ಫೆ:20 ರಂದು ದಾಂಡೇಲಿಯಲ್ಲಿ 'ಯೋಧ ನಮನ' ಕಾರ್ಯಕ್ರಮ
ದಾಂಡೇಲಿ: ದಾಂಡೇಲಿ ಪ್ರೆಸ್ ಕ್ಲಬ್ ಹಾಗೂ ಗೆಳೆಯರ ಬಳಗ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಪೆ. 20 ರಂದು ಸಂಜೆ 5 ಗಂಟೆಗೆ ರೋಟರಿ ಶಾಲಾ ಅವರಣದಲ್ಲಿ ಹುತಾತ್ಮ ಯೋಧರಿಗೆ ಶೃದ್ದಾಂಜಲಿ ಸಲ್ಲಿಸುವ 'ಯೋಧ ನಮನ' ಕಾರ್ಯಕ್ರಮ ನಡೆಯಲಿದೆ. ರೋಟರಿ ಶಾಲಾ ಆವರಣದಲ್ಲಿ ಕಲ್ಪವೃಕ್ಷವನ್ನು ನೆಡುವ ಮೂಲಕ ಹುತಾತ್ಮ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಲಾಗುವುದು. ನಂತರ ರೋಟರಿ ಸಭಾಂಗಣದಲ್ಲಿ ನುಡಿ ನಮನ ಸಲ್ಲಿಸಲಾಗುವುದು, ನಗರದ ಸಹೃದಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಎನ್. ವಾಸರೆ, ಕಾರ್ಯದರ್ಶಿ ಸಂದೇಶ ಜೈನ್ ಹಾಗೂ ಪ್ರೆಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರುಗಳು ಮನವಿ ಮಾಡಿದ್ದಾರೆ.
No comments:
Post a Comment