Wednesday, December 25, 2019

ಉದಯಿಸುತ್ತಿರುವ ರಾಜಕೀಯ ದ್ರುವನಕ್ಷತ್ರ- ಶ್ರೀನಿವಾಸ ಘೋಟ್ನೇಕರ
ಅಹಂ ಇಲ್ಲದ ಆಪತ್ಪಾಂದವ ಶ್ರೀನಿವಾಸ ಘೋಟ್ನೇಕರವರಿಗೆ ಜನ್ಮದಿನದ ಸಂಭ್ರಮ

ಅವರು ಮನಸ್ಸು ಮಾಡಿರುತ್ತಿದ್ದರೇ ಹಳಿಯಾಳ ಬಿಟ್ಟು ಬೆಂಗಳೂರು ಅಥವಾ ಮಲ್ಟಿಸಿಟಿಯಲ್ಲಿ ನೆಲಸಬಹುದಿತ್ತು. ಅದಕ್ಕೆ ಅವರಪ್ಪನೂ ಹೂ: ಅನ್ನುತ್ತಿದ್ದರು ಬಿಡಿ. ಬೆಂಗಳೂರು, ಡೆಲ್ಲಿಯಂತಹ ನಗರಗಳಲ್ಲಿ ಬಹುದೊಡ್ಡ ಬ್ಯುಸಿನೆಸ್ ಮಾಡಬೇಕೆಂಬ ಹಂಬಲವಿದ್ದರೂ, ಹುಟ್ಟೂರು ಹಳಿಯಾಳ ಬಿಡಲಾರೆ, ಸಾಧಿಸಿದರೇ ಹಳಿಯಾಳದಲ್ಲೆ ಇದ್ದು ಸಾಧಿಸುವೆ ಎಂದು ಪ್ರತಿಜ್ಞೆ ಮಾಡಿ, ಯಶಸ್ವಿಯಾದ ನಗುಮೊಗದ ಕನಸುಗಣ್ಣಿನ ಯುವಕ ನಮ್ಮ ನಿಮ್ಮೆಲ್ಲರ ಮೆಚ್ಚಿನ ಹಾಗೂ ನೆಚ್ಚಿನ ಶ್ರೀನಿವಾಸ ಘೋಟ್ನೇಕರ ಅವರು ಎಂದು ಹೇಳಲು ಅಭಿಮಾನವೆನಿಸುತ್ತದೆ.

ನಾನ್ಯಾಕೆ ಅವರ ಬಗ್ಗೆ ಬರೆಯುತ್ತಿದ್ದೇನೆಂದು ಅಂದ್ಕೋಂಡ್ರಾ. ಹಾಂ: ಅದಕ್ಕೂ ಕಾರಣವುಂಟು. ಇಂದವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮ, ಸಡಗರಕ್ಕೆ ನನ್ನದೊಂದು ಪದಗಳ ರೂಪದ ಶುಭಾಶಯ ಕೊರಲು ಅಣಿಯಾಗಿದ್ದೇನೆ. ಒಂದು ಮಾತು ಹೇಳಬೇಕೆಂದರೇ, ನಾನು ಯಾರು ಅಂತಲೆ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೂ ಪೇಸ್ ಬುಕ್ ಪ್ರೆಂಡ್ ಅಂತು ಸತ್ಯ. ಅದು ಹೇಗೆ ಆಗಿದ್ದಾರೆ ಎನ್ನುವುದು ನನಗೂ ತಿಳಿಯಲಾಗದು. ಈಗ ಅದ್ಯಾಕೆ ಅಲ್ವೆ.

ಒಂದಂತು ನಿಜ. ನಾನ್ಯಾವತ್ತು ಅವರಲ್ಲಿ ಮಾತನಾಡಿದವನಲ್ಲ. ಆದರೂ ಈ ಮನುಷ್ಯನ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ನಾನು ತಿಳ್ಕೊಂಡಿರುವುದನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ.

