ವಿಷನ್ ಇಟ್ಟುಕೊಂಡ ನಮ್ಮ ರೋಶನಜಿತರಿಗೆ ಬರ್ತುಡೆ ಸಂಭ್ರಮ
ಜನಮುಖಿ ವ್ಯಕ್ತಿತ್ವದ ರೋಶನ್ ಬಾಯ್
ಜನಮುಖಿ ವ್ಯಕ್ತಿತ್ವದ ರೋಶನ್ ಬಾಯ್
ಅವರು ಒಂದು ಕಡೆ ಸುಮ್ನೆ ಕೂರುವ ಜಾಯಮಾನದವರಂತೂ ಅಲ್ಲವೆ ಅಲ್ಲ. ಅಲ್ಲಿ-ಇಲ್ಲಿ ಎಂದು ಸದಾ ಸುತ್ತಾಡುತ್ತಲೆ ಜನಸಾಮಾನ್ಯರ ಕಷ್ಟಸುಖಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ಯುವ ನಾಯಕನೆಂದರೆ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಭರವಸೆಯ ಯುವ ನಾಯಕ ಅಂದ್ರುನೂ ತಪ್ಪಿಲ್ಲ. ರೋಷವಿದ್ದರೂ ವೈಯಕ್ತಿಕ ಸ್ವಾರ್ಥಕ್ಕಂತು ಅಲ್ಲವೆ ಅಲ್ಲ. ಅದು ಸಮಾಜದ ಉನ್ನತಿಗಾಗಿ ಎನ್ನುವುದು ದಿಟ. ಇಂತಹ ಸಮಾಜಮುಖಿ ಹಾಗೂ ಹಟಮಾರಿ ಧೋರಣೆಯ ಸರಳ ಮನಸ್ಸಿನ ಗಟ್ಟಿಗ ನನ್ನ ಇಂದಿನ ಮುಖಪುಟದ ಹಿರೋ. ಅಂದ ಹಾಗೆ ಅವರೇನು ಹೊರಗಿನವರಲ್ಲ. ಈ ಬಾರಿ ನಡೆದ ನಗರ ಸಭೆಸಯ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿ ವಾರ್ಡ್ ನಂ: 28 ರಲ್ಲಿ ಗೆಲುವಿನ ಮಾಲೆಯನ್ನು ಧರಿಸಿಕೊಂಡ ಛಲದಂಕಮಲ್ಲ ನಮ್ಮ ರೋಶನಜಿತ್ ಅವರು.
ಇಂದು ರೋಶನಜಿತ್ ಅವರಿಗೆ ಜನ್ಮದಿನದ ಸಂಭ್ರಮ. ಪ್ರಥಮವಾಗಿ ಪ್ರೀತಿಯ ರೋಶನಜಿತ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನೀವೆಲ್ಲ ಅಂದುಕೊಂಡಿರುತ್ತೀರಾ, ಈ ಸಂದೇಶ್ ಜೈನ್ ಇಡ್ಲಿ ಕೆಫೆ ಆದ ಬಳಿಕ ಇಡ್ಲಿಯಲ್ಲೆ ಬಿದ್ದಿರಬೇಕುಂತಾ. ಅದು ತಪ್ಪಲ್ಲ ಬಿಡಿ. ಬಹುತೇಕ ಮಟ್ಟಿಗೆ ಅದು ಹೌದೆ. ಆದರೂ ಆಗೊಮ್ಮೆ-ಈಗೊಮ್ಮೆ ಮುಖಪಟದಲ್ಲಿ ನಾಲ್ಕಕ್ಷರ ಬರೆಯದಿದ್ದರೇ ಹೇಗೆ ಅಲ್ವೆ.
ಅದೀರಲಿ, ನೇರ ವಿಷ್ಯಕ್ಕೆ ಬರ್ತೇನೆ. ಪಾದರಸದಂತೆ ಚಲಿಸುವ ನಮ್ಮ ರೋಶನಜಿತ್ ಅವರು ಒಂದು ಕಾಲದ ಫೇಮಸ್ ಕಾಂಟ್ರಕ್ಟರ್ ದಿ: ಶಿವದಾಸನ್ ಹಾಗೂ ಓಮಣಾ ಶಿವದಾಸನ್ ದಂಪತಿಗಳ ಹಿರಿಮಗ. ರೋಶನ್ ಅವರಿಗೆ ಇಬ್ಬರು ಸಹೋದರರು. ಒಬ್ಬ ತಮ್ಮ ರಂಜಿತ್. ಅವರು ಅಪಘಾತಕ್ಕೊಳಗಾಗಿ ಮೃತಪಟ್ಟು ಹಲವು ವರ್ಷಗಳು ಸಂದಿವೆ. ಕೊನೆಯ ತಮ್ಮ ರಾಬಿನ್. ಒಟ್ಟಿನಲ್ಲಿ ನೆಮ್ಮದಿ, ಸಂತೃಪ್ತಿಯ ಕುಟುಂಬದಲ್ಲಿ ಜನ್ಮವೆತ್ತವರು ಈ ನಮ್ಮ ರೋಶನ್ ಅವರು.
ಎಳೆಯ ಬಾಲಕಿನಿರುವಾಗ್ಲೆ ಹುಡುಗಾಟದ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದ ರೋಶನ್ ಅವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಪಡೆದು, ಮುಂದೆ ಬಂಗೂರನಗರ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಅದಾದ ಬಳಿಕ ಕಂಪ್ಯೂಟರ್ ಡಿಪ್ಲೋಮಾ ಕೋರ್ಸನ್ನು ಮಾಡಿದರು.
