Thursday, February 7, 2019

ಚಿತ್ರಕಲಾ ವಿದ್ಯಾರ್ಥಿಗಳಿಗೊಂದು ವಿಶಿಷ್ಟ ಚಿತ್ರಕಲಾ ಸ್ಪರ್ಧೆ.
ಫೆ:10 ರಂದು ದಂಡಕಾರಣ್ಯದಲ್ಲಿ ಮನಸೆಳೆಯಲಿದೆ ಚಿಣ್ಣರ ಕುಂಚದಿಂದ ಅರಳಲಿರುವ ಚಿತ್ರಗಳ ಕಲರವ
ರಜತ ಮಹೋತ್ಸವದ ಸವಿ ನೆನಪಿಗಾಗಿ ರಾಜೇಶ ಜುವ್ಹೆಲ್ಲರ್ಸಿನಿಂದ ಚಿತ್ರಕಲಾ ಸ್ಪರ್ಧೆ
ದಾಂಡೇಲಿ : ನಗರದಲ್ಲಿ 25 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಬಂದಿರುವ ನಗರದ ರಾಜೇಶ ಜುವ್ಹೆಲ್ಲರ್ಸ್ ಇವರು ತಮ್ಮ ಸಂಸ್ಥೆಯ ರಜತ ಮಹೋತ್ಸವದ ಸವಿನೆನಪಿಗಾಗಿ  ಇದೇ ಫೆ:10 ರಂದು ಭಾನುವಾರ ವತಿಯಿಂದ ರವಿವಾರರಂದು ಫೆ.10 ರಂದು ದಂಡಕಾರಣ್ಯ ಇಕೋ-ಪಾರ್ಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು  ಹಮ್ಮಿಕೊಂಡಿದ್ದಾರೆ.

ಅಂದು ಬೆಳಿಗ್ಗೆ ಸಮಯ 10.15 ರಿಂದ 12.15 ರವರೆಗೆ ಜರುಗುವ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳಿಗೆ ಇಷ್ಟವಾದ ಚಿತ್ರ ಬಿಡಿಸುವ ಸ್ಪರ್ಧೆ,  1 ರಿಂದ 2ನೇ ತರಗತಿ(ಯಾವುದೇ ಹಣ್ಣಿನ ಚಿತ್ರ), 3 ರಿಂದ 4 ತರಗತಿ(ಬಾಸ್ಕೆಟ್ನಲ್ಲಿ ಹೂವುಗಳ ಚಿತ್ರ), 5 ರಿಂದ 7 ತರಗತಿ(ಹಳ್ಳಿಯ ದೃಶ್ಯ) 8 ರಿಂದ 9ನೇ ತರಗತಿಯ (ಯಾವುದೇ ಚಿನ್ನಾಭರಣ ಚಿತ್ರ) ವಿದ್ಯಾರ್ಥಿಗಳು ಚಿತ್ರಗಳನ್ನು ಬಿಡಿಸಬಹುದಾಗಿದೆ ಎಂದು ರಾಜೇಶ ಜುವ್ಹೆಲ್ಲರ್ಸ್ ಮಾಲಿಕ ರಾಜೇಶ ವೆರ್ಣೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುವದು. 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳ ಪಾಲಕರಿಗೂ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ - 876277077 ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

ರಜತ ಸಂಭ್ರಮದ ಭಾಗವಾಗಿ ರಾಜೇಶ ಜುವ್ಹೆಲ್ಲರ್ಸ್ ವತಿಯಿಂದ ಬರುವ ಶೈಕ್ಷಣಿಕ ವರ್ಷದಲ್ಲಿ ಆಯ್ದ 5 ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸಲಾಗುವುದೆಂದು ಸಂಸ್ಥೆಯ ಮಾಲಕ ರಾಜೇಶ ವೆರ್ಣೇಕರ ತಿಳಿಸಿದ್ದಾರೆ.  

ನಮ್ಮೂರ ಮಕ್ಕಳ ಪ್ರತಿಭೆಗೆ ವೇದಿಕೆಯನ್ನು ನೀಡುತ್ತಿರುವ ರಜತ ಮಹೋತ್ಸವದ ಸಂಭ್ರಮದಲ್ಲಿರುವ ರಾಜೇಶ ಜುವ್ಹೆಲ್ಲರ್ಸ್ ಅವರ ಈ ಕಾರ್ಯಕ್ಕೆ ಶುಭವಾಗಲಿ.

ನಿಮ್ಮವ

ಸಂದೇಶ್.ಎಸ್.ಜೈನ್
 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...