ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕು-ಕುಮಾರ್ ಕರಗಯ್ಯ
ದಾಂಡೇಲಿ : ಕ್ರೀಡಾ ಕ್ಷೇತ್ರದಲ್ಲಿ ಮಾಡುವ ಸಾಧನೆ ಭವಿಷ್ಯದ ಉನ್ನತಿಗೆ ಬಹುದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಪ್ರಾಧನ್ಯತೆ ನೀಡಬೇಕೆಂದು ನಗರದ ಹೆಸ್ಕಾಂ ಅಧಿಕಾರಿ ಹಾಗೂ ಖ್ಯಾತ ಕ್ರೀಡಾಪಟು ಕುಮಾರ್ ಕರಗಯ್ಯ ಹೇಳಿದರು.
ಅವರು ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಜೆವಿಡಿ ವಿದ್ಯಾಲಯದ ಆಟದ ಮೈದಾನದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉಪಯುಕ್ತವಾಗಿದೆ. ಮಕ್ಕಳ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಉಪಯುಕ್ತವಾಗಿದ್ದು, ಕ್ರೀಡೆಯಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂದು ಕುಮಾರ್ ಕರಗಯ್ಯ ಅವರು ಕರೆ ನೀಡಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಹಾಗೂ ಉದ್ಯಮಿ ಟಿ.ಎಸ್.ಬಾಲಮಣಿಯವರು ಶಿಕ್ಷಣೇತರ ಸಂಸ್ಥೆಯಾದರೂ ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯವರು ಈ ಕ್ರೀಡಗೆ ವಿಶೇಷ ಆಧ್ಯತೆಯನ್ನು ನೀಡಿ, ಜಿಲ್ಲೆಯ ಮಕ್ಕಳ ಕ್ರೀಡಾಸಕ್ತಿಗೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ. ಇಂತಹ ಕ್ರೀಡಾಕೂಟಗಳು ಮೇಲಿಂದ ಮೇಲೆ ನಡೆದು ನಮ್ಮೂರ ಕ್ರೀಡಾ ಪ್ರತಿಭೆಗಳು ಸಮಾಜದ ಉತ್ತುಂಗ ಶಿಖರಕ್ಕೇರುವಂತಾಗಲೆಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಸಂಸ್ಥೆಯ ಮುಖ್ಯಸ್ಥ ರಿಜ್ವಾನ್ ಬೆಂಡಗೇರಿಯವರು ಮಾತನಾಡಿ, ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕ್ರೀಡಾಕೂಟದ ಉಸ್ತುವಾರಿಯನ್ನು ನಿರ್ವಹಿಸಿದ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್ ಗುರವ ಅವರ ಕ್ರೀಡಾಕೂಟವನ್ನು ನಡೆಸಲು ಸ್ಥಳಾವಕಾಶ ನೀಡಿದ ಜೆವಿಡಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಇಟಗಿ ಹಾಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ, ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.
ವೇದಿಕೆಯಲ್ಲಿ ಉದ್ಯಮಿ ನವೀನ್ ಕಾಮತ್, ಸಮಾಜ ಸೇವಕ ವಿನೋದ ಬಾಂದೇಕರ, ರಾಜ್ಯ ನೌಕರರ ಸಂಘದ ದಾಂಡೇಲಿ ತಾಲೂಕಾಧ್ಯಕ್ಷ ಸುರೇಶ ನಾಯಕ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಕೂಟದಲ್ಲಿ ಹಳಿಯಾಳ, ದಾಂಡೇಲಿ, ಜೊಯಿಡಾ, ರಾಮನಗರ, ಗಣೇಶಗುಡಿ ಮೊದಲಾದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಭಾಗವಹಿಸಿದ್ದರು.
ನಿಮ್ಮವ
ಸಂದೇಶ್.ಎಸ್.ಜೈನ್
ಸಂದೇಶ್.ಎಸ್.ಜೈನ್

No comments:
Post a Comment