Monday, May 6, 2019

ಜೀವದ ಗೆಳೆಯನ ಮಗನ ಸಾಧನೆಗೆ ಅಭಿಮಾನದ ಅಭಿನಂದನೆಗಳು
ಎಸ್.ಎಸ್.ಎಲ್.ಸಿಯಲ್ಲಿ ಸಾಧನೆಗೈದ ಲೊಕೇಶ.ಡಿ.ಹಳದನಕರ
ದಾಂಡೇಲಿ: ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಲೊಕೇಶ ದಿನೇಶ ಹಳದನಕರ ಈತನೂ 583 ಅಂಕಗಳೊಂದಿಗೆ ಶೇ:93.3 ಫಲಿತಾಂಶವನ್ನು ಪಡೆದು ಗಣನೀಯ ಸಾಧನೆಗೈದು ಗಮನ ಸೆಳೆದಿದ್ದಾನೆ.

ಈತನೂ ನನ್ನ ಜೀವದ ಗೆಳೆಯ ಹಾಗೂ ನಗರದ ಯುವ ಸಮಾಜ ಸೇವಕ ಹಾಗೂ ಉದ್ಯಮಿ ದಿನೇಶ ಹಳದನಕರ ಅವರ ಸುಪುತ್ರನಾಗಿದ್ದು, ಈತನ ಸಾಧನೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
 
ಶಿಸ್ತು ಬದ್ದ ಜೀವನ ನಡವಳಿಕೆ, ಸುಸಂಸ್ಕೃತ ಜೀವನ ಶೈಲಿ, ಸದ್ಗುಣ ಸಂಪನ್ನನಾದ ಲೋಕೇಶನ ಸಾಧನೆಗೆ ಮಗದೊಮ್ಮೆ ಮನದುಂಬಿದ ಶುಭಾಶಯಗಳು. ಉಜ್ವಲ ಭವಿಷ್ಯಕ್ಕೆ ಭಗವಂತನ ಕೃಪೆಯಿರಲಿ ಎಂಬ ಶುಭ ಪ್ರಾರ್ಥನೆಯೊಂದಿಗೆ,

ನಿಮ್ಮವ


ಸಂದೇಶ್.ಎಸ್.ಜೈನ್

 


No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...