆ. ವ್ಯಾಪಾರಸ್ಥರ ಕುಟುಂಬವಾದರೂ ಸಮಾಜದ ಬಗ್ಗೆ ವಿಶೇಷವಾದ ಕಾಳಜಿಯಿರುವ ಕುಟುಂಬವೆನ್ನಿ. ಇಂಥಹ ಕುಟುಂಬದಲ್ಲಿ ಜನ್ಮವೆತ್ತಿ ಬಂದ ಸಾಧನೆಯ ಸಾಧಕನಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂಭ್ರಮದಲ್ಲಿರುವ ಸಾಧಕ ಬೇರೆ ಯಾರು ಅಲ್ಲ. ದಾಂಡೇಲಿಯ ಮೆಚ್ಚಿನ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಚಾರ್ಟಡ್ ಅಕೌಂಟೆಂಟ್ ಸಚ್ಚಿನ್ ಕಾಮತ್ ಅವರು.

ಮೊದಲನೆಯದಾಗಿ ಜನ್ಮದಿನದ ಸಡಗರದಲ್ಲಿರುವ ಸಚ್ಚಿನ್ ಅವರಿಗೆ ಹಾರ್ದಿಕ ಶುಭಾಶಯಗಳು. ಪುಟ್ಟಿ ಪರ್ಬೋದ ಮೊಕ್ಯೆದಿಂಜಿ ಶುಭಾಶಯ. ಅಂದ ಹಾಗೆ ನಮ್ಮ ಸಚ್ಚಿನ್ ಕಾಮತ್ ಅವರು ದಾಂಡೇಲಿಯ ಸುಪ್ರಸಿದ್ದ ವರ್ತಕರಾಗಿರುವ ಹಳೆದಾಂಡೇಲಿಯ ವಿಷ್ಣು ಕಾಮತ್ ಹಾಗೂ ಭಾತೃತ್ವ ತುಂಬಿದ ಮಾತೃ ಹೃದಯದ ಶೀಲಾ ದಂಪತಿಗಳ ಮುದ್ದಿನ ಮಗ. ಸಚ್ಚಿನ ಅವರಿಗೆ ಅನಿತಾ ಎಂಬ ಅಕ್ಕ ಹಾಗೂ ನಿತಿನ್ ಎಂಬ ತಮ್ಮ ಅಕ್ಕರೆಯ ತಮ್ಮ ಇದ್ದಾರೆ.

ಪುಟ್ಟ ಬಾಲಕನಿರುವಾಗ್ಲೆ ತುಪ್ಪ, ಬೆಣ್ಣೆ ತಿಂದು ಗುಂಡಗೆ ಇದ್ದ ಸಚ್ಚಿನ್ ಅವರು ಅತ್ಯಂತ ಚುರುಕಿನ ಬಾಲಕನಾಗಿದ್ದದ್ದು ಸತ್ಯದ ಮಾತು ಕಣ್ರೀ. ನೋಡ್ಲಿಕ್ಕೂ ಸ್ವಲ್ಪ ಹೆಚ್ಚು ಸ್ಮಾರ್ಟ್ ಆಗಿದ್ದರಿಂದ ಪುಟ್ಟ ಬಾಲಕನನ್ನು ಎತ್ತಿ ಮುದ್ದಾಡಿಸುವವರೆ ಜಾಸ್ತಿಯಾಗಿದ್ದರು.

