Saturday, February 2, 2019

ಹಳಿಯಾಳದ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಅರ್ಪಿಸುವ ಕುಂದಾಪುರದ ರೂಪಕಲಾ(ಕುಳ್ಳಪ್ಪು) ಇವರ ಸಹಯೋಗದೊಂದಿಗೆ ಅಂತಾಷ್ಟ್ರೀಯ ಖ್ಯಾತಿಯ ಮೂರುಮುತ್ತು ಕಲಾವಿದರಿಂದ ದಿ: ಕೆ.ಬಾಲಕೃಷ್ಣ ಪೈ ಯವರು ರಚಿಸಿದ ಕರಾವಳಿ ಮುತ್ತು ಖ್ಯಾತಿಯ  ಸತೀಶ ಶೆಟ್ಟಿಯವರ ನಿರ್ದೇಶನದಲ್ಲಿ ಹಾಸ್ಯಮಯ ಮೂರುಮುತ್ತು ಎಂಬ ನಗೆ ನಾಟಕವು ಉಚಿತವಾಗಿ ನಾಳೆ ಅಂದರೆ ಫೆಬ್ರವರಿ: 03 ರಂದು ಭಾನುವಾರ ಸಂಜೆ 5.30 ಗಂಟೆಗೆ ಸರಿಯಾಗಿ ಕಾಗದ ಕಾರ್ಖಾನೆಯ ರಂಗನಾಥ ಸಭಾಭವನದಲ್ಲಿ ಜರಗಲಿದೆ.

ನೋಡಲೆಬೇಕಾದ ಅತ್ಯಾಮೋಘ, ವೈಶಿಷ್ಟ್ಯಪೂರ್ಣ, ಎಲ್ಲರನ್ನು ನಗೆಗಡಲಲ್ಲಿ ತೇಲಾಡಿಸಲಿರುವ ಹಾಸ್ಯಮಯ ನಾಟಕ, ನಮ್ಮೂರಲ್ಲಿ. ಹಾಗಾದ್ರೆ ಹಿಂದೆ ಮುಂದೆ ಯಾಕೆ ನೋಡುತ್ತಿರಿ. ನಾಲೆ ಭಾನುವಾರವಿರುವುದರಿಂದ ಬೆಳಿಗ್ಗೆಯೆ ಮಾರ್ಕೆಟ್ ಮುಗಿಸಿ, ಸಂಜೆ ನಾಟಕ ನೋಡಲು ಕುಟುಂಬ ಸಮೇತರಾಗಿ ಬನ್ನಿ. ಬರ್ಬೇಕು ಪ್ಲೀಸಾ.


ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...