ಅಂದ ಹಾಗೆ, ಶ್ರೀನಿವಾಸ ಘೋಟ್ನೇಕರ ಅವರ ಪರಿಚಯ ಮಾಡುವ ಅಗತ್ಯವಿಲ್ಲ. ಆದರೆ ಪರಿಚಯ ಮಾಡದಿದ್ದರೇ ಮುಂದೆ ಹೋಗಲು ಸಾಧ್ಯವಿಲ್ಲರಿ. ಅದಕ್ಕೆ ಶುರುವಚ್ಚಿಕೊಂಡಿದ್ದೇನೆ.  ಹಳಿಯಾಳದ ನೇರಮಾತಿನ ಒಡೆಯರು, ವಿಧಾನ ಪರಿಷತ್ತಿನ ಸದಸ್ಯರು, ಕೆಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎಲ್.ಘೋಟ್ನೇಕರ ಅವರ ಮಾನಸಪುತ್ರ ಈ ನಮ್ಮ ಶ್ರೀನಣ್ಣ ಅರ್ಥತ್ ಶ್ರೀನಿವಾಸ ಅವರು ಅನ್ರಿ.
ತನ್ನ ಪ್ರಾಥಮಿಕ, ಮಾದ್ಯಮಿಕ ಶಿಕ್ಷಣವನ್ನು ಹಳಿಯಾಳದಲ್ಲೆ ಪಡೆದ ಶ್ರೀನಿವಾಸ ಅವರು ಮುಂದೆ ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ಇದ್ದೊಬ್ಬ ಮಗನಿಗೆ ಕೇಳಿದ್ದನ್ನು ಕೊಡುವ ಅಪ್ಪ, ಗಿಣಿಯಂತೆ ಸಾಕುತ್ತಿದ್ದ ಸುಸಂಸ್ಕೃತ ಮನಸ್ಸಿನ ಅಮ್ಮನ ಅಪ್ಪುಗೆ, ಸಹೋದರಿಯರ ಪ್ರೋತ್ಸಾಹ ಶ್ರೀನಿವಾಸ ಘೋಟ್ನೇಕರ ಅವರ ಬೆಳವಣಿಗೆಗೆ ಶ್ರೀರಕ್ಷೆಯಾಯಿತೆಂದು ಹೇಳಲು ಅಡ್ಡಿಯಿಲ್ಲ. ಎಳೆಯ ಬಾಲಕನಿರುವಾಗ್ಲೆ ತುಂಟಾಟದ ಬಾಲಕನಾಗಿ, ಕೆಂಪು ಹಾಗೂ ಬಿಳಿ ಮುಖದ ಸ್ಮಾರ್ಟ್ ಪರ್ಸನಾಲಿಟಿಯ ಈ ಬಾಲಕ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು. ಬಾಲಕನಿರುವಾಗ್ಲೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಶ್ರೀನಿವಾಸ ಅವರು ಎಳೆಯ ಪ್ರಾಯದಲ್ಲೆ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಶ್ವತ ಫಲಕಗಳಿಗೆ ಮುತ್ತಿಟ್ಟುಕೊಂಡು ಬಾಚಿಕೊಂಡವರು. ಅಪ್ಪ ರಾಜಕೀಯ ಆಟದಲ್ಲಿ ಮೇಲುಗೈ ಸಾಧಿಸಿದರೇ, ಇತ್ತ ಮಗ ಕ್ರೀಡಾ ಕ್ಷೇತ್ರದಲ್ಲಿ ಭವಿಷ್ಯದ ಆಸ್ತಿಯಾಗುವ ಎಲ್ಲ ಲಕ್ಷಣಗಳನ್ನು ತೋರಿದ್ದರು. ಹೀಗೆ ಬೆಳೆದ ಶ್ರೀನಿವಾಸ ಅವರಿಗೆ ಸಂಬಂಧಿಕರಿಗಿಂತ ಹೆಚ್ಚು ಗೆಳೆಯರ ಬಳಗವೆ ಬಹುದೊಡ್ಡದಾಗ್ತ ಹೋಯಿತು.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಕುಡಿ ಇವರಾದರೂ ಎಂದು ಅಹಂ, ಸೊಕ್ಕು ಮಾಡಿದವರಲ್ಲ. ಸಂಕಷ್ಟದಲ್ಲಿದ್ದವರಿಗೆ ತಡವರಿಯದೇ ಸಹಾಯ ಮಾಡುವ ಅವರ ಮಾನವೀಯ ಗುಣಕೈಂಕರ್ಯಕ್ಕೆ ಬಿಗ್ ಸೆಲ್ಯೂಟ್ ಹೊಡೆಯಲೆಬೇಕು. ಪರೋಪಕಾರಿ ಗುಣ ಸಂಸ್ಕೃತಿಯ ಶ್ರೀನಿವಾಸ ಅವರು ಆಪತ್ಕಾಲದ ಆಪತ್ಬಾಂದವರಾಗಿ ಎಲ್ಲರ ಗಮನ ಸೆಳೆದವರು.