ಶಿಕ್ಷಣ ಮುಗಿದ ಬಳಿಕ ಅಲ್ಲಿ ಇಲ್ಲಿ ಎಂದು ಉದ್ಯೋಗಕ್ಕಾಗಿ ಹಪಹಪಿಸದೇ, ಸ್ವತಂತ್ರವಾಗಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಉದ್ದೇಶಿಸಿ ಬ್ಯುಜಿನೆಸ್ ಮಾಡಲಾರಂಭಿಸಿದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಾಡಿದ ವ್ಯವಹಾರ ಕಾಲಕ್ರಮೇಣ ಅವರನ್ನು ಕೈ ನೀಡಿ ಮುನ್ನಡೆಸಿತು.
ವ್ಯವಹಾರದ ಜೊತೆ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರೋಶನ್ ಅವರು ಅವರಿರುವ ಎಲ್ಲೆ ಜಾಗದಲ್ಲಿ ಅಪಘಾತಗಳಂತಹ ದುರ್ಘಟನೆ ನಡೆದರೇ ಹಿಂದು-ಮುಂದು ನೋಡದೆ ಗಾಯಳುಗಳನ್ನು ಆಸ್ಪತ್ರೆಗೆ ಸೇರಿಸಿ ಅವರ ಯೋಗಕ್ಷೇಮಕ್ಕಾಗಿ ಒದ್ದಾಡುವ ಅವರ ಮಾನವೀಯ ಮನಸ್ಸಿಗೆ ಇಲ್ಲಿಂದಲೆ ಶರಣೆನ್ನುವೆ.
ಎಲ್ಲಿ ಯಾರೇ ಸಂಕಷ್ಟದಲ್ಲಿ, ಅಪತ್ತಿನಲ್ಲಿ ಒಳಗಾಗಿರುವುದು ಗೊತ್ತಾದರೇ ಸಾಕು, ಅಲ್ಲಿ ರೋಶನ್ ಅವರ ಹಾಜರಾತಿ ನೂರಕ್ಕೆ ನೂರು ಇರಲೆಬೇಕು. ಒಟ್ಟಿನಲ್ಲಿ ತಾನು ಅಂದುಕೊಂಡಿರುವಂತೆ ನಡೆಯುವ ಧೀರ ಎಂದರೆ ಅತಿಶಯೋಕ್ತಿ ಎನಿಸದು. ಸಂಕಷ್ಟದ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆಗೂ ಕರೆದರೂ ಓಡೋಡಿ ಬರುವ ನಮ್ಮ ರೋಶನ್ ಅವರು ನಮ್ಮವರು ಎಂದು ಹೇಳಲು ಅಭಿಮಾನವಿದೆ, ಬಿಗುಮಾನವಿದೆ.
ಸಾಮಾಜಿಕ ಕೈಂಕರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ರೋಶನ್ ಅವರು ಈ ಬಾರಿ ನಡೆದ ನಗರ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಸರಮಾಲೆಯನ್ನು ಧಕ್ಕಿಸಿಕೊಂಡು ವಾರ್ಡ್ ನಂ:28 ರ ಮನೆಮಗನಂತೆ ಹೆಮ್ಮೆಯಿಂದ ಕೆಲಸ ಮಾಡುತ್ತಿರುವ ರೋಶನ್ ಅವರ ಕ್ರಿಯಾಶೀಲತೆಗೆ ಹ್ಯಾಟ್ಸ್ ಆಫ್ ಹೇಳಲೆಬೇಕು. ಅವರ ವಾರ್ಡಿನ ಪೌರಕಾರ್ಮಿಕರಿಗಂತೂ ದೇವರ ಪ್ರತಿರೂಪದಂತಿರುವ ರೋಶನ್ ಅವರ ಈ ಗುಣಧರ್ಮವೆ ಅವರ ವೈಯಕ್ತಿಕ ವರ್ಚಸ್ಸು ಬೆಳೆಯಲು ಪ್ರೇರಣಾದಾಯಿಯಾಗಿದೆ.
ಇಂಥಹ ಸಮಾಜಮುಖಿ, ಜನಮುಖಿ ವ್ಯಕ್ತಿತ್ವದ ರೋಶನ್ ಅವರಿಗೆ ಹೆತ್ತವರ ಆಶೀರ್ವಾದ, ಸಹೋದರ ರಾಬಿನ್ ಅವರ ಅಕ್ಕರೆಯ ಪ್ರೀತಿ ಹಾಗೂ ಪ್ರೀತಿಸಿ, ಮುದ್ದಿಸಿ ಕೈ ಹಿಡಿದ ಮಡದಿ ಅಕ್ಷತಾ ಅವರ ಸಹಕಾರ, ಪ್ರೋತ್ಸಾಹ, ಮಕ್ಕಳಾದ ಆರೋಹನ್ ಮತ್ತು ದ್ರುವ್ ಅವರುಗಳ ಮನದುಂಬಿದ ಪ್ರೀತಿ, ಗೆಳೆಯರ, ಬಂಧುಗಳ ಸಹಕಾರವೆ ಪ್ರಮುಖ ಆಸ್ತಿಯಾಗಿದೆ.
ಜೀವನದಲ್ಲಿ ಹಲವಾರು ಕನಸುಗಳನ್ನು ಇಟ್ಟು ಶರವೇಗದಲ್ಲಿ ಹೆಜ್ಜೆಯಿಟ್ಟಿರುವ ರೋಶನ್ ಅವರಿಗೆ ಮಗದೊಮ್ಮೆ ಜನ್ಮದಿನದ ಶುಭಾಶಯಗಳು.
ನಿಮ್ಮವ
ಸಂದೇಶ್.ಎಸ್.ಜೈನ್








No comments:
Post a Comment