ಡಿ: 21 ರಂದು ಸಹೇಲಿ ಟ್ರಸ್ಟ್ ಅರ್ಪಿಸುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ
ನಾಳೆ ಅಂದ್ರೆ ಶನಿವಾರ ಕಣ್ರೀ.
ನಾಳೆ ಅಂದ್ರೆ ಶನಿವಾರ ಕಣ್ರೀ.
(ಸಹೇಲಿ ಟ್ರಸ್ಟ್ ಅರ್ಪಿಸುವಸಿರುವ ಕಳೆದ ವರ್ಷದ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಮೂಡಿಬಂದ ಮನಮೋಹಕ ನೃತ್ಯ ಕಾರ್ಯಕ್ರಮದ
ಒಂದು ನೋಟ)
ಜಬರ್ದಸ್ತ್ ಪ್ರೋಗ್ರೆಮ್. ಕುಂತ್ರೆ ಕಾರ್ಯಕ್ರಮ ಮುಗಿಯೊವರೆಗೆ ಏಳೊಕ್ಕೆ ಮನಸ್ಸಾಗಲ್ರಿಯಪ್ಪ ಅಂಥ ಸೂಪರ್ ಡೂಪರ್ ಕಾರ್ಯಕ್ರಮ.
ಸಹೇಲಿ ಸಹೋದರಿಯರ ಸಂಘಟನೆಗೊಂದು ಸಾಕ್ಷಿ-ಈ ಕಾರ್ಯಕ್ರಮ
ಸಹೇಲಿ ಸಹೋದರಿಯರ ಸಂಘಟನೆಗೊಂದು ಸಾಕ್ಷಿ-ಈ ಕಾರ್ಯಕ್ರಮ
ದಾಂಡೇಲಿ: ನಗರದ ಖ್ಯಾತ ಸಾಂಸ್ಕೃತಿಕ ಸಂಘಟನೆ ಹಾಗೂ ಮಹಿಳೆಯರೆ ಕೂಡಿರುವ ಸಹೇಲಿ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಯಶಸ್ವಿಯಾಗಿ ಹಮ್ಮಿಕೊಂಡಿರುವ ಸೂಪರ್ ಡ್ಯಾನ್ಸರ್ಸ್ & ಸಿಂಗರ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಡಿ:21 ರಂದು ಸಂಜೆ 6.30 ಗಂಟೆಗೆ ಸರಿಯಾಗಿ ಸ್ಥಳೀಯ ಬಂಗೂರನಗರ ರಂಗನಾಥ ಸಭಾಭವನದಲ್ಲಿ ಜರಗಲಿದೆ.
ಕಳೆದ ಒಂದು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ ಸೊಲೊ ಡ್ಯಾನ್ಸ್, ಗ್ರೂಪ್ ಡ್ಯಾನ್ಸ್ ಮತ್ತು ಸೊಲೊ ಸಿಂಗಿಂಗ್ ಸ್ಪರ್ಧೆಯನ್ನು ನಡೆಸಲಾಗಿ, ವಿವಿಧ ಸುತ್ತುಗಳ ಮೂಲಕ ಆಯ್ಕೆಯಾದ ಅಂತಿಮ ಸ್ಪರ್ಧಾಳುಗಳಿಗಾಗಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಲಿದ್ದಾರೆ. ಅತ್ಯುತ್ತಮವಾದ ಈ ಭಾಗದ ಕಲಾ ಪ್ರತಿಭೆಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಮ್ಮೂರ ಪ್ರತಿಭೆಗಳ ಪ್ರತಿಭೆಗಳಿಗೆ ಶುಭ ಹಾರೈಸಿ, ಪ್ರೋತ್ಸಾಹಿಸುವಂತೆ ಸಹೇಲಿ ಟ್ರಸ್ಟಿನ ಅಧ್ಯಕೆ ಮೀನಾಕ್ಷಿ ಕನ್ಯಾಡಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಿಸ್ ಮಾಡ್ಬೇಡ್ರಿ, ನೀವು ಬನ್ನಿ, ನಿಮ್ಮವರನ್ನು ಕರೆ ತನ್ನಿ, ಸಹೇಲಿ ಸಹೋದರಿಯರ ಸಮಾಜಮುಖಿ ಕಾರ್ಯಕ್ರಮ ಹಾಗೂ ಶ್ರಮಸಾಧನೆಯನ್ನು ಪ್ರೋತ್ಸಾಹಿಸೋಣ.
ನಿಮ್ಮವ
ಸಂದೇಶ್.ಎಸ್.ಜೈನ್
-

No comments:
Post a Comment