ದಾಂಡೇಲಿಯ ಇತಿಹಾಸದಲ್ಲಿ ಮೊದಲ ಬಾರಿಗೆ
ಫೆ:06 ರಂದು ಚಂದನ ಟಿವಿಯವರು ನಮ್ಮೂರ್ನಾಗ
ನಮ್ಮೂರಿನ ಗಾಯಕರಿಗೊಂದು ಸುವರ್ಣಾವಕಾಶ
ಪೆ.6 ರಂದು ದಾಂಡೇಲಿಯಲ್ಲಿ ಮಧುರ ಮಧುರವೀ ಮಂಜುಳ ಗಾನದ ಧ್ವನಿ ಪರೀಕ್ಷೆ
ದಾಂಡೇಲಿ: ಚಂದನ ದೂರದರ್ಶನ ಕೇಂದ್ರ ಬೆಂಗಳೂರು ಇವರು ನಡೆಸಿಕೊಡುವ ಕನ್ನಡ ನಾಡಿನ ಅತ್ಯಂತ ಜನಪ್ರೀಯ ಮತ್ತು ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಗೆ ತರುವಲ್ಲಿ ಪರಿಣಾಮಕಾರಿಯಾಗಿ ಪಾತ್ರವಹಿಸಿದ ಹಾಗೂ ವಹಿಸುತ್ತಿರುವ ಕಾರ್ಯಕ್ರಮವಾದ 'ಮಧುರ ಮಧುರವೀ ಮಂಜುಳ ಗಾನ' ಕಾರ್ಯಕ್ರಮವು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಶ್ರಯದಲ್ಲಿ ದಾಂಡೇಲಿಯಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸುವವರ ಆಡಿಶನ್ (ಧ್ವ್ವನಿ ಪರೀಕ್ಷೆ) ಜನವರಿ 6 ರಂದು ಮುಂಜಾನೆ 9.30 ಗಂಟೆಯಿಂದ ದಾಂಡೇಲಿಯ ರಂಗನಾಥ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ' ನಿಸರ್ಗ ಸಿರಿ ವಿಶೇಷ' ಎಂಬ ವಿಷಯದ ಮೇಲೆ ನಡೆಯಲಿದ್ದು, ಪೃಕೃತಿ ಸೌಂದರ್ಯಕ್ಕೆ ಸಂಬಂದಪಟ್ಟ ಕನ್ನಡ ಚಲನಚಿತ್ರ ಹಾಡು ಮತ್ತು ನೃತ್ಯಗಳಿಗೆ ಮಾತ್ರ ಅವಕಾಶವಿರುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಗಾಯಕರು ಹಾಗೂ ನೃತ್ಯ ತಂಡದವರು ತಮ್ಮ ಹೆಸರು, ವಿಳಾಸ, ದೂರವಣಿ ಸಂಖ್ಯೆಯ ಜೊತೆಗೆ ಭಾವಚಿತ್ರ ಹೊಂದಿದ ಅರ್ಜಿಯನ್ನು ಕಾರ್ಯಕ್ರಮ ನಿರ್ದೇಶಕರು, ಚಂದನ ದೂರದರ್ಶನ ಇವರ ಹಸರಿಗೆ ನಮೂದಿಸಿ, ದಾಂಡೇಲಿಯಲ್ಲಿ ಬಿ.ಎನ್. ವಾಸರೆ, ಅಧ್ಯಕ್ಷರು ಒಡನಾಡಿ ಸಂಸ್ಥೆ, ಯುನೈಟೆಡ್ ಬಿಲ್ಡಿಂಗ್, ದಾಂಡೇಲಿ, (9480043450), ಹಾಗೂ ಮೀನಾಕ್ಷಿ ಕನ್ಯಾಡಿ, ಅಧ್ಯಕ್ಷರು ಸಹೇಲಿ ಟ್ರಸ್ಟ್ (9483038344) ಹಾಗೂ ಹಳಿಯಾಳದಲ್ಲಿ ಬಸ್ ನಿಲ್ದಾಣದ ಬಳಿಯ ನಮ್ಮ ಮಿತ್ರ ಕಾರ್ಯಲಯ ( 08284-220223) ಇವರಿಗೆ ತಲುಪಿಸಬೇಕು. ಜೊತೆಗೆ ಆಡಿಶನ್ (ಧ್ವನಿ ಪರೀಕ್ಷೆಗೆ) ನಿಗದಿತ ಸಮಯದೊಳಗೆ ಹಾಜರಿರಬೇಕು ಎಂದು ಚಂದನ ದೂರದರ್ಶನ ಹಾಗೂ ವಿ.ಆರ್.ಡಿ.ಎಮ್.ಟ್ರಸ್ಟ್ ನವರು ತಿಳಿಸಿದ್ದಾರೆ.
ನಾವು ಮಾಡಬೇಕಾದುದು ಇಷ್ಟೆ ನೋಡಿ:
ನಮ್ಮೂರಿನ ಹೆಮ್ಮೆಯ ಸಂಗೀತ ಕಲಾವಿದರುಗಳಿಗೆ ಇದರ ಮಾಹಿತಿಯನ್ನು ನೀಡಿ ಅವರನ್ನು ಭಾಗವಹಿಸುವಂತೆ ಮಾಡಿ, ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲಿನ ಹೆಸರನ್ನು ರಾಜ್ಯದ ರಾಜಧಾನಿಯವರೆಗೆ ಪಸರಿಸುವಂತೆ ಮಾಡಬೇಕಾಗಿದೆ. ನಮ್ಮೂರ ಸಮೀಪದ ಹಳ್ಳಿಯಲ್ಲಿ ಅತ್ಯುತ್ತಮ ಗಾಯಕರಿದ್ದಾರೆ. ನಮ್ಮ ಮನೆ ಸಮೀಪವು ಇರಬಹುದು. ಅಂಥವರಿಗೆ ಈ ಕಾರ್ಯಕ್ರಮದ ಬಗ್ಗೆ ಹೇಳಿ ಅವರನ್ನು ಭಾಗವಹಿಸುವಂತೆ ಮಾಡಿ ಕಲಾಸೇವೆಯನ್ನು ಮಾಡುವ ಕಲಾವಿದರುಗಳಿಗೆ ಪ್ರೋತ್ಸಾಹಿಸೋಣ.
ನಮ್ಮೂರ ಕಲಾವಿದರುಗಳು ನಮ್ಮ ಹೆಮ್ಮೆ
ನಿಮ್ಮವ
ಸಂದೇಶ್.ಎಸ್.ಜೈನ್