Friday, December 6, 2019

ಸಾಧನೆಯ ಛಲಗಾರ್ತಿ ನಾಗರೇಖಾ ಗಾಂವಕರಗೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ
ಅವರು ನಮ್ಮ ದಾಂಡೇಲಿಗೆ ಮಾತ್ರವಲ್ಲ ಇಡೀ ಜಿಲ್ಲೆಗೆ ಹೆಮ್ಮೆ. ಬಹುಷ: ಅವರ ಬೆಳವಣಿಗೆ ನೋಡಿದರೆ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಸ್ತಿಯಾಗಬಲ್ಲ ಶರವೇಗದ ಸಾದನೆಯ ಛಲಗಾರ್ತಿ ಎನ್ನಲು ಅಡ್ಡಿಯಿಲ್ಲ. ವೃತ್ತಿಯಲ್ಲಿ ಕಾಲೇಜು ಉಪನ್ಯಾಸಕಿಯಾಗಿದ್ದರೂ ವೃತ್ತಿ ಬದುಕಿನ ಜೊತೆಗೆ ಸಂಸಾರದ ಸಾರಥಿಯಾಗಿ ಮನೆ ನಿರ್ವಹಣೆಯ ಕೆಲಸವನ್ನು ಶೃದ್ದೆಯಿಂದ ಮಾಡಿ, ಸಂಸಾರದ ಪ್ರಗತಿಯ ದೀಪವಾಗಿದ್ದಾರೆ. ಅವರು ಬೇರೆ ಯಾರು ಅಲ್ಲ. ನಿರಂತರವಾದ ಶ್ರಮಸಾಧನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸದೃಢ ಹೆಜ್ಜೆಯೊಂದಿಗೆ ಮುನ್ನಡೆಯುತ್ತಿರುವ ಸುಸಂಸ್ಕೃತ ಅಕ್ಕ ನಮ್ಮ ನಾಗರೇಖಾ ಗಾಂವಕರ. 
 
ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಕೃತಿಗಳನ್ನು ಸಮರ್ಪಿಸುವುದರ ಮೂಲಕ ಕನ್ನಡಮ್ಮನ ಸೇವೆಯನ್ನು ಅತ್ಯಂತ ಶೃದ್ದಾಭಕ್ತಿಯಿಂದ ನಿರ್ವಹಿಸುತ್ತಿರುವ ನಾಗರೇಖಾ ಅವರು ಕವಯತ್ರಿಯಾಗಿ, ಅಂಕಣಕಾರರಾಗಿ, ಬರಹಗಾರರಾಗಿ ಗಮನ ಸೆಳೆಯುವುದರ ಜೊತೆಗೆ ಉತ್ತಮ ವಾಗ್ಮಿಯಾಗಿ ಚಿರಪರಿಚಿತರಾಗಿದ್ದಾರೆ.
 
ಈಗಾಗಲೆ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗಿರುವ ಪ್ರೀತಿಯ ಅಕ್ಕ ನಾಗರೇಖಾ ಗಾಂವಕರ ಅವರ ಮಡಿಲಿಗೆ ಬೆಳಗಾವಿಯ  ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿಯು ಅರಸಿ ಬಂದಿರುವುದು ನಮಗೆಲ್ಲಾ ಅತೀವ ಆನಂದ ತಂದಿದೆ. ಡಿಸೆಂಬರ 8 ರಂದು ಬೆಳಗಾವಿಯ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನಾಗರೇಖಾರವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 
 ಸರಳ, ಸಜ್ಜನಿಕೆಯ ಸುಯೋಗ್ಯ ಸುಸಂಸ್ಕೃತಿಯ ಅಕ್ಕ ನಾಗರೇಖಾ ಗಾಂವಕರ ಅವರ ಶ್ರಮಸಾಧನೆಗೆ ಅನಂತಕೋಟಿ ವಂದನೆಗಳು ಮತ್ತು ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿಮಾನಪೂರ್ವಕ ಅಭಿವಂದನೆಗಳು. ಇವರ ಸಾಧನೆಗೆ ಕಲ್ಪವೃಕ್ಷದಂತಿರುವ ಅವರ ಪತಿ ಪ್ರವೀಣ ನಾಯಕರಿಗೂ ಒಂದು ಸೆಲ್ಯೂಟ್.

ನಿಮ್ಮ ತಮ್ಮ
ಸಂದೇಶ್.ಎಸ್.ಜೈನ್
 
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...