ಇದು ನಮ್ಮ ದಾಂಡೇಲಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ
ಖ್ಯಾತ ಮಕ್ಕಳ ತಜ್ಞ ಡಾ: ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ ತಜ್ಞ 19 ವೈದ್ಯರುಗಳಿಂದ ಆರೋಗ್ಯ ಸೇವೆ
ಜೂನ್:16 ರಂದು ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಖ್ಯಾತ ಮಕ್ಕಳ ತಜ್ಞ ಡಾ: ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ ತಜ್ಞ 19 ವೈದ್ಯರುಗಳಿಂದ ಆರೋಗ್ಯ ಸೇವೆ
ಜೂನ್:16 ರಂದು ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್, ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಕಳೆದ ವರ್ಷದಂತೆ ಈ ವರ್ಷವೂ ಜೂನ್ 16 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇದರ ಆಸ್ಪತ್ರೆಯಲ್ಲಿ 0 ದಿಂದ 12 ವಯಸ್ಸಿನ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆಯೆಂದು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಹೇಳಿದರು.
ಅವರು ಕಾಗದ ಕಾರ್ಖಾನೆಯ ಸ್ಪೋಟ್ಸ & ವೆಲ್ಪೇರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದ ದಿನವೆ ರಂಗನಾಥ ಅಡಿಟೋರಿಯಂನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಮಕ್ಕಳ ಹೆಸರನ್ನು ನೊಂದಯಿಸಬಹುದಾಗಿದೆ.
ಖ್ಯಾತ ಮಕ್ಕಳ ತಜ್ಞ ಡಾ: ರಾಜನ್ ದೇಶಪಾಂಡೆಯವರ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಜನರು ತಮ್ಮ ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬಹುದಾಗಿದೆ. ದಾಂಡೇಲಿ ನಗರ ಪ್ರದೇಶದ ಹೊರಗಿನ ಹಳ್ಳಿ ಜನರಿಗೆ ಅನುಕೂಲವಾಗಲೆಂದು 4 ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಚಹಾ ಮತ್ತು ತಿಂಡಿಯ ವ್ಯವಸ್ಥೆ ಇರುತ್ತದೆ. ವಿವಿಧ ತಜ್ಞ 19 ವೈದ್ಯರುಗಳು ಭಾಗವಹಿಸುತ್ತಿರುವ ಶಿಬಿರದ ಪ್ರಯೋಜನವನ್ನು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ರಾಜೇಶ ತಿವಾರಿ ತಿಳಿಸಿದ್ದಾರೆ.
ಶಿಬಿರದ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಡಾ: ಪ್ರದೀಪ ಜೋಶಿ, ಮೊ: 9916910444 ಮತ್ತು ರಾಜೇಶ ತಿವಾರಿ, ಮೊ: 9742257466 ಇವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಬನ್ನಿ, ನಮ್ಮ ಮಕ್ಕಳು ನಮ್ಮ ಸೌಭಾಗ್ಯ. ಮಕ್ಕಳ ಆರೋಗ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ. ಮನೆಬಾಗಿಲಿಗೆ ಬಂದ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವ ಪಾಲುದಾರರಾಗೋಣ ಬನ್ನಿ,
ನಿಮ್ಮವ
ಸಂದೇಶ್.ಎಸ್.ಜೈನ್



No comments:
Post a Comment