ಬಡವರ, ನೊಂದವರ, ಕಷ್ಟದಲ್ಲಿದ್ದವರ ಅನೇಕರ ಕಣ್ಣೀರನ್ನು ಒರೆಸಿ, ಅಂಥವರಿಗೆ ನೆಮ್ಮದಿ ಮತ್ತು ಧೈರ್ಯವನ್ನು ತುಂಬಿದ ಮತ್ತು ತುಂಬುತ್ತಿರುವ ಸರಳ ವ್ಯಕ್ತಿತ್ವದ ಕರುಣಾಮಯಿ. ಹಾಗಾಂತ ಹೇಳಿ ಸಿಟ್ಟು ಮೂಗಿನ ತುದಿಯಲ್ಲೆ ಇದ್ದರೂ ಅದು ಒಂದು ನಿಮಿಷದ್ದು. ಆದರೆ ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ಶ್ರೀನಿವಾಸ ಅವರಲ್ಲ.

ಅಪ್ಪ ಮಾಡಿರುವ ಹಲವಾರು ಉದ್ದಿಮೆಗಳನ್ನು ಮುಂದುವರೆಸುವ ಅವಕಾಶವಿದ್ದರೂ, ಅದನ್ನು ಮುಂದುವರೆಸುತ್ತಲೆ, ತನ್ನದೇನಾದರೂ ಇರಬೇಕಲ್ವೆ ಅಂದ್ಕೊಂಡು ತಾನು ಉದ್ಯಮವನ್ನು ಪ್ರಾರಂಭಿಸಿ, ಅಲ್ಪ ಸಮಯದಲ್ಲೆ ಯಶಸ್ವಿ ಉದ್ಯಮಿಯಾಗಿ ಜನಮೆಚ್ಚುಗೆಯನ್ನು ಗಳಿಸಿದ ಹಿರಿಮೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಹಾಲಕ್ಷ್ಮೀ ಕನ್ಸಟ್ರಕ್ಷನ್ ಹೀಗೆ ಹಲವಾರು ಉದ್ದಿಮೆಗಳನ್ನು, ಡಿಲರ್ಸ್ ಶಿಪ್ ಹಾಗೂ ಟ್ರಾಕ್ಟರ್ ವಿತರಕರಾಗಿಯೂ ಗಮನಾರ್ಹ ಪರಿಶ್ರಮವನ್ನು ಪಟ್ಟು ಉದ್ಯಮದಲ್ಲಿ ಸಾರ್ಥಕತೆಯನ್ನು ಪಡೆದ ಧನ್ಯತೆ ನಮ್ಮ ಶ್ರೀನಿವಾಸ ಅವರಿಗಿದೆ.

