Wednesday, November 28, 2018


ಪ್ರವಾಸೋಧ್ಯಮದ ಬಗ್ಗೆ ಅಧ್ಯಯನ ಪ್ರವಾಸ ಕೈಗೊಂಡ ದಾಂಡೇಲಿ ವೈಲ್ಡ್ ಲೈಪ್ ಸೊಸೈಟಿ ತಂಡ

ಪ್ರವಾಸೋಧ್ಯಮದ ಬಗ್ಗೆ ಅಧ್ಯಯನ ಪ್ರವಾಸ ಕೈಗೊಂಡ ದಾಂಡೇಲಿ ವೈಲ್ಡ್ ಲೈಪ್ ಸೊಸೈಟಿ ತಂಡ
ದಾಂಡೇಲಿ: ನಗರದ ಉತ್ಸಾಹಿ ಗೆಳೆಯರ ಬಳಗದವರು ರಚಿಸಿಕೊಂಡ ದಾಂಡೇಲಿ ವೈಲ್ಡ್ ಲೈಪ್ ಸೊಸೈಟಿ ತಂಡವು ಪ್ರತಿವರ್ಷ ಪ್ರವಾಸೋಧ್ಯಮದ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಅಂತೆಯೆ ಈ ವರ್ಷವೂ ಅಂಡಮಾನ್ ಮತ್ತು ನಿಕೋಬಾರಿಗೆ ಅಧ್ಯಯನ ಪ್ರವಾಶವನ್ನು ಬುಧವಾರ ಕೈಗೊಂಡಿತು.

ದಾಂಡೇಲಿ ವೈಲ್ಡ್ ಲೈಪ್ ಸೊಸೈಟಿಯ ಅಧ್ಯಕ್ಷ ರಾಜೇಶ ತಿವಾರಿ, ಕಾರ್ಯದರ್ಶಿ ರವಿಕುಮಾರ್ ನಾಯಕ, ಸಂಚಾಲಕ ಇಮಾಮ ಸರವರ ಅವರ ನೇತೃತ್ವದಲ್ಲಿ ಕೈಗೊಂಡ ಅಧ್ಯಯನ ಪ್ರವಾಸದಲ್ಲಿ ತಂಡದ ಸದಸ್ಯರುಗಳಾದ ಕೀರ್ತಿ ಗಾಂವಕರ, ಮೋಹನ ಹಲವಾಯಿ, ರಾಜೇಶ ಸರವರ, ಉದಯಕುಮಾರ್ ಶೆಟ್ಟಿ, ವಿಶ್ವನಾಥ.ಟಿ.ಶೆಟ್ಟಿ, ಉಸ್ಮಾನ್ ಅಬ್ದುಲ್ ಶೇಖ,ಬಾಪುಜಿ ಪೇಟೆ, ಸ್ಟ್ಯಾನ್ಲಿ ಫೆಡ್ರಿಕ್ ಮೊಬೆನ್, ಅರುಣಾದ್ರಿ ರಾವ್, ರಾಜೇಂದ್ರ ಪವಾರ್, ಸಂತೋಷ.ಎ.ಶೆಟ್ಟಿ, ಅರುಣ್ ಪೂಜಾರ್, ಮಾರುತಿ.ಬಿ.ವಿಠ್ಠಲಕರ, ಕೈಲಾಶ.ಬಿ.ಜೋಶಿ, ಪವನಕುಮಾರ್.ಪಿ.ಶರ್ಮಾ, ಅಜಯ್ ಜಾಸು, ವಿನಾಯಕ ನೇಕಾರ, ವೆಂಕಟೇಶ ಪಾಂಡೆ, ಹೀರಾಲಾಲ ಮೆರ್ವಾಡೆ, ಅನಿಲ್ ದಂಡಗಲ್, ಬರ್ನಾಡ್ ಬೈಲಾ, ಪ್ರಕಾಶ.ಎ.ಕರ್ಕಾಬಿ, ಎಸ್.ಎಂ.ಪಾಟೀಲ, ಗುರುರಾಜ.ಪಿ.ಆರ್, ಮಿಥುನ್ ನಾಯಕ, ಸಂತೋಷ್ ಶೆಟ್ಟಿ, ಬಿ.ಆರ್.ರವಿಕುಮಾರ್, ರಾಜೇಶ ವೆರ್ಣೇಕರ ಪ್ರವಾಸ ಕೈಗೊಂಡಿದ್ದಾರೆ.

ಪ್ರವಾಸ ಕೈಗೊಳ್ಳುವ ಮುಂಚೆ ಶ್ರೀ.ಕ್ಷೇತ್ರ ದಾಂಡೇಲಪ್ಪ ಸನ್ನಿಧಿಗೆ ಭೆಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರವಾಸಕ್ಕೆ ಚಾಲನೆ ನೀಡಲಾಯಿತು.

ಪ್ರವಾಸೋಧ್ಯಮದ ಬಗ್ಗೆ ಅಧ್ಯಯನ ಪ್ರವಾಸ ಕೈಗೊಂಡ ದಾಂಡೇಲಿ ವೈಲ್ಡ್ ಲೈಪ್ ಸೊಸೈಟಿ ತಂಡದ ಸದಸ್ಯರಿಗೆ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್.ವಾಸರೆ, ಕಾರ್ಯದರ್ಶಿ ಸಂದೇಶ್.ಎಸ್.ಜೈನ್, ಖಜಾಂಚಿ ಯು.ಎಸ್.ಪಾಟೀಲ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದರು.

1 comment:

  1. This journey is a once in a lifetime experience. I wish you all the very best for your travels and hope you come back safe and sound. Have a safe trip!

    ReplyDelete

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...