ಎಳೆಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ.
ಮಕ್ಕಳ ಭವಿಷ್ಯದ ಉನ್ನತಿಗಾಗಿ ಈ ಸ್ಪರ್ಧೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕ್ರೀಡಾಕೂಟ ಭವಿಷ್ಯಕ್ಕೆ ಆಸರೆಯಾಗಲಿದೆ.
ಡಿ: 22 ರಂದು ದಾಂಡೇಲಿಯಲ್ಲಿ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ
ಮಕ್ಕಳ ಭವಿಷ್ಯದ ಉನ್ನತಿಗಾಗಿ ಈ ಸ್ಪರ್ಧೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕ್ರೀಡಾಕೂಟ ಭವಿಷ್ಯಕ್ಕೆ ಆಸರೆಯಾಗಲಿದೆ.
ಡಿ: 22 ರಂದು ದಾಂಡೇಲಿಯಲ್ಲಿ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟ
ದಾಂಡೇಲಿ : ಬ್ರಿಡ್ಜಸ್ ಆಫ್ ಸ್ಪೋರ್ಟ್ಸ್ ಹಾಗೂ ಉತ್ತರಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಶಯೇಶನ್ ಇವರ ಸಂಯುಕ್ತಾಶ್ರಯದಲ್ಲಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಪ್ರಪ್ರಥಮ ಬಾರಿಗೆ ನಗರದಲ್ಲಿ ಅಥ್ಲೆಟಿಕ್ ಕ್ರೀಡಾಕೂಟವನ್ನು ಡಿ:22 ರಂದು ಭಾನುವಾರ ಏರ್ಪಡಿಸಿದೆ ಎಂದು ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ನಿತೀಶ ಚಿನಿವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಕ್ರೀಡಾಸಕ್ತಿಯನ್ನು ಇಮ್ಮಡಿಗೊಳಿಸುವ ಮತ್ತು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ಬಹುಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಬೆಳವಣಿಗೆಗಾಗಿ ಮತ್ತು ಗಂಡು-ಹೆಣ್ಣು ಎನ್ನುವ ಭೇದವಿಲ್ಲದೇ ಮಕ್ಕಳನ್ನು ಸಮಾನತೆ ದೃಷ್ಟಿಯಿಂದ ನೋಡುವ ಸಲುವಾಗಿ ಹಾಗೂ ಮಕ್ಕಳನ್ನು ಭವಿಷ್ಯದಲ್ಲಿ ರಾಷ್ಟ್ರದ ಆಸ್ತಿಯನ್ನಾಗಿಸುವ ಮಹತ್ವದ ಸಂಕಲ್ಪದಡಿ 10 ಮತ್ತು 12 ವರ್ಷದೊಳಗಿನ ಕಿರಿಯ ಮಕ್ಕಳಿಗಾಗಿ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ದಾಂಡೇಲಿ ನಗರದಲ್ಲಿ ಡಿ:22 ರಂದು ಅಂದರೆ ಭಾನುವಾರ ಬೆಳಿಗ್ಗೆ 8.00 ಗಂಟೆಗೆ 10-12 ವರ್ಷದೊಳಗಿನ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅತ್ಯುತ್ತಮವಾದ ಮತ್ತು ಮಕ್ಕಳ ಮುಂದಿನ ಭವಿಷ್ಯದ ಏಳಿಗೆಗಾಗಿ ಈ ಸ್ಪರ್ಧೆಯು ಪ್ರಮುಖ ಪಾತ್ರವಹಿಸಲಿದೆ. ಜಿಲ್ಲೆಯ ಯಾವುದೇ ತಾಲೂಕಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ದೂರದೂರಿಂದ ಬರುವ ಮಕ್ಕಳಿಗೆ ಪ್ರಯಾಣ ಭತ್ತೆ ನೀಡಲಾಗುತ್ತಿದೆ. ವಯಸ್ಸಿನ ಆಧ್ಯತೆಯ ಪ್ರಕಾರ ಎರಡೂ ಕೆಟಗೇರಿಗಳಲ್ಲಿ ಮೊದಲು ಬಂದ 75 ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಮಕ್ಕಳ ಪೋಷಕರು ಅಥವಾ ಶಿಕ್ಷಕರುಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ಕ್ರೀಡಾ ಮೈದಾನದ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9964528324, 7795200856, 8095602721ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಮಾದರಿ ಹಾಗೂ ನಮ್ಮೂರ ಮಕ್ಕಳ ಭವಿಷ್ಯದ ಉನ್ನತಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧೆಯಲ್ಲಿ ನಿಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಿ, ಮುಂದೆ ಭಾರಿ, ಭಾರಿ ಪ್ರಯೋಜನವುಂಟು. ಮನೆಯವರೆಗೆ ಬಂದ ಅವಕಾಶ ಮಾತ್ರ ಮಿಸ್ ಮಾಡ್ಕೊಬೇಡ್ರಿ.
ಹೇಮಗೂ ಭಾನುವಾರ ಐತೆ, ನಿಮ್ಮ ಮಕ್ಕಳನ್ನು ಜಲ್ದಿ ಕರ್ಕೊಂಡು ಬಂದು, ಅವರು ಆಡುವುದನ್ನು ನೋಡಿ ಮಜಾ ತೆಗೆದುಕೊಳ್ಳಿ.
ನಿಮ್ಮವ
ಸಂದೇಶ್.ಎಸ್.ಜೈನ್

No comments:
Post a Comment