ನಮ್ಮ ಸಚ್ಚಿನ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದರು. ಅತೀ ಚುರುಕಿನ ಹಾಗೂ ಬುದ್ದಿವಂತ ಬಾಲಕರಾಗಿದ್ದ ಸಚ್ಚಿನ್ ಅವರು ತನ್ನ ಆರಂಭದ ಶಿಕ್ಷಣದಿಂದ ಕೊನೆಯವರೆಗೂ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡು ಸಾಧನೆಗೈದಿದ್ದಾರೆ. ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಮತ್ತು ಬಂಗೂರನಗರ ಪದವಿ ಕಾಲೇಜಿನಲ್ಲಿ ಬಿ.ಕಾಂ ಶಿಕ್ಷಣವನ್ನು ಅತ್ಯುನ್ನತ ಅಂಕಗಳೊಂದಿಗೆ ಪಡೆದು ದಾಂಡೇಲಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಡಿಗ್ರಿ ಬಳಿಕ ಚೆನೈಗೆ ತೆರಳಿದ ಸಚ್ಚಿನ್ ಕಾಮತ್ ಅವರು ಅಲ್ಲಿ ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಸಿ.ಎ ಪರೀಕ್ಷೆ ಬರೆದು ಅಲ್ಲಿಯೂ ನಿರೀಕ್ಷೆಗೂ ಮೀರಿ ಸಾಧನೆಗೈದು ಚಿಗುರು ಮೀಸೆಯ ಸುಂದರ ತರುಣ ಚಾರ್ಟಡ್ ಅಕೌಂಟೆಂಟ್ ಪದವಿಯೊಂದಿಗೆ ದಾಂಡೇಲಿಗೆ ಮರಳಿದರು.

ಶಿಕ್ಷಣದ ಬಳಿಕ ತನ್ನ ಅತ್ಯುನ್ನತ ಚಾರ್ಟಡ್ ಪದವಿಯಡಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ಇದೀಗ ರಾಷ್ಟ್ರದ ಪ್ರಮುಖ ಬ್ಯಾಂಕ್ ಗಳಾದ ಸಿಂಡಿಕೇಟ್, ಸ್ಟೇಟ್ ಬ್ಯಾಂಕ್ ಹೀಗೆ ವಿವಿಧ ಬ್ಯಾಂಕ್ ಗಳ ಚಾರ್ಟಡ್ ಅಕೌಂಟೆಂಟ್ ಆಗಿ ಗಮನಾರ್ಹ ಕಾರ್ಯವನ್ನು ಮಾಡಿ ಬ್ಯಾಂಕುಗಳ ಪುರೋ ಅಭಿವೃದ್ಧಿಗೆ ಹೆಗಲು ಕೊಡುತ್ತಿರುವುದು ಶ್ಲಾಘನೀಯ.

ರಾಜ್ಯಮಟ್ಟದಲ್ಲೆ ಅತ್ಯಂತ ಪರಿಣಿತ, ನಿಪುಣ ಚಾರ್ಟಡ್ ಅಕೌಂಟೆಂಟ್ ಆಗಿ ಗಮನ ಸೆಳೆದಿರುವ ಸಚ್ಚಿನ್ ಅವರು ವೃತ್ತಿ ಬದುಕಿನ ನಡುವೆ ಸಾಮಾಜಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ರಂಗಗಳಲ್ಲೂ ಅನುಪಮ ಸಾಧನೆಗೈದಿದ್ದಾರೆ. ಎಳೆಯ ಬಾಲನಿರುವಾಗ್ಲೆ ಅತ್ಯುತ್ತಮ ಸಿಂಗರ್ ಆಗಿ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದ ಸಚ್ಚಿನ್ ಅವರು ಪ್ರಬುದ್ದ ಗಾಯಕರಾಗಿ ನಮ್ಮ ಮುಂದಿರುವುದು ನಮಗೆಲ್ಲಾ ಹೆಮ್ಮೆ ಮತ್ತು ಅಭಿಮಾನದ ಸಂಗತಿ.

