ದಾಂಡೇಲಿ : ನಗರದ ಸುಭಾಸನಗರದ ನಿವಾಸಿ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಇವರು ಧಾರವಾಡದ ಎಸ್ ಡಿ ಎಂ ಇನ್ಯೂಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಇಲ್ಲಿ ಎಂ.ಎಸ್ಸಿ ನರ್ಸಿಂಗ್ (ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ) ಸ್ನಾತ್ತಕೋತ್ತರ ಪದವಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಗಣನೀಯ ಸಾಧನೆಗೈದಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಇವರು ದಾಂಡೇಲಿ ನಗರಸಭೆಯ ಸಿಬ್ಬಂದಿ ಪ್ರೆಸಿಲ್ಲಾ ಫರ್ನಾಂಡೀಸ್ ಹಾಗೂ ಸಮಾಜ ಸೇವಕ ಪೌಲ್ ಫರ್ನಾಂಡೀಸ್ ಇವರ ಸುಪುತ್ರಿಯಾಗಿದ್ದಾರೆ. ಇವರು ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಹಾಗೂ ಬಂಗೂರ ನಗರ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ. ಪ್ರಿಯಾಂಕರ ಸಾಧನೆಗೆ ಅಂಬೇವಾಡಿ ಚರ್ಚಿನ ಧರ್ಮಗುರುಗಳಾದ ರೆ|| ಫಾ|| ಗ್ರೇಗೊರಿ ಡಿಸೋಜ ಹಾಗೂ ಹಳೆ ದಾಂಡೇಲಿ ಚರ್ಚಿನ ಧರ್ಮಗುರುಗಳಾದ ಇಗ್ನೇಷಿಯಸ್ ಡಿಸೋಜ, ನಗರಸಭೆಯ ಸಿಬ್ಬಂದಿ ವರ್ಗ, ಹಾಗೂ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಿಭಾವಂತೆ ಪ್ರಿಯಾಂಕ ಪೌಲ್ ಫರ್ನಾಂಡೀಸ್ ಅವರ ಶ್ರಮ ಸಾಧನೆಗೆ ಅಭಿಮಾನದ ಅಭಿನಂದನೆಗಳು. ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭಾಶಯಗಳು.
ಸಂದೇಶ್.ಎಸ್.ಜೈನ್

No comments:
Post a Comment