Friday, December 27, 2019

 'ಸೇವಾ' ಸಂಘಟನೆಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ದಾಂಡೇಲಿಯ ಬಿ.ಎಫ್.ರಾಥೋಡ ಆಯ್ಕೆ
ತಮಗಿದೊ ಹಾರ್ದಿಕ ಅಭಿನಂದನೆಗಳು.
ದಾಂಡೇಲಿ: ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿ ಹಾಗೂ ಸ್ಟೇಟ್ ಬ್ಯಾಂಕಿನ ಎಸ್.ಸಿ/ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘವಾದ ಸೇವಾ ಸಂಘಟನೆಯ ವಿಭಾಗೀಯ ಮಟ್ಟದ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಫ್.ರಾಥೋಡ ಅವರು ಇದೀಗ ಇದೇ ಸೇವಾ ಸಂಘಟನೆಯ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬ್ಯಾಂಕ್ ವೃತ್ತಿಯ ಜೊತೆಗೆ ಬ್ಯಾಂಕಿನ ಎಸ್.ಸಿ/ಎಸ್.ಟಿ ಸಿಬ್ಬಂದಿಗಳಿಗಾಗಿರುವ ಸೇವಾ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸಿಬ್ಬಂದಿಗಳು ಮತ್ತು ಬ್ಯಾಂಕಿನ ನಡುವೆ ಉತ್ತಮ ಸಂಬಂಧ ಏರ್ಪಡುವಂತಾಗಲೂ ಬಹುಮೂಲ್ಯ ಪಾತ್ರವನ್ನು ವಹಿಸುತ್ತಿದ್ದಾರೆ. ಸಂಘಟನೆಯ ಸದಸ್ಯರುಗಳ ಸಮಸ್ಯೆಗೆ ತ್ವರಿತಗತಿಯಲ್ಲಿ ಸ್ಪಂದಿಸುವುದರ ಮೂಲಕ ಸಂಘಟನೆಯನ್ನು ಬಲವರ್ಧನೆಗೊಳಿಸಲು ಬಿ.ಎಫ್ ರಾಥೋಡ ಅವರು ಅಹರ್ನಿಶಿ ಶ್ರಮಿಸಿರುವುದನ್ನು ಪರಿಗಣಿಸಿ, ಅವರ ಸೇವಾ ದಕ್ಷತೆ ಮತ್ತು ಸಂಘಟನೆ ಹಾಗೂ ನಾಯಕತ್ವವನ್ನು ಮೆಚ್ಚಿ ಸೇವಾ ಸಂಘವು ತನ್ನ ಕೇಂದ್ರಿಯ ಸಮಿತಿಯ ರಾಜ್ಯ ಉಪ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ವಿಶೇಷ ಗೌರವವನ್ನು ನೀಡಿದೆ.

ಸಂಘಟನೆಯ ಅಧ್ಯಕ್ಷ ಡಿ.ವಿಜಯರಾಜ, ಪ್ರಧಾನ ಕಾರ್ಯದರ್ಶಿ ಕೆ.ಎಲ್.ಚೌವ್ಹಾಣ್ ಹಾಗೂ ಹುಬ್ಬಳ್ಳಿ ವಲಯದ ರಾಘವೇಂದ್ರ ಅಷ್ಟೇಕರ ಹಾಗೂ ಸಂಘದ ವಿಭಾಗೀಯ ಸಮಿತಿಯ ಪದಾಧಿಕಾರಿಗಳು ಆಯ್ಕೆಗೆ ಸಹಕರಿಸಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಬಿ.ಎಫ್.ರಾಥೋಡ ಅವರು ಸೇವಾ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಂಘದ ಪುರೋ ಅಭಿವೃದ್ಧಿಗೆ ಶ್ರಮಿಸುವುದಾಗಿಯೂ ಮತ್ತು ತನ್ನ ಪ್ರತಿಯೊಂದು ಕಾರ್ಯಚಟುವಟಿಕೆಯನ್ನು ಬೆಂಬಲಿಸಿ, ಪ್ರೋತ್ಸಾಹ ನೀಡುತ್ತಿರುವ ದಾಂಡೇಲಿ ಎಸ್.ಬಿ.ಐ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ ಇಂಥಹ ಅವಕಾಶ ಪ್ರಾಪ್ತವಾಗಿದೆ ಎಂದು ಬಿ.ಎಫ್.ರಾಥೋಡ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನೂತನವಾಗಿ ಆಯ್ಕೆಯಾದ ಬಿ.ಎಫ್.ರಾಥೋಡ ಅವರನ್ನು ನಗರದ ಸ್ಟೇಟ್ ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗಣ್ಯರನೇಕರು ಅಭಿನಂದಿಸಿದ್ದಾರೆ.

ಉತ್ತಮ ಸಂಘಟಕರಾಗಿ, ಆತ್ಮೀಯ ನಡವಳಿಕೆಯ ಜೊತೆಗೆ ಸರಳ ವ್ಯಕ್ತಿತ್ವದ ನಿಮ್ಮ ಕ್ರಿಯಾಶೀಲತೆಗೆ ಮತ್ತು ನಾಯಕತ್ವವನ್ನು ಮೆಚ್ಚಿ ಈ ಅವಕಾಶ ದೊರೆತಿದೆ ಎಂದರೆ ಅತಿಶಯೋಕ್ತಿ ಎನಿಸದು. ನಿಮ್ಮ ಸಾಧನೆಗೆ ಮತ್ತು ನೂತನ ಜವಾಬ್ದಾರಿಗೆ ಶುಭವಾಗಲಿ. ನಿಮಗೆ ಇನ್ನಷ್ಟು ಸ್ಥಾನಮಾನಗಳು ನಿಮ್ಮನ್ನು ಅರಸಿ ಬರಲೆಂಬುವುದ ನನ್ನಯ ಪ್ರಾರ್ಥನೆ.

ನಿಮ್ಮವ
ಸಂದೇಶ್.ಎಸ್.ಜೈನ್

 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...