ಶಟ್ಲ್ ಹಾಗೂ ಇನ್ನಿತರ ಕ್ರೀಡೆಗಳಲ್ಲಿಯೂ ಅನನ್ಯ ಸಾಧನೆಗೈಯ್ದಿರುವ ಸಚ್ಚಿನ್ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಸಚ್ಚಿನ್ ಅವರನ್ನು ಹತ್ತಿರದಿಂದ ನೋಡಿದಾಗ ಅವರಿಗಿರುವ ಸಾಮಾಜಿಕ ಕಾಳಜಿ, ಬದ್ದತೆಯ ಅರಿವಾಗುತ್ತದೆ. ಅನೇಕ ಬಡವರಿಗೆ ಸಹಾಯ, ಸ್ಪಂದನೆ ಮಾಡುತ್ತಿರುವುದನ್ನು ಬಹಳ ಹತ್ತಿರದಿಂದ ನೋಡಿ ತಿಳಿದಿದ್ದೇನೆ.

ಅತ್ಯುನ್ನತ ಪದವಿಯ ಜೊತೆಗೆ ಗೌರವಯುತವಾದ ವೃತ್ತಿಯಲ್ಲಿರುವ ಸಚ್ಚಿನ್ ಅವರು ಎಂದು ಅಹಂನ್ನು ತೋರಿಸಿದವರಲ್ಲ. ಸರಳತೆಯೆ ಅವರ ಜೀವನ ಶೈಲಿ. ಎಲ್ಲರಲ್ಲಿಯೂ ನಗು ನಗುತಾ ಮಾತನಾಡುವ ಅವರದ್ದು ಸುಸಂಸ್ಕೃತ ನಡವಳಿಕೆಯೆ ಸರಿ. ಒಬ್ಬ ಚಾರ್ಟಡ್ ಅಕೌಂಟೆಂಟ್ ಇದ್ದರೂ ತನ್ನಪ್ಪನ ಅಂಗಡಿಯಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಮಾರಾಟಕ್ಕೂ ಇಳಿಯುವ ಅವರ ದೊಡ್ಡ ಮನಸ್ಸು ಮತ್ತು ದುಡಿಮೆಯೆ ದೇವರೆನ್ನುವ ಅವರ ವಿಚಾರಧಾರೆಗೆ ನಾನಂತು ಪಕ್ಕ ಮನಸೋತಿದ್ದೇನೆ.
¸ÀZÀºÀ
ದಾಂಡೇಲಿ ಹಾಗೂ ರಾಜ್ಯ ಮಟ್ಟದಲ್ಲೂ ವಿವಿಧ ಸಂಘ-ಸಂಸ್ಥೆಗಳಲ್ಲಿ ತನ್ನನ್ನುತಾನು ಗುರುತಿಸಿಕೊಂಡಿರುವ ಸಚ್ಚಿನ್ ಅವರ ಜೀವನಸಾಧನೆಗೆ ಅವರಪ್ಪ ಹಾಗೂ ಅವರಮ್ಮನ ಆಶೀರ್ವಾದ, ಅಕ್ಕ ಹಾಗೂ ತಮ್ಮನ ಪ್ರೀತಿಯ ಪ್ರೋತ್ಸಾಹ, ಮುದ್ದಿನ ಮಡದಿ ದಿ ಬೆಸ್ಟ್ ಸಿಂಗರ್ ಸಹನಾ ಕಾಮತ್ ಅವರ ಮನದುಂಬಿದ ಸಹಕಾರ, ಮಾನಸಪುತ್ರ ರೋಹನ್ ಅವರ ಪ್ರೀತಿ, ಬಂಧುಗಳ, ಗೆಳೆಯರ ಪ್ರೀತಿ, ಪ್ರೋತ್ಸಾಹವೆ ಪ್ರಮುಖ ಕಾರಣ.

ಡೈನಮಿಕ್ ವ್ಯಕ್ತಿತ್ವದ, ಸೂಪರ್ ಡೂಪರ್ ಪರ್ಸನಾಲಿಟಿಯ ಸಚ್ಚಿನ್ ಅವರಿಗೆ ಮಗದೊಮ್ಮೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಚ್ಚಿನ್ ಬಾವಾ ಐ ಲೈಕ್ ಯೂ.

ನಿಮ್ಮವ

ಸಂದೇಶ್.ಎಸ್.ಜೈನ್




 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...