Wednesday, April 3, 2019

ಜನ್ಮದಿನದ ಸಂಭ್ರಮದಲ್ಲಿ ಕ್ರೀಡಾ ಕ್ಷೇತ್ರದ ರಾಷ್ಟ್ರೀಯ ಸಾಧಕ ಮುರಳಿಧರ ಗುರವ
ವಯಸ್ಸು 60 ಮೀರಿದರೂ ಕ್ರಿಯಾಶೀಲತೆಯ ತರುಣ ನಮ್ಮ ಮುರಳಿಧರ ಗುರವ 
ಅವರೊಬ್ಬ ವಯಸ್ಸಿನಲ್ಲಿ ಹಿರಿಯರು. ಅವರಿಗೆ ನನಗೆ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಅವರು ನನ್ನ ನೆಚ್ಚಿನ ನೆಚ್ಚಿನ ಸ್ನೇಹಿತ, ಮೆಚ್ಚಿನ ಮಾರ್ಗದರ್ಶಕರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಸಾಧನೆಗೈದ ಅಪರೂಪದ ಅಪೂರ್ವ ವ್ಯಕ್ತಿ. ತಾನು ಬೆಳೆಯುವುದರ ಜೊತೆಗೆ ತನ್ನ ಮಗನನ್ನು ಸೇರಿದಂತೆ ಅನೇಕ ಯುವ ಜನರನ್ನು ಕ್ರೀಡಾ ಕ್ಷೇತ್ರದ ಅನನ್ಯ ಪ್ರತಿಭೆಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾದ ನಿಸ್ವಾರ್ಥ ಮನಸ್ಸಿನ ಹೃದಯವಂತ, ಗುಣವಂತ ನನ್ನ ಸೂಪರ್ ಪ್ರೆಂಡ್, ಸೂಪರ್ ಗುರು, ಸೂಪರ್ ಮಾರ್ಗದರ್ಶಕರು ಆಗಿರುವ ನಿವೃತ್ತ ಎ.ಎಸೈ ಮುರಳಿಧರ ಗುರವ ಅವರು. ಇಂದವರ ಬಗ್ಗೆ ಬರೆಯಲೆಬೇಕು. ಯಾಕ್ಗೊತ್ತಾ, ಹೇಳ್ತೆನೆ ಕೇಳಿ ಸ್ವಲ್ಪ.
 
ಇಂದು ನಮ್ಮ ಹಿರೋ ಮುರಳಿಧರ ಗುರುವ ಅವರಿಗೆ ಜನ್ಮದಿನದ ಸಂಭ್ರಮ. ಈ ಸಂಭ್ರಮಕ್ಕೆ ನನ್ನದೊಂದು ಪದಗುಚ್ಚಗಳ ಶುಭಾಶಯ. ಮಾನ್ಯ ಮುರಳಿಧರ ಗುರುವ ಅವರೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ಅವರನ್ನು ನೂರು ಕಾಲ ಸುಖವಾಗಿ ಇಟ್ಟಿರಲಿ ಎಂಬ ಪ್ರಾರ್ಥನೆಯೊಂದಿಗೆ ಅನಿಸಿದ್ದನ್ನು ನೇರವಾಗಿ ಬರೆಯಲು ಮುಂದಡಿಯಿಟ್ಟಿದ್ದೇನೆ.
ಅಂದ ಹಾಗೆ ನಮ್ಮ ಮುರಳಿಧರ ಗುರವ ಅವರು ಟೌನಶೀಪ್ ನಿವಾಸಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಅವರ ಧರ್ಮಪತ್ನಿ ಶಿಕ್ಷಕಿ ವನಿತಾ ಕಿನ್ನರಕರ ಅವರು ಸ್ವರ್ಗಸ್ಥರಾಗಿದ್ದಾರೆ. ಪತ್ನಿಯ ಅಗಲುವಿಕೆಯ ನೋವಿನಲ್ಲಿ ಎರಡು ವರ್ಷ ಕಳೆದಿರುವ ಮುರಳಿಧರ ಅವರು ತನ್ನಿಬ್ಬರು ಮಕ್ಕಳಾದ ಪೂರ್ಣಿಮಾ ಮತ್ತು ಅಮರ್ ಗುರವ ಅವರಿಗೆ ಅಪ್ಪ ಮಾತ್ರವಲ್ಲದೇ ಅಮ್ಮನ ಪ್ರೀತಿಯನ್ನು ನೀಡುತ್ತಾ ಬಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಮುರಳಿಧರ ಗುರವ ಅವರು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರಾಗಿ ಗಮನ ಸೆಳೆದವರು. ವಿವಿಧ ಅಥ್ಲೀಟ್ ಹಾಗೂ ಬೇರೆ ಬೇರೆ ಕ್ರೀಡೆಗಳಲ್ಲಿ ರಾಷ್ಟ್ರ ಮಟ್ಟದವರೆಗೆ ತನ್ನ ಛಾಪನ್ನು ಪ್ರದರ್ಶಿಸಿದ ಹೆಮ್ಮೆಯ ರಣಧೀರರಾಗಿದ್ದರು. ಪೊಲೀಸ್ ಇಲಾಖೆಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಿಂಚಿನ ಸಾಧನೆಯನ್ನು ಮಾಡಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೆಸರನ್ನು ತಂದುಕೊಟ್ಟ ಹೆಮ್ಮೆಯ ಕುಡಿ ನಮ್ಮ ಮುರಳಿಧರ ಗುರವ ಅವರು.
 
