Thursday, February 21, 2019

ಪ್ರೇಮಾನಂದ ಗವಸ ಅವರ ಮಾತೃಶ್ರೀ ರುಕ್ಮಿಣಿ ವಿಷ್ಣು ಗವಸ ಇನ್ನಿಲ್ಲ
ನನ್ನ ನಗಿಸುವ ಅಮ್ಮ ಮರಳಿ ಜನ್ಮವೆತ್ತಿ ಬನ್ನಿ
ದಾಂಡೇಲಿ: ನಗರದ ಸುಭಾಸನಗರದ ನಿವಾಸಿ ಹಾಗೂ ನಿವೃತ್ತ ಅರಣ್ಯಾಧಿಕಾರಿ ದಿ: ವಿಷ್ಣು ಗವಸ ಅವರ ಧರ್ಮಪತ್ನಿ ರುಕ್ಮಿಣಿ ವಿಷ್ಣು ಗವಸ (ವ:74) ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದರು.
 
ಆದರ್ಶ ಗೃಹಿಣಿಯಾಗಿದ್ದ ರುಕ್ಮಿಣಿ ವಿಷ್ಣು ಗವಸ ಅವರು ಪ್ರೇಮ್ ವುಡ್ ಡೆಕೊರ್ಸ್ ಮಾಲಕ ಹಾಗೂ ಸಾಮಾಜಿಕ ಹೋರಾಟಗಾರ ಪ್ರೇಮಾನಂದ ಗವಸ ಸೇರಿ ಆರು ಪುತ್ರರನ್ನು ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ. 
 
ನನ್ನ ನಗಿಸುವ ಅಮ್ಮ ಮರಳಿ ಜನ್ಮವೆತ್ತಿ ಬನ್ನಿ:
ನನಗೆ ಮತ್ತು ರುಕ್ಮಿಣಿ ಗವಸ ಅವರ ಕುಟುಂಬಕ್ಕೆ ಅನ್ಯೋನ್ಯ ಸಂಬಂಧವಿದೆ. ನಾನು ಅವರಲ್ಲಿ ಮಾಡುತ್ತಿದ್ದ ಜೋಕ್ಸ್ಗಳು, ಅವರು ನನ್ನನ್ನು ಮಗನಂತೆ ಪ್ರೀತಿಸುತ್ತಿದ್ದ ಆ ನೆನಪು ಇನ್ನೂ ನೆನಪು ಮಾತ್ರವಾಗಿ ಉಳಿಯುವಂತಾಯ್ತು. ಮೊನ್ನೆ ಮೊನ್ನೆ ಡಾ: ಭಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ರುಕ್ಮಿಣಿಯಮ್ಮನನ್ನು ನೋಡಲು ನಾನು ಹೋಗಿದ್ದೆ. ತುಂಬ ನಿದ್ದೆ ಬಂದು ಮಲಗಿದ್ದರೂ, ಆದರೂ ಅವರು ತಟ್ಟನೆ ಎದ್ದು ಮುಗುಳ್ನಗೆಯಿಂದ ಮಾತಾಡಿದ್ದನ್ನು ನಾನೇಗೆ ಮರೆಯಲಿ?, ಆನಂತರ ನಾನು ಸಂದೇಶ್ ಅಲ್ಲ, ಡಾ: ಸಂದೇಶ್, ಹಾರ್ಟ್ ಸ್ಪೆಷಲಿಸ್ಟ್ ಬಂದಿದ್ದೇನೆಂದು ಹೇಳಿ ಅವರನ್ನು ನಗಿಸಿದ್ದು, ಅಲ್ಲೆ ಕೂತು ಅವರ ಮಗ ಪ್ರೇಮಾನಂದ ಗವಸ ಅವರಿಗೆ ವಿಡಿಯೋ ಕಾಲ್ ಮಾಡಿ ಹರಟೆಯಾಡಿಕೊಂಡಿದ್ದೆಲ್ಲವು ಸದಾ ನೆನಪಿನಲ್ಲಿ ಉಳಿಯುವಂತಹದ್ದೆ. ತಾನು ನಗುತ್ತಾ, ಇನ್ನೊಬ್ಬರನ್ನು ನಗಿಸುತ್ತಾ ಸ್ವಾರ್ಥವಿಲ್ಲದೇ ಬದುಕು ಕಟ್ಟಿಕೊಂಡ ರುಕ್ಮಿಣಿ ಅಮ್ಮನವರ ಸ್ವಚ್ಚ ಹೃದಯ, ಸುಯೋಗ್ಯ ಜೀವಾನದರ್ಶಗಳು ನಮಗೆಲ್ಲಾ ಪ್ರೇರಣಾದಾಯಿ. ಅಮ್ಮ ನಿಮ್ಮ ನೆನಪು ಶಾಶ್ವತ. 
 
ಮರಳಿ ಜನ್ಮವೆತ್ತಿ ಬನ್ನಿ ಎಂಬ ಪ್ರಾರ್ಥನೆಯೊಂದಿಗೆ,

ದುಖ:ತೃಪ್ತ

ಸಂದೇಶ್.ಎಸ್.ಜೈನ್



 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...