ಮಗ ಏನನ್ನೂ ಮಾಡಲಿ, ಒಟ್ಟಿನಲ್ಲಿ ಒಳ್ಳೆಯದನ್ನೆ ಮಾಡಲೆನ್ನುವುದೆ ಅವರಪ್ಪ ಎಸ್.ಎಲ್.ಘೋಟ್ನೇಕರ ಅವರ ಅಪೇಕ್ಷೆ. ಅದರಂತೆ ಮುನ್ನುಗ್ಗಿದ್ದವರು ಈ ಶ್ರೀನಿವಾಸ ಅವರು. ಬಿಸಿ ರಕ್ತದ ನವ ತರುಣರಾಗಿದ್ದಾಗಲೆ ರಾಜಕೀಯ ರಂಗ ಪ್ರವೇಶಿಸಿ ಯುವ ಕಾಂಗ್ರೇಸ್ಸಿನ ಪ್ರಮುಖ ಪದಾಧಿಕಾರಿಯಾಗಿ ಯುವ ಕಾಂಗ್ರೆಸಿಗೆ ಹೊಸ ಆಯಾಮ ಮತ್ತು ಶಕ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಗೆ ಶ್ರೀನಿವಾಸ ಅವರು ಪಾತ್ರರಾಗಿದ್ದಾರೆ. ಹೀಗೆ ಮುಂದುವರೆದ ಅವರ ರಾಜಕೀಯ ನಡೆ ಎ.ಪಿ.ಎಂ.ಸಿ ಅಧ್ಯಕ್ಷರಾಗುವರೆಗೆ ನಡೆದಿದ್ದು, ಭವಿಷ್ಯದ ದಿನಮಾನದಲ್ಲಿ ರಾಜಕೀಯವಾಗಿ ಇನ್ನೂ ಉತ್ತುಂಗಕ್ಕೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಹಾಗೂ ಮರಾಠಾ ಸಮಾಜದ ಒಗ್ಗೂಡುವಿಕೆ ಮತ್ತು ಸಂಘಟನೆಗಾಗಿ ಶ್ರೀನಿವಾಸ ಘೋಟ್ನೇಕರ ಅವರು ಪಟ್ಟ ಶ್ರಮ ಇಡೀ ಮರಾಠಾ ಸಮುದಾಯಕ್ಕೆ ಹರ್ಷ ತಂದಿದೆ.

ನನಗೆ ಬಹಳ ಇಷ್ಟವಾದ ಅವರ ಗುಣವೆಂದರೇ, ಧರ್ಮ, ಸಂಸ್ಕೃತಿ ವಿಚಾರದಲ್ಲೆಂದೂ ರಾಜಕೀಯವನ್ನು ತರದಿರುವ ಪ್ರೌಡಿಮೆಯನ್ನು ಮೈಗೂಡಿಸಿಕೊಂಡಿದ್ದಾರೆ. ತಾಲೂಕಿನ ಪ್ರಗತಿಯ ವಿಷಯ ಬಂದಾಗ, ಸಮಸ್ಯೆಗಳ ವಿಚಾರ ಬಂದಾಗ ರಾಜಕೀಯವನ್ನು ಮೀರಿ ಸಹೃದಯನಾಗಿ ಕೆಲಸ ಮಾಡುವ ಅವರ ಪರಿ ಅತ್ಯಂತ ಹೆಮ್ಮೆ ತಂದಿದೆ. ಈ ಕಾರಣಕ್ಕಾಗಿಯೆ ಶ್ರೀನಿವಾಸ ಘೋಟ್ನೇಕರ ಅವರು ನಮಗೆ ಲೈಕ್ ಆಗುವುದು.

ರಾಜಕೀಯ ಹಾಗೂ ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ನಿರೀಕ್ಷೆಗಳನ್ನು ಹೊತ್ತಿ ಮುನ್ನಡೆಯುತ್ತಿರುವ ಯುವ ಪೀಳಿಗೆಯ ನಗುಮೊಗದ ಯಶಸ್ವಿ ರಾಜಕಾರಣಿ, ಶ್ರೀನಿವಾಸ ಘೋಟ್ನೇಕರ ಅವರಿಗೆ ಮಗದೊಮ್ಮೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ಬರವಣಿಗೆಗೆ ವಿರಾಮವನ್ನು ಬಯಸುತ್ತಿದ್ದೇನೆ.

ನೂರು ಕಾಲ ಚೆನ್ನಾಗಿರಿ ಶ್ರೀನಿವಾಸರವರೆ, ನಿಮಗೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್




 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...