ಬೆಳ್ಳಂ ಬೆಳಗ್ಗೆ ಮಕ್ಕಳನ್ನು ಟ್ಯೂಷನ್ ಕಳುಹಿಸುವ ಪಾಲಕರೆ ದಯವಿಟ್ಟು ಇತ್ತ ಕಡೆ ಗಮನಿಸಿ
ಆತ್ಮೀಯರೇ, ಪ್ರತಿಯೊಂದನ್ನು ಪ್ರತಿಯೊಬ್ಬರ ಬಳಿ ಹೇಳಿಕೊಳ್ಳಲು ಆಗದು. ಆ ಕಾರಣಕ್ಕಾಗಿ ನಾನು ಕಂಡಿದ್ದನ್ನು, ನೋಡಿದ್ದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿ, ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಈ ಬರಹದ್ದಾಗಿದೆ.
ಕಳೆದೆರಡು ದಿನಗಳ ಹಿಂದೆ ಬೆಳ್ಳಂ ಬೆಳಗ್ಗೆ ಇಬ್ಬರು ಬಹುಷ: ಹೈಸ್ಕೂಲ್ ವಿದ್ಯಾರ್ಥಿಗಳಿರಬಹುದು ಎಂದು ಅನಿಸ್ತದೆ. ಅವರು ಟ್ಯೂಷನ್ ಮುಗಿಸಿ ವಾಪಾಸ್ಸು ಹೊರಡುವಾಗ ತಮ್ಮ ದ್ವಿಚಕ್ರ ವಾಹನದಲ್ಲಿ (ಬೈಕಿನಲ್ಲಿ) ಅಡ್ಡಾದಿಡ್ಡಿಯಾಗಿ ಅತೀಯಾದ ವೇಗವಾಗಿ ಚಲಾಯಿಸಿಕೊಂಡು, ಸಾರಿಗೆ ನಿಯಾಮವಳಿಯನ್ನು ಗಾಳಿಗೆ ತೂರುತ್ತಿರುವುದನ್ನು ಪ್ರತ್ಯಕ್ಷ ಕಂಡಿದ್ದೇನೆ. ಅವರು ಹೋಗುವ ವೇಗ ಮತ್ತು ಅಜಾಗರೂಕತೆಯನ್ನು ಗಮನಿಸಿದರೇ ಮಕ್ಕಳ ಶವಕ್ಕೆ ತಂದೆಯೆ ಕೊಳ್ಳಿ ಇಡಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ ಎಂದೆನಿಸಿತು. ಆ ಇಬ್ಬರು ಬಾಲಕರು ಏನಾದರೂ ಹೆಚ್ಚು ಕಡಿಮೆಯಾಗಿ ಅಪಘಾತಕ್ಕೊಳಗಾಗುತ್ತಿದ್ದಾರೆ ಸಾವು ನಿಶ್ಚಿತ, ಇಲ್ಲವೇ ಜೀವನದ ಕೊನೆತನಕ ಶಾಶ್ವತ ಅಂಗವೈಕಲ್ಯಕ್ಕೆ ಬಲಿತಯಾಗುವಂತಹ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನೂ ಕೆಲ ಪಾಲಕರು ತನ್ನ ಮಕ್ಕಳಿಗೆ ದುಬಾರಿ ಬೆಲೆಯ ಬೈಕನ್ನು ಕೊಡಿಸಿ, ಶಾಲೆ/ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಆ ಬೈಕ್ ಗಳು ಕಾಲೇಜಿನಲ್ಲಿ ಇರದೇ ಊರ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚಾರಿ ನಿಯಮವಗಳನ್ನು ಗಾಳಿಗೆ ತೂರಿ ಅಡ್ಡಾಡುತ್ತಿರುವುದು ಸಾಮಾನ್ಯವಾಗಿದೆ.
ಪಾಲಕರೆ, ದಯವಿಟ್ಟು ತಮ್ಮೆಲ್ಲರಲ್ಲಿಯೂ ಗೌರವಪೂರ್ವಕ ಪ್ರಾರ್ಥನೆಯಿಷ್ಟೆ, ನೀವು ನಿಮ್ಮ ಮಕ್ಕಳಿಗೆ ಸಾರಿಗೆ ನಿಯಾಮವಳಿಯನ್ನು ಮೀರಿ ದ್ವಿಚಕ್ರ ವಾಹನವನ್ನು ಕೊಡಬೇಡಿ. ಕೊಟ್ಟರೇ ನೀವೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕೊಡಲಿಯೇಟು ನೀಡಿದಂತಾಗುತ್ತದೆ. ನೀವು ನಿಮ್ಮ ಮಕ್ಕಳನ್ನು ಟ್ಯೂಷನಿಗೆ, ಶಾಲಾ, ಕಾಲೇಜಿಗೆ ಕಳುಹಿಸುವುದಾದಲ್ಲಿ ಸೈಕಲ್ ಇಲ್ಲವೆ ಆಟೋ ರಿಕ್ಷಾದ ಮೂಲಕ ಕಳುಹಿಸಿ. ಇಲ್ಲದೇ ಹೋದಲ್ಲಿ ತಂದೆಯ ಹೆಣಕ್ಕೆ ಹೆಗಲು ಕೊಡಬೇಕಾದ ಮಗನ ಸಾವಿಗೆ ಯಾವ ತಂದೆಯೂ ಕಾರಣರಾಗದಿರಿ.
ದಯವಿಟ್ಟು, ಎಲ್ಲ ಪಾಲಕರು ಈ ಬಗ್ಗೆ ಗಂಭಿರವಾಗಿ ಕ್ರಮ ಕೈಗೊಳ್ಳಬೇಕೆಂಬ ವಿನಮ್ರ ಪ್ರಾರ್ಥನೆ ನನ್ನದು. ನಮ್ಮೂರಿನ ಮಕ್ಕಳು ನಮ್ಮೂರಿನ ಆಸ್ತಿ. ಆ ಆಸ್ತಿಯ ಸಂರಕ್ಷಣೆಗೆ ನಮ್ಮೆಲ್ಲರ ಆಧ್ಯತೆಯಿರಲಿ.
ನಿಮ್ಮವ
ಸಂದೇಶ್.ಎಸ್.ಜೈನ್
No comments:
Post a Comment