ತನ್ನ ಜೊತೆ ಇನ್ನೂ ಅನೇಕ ಯುವ ಪ್ರತಿಭೆಗಳಿಗೆ ಪ್ರೇರಣಾದಾಯಿಯಾಗಿರುವ ಮುರಳಿಧರ ಗುರವ ಅವರು ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಿ ಕ್ರೀಡಾ ಕ್ಷೇತ್ರದ ವರ್ಧನೆಗೆ ಶ್ರಮ ಸಾಧನೆಯನ್ನು ಧಾರೆ ಎರದಿದ್ದಾರೆ. ಮುದ್ದಿನ ಮಗ ಅಮರ್ ಗುರವ ಅವರ ಕ್ರೀಡಾ ಸಾಧನೆಗೆ ಮೊದಲ ಗುರು, ಮೊದಲ ಮಾರ್ಗದರ್ಶಕರಾದವರೆ ಮುರಳಿಧರ ಗುರವ ಅವರು. ಅವರ ಒತ್ತಾಸೆ, ಪ್ರೇರಣೆಯ ಫಲವಾಗಿ ಅಮರ್ ಗುರವ ಅವರು ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನ ಸಾಧನೆಯನ್ನು ಮೆರೆದಿದ್ದಾರೆ.
 
ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ, ಶಿಸ್ತು, ಪರೋಪಕಾರಿ ಗುಣವನ್ನು ಮೈಗೂಡಿಸಿಕೊಂಡಿದ್ದ ಮುರಳಿಧರ ಗುರವ ಅವರ ಧೈರ್ಯ ಎಷ್ಟರ ಮಟ್ಟಿಗೆ ಇತ್ತೇಂದರೇ ಎಂಥಹ ಕಠಿಣ ಪರಿಸ್ಥಿತಿಯಲ್ಲೂ ತನ್ನ ಕೆಚ್ಚೆದೆಯ ಧೈರ್ಯದಿಂದ ಹಲವಾರು ಪ್ರಕರಣಗಳನ್ನು ಬೇಧಿಸಿ ಇಲಾಖೆಯ ಗೌರವವನ್ನು ಇಮ್ಮಡಿಗೊಳಿಸಿದ ಶ್ರೇಯಸ್ಸನ್ನು ಹೊಂದಿದ್ದಾರೆ.
 
ನಿವೃತ್ತರಾದರೂ ಬಡವರಿಗೆ, ಸಂಕಷ್ಟದಲ್ಲಿದ್ದವರಿಗೆ ಸದಾ ನೆರವನ್ನು ನೀಡಿ, ಈಗಲೂ ವ್ಯಾಯಾಮ, ಯೋಗ ಎಂದು ವಿವಿಧ ಕಸರತ್ತುಗಳ ಮೂಲಕ ಯುವಕರನ್ನು ನಾಚಿಸುವಂತಹ ಎನರ್ಜಿಟಿಕ್ ಪರ್ಸನಾಲಿಟಿಯನ್ನು ಹೊಂದಿರುವ ಲವ್ಲಿ ಡಿಯರ್ ಮುರಳಿಧರ ಗುರವ ಅವರಿಗೆ ಅವರ ಸಾಹಸಿಕ ಹಾಗೂ ಸಾಧನೆಯ ಜೀವನ ಪಯಾಣದ ಯಶಸ್ಸಿಗೆ ಗುರು ಹಿರಿಯರ ಆಶೀರ್ವಾದ, ಮಡದಿ ದಿ: ವನಿತಾ ಅವರ ಪ್ರೀತಿ, ಮಕ್ಕಳಾದ ಅಮರ್ ಮತ್ತು ಪೂರ್ಣಿಮಾ ಅವರುಗಳ ಪ್ರೀತಿ, ಸೊಸೆ, ಅಳಿಯ, ಮೊಮ್ಮಕ್ಕಳ ಅಕ್ಕರೆಯ ವಾತ್ಸಲ್ಯವು ಪ್ರಮುಖ ಕಾರಣ.
 
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮುರಳಿಧರ ಗುರವ ಅವರಿಗೆ ಮಗದೊಮ್ಮೆ ನನ್ನಿ ಕಡೆಯಿಂದ ಶುಭಾಶಯಗಳು.
 
ನಿಮ್ಮವ

ಸಂದೇಶ್.ಎಸ್.ಜೈನ್


 

No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...