Tuesday, December 24, 2019

ಡಿ: 25 ರಂದು ನಮ್ಮ ಹೆಮ್ಮೆಯ ಕಲಾವಿದರುಗಳು ಅರ್ಪಿಸುವ ಮನಮೋಹಕ ಯಕ್ಷಗಾನ

ಕಾರ್ತೀವೀರ್ಯಾರ್ಜುನ ಉಚಿತ ಯಕ್ಷಗಾನ ಪ್ರದರ್ಶನ
ಕರಾವಳಿಯ ಗಂಡುಕಲೆಯನ್ನು ಉಳಿಸಿ, ಬೆಳೆಸೋಣ, ಕಲಾವಿದರುಗಳ ಕಲಾಸೇವೆಗೆ ಪ್ರೋತ್ಸಾಹಿಸೋಣ
 
ಸ್ಥಳ: ವಿದ್ಯಾಧಿರಾಜ ಸಭಾಭವನ, ದಾಂಡೇಲಿ
 ದಿನಾಂಕ : 25.12.2019, ಸಮಯ : ಸಂಜೆ-5.00 ಗಂಟೆಗೆ ಸರಿಯಾಗಿ ಪ್ರಾರಂಭ.

ಜಲ್ದಿ ಬಂದು ನಿಮ್ಮ ಆಸನವನ್ನು ಕಾಯ್ದಿರಿಸಿಕೊಳ್ಳಿ
ನಮ್ಮೂರ ಕಲೆಯ ಸಂರಕ್ಷಕರು ನಾವಾಗೋಣ
ಯಕ್ಷಗಾನಂ ಗೆಲ್ಗೆ

ದಾಂಡೇಲಿ : ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಯೋಗದೊಂದಿಗೆ ಜೊಯಿಡಾ ತಾಲೂಕಿನ ಗುಂದದ ಸಪ್ತಸ್ವರ ಸೇವಾ ಸಂಸ್ಥೆ, ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಆಶ್ರಯದಲ್ಲಿ ನಗರದ ವಿದ್ಯಾಧಿರಾಜ ಸಭಾಭವನದಲ್ಲಿ ಕಲಾಶ್ರೀ ಹಾಗೂ ಸಪ್ತಸ್ವರ ಸೇವಾ ಸಂಸ್ಥೆಯ ಹಾಗೂ ಇತರೇ ಹವ್ಯಾಸಿ ಕಲಾವಿದರುಗಳಿಂದ ಉಚಿತವಾಗಿ ಕಾರ್ತೀವೀರ್ಯಾರ್ಜುನ ಯಕ್ಷಗಾನ ಪ್ರದರ್ಶನವು ದಿನಾಂಕ: 25.12.2019 ರಂದು ಸಂಜೆ 5.00 ಗಂಟೆಗೆ ಸರಿಯಾಗಿ ಪ್ರಾರಂಭವಾಗಲಿದೆ.

ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೀಮಂತ್ ರಾಜ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಸಂದ್ಯಾ ದೇಸಾಯಿ, ವಕೀಲ ಸೋಮಕುಮಾರ್, ಕಲಾಶ್ರೀ ಸಂಸ್ಥೆಯ ಸುರೇಶ ಕಾಮತ್, ಗಣೇಶ ಹೆಬ್ಬಾರ್, ಸುದರ್ಶನ ಹೆಗಡೆ ಮತ್ತು ಪ್ರವಾಸೋದ್ಯಮಿ ಆರ್.ಎನ್.ಹೆಗಡೆ ಗುಂದ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಭಾಗವತರಾಗಿ ಖ್ಯಾತ ಯಕ್ಷಗಾನ ಕಲಾವಿದ ವಿಷ್ಣುಮೂರ್ತಿ.ವಿ.ರಾವ್, ಮದ್ದಾಳೆ ಯಲಾಪುರ ಗಣಪತಿ ಹೆಗಡೆ, ಚೆಂಡೆ ಹಳವಳ್ಳಿಯ ಗಣೇಶ ಹೆಗಡೆಯವರು ಹಿಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮುಮ್ಮೇಳನದಲ್ಲಿ ಮಯ್ಯೂರಿ ಉಪಾಧ್ಯಾಯ, ದಾಂಡೇಲಿಯ ಉಷಾ ಹೆಬ್ಬಾರ್, ಗಡಗಿಹೊಳೆಯ ಸುಮಾ ಹೆಗಡೆ, ಹಳಿಯಾಳದ ನಾಗರತ್ನಾ ದೇವಾಡಿಗ, ಗುಂದದ ಅರ್ಚನಾ ಹೆಗಡೆ ಹಾಗೂ ಸಹ ಕಲಾವಿದರುಗಳ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಕಲಾವಿದರುಗಳನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ನಮ್ಮ ನಾಡ ಕಲೆ, ಕರಾವಳಿಯ ಹಿರಿಮೆ-ಗರಿಮೆಯನ್ನು ವಿಶ್ವವಿಖ್ಯಾತಿಗೊಳಿಸಿದ ಮಹೋನ್ನತ ಸಾಂಸ್ಕೃತಿಕ ಮತ್ತು ಸನ್ನಡತೆಯ ಕಲೆಯಾದ ಯಕ್ಷಗಾನವನ್ನು ಉಳಿಸುವ ಬಹುದೊಡ್ಡ ಸತ್ಕಾರ್ಯದಲ್ಲಿ ನಾವು ಭಾಗವಹಿಸುವುದರ ಮೂಲಕ ಪಾಲುದಾರರಾಗೋಣ.

ಯಕ್ಷಗಾನವನ್ನು ಹಮ್ಮಿಕೊಂಡಿರುವ ಕನ್ನಡ ಸಂಸ್ಕೃತಿ ಇಲಾಖೆಗೂ, ಕೈ ಜೋಡಿಸಿದ ಸಪ್ತಸ್ವರ ಸಂಸ್ಥೆಗೂ ಮತ್ತು ಕಲಾಶ್ರೀ ಸಂಸ್ಥೆಗೂ ತುಂಬು ಹೃದಯದ ಕೃತಜ್ಞತೆಗಳು.

ಮಾತೆರ್ಲಾ ಬಲೆ, ಆಟಗೂ, ನಮ್ಮೂರ್ದ ಕಲಾವಿದರೆನ ಪೊರ್ಲಕಂಠುದ ತೆಲಿಕೆ-ನಲಿಕೆದ ಆಟನೊರ ತೂಕ . ಮಾತೆರ್ಲಾ ಬೇಗ ಬಲೆ. ನಿಕ್ಲೇಗಾದು ಕಾತೊಂದು ಉಲ್ಲೇರು ನಮ್ಮ ಮೊಕೆದ ಕಲಾವಿದರು. ಮಾತೆರ್ಲಾ, ಬಲೆ, ಬರ್ರ ಮರಪ್ಪಡೆ, ಬರಾಂದೆ ನಿರಾಶೆ ಆವೋಡ್ಚಿ, ನಿಕುಲು ಬರ್ಪಾರು ಪನ್ಪಿ ನಂಬಿಕೆ ಎಂಕ್ಲೆಗೂ ಉಂಡು.

ನನರೊ, ಪಿರೊರಾ ಮಾತೆರೆಗ್ಲಾ ಉಡಲುದಿಂಜಿ ಸೊಲ್ಮೆಲು.

ನಿಮ್ಮವ
ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...