ಛಲಗಾರ್ತಿ ಅಮ್ಮ ಸುಶೀಲಮ್ಮ ಇನ್ನಿಲ್ಲ
ದಾಂಡೇಲಿ: ನಗರದ ವನಶ್ರೀನಗರದ ನಿವಾಸಿ, ಹೋರಾಟಗಾರ್ತಿ ಸುಶೀಲಮ್ಮ ಸ್ಯಾಮುವೆಲ್ ಬೈಲಾ (ವ:93) ಶುಕ್ರವಾರ ರಾತ್ರಿ ದೈವದೀನರಾದರು.
ವಿವಿಧ ಜನಪರ ಹೋರಾಟಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ಸುಶೀಲಮ್ಮ ಅವರು ಹಿಂದೊಮ್ಮೆ ನಗರ ಸಭಾ ಚುನಾವಣೆಗೂ ಸ್ಪರ್ಧಿಸಿದ್ದರು. ಮೃತರು ಯುವ ಸಮಾಜ ಸೇವಕ ಬರ್ನಾಡ್ ಬೈಲಾ ಸೇರಿದಂತೆ ಐದು ಹೆಣ್ಣು, ಮೂವರು ಗಂಡು ಮಕ್ಕಳನ್ನು ಹಾಗೂ 35 ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
ಛಲಗಾರ್ತಿಯಾಗಿದ್ದ ಅಮ್ಮ ಸುಶೀಲಮ್ಮ ನಮಗೆಲ್ಲಾ ತಾಯಿಯ ಪ್ರೀತಿಯನ್ನು ನೀಡಿದವರು. ಬಹಳ ಆತ್ಮೀಯವಾಗಿದ್ದ ಸುಶೀಲಮ್ಮನವರ ನಿಧನ ನಮಗೆಲ್ಲಾ ಅತೀವ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂಬ ಪ್ರಾರ್ಥನೆ.
ಸಂದೇಶ್.ಎಸ್.ಜೈನ್

No comments:
Post a Comment