ಇಂದು ನನ್ನ 7ನೇ ವರ್ಷದ ವಿವಾಹ ವಾರ್ಷಿಕೋತ್ಸವ
ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟು 7 ವರ್ಷಗಳು ಸಂದಿವೆ. ಕಳೆದ 7 ವರ್ಷಗಳಿಂದಲೂ ನನ್ನನ್ನು ಪ್ರತಿಸಲ ಪ್ರತಿಕ್ಷಣ ಸಹಿಸಿಕೊಂಡು ಉದ್ದರಿಸಿ ಮುನ್ನಡೆಸುತ್ತಿರುವ ನನ್ನ ಜೀವನದ ಭಾಗ್ಯದ ಬೆಳಕಾದ ಕೈ ಹಿಡಿದ ಮಡದಿ ಪದ್ಮಶ್ರೀಗೆ ನಮ್ರ ಕೃತಜ್ಞತೆಗಳು. ನನ್ನ ಅಪ್ಪ, ಅಮ್ಮನಿಗೆ ಹ್ಮೆಮಯ ಸೊಸೆಯಾಗಿ, ಅತ್ತೆ ಮಾವನಿಗೆ ಪ್ರೀತಿಯ ಮಗಳಾಗಿ, ನನ್ನ ಹೃದಯವಾದ ಮಗ ಸುಯೋಗನಿಗೆ ಅಕ್ಕರೆಯ ಅಮ್ಮನಾಗಿ, ನನ್ನ ಸಂಸಾರದೊಡತಿಯಾಗಿರುವ ಪದ್ಮಶ್ರೀ ನಿನಗಿದೊ ಮಗದೊಮ್ಮೆ ಥ್ಯಾಂಕ್ಸ್. ನನ್ನನ್ನು ವರಿಸಿ, ನನ್ನನ್ನು ಸಹಿಸಿ ಸಲಹುತ್ತಿರುವ ಪದ್ಮಶ್ರೀ ನಿನ್ನ ಪ್ರಾಂಜಲ ಹೃದಯದ ಮನಸ್ಸಿಗೆ ನಾನು ಏನು ಹೇಳಿದರೂ ಕಡಿಮೆನೆ. ನನ್ನ ಸಾವಿರ ತಪ್ಪುಗಳನ್ನು ಮನ್ನಿಸಿ, ಮುನ್ನಡೆಸುವ ನಿನಗೆ ಇಂದು ನನ್ನಿಂದಾಗಿರುವ ತಪ್ಪುಗಳಿಗೆ ಸ್ವಾರಿ ಹೇಳುತ್ತೇನೆ.
ಐ ಲೈವ್ ಯೂ, ಪದ್ಮಶ್ರೀ, ಐ ಲವ್ ಯೂ
ಎಂದೆಂದೂ ನಿನ್ನವನೆ,
ಸಂದೇಶ್.ಎಸ್.ಜೈನ್


No comments:
Post a Comment